Mission Mangal Collections: ಮೂರೇ ವಾರಕ್ಕೆ ಬಾಕ್ಸಾಫಿಸ್​ನಲ್ಲಿ ತಣ್ಣಗಾದ 'ಮಿಷನ್​ ಮಂಗಲ್​' ಬಿಸಿ

Mission Mangal Collections: ಅಕ್ಷಯ್​ ಕುಮಾರ್​ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ 'ಮಿಷನ್​ ಮಂಗಲ್​' ತೆರೆ ಕಂಡಾಗ ಬಾಕ್ಸಾಫಿಸ್​ನಲ್ಲಿ ಉತ್ತಮ ಓಪನಿಂಗ್​ ಮಾಡಿತ್ತು. ಆದರೆ ದಿನ ಕಳೆಧಂತೆ ಇದರ ಗಳಿಕೆ ನೆಲ ಕಚ್ಚುತ್ತಿದೆ.

'ಮಿಷನ್​ ಮಂಗಲ್​' ಸಿನಿಮಾದ ಪೋಸ್ಟರ್​

'ಮಿಷನ್​ ಮಂಗಲ್​' ಸಿನಿಮಾದ ಪೋಸ್ಟರ್​

  • Share this:
ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಅಭಿನಯದ ಹೊಸ ಸಿನಿಮಾ ಮಿಷನ್​ ಮಂಗಲ್​ ಆಗಸ್ಟ್​ 15ಕ್ಕೆ ವಿಶ್ವದಾದ್ಯಂತ ತೆರೆ ಕಂಡಿತು. ಬಿಡುಗಡೆಯಾದ ಮೊದಲೆರಡು ವಾರಗಳಲ್ಲಿ ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಜತೆಗೆ ಮೆಚ್ಚುಗೂ ವ್ಯಕ್ತವಾಗಿತ್ತು. ಅದಕ್ಕೆ ತಕ್ಕಂತೆ ಎರಡು ವಾರಗಳು ಬಾಕ್ಸಾಫಿಸ್​ನಲ್ಲಿ ಈ ಚಿತ್ರ ಜೋರಾಗಿಯೂ ಸದ್ದು ಮಾಡಿತ್ತು.

ಆದರೆ ಎರಡೇ ವಾರಗಳಲ್ಲಿ ಈ ಚಿತ್ರ ನೂರು ಕೋಟಿಯ ಕ್ಲಬ್​ ಸಹ ಸೇರಿತ್ತು. ಈ ಸಿನಿಮಾ ಅಕ್ಷಯ್​ ಕುಮಾರ್​ ಅವರ ಚಿತ್ರ ಎನ್ನುವುದಕ್ಕಿಂತ ಮಹಿಳಾ ಪ್ರಧಾನ ಚಿತ್ರ ಎನ್ನುವಂತೆ ಇದೆ. ಈ ಹಿಂದೆ ಅಕ್ಕಿ ಅಭಿನಯದ 'ಜಾಲಿ ಎಲ್​ಎಲ್​ಬಿ 2' 117 ಕೋಟಿ ಗಳಿಕೆ ಮಾಡಿತ್ತು. ಈ ದಾಖಲೆಯನ್ನೂ 'ಮಿಷನ್​ ಮಂಗಲ್​' ಮುರಿದಿದೆ.

#MissionMangal crosses *lifetime biz* of #JollyLLB2 [₹ 117 cr] in 7 days... Thu 29.16 cr, Fri 17.28 cr, Sat 23.58 cr, Sun 27.54 cr, Mon 8.91 cr, Tue 7.92 cr, Wed 6.84 cr. Total: ₹ 121.23 cr. India biz.



ಆದರೆ ಕಳೆದ ಭಾನುವಾರದಿಂದ 'ಮಿಷನ್​ ಮಂಗಲ್​' ಚಿತ್ರದ ಗಳಿಗೆ ಕೊಂಚ ನೆಲ ಕಚ್ಚಿದೆ. ಕಾರಣ ಅಕ್ಷಯ್​ ಕುಮಾರ್​ ಅವರ ಸಿನಿಮಾವನ್ನು ಇಷ್ಟು ಬೇಗ ಪ್ರೇಕ್ಷಕರು ನೋಡುವುದನ್ನು ನಿಲ್ಲಿಸುವುದಿಲ್ಲ.

ಇದನ್ನೂ ಓದಿ: Yash Radhika Pandit: ಕನ್ನಡ ಮರೆತ ರಾಕಿಂಗ್​ ಜೋಡಿ ಯಶ್​​-ರಾಧಿಕಾರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು..!

ಸಿನಿಮಾ ತೆರೆಕಂಡ ದಿನ ಅಂದರೆ ಆ.15 ಗುರುವಾರ 29.16 ಕೋಟಿ, ಶುಕ್ರವಾರ 17.28 ಕೋಟಿ, ಶನಿವಾರ 23.58 ಕೋಟಿ, ಭಾನುವಾರ 27.54 ಕೋಟಿ, ಸೋಮವಾರ 8.91 ಕೋಟಿ, ಮಂಗಳವಾರ 7.92 ಕೋಟಿ, ಬುಧವಾರ 6.84 ಹಾಗೂ ಗುರುವಾರ 6.93 ಕೋಟಿ ಗಳಿಸಿದೆ. ಒಟ್ಟಾರೆ ಇಲ್ಲಿಯವರೆಗೆ ಈ ಸಿನಿಮಾ 128.16 ಕೋಟಿ ಕಲೆಕ್ಷನ್​ ಮಾಡಿದೆ.



2013-14ರಲ್ಲಿ ಭಾರತದಲ್ಲಿ ಆದ ಮಂಗಳಯಾನದ ಮೇಲೆಯೇ ನಿರ್ಮಾಣವಾಗಿರುವ ಸಿನಿಮಾ ಈ 'ಮಿಷನ್​ ಮಂಗಲ್​'. ಜಗನ್​ ಶಕ್ತಿ ನಿರ್ದೇಶನದ ಈ ಸಿನಿಮಾ 3000 ಸಾವಿರ ತೆರೆಗಳಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ: Kichcha Sudeep: ಟ್ವಿಟರ್​ನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿದ ಕಿಚ್ಚ ಸುದೀಪ್​..!

Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್​ ಲುಕ್ಸ್​..!

First published: