ಬಾಲಿವುಡ್ ಆ್ಯಕ್ಷನ್ ಚಿತ್ರಗಳಲ್ಲಿ ನಟ ಅಕ್ಷಯ್ ಕುಮಾರ್ ಮೂಡಿಸಿದ ಛಾಪು ಅಂತಿಂಥದ್ದಲ್ಲ. ಆದರೆ ವಯಸ್ಸು ಮಾಗಿದಂತೆ ಕಾಮೆಡಿ ಸಿನಿಮಾಗಳತ್ತ 'ಆ್ಯಕ್ಷನ್ ಖಿಲಾಡಿ' ಮುಖ ಮಾಡಿದ್ದರು. ಇನ್ನೇನು ಅಕ್ಕಿ ಅಭಿನಯದ ಆ್ಯಕ್ಷನ್ ಚಿತ್ರಗಳು ಅಪರೂಪ ಎನ್ನುವಷ್ಟರಲ್ಲಿ ಇದೀಗ ಮತ್ತೊಮ್ಮೆ ಖತರ್ನಾಕ್ ಸ್ಟಂಟ್ ಮೂಲಕ ಅಕ್ಷಯ್ ಗಮನ ಸೆಳೆದಿದ್ದಾರೆ.
ತಮ್ಮ ಹೊಸ ಚಿತ್ರ 'ಸೂರ್ಯವಂಶಿ' ಶೂಟಿಂಗ್ನಲ್ಲಿ ಭಾಗವಹಿಸಿರುವ ಅಕ್ಷಯ್ ಕುಮಾರ್, ಸಿನಿಮಾದ ಮೈನವಿರೇಳಿಸುವ ಸಾಹಸ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೆಲಿಕಾಪ್ಟರ್ನಲ್ಲಿ ಯಾವುದೇ ಡ್ಯೂಪ್ಗಳಿಲ್ಲದೆ ನೇತಾಡುವ ಅಕ್ಕಿಯ ಈ ಸೀನ್ ನೋಡಿದವರು ಭೇಷ್ ಎನ್ನುತ್ತಿದ್ದಾರೆ. 50 ರ ಪ್ರಾಯ ದಾಟಿದರೂ ಬಾಲಿವುಡ್ ನಟನ ಡೆಡಿಕೇಷನ್ ಅನ್ನು ಹಾಡಿ ಹೊಗಳಲಾಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ಆ್ಯಕ್ಷನ್ ಖಿಲಾಡಿ ಹಂಚಿಕೊಂಡಿರುವ ಈ ಫೋಟೋಗೆ ಹಾಗೆ ಸುಮ್ಮನೆ ಹೆಲಿಕಾಪ್ಟರ್ನಲ್ಲಿ ನೇತಾಡುತ್ತಿರುವೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಷ್ಟೇ ಅಲ್ಲದೆ ದಯವಿಟ್ಟು ಇದನ್ನೂ ಯಾರೂ ಪ್ರಯತ್ನಿಸಬೇಡಿ ಎಂದು ಕೂಡ ಎಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ