ಲಕ್ಕಿ ಅಂಕಿ ಲೆಕ್ಕಾಚಾರ: ಕಿಲಾಡಿ ಅಕ್ಕಿಯ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ..!

Akshay Kumar : ಇದಕ್ಕೂ ಒಂದು ಕಾರಣವಿದೆ ಎನ್ನುತ್ತಿದೆ ಬಾಲಿವುಡ್ ಪಂಡಿತರು. ಏಕೆಂದರೆ ಅಕ್ಷಯ್ ಕುಮಾರ್ ಅವರ ಲಕ್ಕಿ ನಂಬರ್ 9. ಇದನ್ನೇ ಮುಂದಿಟ್ಟು ಇದೀಗ ಆ್ಯಕ್ಷನ್ ಕಿಲಾಡಿ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

zahir | news18
Updated:August 1, 2019, 8:04 PM IST
ಲಕ್ಕಿ ಅಂಕಿ ಲೆಕ್ಕಾಚಾರ: ಕಿಲಾಡಿ ಅಕ್ಕಿಯ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ..!
akshay kumar
  • News18
  • Last Updated: August 1, 2019, 8:04 PM IST
  • Share this:
ಸದ್ಯಕ್ಕಂತು ಬಾಲಿವುಡ್​ನಲ್ಲಿ ಆ್ಯಕ್ಷನ್ ಕಿಲಾಡಿ ಅಕ್ಷಯ್ ಕುಮಾರ್ ಮುಟ್ಟಿದೆಲ್ಲಾ ಚಿನ್ನ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಕ್ಕಿಯ ಸಂಭಾವನೆ ಕೂಡ ಹಿಟ್​ರೇಟ್​ನಂತೆ ಏರಿಕೆಯಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ 'ರೌಡಿ ರಾಥೋಡ್2' ಸಿನಿಮಾದ ಕಾಲ್​ಶೀಟ್ ಮೊತ್ತ..!

ಹೌದು, ಅಕ್ಷಯ್ ಕುಮಾರ್ 'ರೌಡಿ ರಾಥೋರ್' ಚಿತ್ರದ ಪಾರ್ಟ್​ 2 ನಲ್ಲಿ ಅಭಿನಯಿಸಲು ಓಕೆ ಅಂದಿದ್ದಾರೆ. ಆದರೆ ಅದಕ್ಕಾಗಿ ಕಿಲಾಡಿ ಕುಮಾರ್ ಕೇಳಿದ ಸಂಭಾವನೆ ಈಗ ಇತರೆ ಬಾಲಿವುಡ್ ನಟರ ಹುಬ್ಬೇರುವಂತೆ ಮಾಡಿದೆ. ಈ ಸಿನಿಮಾಗಾಗಿ 'ಕೇಸರಿ' ನಟ ಡಿಮ್ಯಾಂಡ್ ಮಾಡಿರುವುದು ಬರೋಬ್ಬರಿ 54 ಕೋಟಿ ರೂ. ಅಂತೆ.

ಇದಕ್ಕೂ ಒಂದು ಕಾರಣವಿದೆ ಎನ್ನುತ್ತಿದೆ ಬಾಲಿವುಡ್ ಪಂಡಿತರು. ಏಕೆಂದರೆ ಅಕ್ಷಯ್ ಕುಮಾರ್ ಅವರ ಲಕ್ಕಿ ನಂಬರ್ 9. ಇದನ್ನೇ ಮುಂದಿಟ್ಟು ಇದೀಗ ಆ್ಯಕ್ಷನ್ ಕಿಲಾಡಿ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ 'ರೌಡಿ ರಾಥೋರ್' ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಗಿಟ್ಟಿಸಿಕೊಂಡಿದ್ದು 27 ಕೋಟಿ ರೂ. ಇಲ್ಲಿ 2+7 ಕೂಡಿದರೆ ಬರುವ ಸಂಖ್ಯೆ 9. ಆದರೆ ಈ ಸಂಭಾವನೆ ಪಡೆದಿರುವುದು 2012 ರಲ್ಲಿ. ಇದೀಗ ವಿಶ್ವದಾದ್ಯಂತ ಮಾರುಕಟ್ಟೆ ವಿಸ್ತರಿಸಿಕೊಂಡಿರುವ ನಟ ಮತ್ತದೇ 9 ಅಂಕಿ ಸಂಖ್ಯೆಗಳ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.

ಹೀಗಾಗಿ 5+4 ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ. ಅದರಂತೆ ಈಗ 'ರೌಡಿ ರಾಥೋರ್ 2' ಚಿತ್ರಕ್ಕೆ ಅಕ್ಷಯ್ ಕುಮಾರ್ ಕೇಳಿರೋದು ಬರೋಬ್ಬರಿ 54 ಕೋಟಿ ರೂ. ಎನ್ನಲಾಗಿದೆ. ತೆಲುಗಿನ ವಿಕ್ರಮಾರ್ಕುಡು ಚಿತ್ರದ ರಿಮೇಕ್ ಸಿನಿಮಾವಾಗಿದ್ದ ರೌಡಿ ರಾಥೋರ್ ಸಿನಿಮಾವನ್ನು ಈ ಹಿಂದೆ ಪ್ರಭುದೇವ ನಿರ್ದೇಶಿಸಿದ್ದು, ಖ್ಯಾತ ನಿರ್ಮಾಪಕ/ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಬಂಡವಾಳ ಹೂಡಿದ್ದರು.

ಆಗಸ್ಟ್​ 15 ರಂದು ಅಕ್ಷಯ್ ಅಭಿನಯದ 'ಮಿಷನ್ ಮಂಗಳ್' ಚಿತ್ರ ಬಿಡುಗಡೆಯಾಗಲಿದ್ದು, ಆ ಬಳಿಕ ಕಿಲಾಡಿಯ ಕಾಲ್​ಶೀಟ್​ ರೇಟ್ 6+3 ಆದರೂ ಅಚ್ಚರಿ ಪಡಬೇಕಿಲ್ಲ.

First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading