ಡಾಲಿ ಧನಂಜಯ್ (Daali Dhananjay) ಅವರನ್ನು ತುಳಿಯಲು ಸ್ಯಾಂಡಲ್ ವುಡ್ (Sandalwood) ನಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ? ಹಾಗಂತ ಸ್ವತಃ ಧನಂಜಯ್ ಅವರೇ ಮಾಧ್ಯಮವೊಂದಕ್ಕೆ ನೀಡಿದ ಆಡಿಯೋ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ಹೆಡ್ ಬುಷ್’ (Headbush) ಸಿನಿಮಾಗೆ ಸಂಬಂಧಿಸಿದ ವಿವಾದವೊಂದರ ಕುರಿತು ಮಾತನಾಡಿರುವ ಅವರು ಕಾಣದ ಕೈಗಳು ಯಾಕೆ ಈ ರೀತಿ ಕೆಲಸ ಮಾಡುತ್ತಿವೆ ಎನ್ನುವುದು ನನಗೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಹೆಡ್ ಬುಷ್ ಸಿನಿಮಾ ವಿರುದ್ಧ ಜಯರಾಜ್ (Jayaraj) ಪುತ್ರ ಹೆಡ್ ಬುಷ್ ಸಿನಿಮಾದ ಟ್ರೇಲರ್ನಲ್ಲಿ ಎಂ.ಪಿ.ಜಯರಾಜ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ ಎಂದು ಅಜಿತ್ ಜಯರಾಜ್ (Ajith Jayaraj) ಆರೋಪಿಸಿದ್ದರು. ಈ ವಿಚಾರ ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿದೆ. ಹೆಡ್ ಬುಷ್ ಸಿನಿಮಾ ಶೂಟಿಂಗ್ಗೂ ಮುನ್ನ ಓಕೆ ಅಂದಿದ್ದ ಅಜಿತ್, ಈಗ ಯಾಕೆ ಕಿರಿಕ್ ಮಾಡ್ತಿದ್ದಾರೆ ಎಂದು ಡಾಲಿ ಅಭಿಮಾನಿಗಳು ಕೇಳುತ್ತಿದ್ದಾರೆ.
ಹೋರಾಟದ ಕಾರಣ ತಿಳಿಸಿದ ಅಜಿತ್ ಜಯರಾಜ್!
ಆರಂಭದಲ್ಲಿ ಹೆಡ್ಬುಷ್ ಸಿನಿಮಾಕ್ಕೆ ಶುಭ ಹಾರೈಸಿದ್ದ ಅಜಿತ್ ಜಯರಾಜ್ ಈಗ ಏಕಾ-ಏಕಿ ಸಿನಿಮಾದ ವಿರುದ್ಧ ಮಾತನಾಡುತ್ತಿರುವುದು ಅವರ ಉದ್ದೇಶದ ಬಗ್ಗೆ ಹಲವರಿಗೆ ಅನುಮಾನ ಮೂಡಿಸಿದೆ. ಸಿನಿಮಾದ ವಿರುದ್ಧ ಹೋರಾಟ ಮಾಡುತ್ತಿರುವ ಕಾರಣವನ್ನು ಅಜಿತ್ ಇದೀಗ ಬಾಯ್ಬಿಟ್ಟಿದ್ದಾರೆ. 'ನನ್ನ ತಾಯಿಗಾಗಿ ಈ ಹೋರಾಟವನ್ನು ಮಾಡುತ್ತಿದ್ದೇನೆ' ಎಂದು ಅಜಿತ್ ಜಯರಾಜ್ ಹೇಳಿದ್ದಾರೆ.
ಬೇರೆ ಯಾರ ಮಾತನ್ನು ಕೇಳುತ್ತಿಲ್ಲ ಎಂದ ಅಜಿತ್!
'ನಾನು ಯಾರೋ ಹೇಳಿದ್ದನ್ನು ಕೇಳಿ ಹೋರಾಟ ಮಾಡುತ್ತಿಲ್ಲ . ನನ್ನ ತಾಯಿ ಮಾತನ್ನು ಕೇಳುತ್ತಿದ್ದೇನೆ. ನನ್ನ ಹೋರಾಟ ನನ್ನ ತಾಯಿಗಾಗಿ' ಎಂದು ಅಜಿತ್ ಹೇಳಿದ್ದಾರೆ. 'ಹೆಡ್-ಬುಷ್', ಜಯರಾಜ್ ಸಾರ್ವಜನಿಕ ಜೀವನದ ಬಗ್ಗೆ ಮಾಡಲಾಗಿರುವ ಸಿನಿಮಾ, ಅದನ್ನು ಪ್ರಶ್ನಿಸುವ ಹಕ್ಕು ಅಜಿತ್ಗೆ ಇಲ್ಲ ಎಂಬ ಅಗ್ನಿ ಶ್ರೀಧರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಜಿತ್, ''ಶ್ರೀಧರ್ ಅಂಕಲ್, ಕಾಪಾಳಕ್ಕೆ ಭಾರಿಸಬೇಕು ಎನ್ನುತ್ತಾರೆ. ಇದು ನನ್ನ ತಾಯಿಗೆ ಬೇಸರ ತರಿಸಿದೆ. ಸಿನಿಮಾದ ನಿರ್ದೇಶಕ ಶೂನ್ಯ ನನ್ನ ತಂದೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ನನ್ನನ್ನು ಹಾಗೂ ತಾಯಿಯನ್ನು ಕಾರ್ನರ್ ಮಾಡಲಾಗಿದೆ, ನನ್ನ ತಂದೆಯ ಬಗ್ಗೆ ಮಾಡಲಾಗಿರುವ ಸಿನಿಮಾ ಇದು, ಹಾಗಾಗಿ ನಮಗೆ ಪ್ರಶ್ನಿಸುವ ಹಕ್ಕಿದೆ'' ಎಂದಿದ್ದಾರೆ ಅಜಿತ್.
ಇದನ್ನೂ ಓದಿ: ಡಾಲಿ ಧನಂಜಯ್ ಸಕ್ಸಸ್ ಸಹಿಸಿಕೊಳ್ಳದವರಿಂದ ಕುತಂತ್ರ! ಕಾಣದ ಕೈಗಳಿಂದ ಕುಮ್ಮಕ್ಕು?
ಅಜಿತ್ ಹೀಗೆ ಮಾಡ್ತಾರೆ ಎಂದುಕೊಂಡಿರಲಿಲ್ಲ ಎಂದ ಡಾಲಿ!
‘ನನಗೂ ಫಿಲ್ಮ್ ಚೇಂಬರ್ ನಿಂದ ಕರೆ ಬಂದಿತ್ತು. ನಾನು ಆಸ್ಪತ್ರೆಯಲ್ಲಿ ಇರುವ ಕಾರಣಕ್ಕಾಗಿ ಮೇ.13ರ ನಂತರ ಚೇಂಬರ್ ಗೆ ಬರುವುದಾಗಿ ತಿಳಿಸಿದ್ದೇನೆ. ಅಷ್ಟಕ್ಕೂ ನಾವು ಸಿನಿಮಾ ಮಾಡುವ ವಿಚಾರ ಅಜಿತ್ ಅವರಿಗೆ ಗೊತ್ತಿದೆ. ಅವರು ನನ್ನ ಒಳ್ಳೆಯ ಫ್ರೆಂಡ್. ಈ ಸಿನಿಮಾ ಮಾಡುವಾಗ ವಿಶ್ ಮಾಡಿದ್ದರು. ತಮ್ಮ ತಂದೆಯ ಪಾತ್ರವು ಹೇಗೆ ಬರುತ್ತಿದೆ ಎಂದು ಕೇಳುತ್ತಿದ್ದರು. ಆದರೆ, ದಿಢೀರ್ ಅಂತ ಹೀಗೆ ಕಂಪ್ಲೆಂಟ್ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಇದನ್ನೂ ಓದಿ: ಡಾಲಿ ಧನಂಜಯ ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗುತ್ತಾ ಇಲ್ವಾ?
ಯಾರು ಈ ಎಂ.ಪಿ.ಜಯರಾಜ್?
ಎಂ.ಪಿ.ಜಯರಾಜ್ ಬೆಂಗಳೂರು ಭೂಗತ ಜಗತ್ತಿನ ಮೊದಲ ಡಾನ್. 1970 ಮತ್ತು 1980 ರ ದಶಕದಲ್ಲಿ ಎ. ಪಿ.ಜಯರಾಜ್ ಹೆಸರು ಬೆಂಗಳೂರಿನಲ್ಲಿ ಅತ್ಯಂತ ಮುನ್ನೆಲೆಯಲ್ಲಿ ಕೇಳಿಬರುತ್ತಿತ್ತು. ಬಾಲ್ಯದಿಂದಲೂ ಹವ್ಯಾಸಿ ಕುಸ್ತಿಪಟುವಾಗಿದ್ದ ಇವರು ತಿಗಳರಪೇಟೆಯ ಅಣ್ಣಯ್ಯಪ್ಪ ಗರಡಿಯಲ್ಲಿ ಗಂಭೀರವಾಗಿ ಅಭ್ಯಾಸ ನಡೆಸುತ್ತಿದ್ದರು. ಸದ್ಯ ಅಗ್ನಿಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿ ಡಾಲಿ ಧನಂಜಯ ಅಭಿನಯದ ಹೆಡ್ ಬುಷ್ ಚಿತ್ರ ಎಂ.ಪಿ.ಜಯರಾಜ್ ಅವರ ಜೀವನದ ಕಥೆಯನ್ನು ಒಳಗೊಂಡಿದೆ ಎಂದು ಹೇಳಲಾಗಿದ್ದು. ಎಂ.ಪಿ.ಜಯರಾಜ್ ಕುಟುಂಬದಿಂದ ವಿರೋಧ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ