Valimai OTT: 300 ಕೋಟಿ ಒಟಿಟಿ ಒಪ್ಪಂದ ತಿರಸ್ಕರಿಸಿದ ಅಜಿತ್ ಅಭಿನಯದ 'ವಲಿಮೈ' ಚಿತ್ರತಂಡ!

ವಲಿಮೈ ಸಿನಿಮಾದಲ್ಲಿ ಸೆನ್ಸರ್ ಮಂಡಳಿಯು 15 ತಿದ್ದುಪಡಿಗಳನ್ನು ಮಾಡಿದ್ದು, ಯುಎ ಸರ್ಟಿಫಿಕೇಟ್ ದೊರೆತಿದೆ ಇನ್ನು ಕೆಲವು ಅಂಶಗಳಿಗೆ ಧಕ್ಕೆ ತರುವಂತಹವುಗಳನ್ನು ಮ್ಯೂಟ್ ಮಾಡಲಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ

ಅಜಿತ್

ಅಜಿತ್

  • Share this:
ದೇಶದಲ್ಲಿ ಕೊರೋನಾ ಮತ್ತು ಓಮಿಕ್ರಾನ್ ಹಾವಳಿ ಹೆಚ್ಚಾಗುತ್ತಿದೆ. ದೇಶದಲ್ಲಿ ಆರಂಭವಾದ ಮೂರನೇ ಕೊರೋನಾ (Third Corona Wave) ಅಲೆಯಿಂದಾಗಿ ಮತ್ತೆ ಜನಜೀವನ ಅಸ್ತವ್ಯಸ್ತವಾಗುವತ್ತ ತಿರುಗುತ್ತಿದೆ. ದೆಹಲಿ, ಮುಂಬೈನಲ್ಲಿ ಅನುಕ್ರಮವಾಗಿ 17, 20 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ(Weekend Curfew) ವಿಧಿಸಲಾಗುತ್ತಿದೆ. ಈ ನಡುವೆ ಎಲ್ಲೆಡೆ ಜನರ ಸಂಖ್ಯೆಗೂ ಕಡಿವಾಣ ಹಾಕಲು ಹೊರಟಿದೆ. ಪ್ರತಿಯೊಂದು ವಲಯಕ್ಕೂ ಕೊರೋನಾದಿಂದ ಅಧೋಗತಿಯತ್ತ ಸಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿರುವ (Recovering) ಸಮಯದಲ್ಲಿ ಕೊರೋನಾ ಮೂರನೇ ಅಲೆ ಪ್ರಾರಂಭವಾಗಿರುವುದರಿಂದ ಸಿನಿಮಾ ಥಿಯೇಟರ್ (Movie Theater) ಹಾಗೂ ಸಿನಿಮಾ ಮಂದಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಭಯಪಡುವಂತಹ ವಾತಾವರಣ
ಕೊರೋನಾದಿಂದಾಗಿ ಥಿಯೇಟರ್‌ಗಳಲ್ಲಿ ಚಲನಚಿತ್ರ ಬಿಡುಗಡೆಗೂ ಕೆಲವು ನಿಯಮಗಳನ್ನು ವಿಧಿಸಿದ್ದು, ಸಿನಿಮಾ ಮಂದಿಗೆ ತಲೆನೋವಾಗಿ ಪರಿಣಮಿಸಿದೆ. ಲಕ್ಷ, ಕೋಟಿಗಟ್ಟಲೆ ಬಂಡವಾಳ ಹೂಡಿ ಮಾಡಿದ ಸಿನಿಮಾಗಳು ಬಿಡುಗಡೆ ಮಾಡಲು ಭಯಪಡುವಂತಹ ವಾತಾವರಣ ಇರುವುದರಿಂದ ಓಟಿಟಿಯಲ್ಲಿ ಬಿಡುಗಡೆ ಮಾಡಿ ಹಣ ಬಂದಷ್ಟು ಬರಲಿ ಎಂದು ಚಿತ್ರತಂಡ ನಿರ್ಧರಿಸಿದೆ.

ಇದನ್ನೂ ಓದಿ: Thala Ajith: ಇನ್ಮುಂದೆ `ತಲ’ ಅಜಿತ್​ ಅಂತ ಕರೆಯುವಂತಿಲ್ಲ.. ಅಜಿತ್​ ಕುಮಾರ್​ ಎಂದರೆ ಸಾಕಂತೆ!

ಈಗಾಗಲೇ ಹಲವು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾಗಿ ಜನರ ಮೆಚ್ಚುಗೆಯೂ ಗಳಿಸಿದೆ. ಜನವರಿ 7 ರಂದು ಪುಷ್ಪಾ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಇದೀಗ ತಮಿಳು ನಟ ಅಜಿತ್ ಅಭಿನಯದ ವಲಿಮೈ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾತುಕತೆ ನಡೆದಿದೆ.

ಒಟಿಟಿ ಒಪ್ಪಂದ ತಿರಸ್ಕರಿಸಿದೆ
ಕೊರೋನಾ ಇಲ್ಲದಿದ್ದರೆ ಜನವರಿ 13ರಂದು ಪೊಂಗಲ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಗೊಳಿಸಲು ಚಿತ್ರತಂಡ ಚಿಂತನೆ ನಡೆಸಿತ್ತು. ಆದರೆ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಪರಿಣಾಮ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಈಗ, ಇತ್ತೀಚಿನ ವರದಿಯು ಅಜಿತ್ ಅವರ 'ವಲಿಮೈ' 300 ಕೋಟಿ ಒಟಿಟಿ ಒಪ್ಪಂದವನ್ನು ತಿರಸ್ಕರಿಸಿದೆ ಎಂದು ಹೇಳಲಾಗುತ್ತಿದೆ.

ಅಜಿತ್ ಅವರ 'ವಲಿಮೈ' ಚಿತ್ರವನ್ನು ನೇರವಾಗಿ ಜನಪ್ರಿಯ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆ ಮಾಡಲು 300 ಕೋಟಿ ಒಪ್ಪಂದದ ಆಫರ್ ನೀಡಲಾಗಿತ್ತು. ಆದರೆ, ಜನರು ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲೆಂಬ ಉದ್ದೇಶಕ್ಕೆ ಸಿನಿಮಾ ನಿರ್ಮಿಸಿರುವುದರಿಂದ ಸಿನಿಮಾ ನಿರ್ಮಾಪಕರು ಇಷ್ಟು ದೊಡ್ಡ ಮೊತ್ತದ ಒಪ್ಪಂದ ತಿರಸ್ಕರಿಸಿದರು ಮತ್ತು ತಡವಾದ ಮಾತ್ರಕ್ಕೆ ಜನರಿಗೆ ಸಿನಿಮಾದ ಮೇಲಿರುವ ನಿರೀಕ್ಷೆ ಹೋಗುವುದಿಲ್ಲ ಎಂದು ಅವರು ಭಾವಿಸುತ್ತಾರೆ.

ದೊಡ್ಡ ತಾರಾಗಣ
ಎಚ್ ವಿನೋತ್ 'ವಲಿಮೈ' ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಜಿತ್ ಈ ಸಿನಿಮಾದಲ್ಲಿ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮತ್ತು ಚಿತ್ರವು ಆ್ಯಕ್ಷನ್ ಮತ್ತು ರೇಸಿಂಗ್ ದೃಶ್ಯಗಳಿಂದ ತುಂಬಿ ಹೋಗಿದೆ. ಚಿತ್ರದಲ್ಲಿ ಕಾರ್ತಿಕೇಯ ಅವರು ಅಜಿತ್ ವಿರುದ್ಧ ಹೋರಾಡಲಿದ್ದಾರೆ ಮತ್ತು ಹುಮಾ ಖುರೇಷಿ, ಯೋಗಿ ಬಾಬು, ಸುಮಿತ್ರಾ, ಪುಗಜ್, ರಾಜ್ ಅಯ್ಯಪ್ಪ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿ ತೊಡಗಿಕೊಂಡಿದೆ. ಯುವನ್ ಶಂಕರ್ ರಾಜಾ ಹಾಡುಗಳಿಗೆ ಸಂಗೀತ ನೀಡಿದರೆ, ಹಿನ್ನೆಲೆ ಸಂಗೀತವನ್ನು ಘಿಭ್ರನ್ ಸಂಯೋಜಿಸಿದ್ದಾರೆ.

15 ತಿದ್ದುಪಡಿ
ಬೋನಿ ಕಪೋರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಇದು ತಮಿಳು, ತೆಲುಗು, ಹಿಂದಿ ಮೂರು ಭಾಷೆಗಳ ಅಭಿಮಾನಿಗಳನ್ನು ರಂಜಿಸಲಿದೆ. ವಲಿಮೈ ಸಿನಿಮಾದಲ್ಲಿ ಸೆನ್ಸರ್ ಮಂಡಳಿಯು 15 ತಿದ್ದುಪಡಿಗಳನ್ನು ಮಾಡಿದ್ದು, ಯು/ಎ ಸರ್ಟಿಫಿಕೇಟ್ ದೊರೆತಿದೆ. ಇನ್ನು ಕೆಲವು ಅಂಶಗಳಿಗೆ ಧಕ್ಕೆ ತರುವಂತಹವುಗಳನ್ನು ಮ್ಯೂಟ್ ಮಾಡಲಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ.

ಇದನ್ನೂ ಓದಿ: Thala Ajith: ‘ತಲಾ‘ ಅಜಿತ್​ ಮನೆ ಮುಂದೆ ನರ್ಸ್ ಆತ್ಮಹತ್ಯೆ ಯತ್ನ; ಮಹಿಳೆಯ ಕೆಲಸ ಹೋಗುವಂತೆ ಮಾಡಿದ್ದರಾ ಕಾಲಿವುಡ್ ನಟ?

ಈ ಮಧ್ಯೆ, ಅಜಿತ್ ಶೀಘ್ರದಲ್ಲೇ ತಮ್ಮ 61ನೇ ಚಿತ್ರದ ಕೆಲಸವನ್ನು ಪ್ರಾರಂಭಿಸಲಿದ್ದಾರೆ ಮತ್ತು ಅವರು ನಿರಂತರ ಮೂರನೇ ಬಾರಿಗೆ ಎಚ್ ವಿನೋತ್ ಮತ್ತು ಬೋನಿ ಕಪೂರ್ ಅವರೊಂದಿಗೆ ಜೊತೆಯಾಗುತ್ತಿದ್ದಾರೆ. ಆದರೆ ಯಾವ ಸಿನಿಮಾ ಏನು? ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ತಿಳಿದು ಬಂದಿಲ್ಲ.
Published by:vanithasanjevani vanithasanjevani
First published: