ಬಾಲಿವುಡ್ ನಲ್ಲಿ (Bollywood) ಅನೇಕ ಸ್ಟಾರ್ ಜೋಡಿಗಳು ಇದ್ದು, ಅದರಲ್ಲಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಸ್ಟಾರ್ ದಂಪತಿಗಳಲ್ಲಿ ನಟಿ ಟ್ವಿಂಕಲ್ ಖನ್ನಾ (Twinkle Khanna) ಮತ್ತು ನಟ ಅಕ್ಷಯ್ ಕುಮಾರ್ (Akshay Kumar) ಅವರ ಜೋಡಿ ಸಹ ಒಂದು ಅಂತ ಹೇಳಬಹುದು. ಮೊನ್ನೆ ತಾನೇ ನಟ ಅಕ್ಷಯ್ ಅವರು ತಮ್ಮ ಕೆನಡಾ ಪೌರತ್ವದ ಬಗ್ಗೆ ನೆಟ್ಟಿಗರಿಂದ ತೀವ್ರವಾಗಿ ಟ್ರೋಲ್ ಆಗಿ ಅದಕ್ಕೆ ಸ್ಪಷ್ಟನೆ ನೀಡುವುದರ ಮೂಲಕ ಸುದ್ದಿಯಲ್ಲಿದ್ದರು. ಈಗ ಗಂಡ ಮತ್ತು ಹೆಂಡತಿ ಮತ್ತೆ ಸುದ್ದಿಯಾಗಿರುವುದು ಒಳ್ಳೆಯ ಕಾರಣಕ್ಕೆ.
ಲಂಡನ್ನ ಯೂನಿವರ್ಸಿಟಿಯಲ್ಲಿ ಮಾಸ್ಟರ್ಸ್ ಮಾಡ್ತಿದ್ದಾರೆ ಟ್ವಿಂಕಲ್
ನಟಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ ಅವರ ಪತಿ ಅಕ್ಷಯ್ ಕುಮಾರ್ ಲಂಡನ್ ನಲ್ಲಿರುವ ತಮ್ಮ ವಿಶ್ವವಿದ್ಯಾಲಯಕ್ಕೆ ಬಂದಾಗ ತಾವಿನ್ನೂ ಟೀನೇಜ್ನಲ್ಲಿರುವಂತೆ ಅನಿಸಿತು ಎಂದು ಹೇಳಿದ್ದಾರೆ. ಟ್ವಿಂಕಲ್ ತನ್ನ ಫಿಕ್ಷನ್ ರೈಟಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ವ್ಯಾಸಂಗ ಮಾಡುತ್ತಿದ್ದಾರೆ. ಅಕಾಡೆಮಿಯಲ್ಲಿ ತಾವು ಏನು ಮಾಡುತ್ತಿದ್ದಾರೆ ಎಂದು ತನಿಖೆ ಮಾಡಲು ಅಕ್ಷಯ್ ಬಂದಿದ್ದಾರೆ ಎಂದು ಟ್ವಿಂಕಲ್ ಹೇಳಿದರು. ಅವರು ಪ್ರತಿಷ್ಠಿತ ಗೋಲ್ಡ್ಸ್ಮಿತ್ಸ್ ಯೂನಿವರ್ಸಿಟಿ ಆಫ್ ಲಂಡನ್ ನಲ್ಲಿ ಸೇರಿಕೊಂಡಿದ್ದಾರೆ.
ಟ್ವಿಂಕಲ್ ಇನ್ಸ್ಟಾಗ್ರಾಮ್ ನಲ್ಲಿ ನಟ ಮತ್ತು ಪತಿ ಅಕ್ಷಯ್ ಭೇಟಿಯ ಆ ಕ್ಷಣಗಳನ್ನು ಒಳಗೊಂಡ ಸಣ್ಣ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಟ್ವಿಂಕಲ್ ತನ್ನ ವಿಶ್ವವಿದ್ಯಾನಿಲಯದ ಕಾರಿಡಾರ್ ಗಳಲ್ಲಿ ನಡೆದುಕೊಂಡು ಹೋಗುವುದರೊಂದಿಗೆ ವೀಡಿಯೋ ಶುರುವಾಗುತ್ತದೆ. ಅಕ್ಷಯ್ ತನ್ನ ಪತ್ನಿಯು ಬರುವುದನ್ನು ತನ್ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದರು. ನಂತರ ಅವರು ಅಕ್ಷಯ್ ಜೊತೆಗೆ ಒಂದು ಸೆಲ್ಫಿಯನ್ನು ತೆಗೆದುಕೊಂಡರು.
ಈ ವೀಡಿಯೋವನ್ನು ಹಂಚಿಕೊಂಡಿರುವ ಟ್ವಿಂಕಲ್, ವಿಶ್ವವಿದ್ಯಾಲಯದಲ್ಲಿ ತನ್ನ ದಿನ ಹೇಗಿರುತ್ತದೆ ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.
ವೀಡಿಯೋ ಪೋಸ್ಟ್ ನಲ್ಲಿ ಏನೆಲ್ಲಾ ಬರೆದಿದ್ದಾರೆ ನೋಡಿ ಟ್ವಿಂಕಲ್
ಅವರು ಆ ವೀಡಿಯೋ ಪೋಸ್ಟ್ ನಲ್ಲಿ "ಮಾಸ್ಟರ್ಸ್ ಮಾಡಲು ವಿಶ್ವವಿದ್ಯಾಲಯಕ್ಕೆ ಬಂದಿರುವ ಹಿರಿಯ ವಿದ್ಯಾರ್ಥಿ ಲೈಫ್ ಹೇಗಿರುತ್ತದೆ? ನಾನು ಪ್ರತಿದಿನ ಹೊಸ ಆಲೋಚನೆಗಳೊಂದಿಗೆ ಕಾಲೇಜಿನಲ್ಲಿ ಸುತ್ತಾಡುವುದು ತುಂಬಾನೇ ಸಂತೋಷಕರವಾಗಿದೆ. ನಾನು ನನ್ನ ಅಸೈನ್ಮೆಂಟ್ ಗಳಲ್ಲಿ ಕೆಲಸ ಮಾಡುತ್ತಿರುವಾಗ ಸಂಜೆ ಹೊತ್ತಿನಲ್ಲಿ ಮಕ್ಕಳು ಸಹ ಡೈನಿಂಗ್ ಟೇಬಲ್ ಮೇಲೆ ಆ ಪೇಪರ್ಸ್ ಚೆಲ್ಲಾಪಿಲ್ಲಿಯಾಗಿ ಬಿಸಾಡಿಕೊಂಡು ಕೆಲಸ ಮಾಡುತ್ತಿರುತ್ತಾರೆ" ಎಂದು ಬರೆದಿದ್ದಾರೆ.
ಇದನ್ನೂ ಓದಿ: Disha Madan: ಫ್ಯಾಮಿಲಿ ಜೊತೆ ಫ್ರೆಂಚ್ ಬಿರಿಯಾನಿ ನಟಿಯ ಹ್ಯಾಪಿ ಟೈಂ
"ನನ್ನ ಗಂಡ ನನ್ನನ್ನು ಯೂನಿವರ್ಸಿಟಿ ಯಿಂದ ಕರೆದೊಯ್ಯಲು ಬಂದಾಗ ನಾನು ಟೀನೇಜ್ ಗರ್ಲ್ ರೀತಿ ಫೀಲ್ ಮಾಡಿದೆ" ಎಂದು ಅವರು ಸ್ಮೈಲಿಯನ್ನು ಹಂಚಿಕೊಳ್ಳುವುದರ ಜೊತೆಗೆ ಬರೆದಿದ್ದಾರೆ. ಒಬ್ಬ ಅಭಿಮಾನಿ ಟ್ವಿಂಕಲ್ ಗೆ "ನೀವು ಅಲ್ಲಿ ಬಹಳಷ್ಟು ಮಹಿಳೆಯರನ್ನು ಪ್ರೇರೇಪಿಸುತ್ತಿದ್ದೀರಿ" ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ನೀವು ಅಷ್ಟೊಂದು ಸುಂದರವಾಗಿರುವುದಕ್ಕೆ ಅಕ್ಷಯ್ ಸರ್ ಸೀಕ್ರೆಟ್ ಏಜೆಂಟ್ ಆಗಿದ್ದಾರೆ" ಎಂದು ಹೇಳಿದರು.
2001 ರಲ್ಲಿ ಟ್ವಿಂಕಲ್-ಅಕ್ಷಯ್ ಮದುವೆಯಾದ್ರು
ಟ್ವಿಂಕಲ್ ಖನ್ನಾ 2001 ರಲ್ಲಿ ಅಕ್ಷಯ್ ಕುಮಾರ್ ಅವರನ್ನು ವಿವಾಹವಾದರು. ಅವರಿಗೆ ನಿತಾರಾ ಮತ್ತು ಆರವ್ ಎಂಬ ಇಬ್ಬರು ಮಕ್ಕಳು ಸಹ ಇದ್ದಾರೆ. ಟ್ವಿಂಕಲ್ ಅವರು ಕೆಲವು ಚಿತ್ರಗಳನ್ನು ಮಾಡಿ, ನಂತರ ಒಬ್ಬ ಲೇಖಕಿಯಾಗಿ ವೃತ್ತಿಜೀವನವನ್ನು ಶುರು ಮಾಡಿದರು.
ಅಂದಿನಿಂದ ಟ್ವಿಂಕಲ್ ‘ಮಿಸೆಸ್ ಫನ್ನಿಬೋನ್ಸ್’, ‘ಪೈಜಾಮಾಸ್ ಆರ್ ಫರ್ಗಿವಿಂಗ್’ ಮತ್ತು ‘ದಿ ಲೆಜೆಂಡ್ ಆಫ್ ಲಕ್ಷ್ಮಿ ಪ್ರಸಾದ್’ ನಂತಹ ಕೆಲವು ಹೆಚ್ಚು ಮಾರಾಟವಾದ ಪುಸ್ತಕಗಳನ್ನು ಬರೆದಿದ್ದಾರೆ. ಅವರು ತಮ್ಮದೇ ಆದ ವೆಬ್ಸೈಟ್ ಟ್ವೀಕ್ ಇಂಡಿಯಾವನ್ನು ಸಹ ಪ್ರಾರಂಭಿಸಿದರು, ಅಲ್ಲಿ ಅವರು ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ