ಯಾವುದೇ ಚಿತ್ರರಂಗವಾಗಲಿ ಅಲ್ಲಿ ಹೀರೋ(Hero)ಗಳಿಗೆ ಒಂದೊಂದು ಬಿರುದು ನೀಡಲಾಗುತ್ತೆ. ಉದಾಹರಣೆಗೆ ಸ್ಯಾಂಡಲ್ವುಡ್(Sandalwood)ನಲ್ಲಿ ಸಾಹಸ ಸಿಂಹ, ಸೆಂಚುರಿ ಸ್ಟಾರ್, ಪವರ್ ಸ್ಟಾರ್, ಚಾಲೆಂಜಿಗ್ ಸ್ಟಾರ್, ಸೂಪರ್ ಸ್ಟಾರ್, ಅಭಿನಯ ಚಕ್ರವರ್ತಿ ಈ ರೀತಿ ತಮ್ಮ ನೆಚ್ಚಿನ ನಟರಿಗೆ ಅಭಿಮಾನಿ(Fans)ಗಳು ಬಿರುದು ನೀಡಿರುತ್ತಾರೆ. ಆದರೆ ಅದೆಷ್ಟೋ ಹೀರೋಗಳಿಗೆ ಈ ರೀತಿ ಕರೆಸಿಕೊಳ್ಳವುದು ಇಷ್ವವಿರುವುದಿಲ್ಲ. ಬಹಿರಂಗವಾಗಿಯೂ ಹೀಗೆ ಕರೆಯಬೇಡಿ, ಹೆಸರಿನಲ್ಲೇ ಕರೆಯಿರಿ ಎಂದು ಹೇಳಿರುವುದನ್ನು ಕೇಳಿದ್ಧೇವೆ. ಇದೀಗ ತಮಿಳು(Tamil) ಚಿತ್ರರಂಗದ ಸ್ಟಾರ್ ನಟರೊಬ್ಬರು ಕೂಡ ಅಭಿಮಾನಿಗಳಿಗೆ ತಮ್ಮ ಹೆಸರಿನಲ್ಲೇ ಕರೆಯುವುಂತೆ ಮನವಿ ಮಾಡಿಕೊಂಡಿದ್ದಾರೆ. ಕಾಲಿವುಡ್ನ ತಲ ಅಜಿತ್(Thala Ajith) ಈ ರೀತಿ ಹೇಳಿಕೆ ನೀಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ತಮಿಳು ಚಿತ್ರರಂಗದಲ್ಲಿ ತಲೈವಾ ರಜನಿಕಾಂತ್, ಇಳಯದಳಪತಿ ವಿಜಯ್, ತಲ ಅಜಿತ್ ಹೀಗೆ ಅಭಿಮಾನಿಗಳು ಬಿರುದುಗಳನ್ನು ನೀಡಿದ್ದಾರೆ. ಅದರಲ್ಲೂ ಅಜಿತ್ ಅಂದರೆ ಅಲ್ಲಿನ ಜನರಿಗೆ ಅಚ್ಚುಮೆಚ್ಚು. ನಟ ಅಜಿತ್ ತಾವಾಯ್ತು, ತಮ್ಮ ಕೆಲಸವಾಯ್ತು ಅಂತ ಇರುವವರು. ಯಾವುದೇ ಕಾಂಟ್ರವರ್ಸಿ(Controversy) ಮಾಡಿಕೊಳ್ಳದವರು. ಶಿಸ್ತಿನ ಮನುಷ್ಯ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ತಲ’ ಅಜಿತ್ ಎಂದು ಕರೆಯುತ್ತಾರೆ. ಆದರೆ, ಇನ್ನುಮುಂದೆ ಈ ರೀತಿ ಕರೆಯುವಂತಿಲ್ಲ. ಹೀಗೊಂದು ಪ್ರಕಟಣೆಯನ್ನು ಅವರೇ ಹೊರಡಿಸಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.
ಅಭಿಮಾನಿಗಳಿಗೆ ಮನವಿ ಮಾಡಿಕೊಂಡ ನಟ ಅಜಿತ್
‘ಮಾಧ್ಯಮ, ಸಾರ್ವಜನಿಕರು ಹಾಗೂ ನನ್ನ ಅಭಿಮಾನಿಗಳಲ್ಲಿ ಒಂದು ವಿನಂತಿ. ನನ್ನನ್ನು ಅಜಿತ್, ಅಜಿತ್ ಕುಮಾರ್ ಅಥವಾ ಎಕೆ ಎಂದು ಮಾತ್ರ ಕರೆಯಬೇಕು. ನನ್ನನ್ನು ತಾಲಾ ಎಂದು ಯಾರೂ ಕರೆಯಬಾರದು. ನನ್ನ ಹೆಸರ ಹಿಂದೆ ಈ ಶಬ್ದವನ್ನು ಬಳಸುವಂತಿಲ್ಲ. ಎಲ್ಲರಿಗೂ ಆರೋಗ್ಯ, ಸಂತೋಷ, ಯಶಸ್ಸು, ಮನಃಶಾಂತಿ ಸಿಗಲಿ’ ಎಂದು ಅಜಿತ್ ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಈ ರೀತಿಯ ಮನವಿಗಳನ್ನು ಮಾಡಿಕೊಳ್ಳುವಾಗ ನಟರು ಅದಕ್ಕೆ ಕಾರಣವನ್ನು ತಿಳಿಸುತ್ತಾರೆ. ಆದರೆ, ಅಜಿತ್ ಈ ರೀತಿಯ ಯಾವುದೇ ಕಾರಣವನ್ನು ವಿವರಿಸಿಲ್ಲ. ಈ ಪೋಸ್ಟ್ ನೋಡಿದ ತಲ ಅಜಿತ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ‘ಪುಷ್ಪ’ದಲ್ಲಿನ ಸಮಂತಾ ಲುಕ್ಗೆ ಅಭಿಮಾನಿಗಳು ಫಿದಾ!
2001ರ ಧೀನಾ ಸಿನಿಮಾದಿಂದ ತಲ ಆದ ಅಜಿತ್!
ದಕ್ಷಿಣದ ನಟರನ್ನು ಈ ರೀತಿಯಾಗಿ ಉಲ್ಲೇಖಿಸುವುದು ಸಾಮಾನ್ಯವಾಗಿದೆ. ಅವರ ಹೆಸರಿನೊಂದಿಗೆ ನಟನ ಸ್ಟಾರ್ಡಮ್ನ ವಿವರಣೆ ಇರುವಂತಹ ಸ್ಪೆಷಲ್ ಹೆಸರು ಕೊಡುತ್ತಾರೆ ಅಭಿಮಾನಿಗಳು. 2001 ರ ಚಲನಚಿತ್ರ ಧೀನಾದಲ್ಲಿ ಅಜಿತ್ನ ಪಾತ್ರವನ್ನು ತಲ ಧೀನಧಯಾಲನ್ ಎಂದು ಕರೆಯಲಾಯಿತು . ಆ ನಂತರ ತಲ ಅಜಿತ್ ಎಂದು ಅಭಿಮಾನಿಗಳು ಕರೆಯಲಾರಂಭಿಸಿದ್ದಾರೆ. ಅಂದಿನಿಂದ, ಅಭಿಮಾನಿಗಳು ಅವರನ್ನು ತಲ ಅಜಿತ್ ಎಂದು ಕರೆಯುತ್ತಾರೆ. ಆದರೆ ಇದೀಗ ಬರೀ ಅಜಿತ್, ಅಜಿತ್ ಕುಮಾರ್ ಅಥವಾ ಎಕೆ ಎಂದು ಕರೆಯಬೇಕೆಂದು ಅಜಿತ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿ : ಈ ಸಲ ಮುತ್ತು ಕೊಟ್ಟಿರೋದು ನಟಿ ಜಾಕಲಿನ್ ! ಏನು ಇವರ ಕತೆ?
ಸದಾ ಸಿಂಪಲ್ ಆಗಿರಲು ಬಯಸುವ ಅಜಿತ್ ಕುಮಾರ್
ಅದೆಷ್ಟೇ ಸ್ಟಾರ್ಡಮ್ ಇದ್ದರೂ ನಟ ಅಜಿತ್ ಮಾತ್ರ ಸದಾ ಸಿಂಪಲ್ ಲೈಫ್ ಲೀಡ್ ಮಾಡಲು ಇಷ್ಟಪಡುತ್ತಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಅಜಿತ್ ತಮ್ಮ ಪತ್ನಿಯೊಂದಿಗೆ ಮತದಾನ ಮಾಡಲು ಕ್ಯೂನಲ್ಲಿ ನಿಂತಿದ್ದರು. ಈ ವಿಚಾರ ಅವರ ಸಖತ್ ವೈರಲ್ ಆಗಿತ್ತು.ಸಾರ್ವಜನಿಕವಾಗಿ ತಾವು ಕಾಣಿಸಿಕೊಂಡಾಗ ಜನ ತಮ್ಮನ್ನು ವಿಶೇಷವಾಗಿ ಆದರಿಸುವುದನ್ನು ಅಜಿತ್ ಅವರು ಇಷ್ಟಪಡುವುದಿಲ್ಲ. ಬದಲಾಗಿ ಸಾದಾ ಸೀದಾ ಸಿಂಪಲ್ ಆಗಿರಲು ಬಯಸುತ್ತಾರೆ. ಈವರೆಗೂ ಅಜಿತ್ ಯಾವುದೇ ಕಾಂಟ್ರವರ್ಸಿ ಮಾಡಿಕೊಂಡವರಲ್ಲ. ಸಿನಿಮಾ ಆಯ್ತು, ತಾವಾಯ್ತು ಎಂದು ಅಜಿತ್ ಇರುತ್ತಾರೆ. ಅಜಿತ್ ಅವರ ಸಿಂಪ್ಲಿಸಿಟಿಗೆ ಅನೇಕರು ಫಿದಾ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ