• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bollywood News: ನಟ ಅಕ್ಷಯ್ ಮಗನಿಗೆ ಅಪ್ಪನಂತೆ ಆಗೋಕೆ ಇಷ್ಟವಿಲ್ವಂತೆ, ಬೇರೆ ಏನ್ ಮಾಡ್ತಾರಂತೆ ಆರವ್ ನೋಡಿ!

Bollywood News: ನಟ ಅಕ್ಷಯ್ ಮಗನಿಗೆ ಅಪ್ಪನಂತೆ ಆಗೋಕೆ ಇಷ್ಟವಿಲ್ವಂತೆ, ಬೇರೆ ಏನ್ ಮಾಡ್ತಾರಂತೆ ಆರವ್ ನೋಡಿ!

ಅಕ್ಷಯ್​, ಆರವ್​

ಅಕ್ಷಯ್​, ಆರವ್​

ಚಿತ್ರರಂಗದಲ್ಲಿ ಹೆಸರು ಮಾಡಿದ ಹಿರಿಯ ನಟ ಮತ್ತು ನಟಿಯರ ಮಕ್ಕಳು ನಟನೆಯಲ್ಲಿ ಆಸಕ್ತಿ ತೋರದೆ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹೆಸರು ಮಾಡಿರುವ ಉದಾಹರಣೆಗಳು ತುಂಬಾನೇ ಕಡಿಮೆ ಇವೆ.

  • Trending Desk
  • 4-MIN READ
  • Last Updated :
  • Share this:

ಸಾಮಾನ್ಯವಾಗಿ ನಾವು ಹಿಂದಿನಿಂದಲೂ ನೋಡುತ್ತಾ ಬಂದಿರುವಂತೆ ಯಾವುದೇ ಚಿತ್ರರಂಗವನ್ನು ತೆಗೆದುಕೊಂಡರೂ ಅಲ್ಲಿ ತಂದೆ (Father) ಅಥವಾ ತಾಯಿ  (Mother) ದೊಡ್ಡ ನಟ (Actor) ಅಥವಾ ನಟಿ (Actress) ಆಗಿದ್ದು ತುಂಬಾನೇ ಹೆಸರು ಮಾಡಿದ್ದರೆ, ಮುಂದೆ ಅವರ ಮಕ್ಕಳು ಸಹ ಅದೇ ಚಿತ್ರರಂಗಕ್ಕೆ ನಟ ಅಥವಾ ನಟಿ ಆಗಿ ಬಂದಿರುವ ಅನೇಕ ಉದಾಹರಣೆಗಳನ್ನು ನೋಡುತ್ತಲೇ ಬಂದಿದ್ದೇವೆ. ಹೌದು.. ಬಾಲಿವುಡ್ ನಲ್ಲಿ (Bollywood) ಬಿಗ್ ಬಿ ಅಮಿತಾಭ್ ಬಚ್ಚನ್ (Amithabh Bachchan) ಅವರ ಮಗ ಅಭಿಷೇಕ್ ಬಚ್ಚನ್ (Abhishek Bachchan) ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ (Chiranjivi) ಅವರ ಮಗ ರಾಮ್ ಚರಣ್ (Ramcharan) ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು.. ಹೀಗೆ ಇನ್ನೂ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಇಂತಹ ಉದಾಹರಣೆಗಳು ನಮಗೆ ಬೇಕಾದಷ್ಟು ನೋಡಲು ಸಿಗುತ್ತವೆ ಅಂತ ಹೇಳಬಹುದು.


ಆದರೆ ಚಿತ್ರರಂಗದಲ್ಲಿ ಹೆಸರು ಮಾಡಿದ ಹಿರಿಯ ನಟ ಮತ್ತು ನಟಿಯರ ಮಕ್ಕಳು ನಟನೆಯಲ್ಲಿ ಆಸಕ್ತಿ ತೋರದೆ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹೆಸರು ಮಾಡಿರುವ ಉದಾಹರಣೆಗಳು ತುಂಬಾನೇ ಕಡಿಮೆ ಇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮಗ ಆರವ್ ಸಹ ಹೀಗೆ ನಟನೆಯಲ್ಲಿ ನನಗೆ ಆಸಕ್ತಿ ಇಲ್ಲ ಅಂತ ಹೇಳುತ್ತಿದ್ದಾರೆ ನೋಡಿ.


ನಟ ಅಕ್ಷಯ್ ಕುಮಾರ್ ಮಗನಿಗೆ ನಟನೆಯಲ್ಲಿ ಆಸಕ್ತಿ ಇಲ್ವಂತೆ!


ಆರವ್ ಈಗ ತಂದೆಯ ಎದೆಯ ಎತ್ತರಕ್ಕೆ ಬೆಳೆದಿದ್ದು, ತಂದೆ ಅಕ್ಷಯ್ ಅಂತೆಯೇ ಇವರು ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಅಂತ ಅನೇಕರು ಊಹೆ ಮಾಡಿದ್ದರು. ಆದರೆ ನಟ ಅಕ್ಷಯ್ ಕುಮಾರ್ ಖುದ್ದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ನನ್ನ ಮಗ ಆರವ್ ಗೆ ನಟನೆಯಲ್ಲಿ ಆಸಕ್ತಿ ಇಲ್ಲ ಎಂದು ಬಹಿರಂಗಪಡಿಸಿದ್ದಾರೆ.


ಅಕ್ಷಯ್​ ಕುಮಾರ್​ ಸೆಲ್ಫಿಗೆ ಫ್ಯಾನ್ಸ್ ಫಿದಾ!


ಅಕ್ಷಯ್ ಕುಮಾರ್ ಅಭಿನಯದ 'ಸೆಲ್ಫಿ' ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ತನ್ನ ಮಗ ಲಂಡನ್ ನ ಫ್ಯಾಷನ್ ಡಿಸೈನಿಂಗ್ ಶಾಲೆಯಲ್ಲಿ ಅಧ್ಯಯನ ಮಾಡಲಿದ್ದಾನೆ ಎಂದು ನಟ ಬಹಿರಂಗಪಡಿಸಿದ್ದಾರೆ. ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ಅಕ್ಷಯ್ ಅವರು ತಮ್ಮ ಮಗ ಆರವ್ ಸಿನೆಮಾದಲ್ಲಿ ಯಾವುದೇ ಆಸಕ್ತಿ ಹೊಂದಿಲ್ಲ, ಬದಲಿಗೆ, ಅವನು ಫ್ಯಾಷನ್ ಡಿಸೈನಿಂಗ್ ಶಾಲೆಗೆ ಸೇರಲು ಬಯಸುತ್ತಾನೆ ಎಂದು ಹೇಳಿದರು.


ಇದನ್ನೂ ಓದಿ: ಒಮ್ಮೆ ಮಾತ್ರ ಮ್ಯಾಜಿಕ್ ಮಾಡಲು ಸಾಧ್ಯ; DDLJ ಸಿನಿಮಾ ರೀಮೇಕ್ ಬೇಡವೇ ಬೇಡ ಎಂದ ಕಾಜೋಲ್!


ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ ಅಲ್ಲಿ ಕೆಲವು ಜನರನ್ನು ತಿಳಿದಿದ್ದರೂ, ಅವರ ಪ್ರಭಾವವನ್ನು ಬಳಸದಂತೆ ಆರವ್ ಅವರನ್ನು ಕೇಳಿದ್ದಾರೆ, ಇಲ್ಲದಿದ್ದರೆ ಅವರು ಅಲ್ಲಿ ಅಧ್ಯಯನ ಮಾಡುವುದಿಲ್ಲ ಅಂತ ಸಹ ಹೇಳಿದ್ದಾರಂತೆ.


ಮಗನ ಹುಟ್ಟುಹಬ್ಬಕ್ಕೆ ತಾಯಿ ಟ್ವಿಂಕಲ್ ಹಾಕಿದ ಪೋಸ್ಟ್ ನೋಡಿ!


ಆರವ್ ಗೆ ಇತ್ತೀಚೆಗೆ 20 ವರ್ಷ ವಯಸ್ಸು ತುಂಬಿದ್ದು, ತನ್ನ ಹೆತ್ತವರಂತೆ ತುಂಬಾನೇ ಸುಂದರವಾಗಿ ಬೆಳೆದಿದ್ದಾನೆ. ತಾಯಿ ಟ್ವಿಂಕಲ್ ಮಗನ ಹುಟ್ಟುಹಬ್ಬಕ್ಕೆ ಒಂದು ಪೋಸ್ಟ್ ಅನ್ನು ಹಾಕಿದ್ದರು. "ಅವನಿಗೆ ಈಗ 20 ವರ್ಷ! ಅವನನ್ನು ಬೆಳೆಸುವುದು ಸಾಕಷ್ಟು ಕಷ್ಟ, ಆದರೆ ಅಂತಿಮವಾಗಿ ಅದನ್ನು ಬಿಡುವುದು ಕಷ್ಟ. ಸಮಸ್ಯೆಯೆಂದರೆ ನಾವು ಅವರ ಇಷ್ಟವನ್ನು ಅರಿಯದೆ ಎಲ್ಲವನ್ನೂ ಮಾಡುತ್ತೇವೆ.


ಅವರು ಚಿಕ್ಕವರಿದ್ದಾಗ ನಾವು ಅವರಿಗೆ ಸೂಕ್ತ ಅಂತ ಅನ್ನಿಸುವ ಕೆಲಸಗಳನ್ನು ಮಾಡುತ್ತೇವೆ. ನಾವು ಇದನ್ನು ಅನೇಕ ವರ್ಷಗಳವರೆಗೆ ಮಾಡಿಕೊಂಡು ಬಂದಾಗ ಅದಕ್ಕೆ ನಾವು ಒಗ್ಗಿಕೊಳ್ಳುತ್ತೇವೆ ಮತ್ತು ಅವರ ಇಷ್ಟಗಳು ಅವರಿಗೆ ಸೇರಿದ್ದು ಅನ್ನೋದನ್ನು ನಾವು ಮರೆತುಬಿಡುತ್ತೇವೆ.


ಇದರಿಂದ ಹಿಂದೆ ಸರಿಯುವುದು ಕಷ್ಟ, ಆದರೆ ಈ ಅದ್ಭುತ ಹುಡುಗ ತನ್ನ ಇಷ್ಟಗಳೊಂದಿಗೆ ಎಂತಹ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾನೆ ಎಂಬುದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಹುಟ್ಟುಹಬ್ಬದ ಶುಭಾಶಯಗಳು ಆರವ್" ಎಂದು ದೊಡ್ಡ ಪೋಸ್ಟ್ ಅನ್ನು ಹಾಕಿದ್ದರು.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು