Akshay Kumar: 3 ನಿಮಿಷದಲ್ಲಿ 184 ಸೆಲ್ಫಿ ಕ್ಲಿಕ್ ಮಾಡಿ ಗಿನ್ನಿಸ್ ದಾಖಲೆ ಬರೆದ ಬಾಲಿವುಡ್ ನಟ

ನಟ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಸಾಲು ಸಾಲು ಸೆಲ್ಫಿ ಕ್ಲಿಕ್ ಮಾಡಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಯಾವ ರೀತಿ ಸೆಲ್ಫೀ ತಗೊಂಡ್ರು ಗೊತ್ತಾ?

  • News18 Kannada
  • 2-MIN READ
  • Last Updated :
  • Bangalore, India
  • Share this:

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ತಮ್ಮ ಮುಂಬರುವ ಹಾಸ್ಯ ಸಿನಿಮಾ ಸೆಲ್ಫಿಯ ಪ್ರಚಾರಗಳನ್ನು ಪ್ರಾರಂಭಿಸಿದ್ದಾರೆ. ಹಾಗೆ ಮಾಡುತ್ತಲೇ ಗಿನ್ನಿಸ್ ದಾಖಲೆಯನ್ನೂ (Guinness World Record) ಮುಡಿಗೇರಿಸಿಕೊಂಡಿದ್ದಾರೆ. ಸ್ಟಾರ್ ನಟ ಮೂರು ನಿಮಿಷಗಳ ಅವಧಿಯಲ್ಲಿ ತೆಗೆದುಕೊಂಡ ಅತಿ ಹೆಚ್ಚು ಸೆಲ್ಫಿಗಳ ದಾಖಲೆಯನ್ನು ಮುರಿಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರ ಹೆಸರು ಗಿನ್ನಿಸ್ ಪುಟ ಸೇರಿದೆ. ಮುಂಬೈನಲ್ಲಿ (Mumbai) ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಈ ಸಾಧನೆಯನ್ನು ಮಾಡಲಾಗಿದೆ. ಅಕ್ಷಯ್ ಕುಮಾರ್ ಅಭಿಮಾನಿಗಳಿಗೆ Instagram ಮೂಲಕ ಅದರ ಒಂದು ಲುಕ್ ಕೂಡಾ ತೋರಿಸಿದ್ದಾರೆ. ಫೋಟೋಗಳು ಮತ್ತು ವೀಡಿಯೊಗಳಲ್ಲಿ, ಖಿಲಾಡಿ ಖ್ಯಾತಿಯ ನಟ ತನ್ನ ಅಭಿಮಾನಿಗಳು ಮತ್ತು ಗಿನ್ನೆಸ್ ಸಿಬ್ಬಂದಿಯಿಂದ ಸುತ್ತುವರೆದಿರುವ ವೇದಿಕೆಯಲ್ಲಿ ಗಿನ್ನಿಸ್ ದಾಖಲೆ ತೋರಿಸುವುದನ್ನು ಕಾಣಬಹುದು.


'ನಮಸ್ತೆ' ಯೊಂದಿಗೆ ಅಭಿಮಾನಿಗಳನ್ನು ಸ್ವಾಗತಿಸಿದ ನಟ ಇವೆಂಟ್‌ನ ವೀಡಿಯೋವನ್ನು ತೋರಿಸಿದ್ದಾರೆ. ನಟ ಅನೇಕ ಸೆಲ್ಫಿಗಳನ್ನು ಕ್ಲಿಕ್ ಮಾಡುತ್ತಾರೆ.


3 ನಿಮಿಷದಲ್ಲಿ 184 ಫೋಟೋ


ಅವರು 184 ಫೋಟೋಗಳನ್ನು ಕ್ಲಿಕ್ಕಿಸಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇವೆಂಟ್‌ನ ಲುಕ್ ಜೊತೆಗೆ, ನಟ ತನ್ನ ಯಶಸ್ಸಿಗಾಗಿ ಅಭಿಮಾನಿಗಳಿಗೆ ಕೃತಜ್ಞತೆ ಹೇಳಿ ಪೋಸ್ಟ್ ಬರೆದಿದ್ದಾರೆ. ಅಕ್ಷಯ್ ಕುಮಾರ್ ಅವರು ತಮ್ಮ ವೃತ್ತಿಜೀವನದ ಏರಿಳಿತಗಳ ಮೂಲಕ ತಮ್ಮೊಂದಿಗೆ ನಿಂತವರಿಗೆ ವಿಶೇಷ ಗೌರವವಾಗಿ ಈ ವಿಶೇಷ ಸಾಹಸವನ್ನು ಮಾಡಿದ್ದಾಗಿ ಬಹಿರಂಗಪಡಿಸಿದರು.


ನಾನು ಸಾಧಿಸಿದ್ದೆಲ್ಲವೂ ಅಭಿಮಾನಿಗಳ ಪ್ರೀತಿಯಿಂದಾಗಿ. ಅವರು ತೋರಿಸಿದ ಪ್ರೀತಿಯಿಂದಲೇ ನಾನಿವತ್ತು ಇಲ್ಲಿದ್ದೇನೆ. ಇದು ಅವರಿಗೆ ನನ್ನ ವಿಶೇಷ ಗೌರವವಾಗಿದೆ. ಅವರು ನನ್ನ ವೃತ್ತಿಜೀವನದುದ್ದಕ್ಕೂ ನನ್ನೊಂದಿಗೆ ಜೊತೆಯಾಗಿ ನಿಂತಿದ್ದಾರೆ ಎಂದು ಅವರು ಬರೆದಿದ್ದಾರೆ.


ಅಕ್ಷಯ್ ಏನಂದ್ರು?


ನನ್ನ ಅಭಿಮಾನಿಗಳ ಸಹಾಯದಿಂದ ನಾವು 3 ನಿಮಿಷಗಳಲ್ಲಿ ಹೆಚ್ಚು ಸೆಲ್ಫಿಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದೇವೆ. ಎಲ್ಲರಿಗೂ ಧನ್ಯವಾದಗಳು. ಇದು ತುಂಬಾ ವಿಶೇಷವಾಗಿತ್ತು. ನಾನು ಇದನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ. ನಾವೆಲ್ಲರೂ ಚಿತ್ರಮಂದಿರಗಳಲ್ಲಿ ಸಿಗೋಣ ಎಂದು ಬರೆದಿದ್ದಾರೆ.

View this post on Instagram


A post shared by Akshay Kumar (@akshaykumar)

ರಾಜ್ ಮೆಹ್ತಾ ಅವರ ಮುಂಬರುವ ಸಿನಿಮಾ ಸೆಲ್ಫಿ ಬಿಡುಗಡೆಗೆ ಕೆಲವೇ ದಿನಗಳ ಮೊದಲು ಈ ದಾಖಲೆ ಮಾಡಲಾಗಿದೆ. ಅಕ್ಷಯ್ ಕುಮಾರ್ ಜೊತೆಗೆ, ಚಿತ್ರದಲ್ಲಿ ಇಮ್ರಾನ್ ಹಶ್ಮಿ, ನುಶ್ರತ್ ಭರೂಚ ಮತ್ತು ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ಈ ಸಿನಿಮಾ 2019 ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ ಡ್ರೈವಿಂಗ್ ಲೈಸೆನ್ಸ್‌ನ ರಿಮೇಕ್ ಆಗಿದ್ದು, ಪೃಥ್ವಿರಾಜ್ ಸುಕುಮಾರನ್ ಮತ್ತು ಸುರಾಜ್ ವೆಂಜರಮೂಡು ನಟಿಸಿದ್ದಾರೆ. ಶುಕ್ರವಾರ ಫೆಬ್ರವರಿ 24 ರಂದು ಸೆಲ್ಫಿ ಬೆಳ್ಳಿತೆರೆಗೆ ಬರಲಿದೆ.


2022 ರಲ್ಲಿ ವರ್ಷದಲ್ಲಿ ನಟನ ಸಿನಿಮಾಗಳು ಸತತ ಫ್ಲಾಪ್ ಆಗಿತ್ತು. ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ, ರಾಮ್ ಸೇತು ಸಿನಿಮಾ ಹಿಟ್ ಆಗಲಿಲ್ಲ. ಈಗ, ಅವರ ಆಕ್ಷನ್-ಕಾಮಿಡಿ ಸಿನಿಮಾ ಸೆಲ್ಫಿ ಬಿಡುಗಡೆಯಾಗಲಿದೆ. ಕುತೂಹಲಕಾರಿಯಾಗಿ, ಸೆಲ್ಫಿ ಸಿನಿಮಾ ಕೊರೋನಾ ನಂತರದ ಅಕ್ಷಯ್ ಕುಮಾರ್ ಅವರ ಏಳನೇ ಸಿನಿಮಾ.


1 ನೇ ದಿನದ ಸೆಲ್ಫಿಯ ಪ್ರೀ ಬುಕಿಂಗ್ ರಿಪೋರ್ಟ್ ನೋಡಿದರೆ ಚಿತ್ರವು ಇನ್ನೂ 10 ಲಕ್ಷ ಮೌಲ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ದೇಶದಾದ್ಯಂತ ಬ್ಲಾಕ್ ಮಾಡಲಾದ ಸೀಟುಗಳನ್ನು ಹೊರತುಪಡಿಸಿ ಕೇವಲ 8.55 ಲಕ್ಷಗಳ ಒಟ್ಟು ಮೊತ್ತವನ್ನು ಸಂಗ್ರಹಿಸಲಾಗಿದೆ. ಇದನ್ನು ನೋಡಿದರೆ ಸಿನಿಮಾ ಬಗ್ಗೆ ಈಗಲೇ ಏನಾದರೂ ಊಹಿಸುವುದು ಕಷ್ಟ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್​ಪರ್ಟ್ಸ್.

Published by:Divya D
First published: