Bigg Boss OTT: ಬಿಗ್​ ಬಾಸ್​ ಮನೆಗೆ 9ನೇ ಅಭ್ಯರ್ಥಿಯಾಗಿ ದಾಂಡೇಲಿ ಬೆಡಗಿ ಅಕ್ಷತಾ ಕುಕ್ಕಿ ಎಂಟ್ರಿ

7ನೇ ಸ್ಪರ್ಧಿಯಾಗಿ ನಟಿ ಅಕ್ಷತಾ ಕುಕ್ಕಿ (Akshata kuki)  ಎಂಟ್ರಿ ಕೊಟ್ಟಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯವರಾಗಿರುವ ಅಕ್ಷತಾ ಸಿನಿಮಾ ಜಗತ್ತಿನ ಬಗ್ಗೆ ಕುತೂಹಲ ಇದ್ದ ಕಾರಣ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಅಕ್ಷತಾ ಕುಕ್ಕಿ

ಅಕ್ಷತಾ ಕುಕ್ಕಿ

  • Share this:


ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss OTT) ಈ ಬಾರಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗ್ತಿದೆ. ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.  ಇದೀಗ 7ನೇ ಸ್ಪರ್ಧಿಯಾಗಿ ನಟಿ ಅಕ್ಷತಾ ಕುಕ್ಕಿ (Akshata kuki)  ಎಂಟ್ರಿ ಕೊಟ್ಟಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯವರಾಗಿರುವ ಅಕ್ಷತಾ ಮನೆಯವರೆಲ್ಲ ಸರ್ಕಾರಿ ನೌಕರರು. ಇವರು ಕೂಡ ಸರ್ಕಾರಿ ಕೆಲಸಕ್ಕೇ ಸೇರಬೇಕು ಎಂದು ಅಂದುಕೊಡಿದ್ದರಂತೆ. ಆದರೆ, ಸಿನಿಮಾ ಜಗತ್ತಿನ ಬಗ್ಗೆ ಕುತೂಹಲ ಇದ್ದ ಕಾರಣ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.

ಅಕ್ಷತಾ ಕುಕ್ಕಿ


ಮಾಡೆಲ್​ ಆಗಿ ಎಂಟ್ರಿ ಕೊಟ್ಟ ಅಕ್ಷತಾ ಕುಕ್ಕಿ

ಮಾಡೆಲ್​ ಆಗಿದ್ದ ಅಕ್ಷತಾ ಕುಕ್ಕಿ ಚಿತ್ರರಂಗದಲ್ಲೂ ಅನೇಕರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೊದಲಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾಗೆ ಸಿನಿಮಾ ಆಫರ್ ಕೂಡ ಬಂದು ಅದರಲ್ಲಿ ಯಶಸ್ಸು ಸಾಧಿಸಿದರು.  ಸೈಡ್​ ಆ್ಯಕ್ಟರ್ ಆಗಿಯೂ ಇವರು ನಟಿಸಿದ್ದಾರೆ.

ಬಿಗ್​ ಬಾಸ್​ಗೆ ಬರಬೇಕು ಅನ್ನೋ ಆಸೆ ನನಗಿತ್ತು

ಅಂದಿನಿಂದಲೂ ಬಿಗ್ ಬಾಸ್​ಗೆ ಬರಬೇಕು ಎಂಬ ಆಸೆ ಇವರಿಗಿತ್ತಂತೆ. ಅದರಂತೆ ಇದೀಗ ದೊಡ್ಮಮನೆಯೊಳಗೆ ಪ್ರವೇಶ ಪಡೆದುಕೊಂಡಿದ್ದಾರೆ. ಸದಾ ನಗುಮುಖದಿಂದ ಇರುವ ಅಕ್ಷತಾ ಬಿಗ್ ಬಾಸ್ ಮನೆಯೊಳಗೂ ಖುಷಿಯಿಂದ ಇರುತ್ತೇನೆ ಎಂದು ವೇದಿಕೆ ಮೇಲೆ ಸುದೀಪ್ ಜೊತೆ ಹೇಳಿದ್ದಾರೆ.

ಬಿಗ್​ಬಾಸ್​ ಮನೆಗೆ ಸಾನ್ಯ ಎಂಟ್ರಿ

ಕನ್ನಡ ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು, ಇನ್ನು ಸಾಕಷ್ಟು ಬಾರಿ ಟ್ರೋಲ್‌ಗಳಿಗೆ ಒಳಪಟ್ಟ ಸೀರಿಯಲ್ ಕೂಡ ಆಗಿದೆ. ಈ ಧಾರಾವಾಹಿಯಲ್ಲಿ (Serial) ಗೌರಿಯ ಪಾತ್ರದಲ್ಲಿ ಬಾಲನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ ಸಾನ್ಯ ಅಯ್ಯರ್ ಇದೀಗ ಬಿಗ್​ ಬಾಸ್ (Bigg Boss)​ ಮನೆಗೆ ಗ್ರ್ಯಾಂಡ್​  ಆಗಿ ಕಾಲಿಟ್ಟಿದ್ದಾರೆ. ಇತ್ತೀಚಿಗೆ ರಿಯಾಲಿಟಿ ಶೋಗಳಲ್ಲೂ  ಅವರು ಭಾಗವಹಿಸಿದ್ರು.  ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಾನ್ಯ ಅಯ್ಯರ್​ (Sanya Iyar) ಸೋಷಿಯನ್ ಮಿಡಿಯಾದಲ್ಲಿ ಸಖತ್​ ಆಕ್ಟೀವ್ ಆಗಿದ್ದು, ಅಭಿಮಾನಿ ಬಳಗ ಹೊಂದಿದ್ದಾರೆ.

ಅನೇಕ ಚಿತ್ರಗಳಲ್ಲಿ ಸಾನ್ಯ ಅಭಿನಯ
ಸಾನ್ಯ ಅವರು ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಕೆಲ ವರ್ಷಗಳ ಹಿಂದೆ ಮಲಯಾಳಂನ 'ಆರಾರೋ..ನೀಯಾರೋ' ಎಂಬ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. 'ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಾನ್ಯ ಅವರು 'ಗುಲಾಬ್‌ ಜಾಮೂನ್‌' ಎಂಬ ಮೈಕ್ರೋ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.






4ನೇ ಅಭ್ಯರ್ಥಿಯಾಗಿ ಎಂಟ್ರಿ ಕೊಟ್ಟ  ನಟಿ ಸ್ಫೂರ್ತಿಗೌಡ

 ಕನ್ನಡ ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಈಗಾಗಲೇ ಆರಂಭವಾಗಿರುವ ಕಾರ್ಯಕ್ರಮದಲ್ಲಿ 3 ಜನ ಸ್ಪರ್ಧಿಗಳು ಬಿಗ್​ ಬಾಸ್​ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇದೀಗ ದೊಡ್ಮನೆಗೆ 4ನೇ ಸ್ಪರ್ಧಿಯ ಪ್ರವೇಶ ಆಗಿದೆ. ಹೌದು, ಕನ್ನಡದ ಸೀರಿಯಲ್​​ ನಟಿ ಸ್ಫೂರ್ತಿ ಗೌಡ (Spoorthi Gowda) ಅವರು ಬಿಗ್​ ಬಾಸ್​ ಒಟಿಟಿ ಸೀಸನ್ ್ಒಂದರಲ್ಲಿ 4ನೇ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಇನ್ನು, ಇಂದಿನಿಂದ ಪ್ರಾರಂಭವಾಗಿರುವ ಶೋ ವೂಟ್‌ ಆ್ಯಪ್‌ನಲ್ಲಿ (Voot App)   ಸ್ಟ್ರೀಮಿಂಗ್ (Streaming) ಆಗಲಿದೆ.  ಈ ಬಾರಿಯ ಸ್ಪರ್ಧಿಗಳನ್ನು ನೋಡುತ್ತಿದ್ದಲ್ಲಿ ಬಿಗ್​ ಬಾಸ್​ ಎಲ್ಲಾ ಸೀಸನ್​ ನಂತೆಯೇ ಈ ಬಾರಿಯೂ ಪ್ರೇಕ್ಷಕರಿಗೆ ಸಖತ್ ಮಜಾ ಸಿಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Published by:Pavana HS
First published: