HOME » NEWS » Entertainment » AKSHAY KUMAR IS THE ONLY INDIAN STAR TO FEATURE IN FORBES 2020 HIGHEST PAID CELEBRITIES LIST RMD

Forbes 2020: ಅತಿ ಹೆಚ್ಚು ಸಂಭಾವನೆ ಪಡೆವ ವಿಶ್ವ ಸೆಲೆಬ್ರಿಟಿ ಸಾಲಿನಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಟ!

ಈ ಮೊದಲು ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ, ಶಾರುಖ್​ ಸಿನಿಮಾಗಳಿಂದ ದೂರ ಉಳಿದು 2 ವರ್ಷಗಳೇ ಕಳೆಯುತ್ತ ಬಂದಿದೆ. ಇನ್ನು, ಸಲ್ಮಾನ್​ ನಟನೆಯ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮೊದಲಿನಂತೆ ಕಮಾಯಿ ಮಾಡುತ್ತಿಲ್ಲ. 

news18-kannada
Updated:June 5, 2020, 12:12 PM IST
Forbes 2020: ಅತಿ ಹೆಚ್ಚು ಸಂಭಾವನೆ ಪಡೆವ ವಿಶ್ವ ಸೆಲೆಬ್ರಿಟಿ ಸಾಲಿನಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಟ!
ಫೋರ್ಬ್ಸ್​
  • Share this:
2020ರಲ್ಲಿ ಅತಿ ಹೆಚ್ಚು ಸಂಭವಾನೆ ಪಡೆದ ವಿಶ್ವದ 100 ಸೆಲೆಬ್ರಿಟಿ ಹೆಸರನ್ನು ಫೋರ್ಬ್ಸ್​ ಬಿಡುಗಡೆ ಮಾಡಿದೆ. ವಿಚಿತ್ರ ಎಂದರೆ, ಈ ಸಾಲಿನಲ್ಲಿ ಭಾರತದ ಓರ್ವ ನಟನಿಗೆ ಮಾತ್ರ ಸ್ಥಾನ ಸಿಕ್ಕಿದೆ. ಅದು ಬೇರಾರು ಅಲ್ಲ ನಟ ಅಕ್ಷಯ್​ ಕುಮಾರ್​.

100 ಜನರಲ್ಲಿ ಅಕ್ಷಯ್​ ಕುಮಾರ್​ 52 ಸ್ಥಾನದಲ್ಲಿ ಇದ್ದು, ಇವರ ಸಂಭವಾನೆ  365 ಕೋಟಿ ರೂಪಾಯಿ ಆಗಿದೆ. ಈ ಮೂಲಕ ವಿಲ್​ ಸ್ಮಿತ್​ ಹಾಗೂ ಜೆನಿಫರ್​ ಲೊಫೆಜ್​ನಂತ ಹಾಲಿವುಡ್​ ಸೆಲೆಬ್ರಿಟಿಗಳನ್ನು ಹಿಂದಿಕ್ಕಿದ್ದಾರೆ.

ಅಕ್ಷಯ್​ ಕುಮಾರ್ ಸಂಭವಾನೆ ಹೆಚ್ಚಲು ಸಾಕಷ್ಟು ಕಾರಣಗಳಿವೆ. ಅಕ್ಷಯ್​ ಪ್ರತಿ ವರ್ಷ ಎಲ್ಲ ನಟರಿಗಿಂತ ಹೆಚ್ಚು ಸಿನಿಮಾಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲ, ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇನ್ನು, ಸಾಕಷ್ಟು ಬ್ರ್ಯಾಂಡ್​ಗಳಿಗೆ ಅಕ್ಷಯ್​ ರಾಯಭಾರಿ. ಹೀಗಾಗಿ ಅವರ ಸಂಭಾವನೆಯಲ್ಲಿ ಭಾರೀ ಏರಿಕೆ ಕಂಡಿದೆ.

ಇದನ್ನೂ ಓದಿ: ಭಾರತೀಯರಿಗೆ ಪುನರ್ಜೀವ ಸಿಗಲಿದೆ; ಕಿರುಚಿತ್ರದ ಮೂಲಕ ಜೀವನ ಮುಗಿದಿಲ್ಲ ಎಂಬ ಸಂದೇಶ

2019ಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಎಲ್ಲ ನಟರ ಗಳಿಕೆಯಲ್ಲಿ ತೀವ್ರ ಇಳಿಕೆ ಕಂಡಿದೆ. ಇದಕ್ಕೆ ಕಾರಣ ಕೊರೋನಾ ವೈರಸ್ ನಿಯಂತ್ರಣಕ್ಕೆ ಜಾರಿಗೆ ತರಲಾದ ಲಾಕ್​ಡೌನ್​. ನೂರು ಸೆಲೆಬ್ರಿಟಿಗಳು ಗಳಿಕೆ ಮಾಡಿದ ಒಟ್ಟು ಸಂಭಾವನೆ 46 ಸಾವಿರ ಕೋಟಿ ರೂಪಾಯಿ ಆಗಿದೆ.

Bollywood Akshay Kumar donates 1000 wrist bands to help Mumbai Police detect COVID19 symptoms
​ ಅಕ್ಷಯ್ ಕುಮಾರ್

ಈ ಮೊದಲು ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ, ಶಾರುಖ್​ ಸಿನಿಮಾಗಳಿಂದ ದೂರ ಉಳಿದು 2 ವರ್ಷಗಳೇ ಕಳೆಯುತ್ತ ಬಂದಿದೆ. ಇನ್ನು, ಸಲ್ಮಾನ್​ ನಟನೆಯ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮೊದಲಿನಂತೆ ಕಮಾಯಿ ಮಾಡುತ್ತಿಲ್ಲ.
First published: June 5, 2020, 12:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories