ಸಂಕ್ರಾಂತಿಗೆ Valimai ರಿಲೀಸ್​: ಮತ್ತೊಮ್ಮೆ ಅಜಿತ್​ ಮತ್ತು ವಿಜಯ್ ಸಿನಿಮಾಗಳ ಪೈಪೋಟಿ..!

ಕೊರೋನಾ ಸಾಂಕ್ರಮಿಕದ ಕಾರಣದಿಂದಾಗಿ, ವಲಿಮೈ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳುವುದು ವಿಳಂಬವಾಗಿತ್ತು. ಹಾಗಾಗಿ ಈ ಸಿನಿಮಾ ಈಗ, ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ತೆರೆ ಕಾಣುವ ಸಮಯದಲ್ಲೇ ಬಿಡುಗಡೆ ಆಗಲಿದೆ.

ನಟರಾದ ವಿಜಯ್ ಹಾಗೂ ಅಜಿತ್​

ನಟರಾದ ವಿಜಯ್ ಹಾಗೂ ಅಜಿತ್​

  • Share this:
ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಸಮಯಕ್ಕೆ ತಮ್ಮ ಹೊಸ ಸಿನಿಮಾ ವಲಿಮೈ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ಬೋನಿ ಕಪೂರ್ ಬುಧವಾರ ದೃಢಪಡಿಸಿದ್ದಾರೆ. ಈ ಚಿತ್ರದಲ್ಲಿ ಕಾಲಿವುಡ್​ ನಟ ಅಜಿತ್​ ನಾಯಕನಾಗಿ ಅಭಿನಯಿಸುತ್ತಿದ್ದಾರೆ. “ಪೊಂಗಲ್‌ 2022ಗೆ #Valimai ಬಿಡುಗಡೆ ಆಗುತ್ತಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ” ಎಂದು ಸ್ಟಾರ್​ ನಿರ್ಮಾಪಕ ಬೋನಿ ಕಪೂರ್ ಟ್ವೀಟ್ ಮಾಡಿದ್ದಾರೆ. ನಿರ್ಮಾಪಕ ಬೋನಿ ಕಪೂರ್ ಅವರ ಈ ಘೋಷಣೆಯಿಂದಾಗಿ, ತಮಿಳುನಾಡು ಬಾಕ್ಸ್ ಆಫೀಸ್‍ನಲ್ಲಿ ಎರಡು ದೊಡ್ಡ ಚಿತ್ರಗಳ ಘರ್ಷಣೆಗೆ ವೇದಿಕೆ ಸಿದ್ಧವಾಗಿದೆ. ಈ ಸುದ್ದಿ ಹೊರ ಬಿದ್ದಾಗಿನಿಂದ ಅಭಿಮಾನಿಗಳು ಹಬ್ಬವನ್ನು ಈಗಲೇ ಆಚರಿಸುತ್ತಿದ್ದಾರೆ. 

ಕೊರೋನಾ ಸಾಂಕ್ರಮಿಕದ ಕಾರಣದಿಂದಾಗಿ, ವಲಿಮೈ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳುವುದು ವಿಳಂಬವಾಗಿತ್ತು. ಹಾಗಾಗಿ ಈ ಸಿನಿಮಾ ಈಗ, ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ತೆರೆ ಕಾಣುವ ಸಮಯದಲ್ಲೇ ಬಿಡುಗಡೆ ಆಗಲಿದೆ. ಈ ಮೂಲಕ, ತಮಿಳಿನ ಖ್ಯಾತ ನಟರಾದ ಅಜಿತ್ ಮತ್ತು ವಿಜಯ್ ಸಿನಿಮಾಗಳು ಒಂದಕ್ಕೊಂದು ಸ್ಪರ್ಧಿಸುವ ಸಂದರ್ಭ ನಿರ್ಮಾಣವಾಗಿದೆ.

Ajith-1 (1)
ಅಜಿತ್ ಮೋಷನ್ ಪೋಸ್ಟರ್.


ಹಾಗಂತ ಅಜಿತ್ ಮತ್ತು ವಿಜಯ್ ಸಿನಿಮಾಗಳು ಏಕಕಾಲದಲ್ಲಿ ಬಿಡುಗಡೆ ಆಗುತ್ತಿರುವುದು ಅಥವಾ ಒಂದಕ್ಕೊಂದು ಪೈಪೋಟಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 12 ಬಾರಿ ಇಂತಹ ಸಂದರ್ಭಗಳು ಬಂದಿದ್ದವು. ನಟರಾದ ಅಜಿತ್ ಮತ್ತು ವಿಜಯ್‍ಗೆ ತಮ್ಮ ಸಿನಿಮಾಗಳು ಏಕಕಾಲದಲ್ಲಿ ಬಿಡುಗಡೆ ಆಗುವುದು ಮತ್ತು ಒಂದಕ್ಕೊಂದು ಪೈಪೋಟಿ ನೀಡುವುದು ಬಹುಷಃ ಇಷ್ಟವಿರಲಿಕ್ಕಿಲ್ಲ. ಆದರೆ, ಅವರ ಸಿನಿಮಾಗಳು ಜೊತೆ ಜೊತೆಗೆ ಬಿಡುಗಡೆ ಆದರಂತೂ ತಮಿಳು ಸಿನಿಮಾ ಪ್ರಿಯರ ಪಾಲಿಗಂತೂ ಸುಗ್ಗಿಯೋ ಸುಗ್ಗಿ.

ಇದನ್ನೂ ಓದಿ: Vijay: ರೀಲ್​ ಹೀರೋಗಳು ತೆರಿಗೆ ಕಟ್ಟಲು ಹಿಂಜರಿಯುತ್ತಾರೆ ಎಂದು ತಲಪತಿ ವಿಜಯ್​ಗೆ ಛೀಮಾರಿ ಹಾಕಿದ ಮದ್ರಾಸ್​ ಹೈ ಕೋರ್ಟ್​

ಇದಕ್ಕಿಂತ ಮೊದಲು, ಕೊನೆಯ ಬಾರಿ ಅವರ ಸಿನಿಮಾಗಳು ಒಂದೇ ಸಮಯಕ್ಕೆ ಬಿಡುಗಡೆ ಆಗಿದ್ದು 7 ವರ್ಷಗಳ ಹಿಂದೆ. 2014ರ ಪೊಂಗಲ್ ಹಬ್ಬದ ರಜೆಯ ಸಂದರ್ಭದಲ್ಲಿ, ನಟ ವಿಜಯ್ ಅಭಿನಯದ ಜಿಲ್ಲಾ ಸಿನಿಮಾ ಮತ್ತು ಅಜಿತ್ ಅಭಿನಯದ ವೀರಂ ಚಿತ್ರಗಳು ತೆರೆ ಕಂಡಿದ್ದವು. ಅಷ್ಟು ಮಾತ್ರವಲ್ಲ, ಇಬ್ಬರು ದೊಡ್ಡ ತಾರೆಯರ ಆ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿದ್ದವು.

ವಲಿಮೈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆದರೆ ಬೀಸ್ಟ್ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲೇ ಇದೆ. ಬೀಸ್ಟ್ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ಬರೆದು, ನಿರ್ದೇಶಿಸಿದ್ದಾರೆ. ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಸನ್‍ ಪಿಕ್ಚರ್ಸ್ ಮೂಲಕ ನಿರ್ಮಾಣಗೊಳ್ಳುತ್ತಿದೆ.ವಲಿಮೈ ಸಿನಿಮಾದ ಅಂತಿಮ ಚಿತ್ರೀಕರಣ ಈ ತಿಂಗಳು ರಷ್ಯಾದಲ್ಲಿ ಪೂರ್ಣಗೊಂಡಿತು. ಪೊಲೀಸ್ ಕಥೆಯುಳ್ಳ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಎಚ್. ವಿನೋತ್ ಬರೆದು ನಿರ್ದೇಶಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಮೋಷನ್ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ಅತ್ಯದ್ಭುತ ಬೈಕ್ ಸ್ಟಂಟ್ ದೃಶ್ಯಗಳು ಕಾಣ ಸಿಗಲಿವೆ ಎಂಬ ಭರವಸೆ ಹುಟ್ಟಿಸಿವೆ.

ಇದನ್ನೂ ಓದಿ: Happy Birthday Thalapathy Vijay: ಬೀಸ್ಟ್​ ಅವತಾರದಲ್ಲಿ ಎಂಟ್ರಿ ಕೊಟ್ಟ ದಳಪತಿ ವಿಜಯ್: ಅಭಿಮಾನಿಯಾಗಿ ವಿಶ್​ ಮಾಡಿದ ಕೀರ್ತಿ ಸುರೇಶ್​..!

ನಟ ಅಜಿತ್ ಅವರು, ವಿನೋತ್ ಮತ್ತು ಬೋನಿ ಕಪೂರ್ ಜೊತೆ ಕೈ ಜೋಡಿಸುತ್ತಿರುವ ಎರಡನೇ ಸಿನಿಮಾ ಇದು. 2019ರಲ್ಲಿ ಈ ಮೂವರ ಕಾಂಬಿನೇಶನ್​ನಲ್ಲಿ ನೇರ್ಕೊಂಡ ಪಾರ್‍ವೈ ಸಿನಿಮಾ ಬಿಡುಗಡೆ ಆಗಿತ್ತು.
Published by:Anitha E
First published: