ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಬಿ-ಟೌನ್ನಲ್ಲಿ ಸಖತ್ ಬ್ಯುಸಿ ಹಾಗೂ ಬೇಡಿಕೆಯಲ್ಲಿರುವ ನಟ. ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿರುವ ಅಕ್ಷಯ್ ಇತ್ತೀಚೆಗಷ್ಟೆ 'ಬೆಲ್ಬಾಟಮ್' ಚಿತ್ರದ ಚಿತ್ರೀಕರಣ ಮುಗಿಸಿದ್ದು, ತಮ್ಮ ಬಹು ನಿರೀಕ್ಷಿತ ಸಿನಿಮಾ ಬಚ್ಚನ್ ಪಾಂಡೆ ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. ವರ್ಷಕ್ಕೆ 3-4 ಚಿತ್ರಗಳಲ್ಲಿ ಬ್ಯುಸಿಯಾಗಿರುವ ಅಕ್ಷಯ್ ಕುಮಾರ್ ಅವರು ಮಾಡಿದ ಸಿನಿಮಾಗಳೆಲ್ಲ ಬಾಕ್ಸಾಫಿಸ್ನಲ್ಲಿ ಸದ್ದು ಮಾಡುತ್ತಿವೆ. ಇದರಿಂದಾಗಿಯೇ ನಿರ್ಮಾಪಕರು ಹಾಗೂ ನಿರ್ದೇಶಕರು ಅಕ್ಷಯ್ ಕುಮಾರ್ ಅವರ ಡೇಟ್ಸ್ಗಾಗಿ ಕಾಯುತ್ತಿರುತ್ತಾರೆ. 20194 ಜುಲೈನಲ್ಲೇ ಬಚ್ಚನ್ ಪಾಂಡೆ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು ಅಕ್ಷಯ್ ಕುಮಾರ್. ಕಪ್ಪು ಬಣ್ಣದ ಪಂಚೆ, ಕೊರಳಿನಲ್ಲಿ ಭಾರವಾದ ಚಿನ್ನದ ಸರಗಳು, ಕಿವಿಯೊಲೆಗಳೊಂದಿಗೆ ಅಕ್ಷಯ್ ಲುಕ್ ನೋಡುಗರಿಗೆ ತುಂಬಾ ಇಷ್ಟವಾಗಿತ್ತು. ಅಕ್ಕಿ ತಮ್ಮ ಲುಕ್ ಜತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಆಗಲೇ ಪ್ರಕಟಿಸಿದ್ದರು. ಎಲ್ಲ ಸರಿಯಾಗಿದ್ದಿದ್ದರೆ 2020ರ ಡಿಸೆಂಬರ್ಗೆ 'ಬಚ್ಚನ್ ಪಾಂಡೆ' ರಿಲೀಸ್ ಆಗಿರಬೇಕಿತ್ತು.
ಲಾಕ್ಡೌನ್ನಿಂದಾಗಿ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಇದರಿಂದಾಗಿ ಈಗ ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಸಿನಿಮಾದ ಹೊಸ ರಿಲೀಸ್ ದಿನಾಂಕ ನಿಗದಿ ಮಾಡಲಾಗಿದೆ. ನಿರ್ದೇಶಕ ಫರ್ಹಾದ್ ಸಾಮ್ಜಿ ಆ್ಯಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಸಾಜಿದ್ ನಾಡಿಯಾದ್ವಾಲಾ ಹಣ ಹೂಡಿದ್ದಾರೆ.
Coming on Christmas 2020!
ಈ ಹಿಂದೆ 'ಕೇಸರಿ' ಚಿತ್ರದಲ್ಲೂ ಅವರು ದೇಶಭಕ್ತನಾಗಿ ಅಭಿನಯಿಸಿದ್ದರು. ಈಗ ಮತ್ತೆ ಈ ಚಿತ್ರದಲ್ಲಿ ಅಕ್ಷಯ್ ಮತ್ತೊಮ್ಮೆ ದೇಶಭಕ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಆರಂಭವಾಗಿದೆ. ಈಗ ಸಿನಿಮಾದ ಹೊಸ ರಿಲೀಸ್ ಡೇಟ್ ಪ್ರಕಟವಾಗಿದೆ.
2022ರ ಜನವರಿ 26ಕ್ಕೆ ಬಚ್ಚನ್ ಪಾಂಡೆ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಕೃತಿ ಸನೋನ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸದ್ಯ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ', ಬೆಲ್ಬಾಟಮ್ ಹಾಗೂ ಬಿಡುಗಡೆಗೆಯ ಹೊಸ್ತಿಲಲ್ಲಿವೆ. ಇನ್ನು ರಾಮ್ ಸೇತು, ಅತ್ರಂಗಿ ರೇ, ಪೃಥ್ವಿರಾಜ್ ಹಾಗೂ ಇತರೆ ಸಿನಿಮಾಗಳು ಇನ್ನೂ ಚಿತ್ರೀಕರಣದ ಹಂತದಲ್ಲಿವೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ