ನಟ ಅಕ್ಷಯ್ ಕುಮಾರ್ ಹಾಗೂ ನಿರ್ದೇಶಕ ರಾಘವ ಲಾರೆನ್ಸ್ ಸಿನಿಮಾಗಳ ವಿಷಯಕ್ಕೆ ಎಷ್ಟು ಖ್ಯಾತರಾಗಿದ್ದಾರೋ... ಸಾಮಾಜಿಕ ಕಳಕಳಿ ವಿಷಯದಲ್ಲೂ ಅಷ್ಟೇ ಫೇಮಸ್ ಆಗಿದ್ದಾರೆ.
ಅಕ್ಷಯ್ ಕುಮಾರ್ ಈ ಹಿಂದೆ ಹಲವಾರು ಸಲ ಕಷ್ಟದಲ್ಲಿರುವವರಿಗಾಗಿ ಹಣ ಸಹಾಯ ಮಾಡಿದ್ದು ಗೊತ್ತೇ ಇದೆ. ಇನ್ನು ರಾಘವ ಲಾರೆನ್ಸ್ ಸಿನಿಮಾಗಿಂತ ಹೆಚ್ಚಾಗಿ ತಮ್ಮ ಸಮಾಜಮುಖಿ ಕೆಲಸಗಳಿಂದೇ ಪರಿಚಿತರಾದವರು. ಈ ಜೋಡಿ ಒಂದಾದರೆ ಇಂತಹ ಕೆಲಸಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಗೋದು ಖಂಡಿತ.
![Akshay Kumar donates1.5 Crore rupees to build house for Transgenders]()
ಅಕ್ಷಯ್ ಕುಮಾರ್ ಹಾಗೂ ರಾಘವ ಲಾರೆನ್ಸ್
ಈ ಜೋಡಿ ಲಕ್ಷ್ಮಿ ಬಾಂಬ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿರೋ ಸಂಗತಿ ಗೊತ್ತೇ ಇದೆ. ಅಕ್ಕಿ ಹಾಗೂ ಲಾರೆನ್ಸ್ ಈಗ ತೃತಿಯ ಲಿಂಗಿಗಳಿಗಾಗಿ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ. ಅದಕ್ಕಾಗಿ ಅಕ್ಷಯ್ ಕುಮಾರ್ 1.5 ಕೋಟಿ ಹಣ ಸಹಾಯ ಮಾಡಿದರೆ, ಲಾರೆನ್ಸ್ ಮನೆ ಕಟ್ಟಲು ಜಾಗ ಕೊಟ್ಟಿದ್ದಾರೆ. ಚೆನ್ನೈನಲ್ಲಿ ಈ ಮನೆಗಳನ್ನು ಕಟ್ಟಲಾಗುವುದು.
![Akshay Kumar donates1.5 Crore rupees to build house for Transgenders]()
ಅಕ್ಷಯ್ ಕುಮಾರ್ ಮಾಡಿದ ಹಣ ಸಹಾಯದ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡ ನಿರ್ದೇಶಕ ರಾಘವ ಲಾರೆನ್ಸ್
'ಚೆನ್ನೈನಲ್ಲಿ ತೃತೀಯ ಲಿಂಗಿಗಳಿಗಾಗಿ ಮನೆ ಕಟ್ಟುವ ಯೋಜನೆ ಮಾಡುತ್ತಿರುವ ಬಗ್ಗೆ ಅಕ್ಷಯ್ ಅವರ ಬಳಿ ಮಾತನಾಡಿದ್ದೆ. ಎಲ್ಲಿ, ಏನು ಎಂದ ಕೇಳದ ಅವರು ಕೂಡಲೇ 1.5 ಕೋಟಿ ಹಣ ಸಹಾಯ ಮಾಡಿದರು' ಎಂದು ಲಾರೆನ್ಸ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
Rashmika Mandanna: ರಶ್ಮಿಕಾಗೆ ಲವ್ ಆಗಿದ್ಯಂತೆ: ಯಾರ್ ಮೇಲೆ ಗೊತ್ತಾ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ