ಒಟಿಟಿ ಫ್ಲಾಟ್​ಫಾರ್ಮ್​ ಮೂಲಕ ‘ಲಕ್ಷ್ಮಿ ಬಾಂಬ್‘ ಸ್ಫೋಟಿಸಲಿದ್ದಾರಾ ನಟ ಅಕ್ಷಯ್ ಕುಮಾರ್?

ಅನೇಕರು  ಸಿನಿಮಾವನ್ನು ಒಟಿಟಿ ಮೂಲಕ ಬಿಡುಗಡೆಗೊಳಿಸಲು ಬೆಂಬಲ ಸೂಚಿಸಿದ್ದಾರೆ. ಇನ್ನು ಕೆಲವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಅದರಲ್ಲೊಬ್ಬರು ‘ಪ್ರೇಕ್ಷಕರು ಸಾಮೂಹಿಕವಾಗಿ ಸಿನಿಮಾ ನೋಡುವ ಬದಲು ಒಟಿಟಿ ಮೂಲಕ ನೋಡ ಬಹುದು‘ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ‘ಚಿತ್ರಮಂದಿರಗಳನ್ನು ಬೆಂಬಲಿಸಲು ‘ಲಕ್ಷ್ಮಿ ಬಾಂಬ್​‘​​​ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡದಿರಿ ಅಕ್ಷಯ್​ ಕುಮಾರ್​ ಅವರಿಗೆ ನನ್ನ ವಿನಂತಿ‘ ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

 • Share this:
  ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ‘ಲಕ್ಷ್ಮಿ ಬಾಂಬ್​‘​​​ ಸಿನಿಮಾ ಒಟಿಟಿ ಫ್ಲಾರ್ಟ್​ಫಾಮ್​ ಮೂಲಕ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಕ್ಷಯ್​ ಕುಮಾರ್​ ಅಭಿಮಾನಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

  ಅನೇಕರು  ಸಿನಿಮಾವನ್ನು ಒಟಿಟಿ ಮೂಲಕ ಬಿಡುಗಡೆಗೊಳಿಸಲು ಬೆಂಬಲ ಸೂಚಿಸಿದ್ದಾರೆ. ಇನ್ನು ಕೆಲವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಅದರಲ್ಲೊಬ್ಬರು ‘ಪ್ರೇಕ್ಷಕರು ಸಾಮೂಹಿಕವಾಗಿ ಸಿನಿಮಾ ನೋಡುವ ಬದಲು ಒಟಿಟಿ ಮೂಲಕ ನೋಡ ಬಹುದು‘ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ‘ಚಿತ್ರಮಂದಿರಗಳನ್ನು ಬೆಂಬಲಿಸಲು ‘ಲಕ್ಷ್ಮಿ ಬಾಂಬ್​‘​​​ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡದಿರಿ ಅಕ್ಷಯ್​ ಕುಮಾರ್​ ಅವರಿಗೆ ನನ್ನ ವಿನಂತಿ‘ ಎಂದು ಬರೆದುಕೊಂಡಿದ್ದಾರೆ.

  ಲಕ್ಷ್ಮಿ ಬಾಂಬ್​​​​ ಬಾಂಬ್​ ಸಿನಿಮಾ ತಮಿಳಿನ ಮುನಿ2: ಕಾಂಚನಾ ಚಿತ್ರದ ರಿಮೇಕ್​​. ಚಿತ್ರತಂಡ ಯೋಜನೆ ಹಾಕಿಕೊಂಡತೆ ಮೇ 22ರಂದು ಸಿನಿಮಾವನ್ನು ದೇಶದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದೆ. ಆದರೆ  ಲಾಕ್​​​ಡೌನ್​ ಮುಗಿದ ನಂತರ ಚಿತ್ರಮಂದಿರಗಳು ತಕ್ಷಣವೇ ತೆರವುಗೊಳಿಸಿದರು ಪ್ರೇಕ್ಷಕರು ಥಿಯೇಟರ್​ಗೆ ಬರುತ್ತಾರೆಯೇ ಎಂಬದೇ ಅನುಮಾನ. ಹಾಗಾಗಿ ಚಿತ್ರತಂಡದ ಮುಂದಿನ ಯೋಜನೆ ಏನು? ‘ಲಕ್ಷ್ಮಿ ಬಾಂಬ್‘ ಒಟಿಟಿ ಫ್ಲಾಟ್​​​ಫಾರ್ಮ್​ ಮೂಲಕ  ಬಿಡುಗಡೆಯಾಗಲಿದೆಯಾ? ಎಂದು ಕಾದು ನೋಡಬೇಕಿದೆ.

  ಕೊರೋನಾ ಗೆದ್ದು ಬಂದ ‘ಮನಿ ಹೈಸ್ಟ್‘ ನಟಿ!
  First published: