Akhanda Film: ಬಾಲಯ್ಯನ ‘ಅಖಂಡ’ ದಾಖಲೆ; 50ನೇ ದಿನಕ್ಕೆ 103 ಥಿಯೇಟರ್​​​ಗಳಲ್ಲಿ ಅಬ್ಬರ

ಬಾಲಯ್ಯ ಅಖಂಡನಾಗಿ ಇಡೀ ಚಿತ್ರದ ತುಂಬಾ ಆವರಿಸಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಜ್ಞಾ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಜಗಪತಿಬಾಬು, ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿದ್ದಾರೆ.

ಅಖಂಡ

ಅಖಂಡ

 • Share this:
  ಟಾಲಿವುಡ್’ನ (Tollywood) ಹಿರಿಯ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಅಖಂಡ (Akhanda) ಸಿನಿಮಾ ರಿಲೀಸ್ ಆಗಿ, ಇದೀಗ 50ನೇ ದಿನಕ್ಕೆ ಕಾಲಿಟ್ಟಿದೆ. ಗಲ್ಲಾ ಪೆಟ್ಟಿಗೆಯಲ್ಲಿ (Box Office) ಧೂಳೆಬ್ಬಿಸುತ್ತಿರೋ ಈ ಚಿತ್ರ, ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ. ಸದ್ಯ 50ನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಅನ್ನುವುದು ಚಿತ್ರದ ಹೆಗ್ಗಳಿಕೆ. ಕರೊನಾದಿಂದ ಕಂಗೆಟ್ಟಿದ್ದ ತೆಲುಗು ಚಿತ್ರರಂಗಕ್ಕೆ ಬಾಲಯ್ಯ ಹೊಸ ಹುರುಪು ನೀಡಿದ್ದಾರೆ. ಬೋಯಪಾಟಿ ಶ್ರೀನು (Boyapati Srinu) ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಬಾಲಯ್ಯ ಸಖತ್ ಸ್ಟಂಟ್ ಮಾಡಿದ್ದಾರೆ. ಅಘೋರಿ ಗೆಟಪ್’ನಲ್ಲಿ ಕಾಣಿಸಿಕೊಂಡಿರುವ ಬಾಲಕೃಷ್ಣ, ತಮ್ಮ ಅಭಿನಯದಿಂದ, ಖಡಕ್ ಡೈಲಾಗ್’ನಿಂದಲೇ ಅಭಿಮಾನಿಗಳಿಗೆ ಮೋಡಿ ಮಾಡ್ತಿದ್ದಾರೆ.

  ಡಿಸೆಂಬರ್ 2ರಂದು ಹೈದ್ರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳು ಹಾಗೂ ವರ್ಲ್ಡ್ ವೈಡ್ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನದಿಂದಲೇ ಬಾಕ್ಸ್ ಆಫೀಸ್’ನಲ್ಲಿ ಅಖಂಡ ಕಮಾಲ್ ಮಾಡಿತ್ತು. ಮೊದಲ ದಿನವೇ 15.39 ಕೋಟಿ ಕಲೆಕ್ಷನ್ ಮಾಡಿತ್ತು. ಆಗಿನಿಂದಲೂ ಗಲ್ಲಾಪೆಟ್ಟಿಗೆಯಲ್ಲಿ ಅಖಂಡ ಧೂಳೆಬ್ಬಿಸುತ್ತಲೇ ಇದ್ದಾನೆ. ಇದೀಗ 50ನೇ ದಿನಕ್ಕೆ ಕಾಲಿಟ್ಟಿದ್ದು, ಸಿನಿಮಾ 200 ಕೋಟಿ ಕ್ಲಬ್ ಸೇರಿದೆ.

  ‘ಪುಪ್ಪಾ’ಗೆ ಪೈಪೋಟಿ ಕೊಡ್ತಾನಾ ‘ಅಖಂಡ’..?

  ಅಖಂಡ ಸಿನಿಮಾ ಬರೀ ಬಾಕ್ಸ್ ಆಫೀಸ್ ಕಲೆಕ್ಷನ್ ಅಷ್ಟೇ ಅಲ್ಲದೇ, ಬೇರೆ ಬೇರೆ ದಾಖಲೆಗಳನ್ನೂ ಮಾಡುತ್ತಿದೆ. ಬರೀ ಭಾರತದಲ್ಲಷ್ಟೇ ಅಲ್ಲದೇ, ವಿದೇಶದಲ್ಲಿ ಸಿನಿಮಾ ಉತ್ತಮ ಗಳಿಕೆ ಕಾಣುತ್ತಿದೆ. 2022ರಲ್ಲಿ ವಿದೇಶದಲ್ಲಿ ಹೆಚ್ಚು ಗಳಿಕೆ ಮಾಡಿದ ತೆಲುಗು ಸಿನಿಮಾ ಎಂಬ ಖ್ಯಾತಿ ಅಖಂಡನ ಮುಡಿಗೇರಿದೆ. ಇನ್ನು ತೆಲುಗಿನ ಮತ್ತೊಂದು ಸಿನಿಮಾಗೆ ಪೈಪೋಟಿ ಕೊಡಲು ಅಖಂಡ ಸಜ್ಜಾದಂತೆ ಕಾಣಿಸುತ್ತಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಈಗಾಗಲೇ ರಿಲೀಸ್ ಆಗಿದೆ. ಬಾಕ್ಸ್ ಆಫೀಸ್ ನಲ್ಲೂ ಚಿಂದಿ ಉಡಾಯಿಸುತ್ತಿದ್ದು, 300 ಕೋಟಿ ಕ್ಲಬ್ ಸೇರಿದೆ. ಇತ್ತ ಅಖಂಡನ ಅಬ್ಬರ ನೋಡ್ತಿದ್ದರೆ, ಶೀಘ್ರವೇ ಬಾಲಯ್ಯನ ಸಿನಿಮಾ ಕೂಡ ಪುಪ್ಫಗೆ ಪೈಪೋಟಿ ಕೊಡೋದ್ರಲ್ಲಿ ಡೌಟೇ ಇಲ್ಲ ಅಂತಿದ್ಗಾರೆ ಸಿನಿ ಪಂಡಿತರು.

  ಇದನ್ನೂ ಓದಿ:RRR Film: ಅರೆರೇ ಹಾಲಿವುಡ್​​ನಿಂದ ಕಾಪಿ ಮಾಡಿದ್ದಾ RRR..!? ಸಿನಿ ಅಂಗಳದಲ್ಲಿ ಶುರುವಾಗಿದೆ ಗುಸು-ಗುಸು

  ಅಘೋರಿಗಳಿಗೂ ಇಷ್ಟವಾಯ್ತು ಅಖಂಡ..!

  ಬರೀ Action ಪ್ರಿಯರಷ್ಟೇ ಅಲ್ಲದೇ ಎಲ್ಲಾ ವರ್ಗದ ಜನರೂ ಅಖಂಡಕ್ಕೆ ಮನಸೋತಿದ್ದಾರೆ. ಪ್ರಾರಂಭದಲ್ಲಿ ಸಾಹಸಪ್ರಿಯರು ಹಾಗೂ ಬಾಲಯ್ಯ ಅಭಿಮಾನಿಗಳನ್ನು ಆಕರ್ಷಿಸಿತ್ತು. ಬಳಿಕ ದಿನ ಕಳೆದಂತೆ ಫ್ಯಾಮಿಲಿ ಆಡಿಯನ್ಸ್’ಗೂ ಸಿನಿಮಾ ಇಷ್ಟವಾಯ್ತು. ಖುದ್ದು ಅಘೋರಿಗಳೇ ಬಂದು ಸಿನಿಮಾ ನೋಡಿದ್ದಾರೆ ಎನ್ನುವುದು ‘ಅಖಂಡ’ದ ಹೆಗ್ಗಳಿಕೆ..!

  ಇನ್ನು ಬಾಲಯ್ಯ ಅಖಂಡನಾಗಿ ಇಡೀ ಚಿತ್ರದ ತುಂಬಾ ಆವರಿಸಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಜ್ಞಾ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಜಗಪತಿಬಾಬು, ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿದ್ದಾರೆ.

  103 ಥಿಯೇಟರ್’ಗಳಲ್ಲಿ ರಿಲೀಸ್

  ಅಖಂಡ ಸಿನಿಮಾ 50ನೇ ದಿನಕ್ಕೆ ಕಾಲಿಟ್ಟಿದೆ. 50ನೇ ದಿನವೂ ಎಲ್ಲೆಡೆ ಹೌಸ್ ಫುಲ್ ಬೋರ್ಡ್ ರಾರಾಜಿಸ್ತಾ ಇದೆ. ಕರೋನಾ ಆತಂಕ ಹಾಗೂ ಆಂಧ್ರ, ತೆಲಂಗಾಣ ಸರ್ಕಾರದ ಟಫ್ ರೂಲ್ಸ್ ನಡುವೆಯೂ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರ್ತಿದ್ದಾರೆ, ಈ ನಡುವೆ ಸಿನಿಮಾ 103 ಥಿಯೇಟರ್’ಗೆ ವಿಸ್ತರಣೆಯಾಗಿದೆ ಅನ್ನೋದು ಚಿತ್ರದ ಮತ್ತೊಂದು ಹೆಗ್ಗಳಿಕೆ.

  ಇದನ್ನೂ ಓದಿ: ಬೇಕು ಅಂತಾಲೇ Covid ಅಂಟಿಸಿಕೊಂಡ ಜೆಕ್ ಗಾಯಕಿ ಸಾವು, ಆಕೆ ಲಸಿಕೆ ಕೂಡಾ ಹಾಕಿಸಿಕೊಂಡಿಲ್ಲ

  ಒಟ್ಟಾರೆ ಕರೊನಾದಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಬಾಲಯ್ಯ ಹೊಸ ಹುರುಪು ತುಂಬಿದ್ದಾರೆ. ಸದ್ಯ 50ನೇ ದಿನಕ್ರೆ ಚಿತ್ರ ಕಾಲಿಟ್ಟಿದ್ದು, 100ನೇ ದಿನದ ಸೆಲಬ್ರೇಷನ್’ಗೆ ಅಭಿಮಾನಿಗಳು ಈಗಲೇ ಕಾತರರಾಗಿದ್ದಾರೆ.

  ವರದಿ: ಅಣ್ಣಪ್ಪ ಆಚಾರ್ಯ
  Published by:Latha CG
  First published: