ಅಕ್ಷಯ್ ಕುಮಾರ್ ವರ್ಷಕ್ಕೆ ಎರಡರಿಂದ ಮೂರು ಸಿನಿಮಾಗಳನ್ನು ಮಾಡುವ ಸ್ಟಾರ್ ನಟ. ಮಾಡಿದ ಎಲ್ಲ ಸಿನಿಮಾಗಳೂ ಕೋಟಿ ಕೋಟಿ ಬಾಚಿಕೊಳ್ಳುವುದು ಖಂಡಿತ ಅನ್ನೋದು ಸಿನಿ ಪಂಡಿತರ ಲೆಕ್ಕಾಚಾರ. ಹೀಗಿರುವಾಗಲೇ ಅಕ್ಷಯ್ ಅಭಿನಯದ ಲಕ್ಷ್ಮಿ ಸಿನಿಮಾ ಇತ್ತೀಚೆಗಷ್ಟೆ ಒಟಿಟಿ ಮೂಲಕ ತೆರೆಕಂಡಿದೆ. ಆದರೆ ಈ ಸಿನಿಮಾ ಊಹಿಸಿದಷ್ಟು ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ರಿಲೀಸ್ ಆಗುತ್ತಿದ್ದಂತೆಯೇ ಪ್ರೇಕ್ಷಕರು ಸಿನಿಮಾ ಬಗ್ಗೆ ನಕಾರತ್ಮಕವಾಗಿ ಪ್ರತಿಕ್ರಿಯಿಸಲಾರಂಭಿಸಿದ್ದರು. ಈ ಸಿನಿಮಾ ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ತಮಿಳಿನ ಕಾಂಚನಾ ಸಿನಿಮಾದ ಹಿಂದಿ ರಿಮೇಕ್ ಸಿನಿ ಪ್ರಿಯರ ಮನ ಗೆಲ್ಲುವಲ್ಲಿ ಸೋತಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಕುಮಾರ್ ಅವರನ್ನು ಸಖತ್ ಟ್ರೋಲ್ ಮಾಡುವುದರೊಂದಿಗೆ, ಓವರ್ ಆ್ಯಕ್ಟಿಂಗ್ ಮಾಡಿದ್ದಾರೆ ಎಂದೆಲ್ಲ ಟೀಕಿಸಲಾಗುತ್ತಿದೆ. ಹೀಗಿರುವಾಗಲೇ ಅಕ್ಷಯ್ ಕುಮಾರ್ ಕುರಿತಂತೆ ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ.
ಅಕ್ಷಯ್ ಬಾಲಿವುಡ್ನಲ್ಲಿ ಸದ್ಯ ಓಡುವ ಕುದುರೆ. ಅದಕ್ಕೆ ಅಕ್ಷಯ್ ಕುಮಾರ್ ತಮ್ಮ ಸಿನಿಮಾಗಳಿಗೆ ಪಡೆಯುವ ಸಂಭಾವನೆ ಸಹ ಕೋಟಿಗಳಲ್ಲೇ ಇರುತ್ತದೆ. ಇತ್ತೀಚೆಗಷ್ಟೆ ಅಕ್ಷಯ್ ಕುಮಾರ್ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿದ್ದು, ಅದಕ್ಕೆ ನೂರು ಕೋಟಿ ಸಂಭಾವನೆ ಪಡೆಯಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
View this post on Instagram
View this post on Instagram
ಇದನ್ನೂ ಓದಿ: Mayuri: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಯೂರಿ: ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ..!
ಅಕ್ಷಯ್ ಅವರಿಗೆ ನೂರು ಕೋಟಿ ಕೊಡಲಿರುವ ನಿರ್ಮಾಪಕರು ಮತ್ತಾರು ಅಲ್ಲ ಜಾಕಿ ಭಗ್ನಾನಿ ಹಾಗೂ ವಶು ಭಗ್ನಾನಿ ಎನ್ನಲಾಗುತ್ತಿದೆ. ಇದೊಂದು ಕಾಮಿಡಿ ಸಿನಿಮಾ ಆಗಿದ್ದು, ಮುದಾಸ್ಸರ್ ಅಜೀಜ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. ಎಲ್ಲ ಸರಿಹೋದರೆ ಮುಂದಿನ ವರ್ಷ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ