Samrat Prithviraj: ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಟೆಂಪಲ್ ರನ್

‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕಾಗಿ ವಾರಣಾಸಿಯಲ್ಲಿ ಪೂಜೆ

‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕಾಗಿ ವಾರಣಾಸಿಯಲ್ಲಿ ಪೂಜೆ

ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನಟ ಅಕ್ಷಯ್ ಕುಮಾರ್ ಪಿಂಕ್ ಕುರ್ತಾ ಧರಿಸಿ, ಕೈಯಲ್ಲಿ ದೀಪಗಳು ಮತ್ತು ಹೂವುಗಳೊಂದಿಗೆ ಪ್ರಾರ್ಥನಾ ಫಲಕವನ್ನು ಹಿಡಿದಿರುವ ಚಿತ್ರವನ್ನು ಹಂಚಿ ಕೊಂಡಿದ್ದಾರೆ. ಅಕ್ಷಯ್ ತಮ್ಮ ಹಣೆಯ ಮೇಲೆ ಕೆಂಪು ಕುಂಕುಮವನ್ನು ಸಹ ಹಚ್ಚಿಕೊಂಡಿದ್ದಾರೆ ಮತ್ತು ಅವರು ಗಂಗಾ ನದಿಯ ದಡದಲ್ಲಿ ಪೂಜೆಯನ್ನು ಮಾಡುತ್ತಿರುವುದನ್ನು ಇಲ್ಲಿ ನೋಡಬಹುದಾಗಿದೆ.

ಮುಂದೆ ಓದಿ ...
  • Share this:

ಈಗಂತೂ ಚಿತ್ರ ನಿರ್ಮಾಪಕರು (Film makers) ಮತ್ತು ನಟರು (Actor) ತಮ್ಮ ಚಿತ್ರದ ಪ್ರಚಾರಕ್ಕಾಗಿ (Promotion of film) ಅಥವಾ ಚಲನಚಿತ್ರ ಬಿಡುಗಡೆಗೂ (Release) ಮುಂಚಿತವಾಗಿ ಶಿವ ದೇವರ ಆಶೀರ್ವಾದವನ್ನು (Blessing of God) ಪಡೆಯಲು ವಾರಣಾಸಿಗೆ (Varanasi) ಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಬಾಲಿವುಡ್ ನಟ (Bollywood actor) ಕಾರ್ತಿಕ್ ಆರ್ಯನ್ (Karthik aryan) ತಮ್ಮ ‘ಭೂಲ್ ಭುಲೈಯಾ 2’ (Bhoole Bhulya 2) ಚಿತ್ರದ ಬಿಡುಗಡೆಯ ನಂತರ ವಾರಣಾಸಿಯಿಂದ ಹಿಂದಿರುಗಿದ್ದರು ಎಂಬುದು ಕಾರ್ತಿಕ್ ಆರ್ಯನ್ ಅವರ ಎಲ್ಲಾ ಅಭಿಮಾನಿಗಳಿಗೆ (Fans) ಗೊತ್ತಿರುವ ವಿಚಾರವೇ ಆಗಿರುತ್ತದೆ. ಇಲ್ಲಿ ಸುದ್ದಿ ಏನಪ್ಪಾ ಎಂದರೆ ಇನ್ನೊಬ್ಬ ಬಾಲಿವುಡ್ ನಟ ವಾರಣಾಸಿಗೆ ಹೋಗಿದ್ದಾರೆ ನೋಡಿ.


ಗಂಗಾ ನದಿಯ ದಡದಲ್ಲಿ ಪೂಜೆ
ಹೌದು.. ನಟ ಅಕ್ಷಯ್ ಕುಮಾರ್ ಗಂಗಾ ನದಿಯ ದಡದಲ್ಲಿ ಪೂಜೆ ಮಾಡುತ್ತಿರುವುದು ಕಂಡು ಬಂದಿದೆ. ನಟ ಪ್ರಸ್ತುತ ತಮ್ಮ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಪ್ರಚಾರದಲ್ಲಿದ್ದಾರೆ ಮತ್ತು ಸಹನಟಿ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಅವರೊಂದಿಗೆ ವಾರಣಾಸಿಯಲ್ಲಿ ಇದ್ದರು.


ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನಟ ಅಕ್ಷಯ್ ಕುಮಾರ್ ಪಿಂಕ್ ಕುರ್ತಾ ಧರಿಸಿ, ಕೈಯಲ್ಲಿ ದೀಪಗಳು ಮತ್ತು ಹೂವುಗಳೊಂದಿಗೆ ಪ್ರಾರ್ಥನಾ ಫಲಕವನ್ನು ಹಿಡಿದಿರುವ ಚಿತ್ರವನ್ನು ಹಂಚಿ ಕೊಂಡಿದ್ದಾರೆ. ಅಕ್ಷಯ್ ತಮ್ಮ ಹಣೆಯ ಮೇಲೆ ಕೆಂಪು ಕುಂಕುಮವನ್ನು ಸಹ ಹಚ್ಚಿಕೊಂಡಿದ್ದಾರೆ ಮತ್ತು ಅವರು ಗಂಗಾ ನದಿಯ ದಡದಲ್ಲಿ ಪೂಜೆಯನ್ನು ಮಾಡುತ್ತಿರುವುದನ್ನು ಇಲ್ಲಿ ನೋಡಬಹುದಾಗಿದೆ.


ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್
ಮಾನುಷಿ ಚಿಲ್ಲರ್ ಅವರು ಗುಲಾಬಿ ಬಣ್ಣದ ಸಲ್ವಾರ್ ಕುರ್ತಾ ಧರಿಸಿಕೊಂಡು ಅಕ್ಷಯ್ ಅವರೊಂದಿಗೆ ನಿಂತುಕೊಂಡು ಪೂಜೆ ಮಾಡಿಸುತ್ತಿರುವುದನ್ನು ಇಲ್ಲಿ ನೋಡಬಹುದು. ಪೂಜೆ ಮಾಡಿಸುತ್ತಿರುವ ಫೋಟೋಗಳನ್ನು ಸಹ ಇವರು ಹಂಚಿ ಕೊಂಡಿದ್ದಾರೆ. ತನ್ನ ಒಂದು ಫೋಟೋದಲ್ಲಿ ಮಾನುಷಿ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು, ಕೈಮುಗಿದು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ದೋಣಿಗಳು ಮತ್ತು ಘಾಟ್ ಗಳ ಹಿನ್ನೆಲೆಯಲ್ಲಿ ಜನರ ದೊಡ್ಡ ಗುಂಪನ್ನು ಸಹ ಈ ಫೋಟೋಗಳಲ್ಲಿ ಕಾಣಬಹುದು. ಮತ್ತೊಂದು ಫೋಟೋದಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದಲ್ಲಿ ಅಭಿನಯಿಸಿದ ನಟರು ಪ್ರಾರ್ಥನಾ ಫಲಕವನ್ನು ಒಟ್ಟಿಗೆ ಹಿಡಿದಿದ್ದರು, ಪುರೋಹಿತರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಸಹಾಯ ಮಾಡಿದರು.


ಇದನ್ನೂ ಓದಿ: Ante Sundaraniki: ‘ಅಂಟೇ ಸುಂದರಾನಿಕಿ’ ಚಿತ್ರದ ಟ್ರೈಲರ್ ಔಟ್; ಹಾಗಿದ್ರೆ ಸಿನೆಮಾ ರಿಲೀಸ್ ಯಾವಾಗ?

View this post on Instagram


A post shared by Akshay Kumar (@akshaykumar)
ಅಕ್ಷಯ್ ತನ್ನ ಕುರ್ತಾ ಮತ್ತು ಪೈಜಾಮಾ ಧರಿಸಿಯೇ ಗಂಗಾ ನದಿಗೆ ಹಾರಿ ಸ್ನಾನ ಮಾಡಿದ್ದು ಅಲ್ಲಿದ್ದವರನೆಲ್ಲಾ ಒಂದು ಕ್ಷಣ ಆಶ್ಚರ್ಯಗೊಳಿಸಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರು ನದಿಗೆ ಹಾರುವಾಗ ತನ್ನ ಎರಡು ಕೈಗಳನ್ನು ತಲೆಯ ಮೇಲೆ ಜೋಡಿಸಿ ನದಿಗೆ ಹಾರಿದರು. ಈ ವೀಡಿಯೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


‘ಸಾಮ್ರಾಟ್ ಪೃಥ್ವಿರಾಜ್’ ಎಂದು ಚಿತ್ರದ ಹೆಸರು ಬದಲಾವಣೆ
‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರವು ಜೂನ್ 3 ರಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಚಿತ್ರವು ಪೌರಾಣಿಕ ಯೋಧ ಪೃಥ್ವಿರಾಜ್ ಚೌಹಾಣ್ ಅವರ ಜೀವನ ಮತ್ತು ರಾಜಕುಮಾರಿ ಸಂಯೋಗಿತಾ ಅವರ ಮೇಲಿನ ಅವರ ಪ್ರೀತಿಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಸೋನು ಸೂದ್, ಸಂಜಯ್ ದತ್, ಮಾನವ್ ವಿಜ್, ಅಶುತೋಷ್ ರಾಣಾ ಮತ್ತು ಸಾಕ್ಷಿ ತನ್ವರ್ ಸಹ ನಟಿಸಿದ್ದಾರೆ. ಈ ಚಲನಚಿತ್ರದ ಮೂಲಕ ಮಾನುಷಿ ಚಿಲ್ಲರ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ.


ಇದನ್ನೂ ಓದಿ:  Durga: ನಿರ್ದೇಶಕನಾಗಿ - ನಟನಾಗಿ ಅಖಾಡಕ್ಕಿಳಿಯಲಿದ್ದಾರಂತೆ ರಾಘವ ಲಾರೆನ್ಸ್, ಯಾಕೆ ಅಂತೀರಾ? ಈ ಸ್ಟೋರಿ ಓದಿ


ನಟ ಅಕ್ಷಯ್ ಕುಮಾರ್ ಚಿತ್ರಕ್ಕೆ ಮೊದಲು 'ಪೃಥ್ವಿರಾಜ್' ಎಂದು ಹೆಸರಿಡಲಾಗಿತ್ತು, ಆದರೆ ಈಗ ಅದನ್ನು ‘ಸಾಮ್ರಾಟ್ ಪೃಥ್ವಿರಾಜ್’ ಎಂದು ಬದಲಾಯಿಸಲಾಗಿದೆ. ಶ್ರೀ ರಜಪೂತ್ ಕರ್ಣಿ ಸೇನೆಯೊಂದಿಗೆ ನಡೆದ ಹಲವು ಚರ್ಚೆಗಳ ನಂತರ ಯಶ್ ರಾಜ್ ಫಿಲ್ಮ್ಸ್ ಶುಕ್ರವಾರ ಈ ಹೊಸ ಶೀರ್ಷಿಕೆಯನ್ನು ಪ್ರಕಟಿಸಿದೆ, ಅದು ಹಿಂದಿನ ಹೆಸರು ಅಗೌರವದಿಂದ ಕೂಡಿದೆ ಎಂಬ ಆಧಾರದ ಮೇಲೆ ಆಕ್ಷೇಪಿಸಿತ್ತು ಎಂದು ಹೇಳಲಾಗುತ್ತಿದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು