ಕೊನೆಯ ಹಂತ ತಲುಪಿರುವ 'ಬಿಗ್​ ಬಾಸ್​' ಮನೆಯಲ್ಲಿ ಈ ವಾರ ಏನೆಲ್ಲಾ ಆಯ್ತು ಗೊತ್ತಾ?

ಕನ್ನಡ 'ಬಿಗ್​ ಬಾಸ್​ 6' 84 ದಿನಗಳನ್ನು ಪೂರ್ಣಗೊಳಿಸಿದೆ. ಈ ವಾರ ಮನೆಯಲ್ಲಿ ಕೆಲ ಅಚ್ಚರಿಯ ಬೆಳವಣಿಗೆಗಳು ನಡೆದವು. ಅವುಗಳ ವಿವರ ಇಲ್ಲಿದೆ.

Rajesh Duggumane | news18
Updated:January 13, 2019, 1:58 PM IST
ಕೊನೆಯ ಹಂತ ತಲುಪಿರುವ 'ಬಿಗ್​ ಬಾಸ್​' ಮನೆಯಲ್ಲಿ ಈ ವಾರ ಏನೆಲ್ಲಾ ಆಯ್ತು ಗೊತ್ತಾ?
ನವೀನ್​, ಪ್ರಥಮ್​, ಅಕ್ಷತಾ
Rajesh Duggumane | news18
Updated: January 13, 2019, 1:58 PM IST
‘ಬಿಗ್​ ಬಾಸ್​ 6’ ಅಂತಿಮ ಹಂತ ತಲುಪಿದೆ. ಇನ್ನು ಕೆಲವೇ ವಾರಗಳು ಪೂರ್ಣಗೊಂಡರೆ ‘ಬಿಗ್ ​ಬಾಸ್​ 6’ ವಿಜೇತರ ಹೆಸರು ಹೊರ ಬೀಳಲಿದೆ. ಅದಕ್ಕೂ ಮೊದಲು ಈ ಮನೆಯಲ್ಲಿ ಕೆಲವು ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮನೆಯಿಂದ ಹೊರ ನಡೆದ್ರು ಅಕ್ಷತಾ:

ಅಕ್ಷತಾ ಪಾಂಡವಪುರ ಈ ವಾರ ಮನೆಯಿಂದ ಹೊರ ನಡೆದಿದ್ದಾರೆ. ಈ ಮೂಲಕ ಮನೆಯಲ್ಲಿ 84 ದಿನಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ. ಮೂಲತಃ ನಟಿಯಾಗಿರುವ ಅವರು ಮನೆ ಒಳಗೆ ಸೇರಿಕೊಂಡಾಗಿನಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಮಾಡುತ್ತಲೇ ಇದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಸ್ಪರ್ಧಿ ರಾಕೇಶ್​ ಅವರ ಜೊತೆ ಅಕ್ಷತಾ ಕ್ಲೋಸ್​ ಆಗಿ ವರ್ತಿಸಿದ್ದರು. ಹಾಗಾಗಿ ಇಬ್ಬರ ನಡುವೆ ಪ್ರೀತಿ ಇದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅವರ ವರ್ತನೆ ವೀಕ್ಷಿಸಿದ್ದ ಅನೇಕರು ಅಕ್ಷತಾರನ್ನು ಮನೆಯಿಂದ ಹೊರ ಹಾಕುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ: ಹುಡುಗಿಯರ ಜೊತೆ ಸಖತ್​ ಫ್ಲರ್ಟ್ ಮಾಡ್ತಾರೆ ವಿಜಯ್ ದೇವರಕೊಂಡ!; ಬಯಲಾಯ್ತು ಅಚ್ಚರಿಯ ವಿಚಾರ

ಫೈನಲ್​ ಲಿಸ್ಟ್​ಗೆ ನವೀನ್​ ಸಜ್ಜು ಆಯ್ಕೆ:

‘ಬಿಗ್​ ಬಾಸ್​’ ಮನೆಯಲ್ಲಿ ಯಾರ್ಯಾರು ಫೈನಲ್​ಗೆ ತೆರಳಲಿದ್ದಾರೆ ಎನ್ನುವ ಲೆಕ್ಕಾಚರ ನಡೆಯುತ್ತಿದೆ. ಈ ಪಟ್ಟಿಯಲ್ಲಿ ಮೊದಲಿಗರಾಗಿ ಸಂಗೀತ ನಿರ್ದೇಶಕ ನವೀನ್​ ಸಜ್ಜು ಆಯ್ಕೆಯಾಗಿದ್ದಾರೆ. ಫೈನಲ್​ಗೆ ಇನ್ನು ಮೂರು ವಾರ ಇರುವಾಗಲೇ ಈ ಅಚ್ಚರಿಯ ಬೆಳವಣಿಗೆ ನಡೆದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದರೆ, ಅವರಿಗೆ ಒಂದು ಕಂಡೀಷನ್​ ಕೂಡ ಹಾಕಲಾಗಿದೆ. ಫಿನಾಲೆ ವಾರದಲ್ಲಿ ಎಲಿಮಿನೇಷನ್​ ಇದ್ದರೆ ಮನೆಯಿಂದ ಹೊರಹೊಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ ಸುದೀಪ್​. ಕಳೆದ ಎರಡು ವಾರಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಹಾಗಾಗಿ ಅವರಿಗೆ ಈ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಆದರೆ, ಇಲ್ಲಿ ಒಂದು

ಬಿಗ್​ ಬಾಸ್​ ಮನೆಯಲ್ಲಿ ಪ್ರಥಮ್​ಗೇನು ಕೆಲಸ?​ : 
Loading...

‘ಬಿಗ್​ ಬಾಸ್​’ 4ನೇ ಸೀಸನ್​ ವಿಜೇತ ಪ್ರಥಮ್​​ ‘ಬಿಗ್​ ಬಾಸ್​ 6’ ಮನೆಗೆ ಎಂಟ್ರಿ ಪಡೆಯಲಿದ್ದಾರಂತೆ. ಅರೆ ಅವರು ಮನೆ ಪ್ರವೇಶಿಸಿದ್ದೇಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. ಅದಕ್ಕೂ ಕಾರಣವಿದೆ. ಪ್ರಥಮ್​ ಅತಿಥಿಯಾಗಿ ಮನೆಗೆ ಎಂಟ್ರಿ ನೀಡಲಿದ್ದಾರಂತೆ. ಒಂದು ವಾರಗಳಕಾಲ ಅವರು ಅಲ್ಲಿಯೇ ಇರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪತಿ ರಣವೀರ್​ ಸಿಂಗ್​ ಜೊತೆ ನಟಿಸಲು 'ನೋ' ಅಂದ್ರು ದೀಪಿಕಾ ಪಡುಕೋಣೆ!

First published:January 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ