ಕಾಶ್ಮೀರದಲ್ಲಿ ಅಕ್ಷಯ್ ಕುಮಾರ್​ ಅಪ್ಪನ ಹೆಸರಿನಲ್ಲಿ ಶಾಲೆ ನಿರ್ಮಾಣ: ಬಿಎಸ್‍ಎಫ್‍ಗೆ 1 ಕೋಟಿ ದೇಣಿಗೆ ನೀಡಿದ ಸೂಪರ್ ​ಸ್ಟಾರ್

ಇತ್ತೀಚೆಗಷ್ಟೇ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿದ್ದು, ವೀಡಿಯೋ ಕಾನ್‍ಫರೆನ್ಸ್ ಮೂಲಕ ಖಿಲಾಡಿ ಅಕ್ಷಯ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಕ್ಷಯ್ ಕುಮಾರ್​

ಅಕ್ಷಯ್ ಕುಮಾರ್​

  • Share this:
ಬಾಲಿವುಡ್ ಖಿಲಾಡಿ, ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ ಅಂದರೆ ಅದು ಅಕ್ಷಯ್ ಕುಮಾರ್. ಅದಕ್ಕೆ ಕಾರಣ ಅವರ ಇತ್ತೀಚಿನ  ವರ್ಷಗಳ ಸಿನಿಮಾಗಳು. ಆದರೆ ನಟನೆಯಿಂದ ಮಾತ್ರವಲ್ಲದೆ ನಟ ಅಕ್ಷಯ್ ಕುಮಾರ್ ಹತ್ತು, ಹಲವು ಸಮಾಜಮುಖಿ ಕೆಲಸಗಳಿಂದಲೂ ಕೋಟ್ಯಂತರ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಕಾಶ್ಮೀರದಲ್ಲಿ ಅವರು ನಿರ್ಮಿಸುತ್ತಿರುವ ಹೊಚ್ಚ ಹೊಸ ಶಾಲೆ. ಹೌದು, ಬಾಲಿವುಡ್ ಸೂಪರ್ ಸ್ಟಾರ್​ ಅಕ್ಷಯ್ ಕುಮಾರ್ ಅವರು ಮೊದಲಿಂದಲೇ ನಾನಾ ಸಾಮಾಜಿಕ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ. ಅದರಲ್ಲಂತೂ ಇತ್ತೀಚೆಗಂತೂ ವರ್ಷಕ್ಕೆ ಮೂರು ಸಿನಿಮಾಗಳ ಜೊತೆಗೆ ಹಲವು ಸಮಾಜ ಸೇವೆಗಳ ಮೂಲಕ ತೆರೆ ಮೇಲೆ ಮಾತ್ರವಲ್ಲ ತಾನು ತೆರೆ ಹಿಂದೆಯೂ ಕೂಡ ಹೀರೋ ಅಂತ ಪ್ರೂವ್ ಮಾಡಿದ್ದಾರೆ. ವಿಶೇಷ ಅಂದರೆ ಅವರು ಮಾಡಿರುವ ಹಲವು ಕೆಲಸಗಳು, ಸಹಾಯಗಳ ಬಗ್ಗೆ ಅವರು ಹೇಳಿಕೊಳ್ಳುವುದೇ ಇಲ್ಲ.

ಕಳೆದ ಜೂನ್ 17ರಂದು ಅಕ್ಷಯ್ ಕುಮಾರ್ ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಒಂದು ದಿನ ಪೂರ್ತಿ ಬಾರ್ಡರ್​ ಸೆಕ್ಯುರಿಟಿ ಫೋರ್ಸ್​ನ ವೀರ ಸೈನಿಕರ ಜೊತೆ ಕಳೆದಿದ್ದರು. ಈ ದಿನವನ್ನು ಎಂದಿಗೂ ಮರೆಯುವುದಿಲ್ಲ ಎಂದು ಸಂಭ್ರಮದಿಂದ ಟ್ವೀಟ್ ಮಾಡಿದ್ದರು. ಆ ಸಮಯದಲ್ಲಿ ಕಾಶ್ಮೀರದ ಬಂಡೀಪುರದ ನಿರು ಪ್ರದೇಶದಲ್ಲಿನ ಶಾಲೆಯವನ್ನು ಅಭಿವೃದ್ಧಿಪಡಿಸಲು ಸಹಾಯ ಹಸ್ತ ಚಾಚಿದ್ದ ಅಕ್ಷಯ್ ಕುಮಾರ್ ಆ ಬಗ್ಗೆ ತುಟಿ ಬಿಚ್ಚಿರಲಿಲ್ಲ.ಆದರೆ, ಇತ್ತೀಚೆಗಷ್ಟೇ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿದ್ದು, ವೀಡಿಯೋ ಕಾನ್‍ಫರೆನ್ಸ್ ಮೂಲಕ ಖಿಲಾಡಿ ಅಕ್ಷಯ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೂ ಅಕ್ಷಯ್ ಈ ವಿಷಯದ ಬಗ್ಗೆ ಮೌನವಹಿಸಿದ್ದರು. ಆದರೆ ಖುದ್ದು ಬಾರ್ಡರ್​ ಸೆಕ್ಯುರಿಟಿ ಫೋರ್ಸ್​ ಅಧಿಕೃತವಾಗಿ ನಟ ಅಕ್ಷಯ್ ಕುಮಾರ್ ಅವರು ಉದಾರ ಮನಸ್ಸಿನಿಂದ ಕಟ್ಟಡ ನಿರ್ಮಾಣಕ್ಕೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣ ದೇಣಿಗೆ ನೀಡಿರುವ ವಿಷಯವನ್ನು ತಿಳಿಸಿದೆ. ಭೂಮಿ ಪೂಜೆಯ ಸಂದರ್ಭದಲ್ಲಿ ಬಿಎಸ್‍ಎಫ್‍ನ ಡಿಜಿ ರಾಕೇಶ್ ಅಸ್ಥಾನಾ ಕೂಡ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಿ, ಅಕ್ಷಯ್ ಕುಮಾರ್ಗೆ​ ಧನ್ಯವಾದ ತಿಳಿಸಿದ್ದಾರೆ.ವಿಶೇಷ ಅಂದರೆ ನಿರು ಸರ್ಕಾರಿ ಶಾಲೆಯ ಹೊಸ ಕಟ್ಟಡದ ವಿನ್ಯಾಸವನ್ನೂ ಬಿಎಸ್‍ಎಫ್ ತನ್ನ ಟ್ವಿಟರ್ ಅಕೌಂಟ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ನಟ ಅಕ್ಷಯ್ ಕುಮಾರ್ ಅವರ ತಂದೆ ಹರಿ ಓಂ ಭಾಟಿಯಾ ಹೆಸರಿನಲ್ಲಿ ಒಂದು ಎಜುಕೇಷನ್ ಬ್ಲಾಕ್‍ಅನ್ನೂ ಹೆಸರಿಸಲಾಗಿದೆ. ನಟ ಅಕ್ಷಯ್ ಕುಮಾರ್ ಹೀಗೆ ಸಹಾಯಹಸ್ತ ಚಾಚಿರುವುದು ಇದೇ ಮೊದಲೇನಲ್ಲ.

ಇದನ್ನೂ ಓದಿ: Bigg Boss 8 Kannada: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಬಿಟ್ಟು ಉಳಿದವರೆಲ್ಲ ಮತ್ತೆ ನಾಮಿನೇಟ್ ಆದ್ರು..!

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಮನವಿಗೆ ಸ್ಪಂದಿಸಿ ಪಿಎಂ ಕೇರ್ಸ್​ ಫಂಡ್‍ಗೆ ಬರೋಬ್ಬರಿ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಮಾತ್ರವಲ್ಲ ಕೆಲ ವರ್ಷಗಳ ಹಿಂದೆ ಮೃತ ಭಾರತೀಯ ಸೈನಿಕರು ಮತ್ತವರ ಕುಟುಂಬದವರಿಗಾಗಿ ಭಾರತ್ ಕೆ ವೀರ್ ಎಂಬ ಆಪ್‍ಅನ್ನೂ ಅಭಿವೃದ್ಧಿ ಪಡಿಸುವಲ್ಲು ಪ್ರಮುಖ ಪಾತ್ರವಹಿಸಿದ್ದರು. ಹಾಗೇ ನೂರಾರು ಮೃತ ಸೈನಿಕರು ಹಾಗೂ ಆತ್ಮಹತ್ಯೆಗೆ ಒಳಗಾದ ರೈತರ ಕುಟುಂಬಗಳಿಗೆ ನೆರವಾಗಿದ್ದಾರೆ.

ಪ್ರಕೃತಿ ವಿಕೋಪಗಳ ಸಮಯದಲ್ಲೂ ಜನರಿಗೆ ಆಸರೆಯಾಗಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೂ ಖುಷಿಯಿಂದ ದೇಣಿಗೆ ನೀಡಿ, ಜನರಿಗೂ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ಕಳೆದ ವರ್ಷ ಲಾಕ್‍ಡೌನ್‍ನಲ್ಲೂ ಅವರು ನಟಿಸಿದ್ದ ಲಕ್ಷ್ಮೀ ಸಿನಿಮಾ ರಿಲೀಸ್ ಆಗಿತ್ತು.

ಇದನ್ನೂ ಓದಿ: Mouni Roy: ಹೈ ಸ್ಲಿಟ್​ ಡ್ರೆಸ್​ ತೊಟ್ಟು ಸ್ಮೋಕಿ ಲುಕ್​ನಲ್ಲಿ ಕಾಣಿಸಿಕೊಂಡ ಮೌನಿ ರಾಯ್​

ಈ ವರ್ಷ ಬೆಲ್ ಬಾಟಮ್ ಹಾಗೂ ಸೂರ್ಯವಂಶಿ ಚಿತ್ರಗಳು ತೆರೆಗೆ ಬರಲು ರೆಡಿಯಿದ್ದು, ಕೊರೊನಾ ಲಾಕ್‍ಡೌನ್ ಸಂಪೂರ್ಣವಾಗಿ ಅನ್‍ಲಾಕ್ ಆಗಿ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಶೇಕಡಾ ಹೌಸ್‍ಫುಲ್ ಪ್ರದರ್ಶನಕ್ಕೆ ಅವಕಾಶ ಸಿಗಲಿ ಎಂದು ಕಾಯುತ್ತಿವೆ. ಉಳಿದಂತೆ ಅತ್ರಂಗೀ ರೇ ಸಿನಿಮಾ ಚಿತ್ರೀಕರಣ ಕೂಡ ಪೂರ್ಣಗೊಂಡಿದ್ದು ಮುಂದಿನ ವರ್ಷ ರಿಲೀಸ್ ಆಗುವ ನಿರೀಕ್ಷೆಯಿದೆ. ಬಳಿಕ ಪೃಥ್ವಿರಾಜ್, ಬಚ್ಚನ್ ಪಾಂಡೇ, ರಾಮ್ ಸೇತು, ರಕ್ಷಾ ಬಂಧನ್ ಸಿನಿಮಾಗಳು ಚಿತ್ರೀಕರಣ ಹಾಗೂ ಚಿತ್ರೀಕರಣೋತ್ತರ ಕೆಲಸಗಳಲ್ಲಿ ಬ್ಯುಸಿಯಿವೆ.
Published by:Anitha E
First published: