• Home
 • »
 • News
 • »
 • entertainment
 • »
 • Akshay Kumar: ಮರಾಠಿ ಸಿನಿಮಾದಲ್ಲಿ ಶಿವಾಜಿ ಪಾತ್ರ ಮಾಡ್ತಿದ್ದಾರೆ ಅಕ್ಷಯ್ ಕುಮಾರ್

Akshay Kumar: ಮರಾಠಿ ಸಿನಿಮಾದಲ್ಲಿ ಶಿವಾಜಿ ಪಾತ್ರ ಮಾಡ್ತಿದ್ದಾರೆ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ಮರಾಠಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣದ ಮೊದಲ ಭಾಗ ಈಗಾಗಲೇ ಮುಂಬೈನಲ್ಲಿ ಪ್ರಾರಂಭವಾಗಿದೆ. ಚಿತ್ರ ತಂಡ ಫಸ್ಟ್ ಲುಕ್ ಟೀಸರ್ ಅನ್ನು ಹಂಚಿಕೊಂಡಿದೆ.

 • Trending Desk
 • 4-MIN READ
 • Last Updated :
 • Bangalore, India
 • Share this:

ಬಾಲಿವುಡ್‌ನ  (Bollywood) ಹಿಟ್ ಸಿನಿಮಾಗಳಲ್ಲಿ (Cinema) ಕಾಣಿಸಿಕೊಂಡಿರುವ ಅಕ್ಷಯ್ ಕುಮಾರ್ (Akshay Kumar) ಇದೀಗ ಮರಾಠಿ (Marathi) ಚಿತ್ರರಂಗಕ್ಕೆ ಪಾದಾರ್ಪಣೆಗೈಯ್ಯಲುಸಿದ್ಧರಾಗಿದ್ದಾರೆ. ಮಹೇಶ್ ಮಂಜ್ರೇಕರ್ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಮರಾಠಿ ನೆಲದಲ್ಲಿ ತಮ್ಮ ಅದೃಷ್ಟ ಪರೀಕ್ಷೆ (Exam) ನಡೆಸಲಿದ್ದಾರೆ ಎಂಬುದು ಖಾತ್ರಿಯಾಗಿದೆ. ಶಿವಾಜಿ ಮಹಾರಾಜರ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಅಕ್ಷಯ್ ಬಣ್ಣ ಹಚ್ಚುತ್ತಿದ್ದು ಮರಾಠಿ ಚಿತ್ರದ ಆರಂಭ ತುಂಬಾ ಅದ್ಭುತವಾಗಿದೆ ಹಾಗೂ ನನ್ನ ಕನಸು ನನಸಾಗುವ ಸಮಯ ಇದಾಗಿದೆ ಎಂದು ಅಕ್ಷಯ್ ಹೇಳಿದ್ದಾರೆ.


ಶಿವಾಜಿ ಮಹಾರಾಜ್ ಪಾತ್ರ ನಿಭಾಯಿಸಲಿರುವ ಅಕ್ಷಯ್ ಕುಮಾರ್


ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ ಮರಾಠಿ ಸಿನಿಮಾ 'ವೇದತ್ ಮರಾಠೆ ವೀರ್ ದೌಡ್ಲೆ ಸಾತ್' ಮರಾಠಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣದ ಮೊದಲ ಭಾಗ ಈಗಾಗಲೇ ಮುಂಬೈನಲ್ಲಿ ಪ್ರಾರಂಭವಾಗಿದೆ. ಚಿತ್ರ ತಂಡ ಫಸ್ಟ್ ಲುಕ್ ಟೀಸರ್ ಅನ್ನು ಹಂಚಿಕೊಂಡಿದೆ. ಚಿತ್ರದ ಚಿತ್ರೀಕರಣದ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರೀಕರಣ ಹಾಗೂ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


  


ಇನ್‌ಸ್ಟಾದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡ ಅಕ್ಕಿ


ಮರಾಠಿ ಚಿತ್ರವಾದ ವೇದತ್ ಮರಾಠೆ ವೀರ್ ದೌಡ್ಲೆ ಸಾತ್ ಚಲನಚಿತ್ರದ ಚಿತ್ರೀಕರಣವನ್ನು ಈಗಾಗಲೇ ಆರಂಭಗೊಂಡಿರುವುದಾಗಿ ತಿಳಿಸಿರುವ ಅಕ್ಷಯ್ ಕುಮಾರ್, ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ನಮಿಸುತ್ತಿರುವ ಚಿತ್ರವನ್ನು ಹಂಚಿಕೊಂಡು ಅಕ್ಷಯ್ ತಮ್ಮ ಇನ್‌ಸ್ಟಾದಲ್ಲಿ ಚಿತ್ರದ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಶಿವಾಜಿ ಪಾತ್ರದಲ್ಲಿ ತಾವು ಅಭಿನಯಿಸುತ್ತಿರುವುದಾಗಿ ತಿಳಿಸಿರುವ ಅಕ್ಷಯ್, ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಅಭಿನಯಿಸಲು ದೊರೆತಿರುವುದು ನನ್ನ ಅದೃಷ್ಟ ಎಂದು ತಿಳಿಸಿದ್ದಾರೆ.View this post on Instagram


A post shared by Akshay Kumar (@akshaykumar)

ನನ್ನ ಕನಸು ನನಸಾಗುವ ಸಮಯ ಇದಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ಹಿರಿತೆರೆಯಲ್ಲಿ ಚಿತ್ರಿಸುವುದು ಬಹಳ ದೊಡ್ಡ ಜವಬ್ದಾರಿಯಾಗಿದೆ ಎಂದು ತಿಳಿಸಿರುವ ಅಕ್ಷಯ್ ರಾಜ್ ಸರ್ ಈ ಪಾತ್ರ ನಾನು ಮಾಡಬೇಕೆಂದು ಹೇಳಿದಾಗ ದಿಗ್ಭ್ರಮೆಗೊಂಡೆ ಎಂದು ತಿಳಿಸಿದ್ದಾರೆ. ಪಾತ್ರ ನಿರ್ವಹಿಸುತ್ತಿರುವುದು ನನಗೆ ಸಂತೋಷವಾಗಿದೆ ಎಂದು ಹೇಳಿರುವ ಅಕ್ಷಯ್ ಕುಮಾರ್ ಬಹುಸಮಯದ ಆಸೆ ಈಡೇರಿದೆ ಎಂದು ಬರೆದುಕೊಂಡಿದ್ದಾರೆ.


ನಿರ್ದೇಶಕ ಮಹೇಶ್ ಮಂಜ್ರೇಕರ್‌ರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದೇನೆ


ಮೊದಲ ಬಾರಿಗೆ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಅಕ್ಷಯ್ ತಿಳಿಸಿದ್ದು ಇದು ಒಂದು ಅನುಭವವಾಗಲಿದೆ ಎಂದು ತಿಳಿಸಿದ್ದಾರೆ. ಶಿವಾಜಿ ಮಹಾರಾಜರ ಜೀವನದಿಂದ ಸ್ಫೂರ್ತಿ ಪಡೆದುಕೊಂಡು ಹಾಗೂ ತಾಯಿ ಜೀಜಾ ಅವರ ಆಶೀರ್ವಾದದಿಂದ ಪಾತ್ರಕ್ಕೆ ನನ್ನ ಕೈಲಾದಷ್ಟು ನ್ಯಾಯ ಸಲ್ಲಿಸುತ್ತೇನೆ ಎಂದು ಅಕ್ಷಯ್ ಹೃದಯಸ್ಪರ್ಶಿಯಾಗಿ ಬರೆದುಕೊಂಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಅಕ್ಷಯ್ ಅಭಿಮಾನಿಗಳನ್ನು ವಿನಂತಿಸಿಕೊಂಡಿದ್ದಾರೆ.


ಇದನ್ನೂ ಓದಿ: The Kashmir Files: ಕಾಶ್ಮೀರ್ ಫೈಲ್ಸ್‌ ಅಸಭ್ಯ ಚಿತ್ರ ಎಂದ ನಾದವ್​​ ಲ್ಯಾಪಿಡ್​ಗೆ ನಿರ್ದೇಶಕ ಅಗ್ನಿಹೋತ್ರಿ ವಾರ್ನಿಂಗ್

2023 ರ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿರುವ ಚಿತ್ರ


ಚಲನಚಿತ್ರದಲ್ಲಿ ಜಯ್ ದುಧಾನೆ, ಉತ್ಕರ್ಷ ಶಿಂಧೆ, ವಿಶಾಲ್ ನಿಕಮ್, ವಿರಾಟ್ ಮಡ್ಕೆ, ಹಾರ್ದಿಕ್ ಜೋಶಿ, ಸತ್ಯ, ಅಕ್ಷಯ್, ನವಾಬ್ ಖಾನ್ ಮತ್ತು ಪ್ರವೀಣ್ ತಾರ್ಡೆ ಮೊದಲಾದವರು ಬಣ್ಣ ಹಚ್ಚಲಿದ್ದಾರೆ. ವೇದತ್ ಮರಾಠೆ ವೀರ್ ದೌಡ್ಲೆ ಸಾತ್ ಅನ್ನು ವಸೀಮ್ ಖುರೇಷಿ ನಿರ್ಮಿಸಿದ್ದಾರೆ. ಮಹೇಶ್ ಮಂಜ್ರೇಕರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.ಚಿತ್ರವು ಮರಾಠಿ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದು 2023 ರ ದೀಪಾವಳಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಕೇವಲ ಒಂದು ಕಥೆ ಹಾಗೂ ಯುದ್ಧದ ದನಿಯಾಗಿರದೇ ಹಿಂದವಿ ಸ್ವರಾಜ್ಯದ ಯಶೋಗಾಥೆ ಮತ್ತು ಅದ್ಬುತವಾದ ನಿಸ್ವಾರ್ಥ ತ್ಯಾಗದ ಕಥೆಯಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು