• Home
  • »
  • News
  • »
  • entertainment
  • »
  • HBD Ajith: ಅಜಿತ್​ ಹುಟ್ಟುಹಬ್ಬದಂದು ವಿಜಯ್ ಟ್ರೆಂಡ್; ಮುಂದುವರೆಯುತ್ತಿದೆ ಅಭಿಮಾನಿಗಳ ಟ್ವೀಟ್ ಕಾಳಗ

HBD Ajith: ಅಜಿತ್​ ಹುಟ್ಟುಹಬ್ಬದಂದು ವಿಜಯ್ ಟ್ರೆಂಡ್; ಮುಂದುವರೆಯುತ್ತಿದೆ ಅಭಿಮಾನಿಗಳ ಟ್ವೀಟ್ ಕಾಳಗ

ವಿಜಯ್​ ಹಾಗೂ ಅಜಿತ್​

ವಿಜಯ್​ ಹಾಗೂ ಅಜಿತ್​

Twitter War Between Ajith And Vijay: ಈಗ ಮತ್ತೆ ಅಜಿತ್ ಹಾಗೂ ವಿಜಯ್​ ಅಭಿಮಾನಿಗಳ ನಡುವೆ ಮತ್ತೆ ಟ್ವಿಟರ್​ನಲ್ಲಿ ವಾರ್​ ಆರಂಭವಾಗಿದೆ.

  • Share this:

ಒಂದೇ ಇಂಡಸ್ಟ್ರಿಯಲ್ಲಿರುವ ತಾರೆಯರು ವೈಯಕ್ತಿಕ ಜೀವನದಲ್ಲಿ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ಆದರೆ ಅವರನ್ನು ಆರಾಧಿಸುವ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟ ಗ್ರೇಟ್... ತಮ್ಮ ನೆಚ್ಚಿನ ಗ್ರೇಟ್ ಅಂತ ಜಗಳವಾಡುತ್ತಿರುತ್ತಾರೆ. ಇಂತಹ ಫ್ಯಾನ್ಸ್ ವಾರ್​ ಇತ್ತೀಚೆಗೆ ಬಾಲಿವುಡ್​, ಸ್ಯಾಂಡಲ್​ವುಡ್​, ಟಾಲಿವುಡ್ ಹಾಗೂ ಕಾಲಿವುಡ್​ನಲ್ಲಿ ಸರ್ವೇಸಾಮಾನ್ಯವಾಗಿದೆ ಹೋಗಿದೆ.


ಈ ಹಿಂದೆಯಷ್ಟೆ ವಿಜಯ್ ಹಾಗೂ ಅಜಿತ್​ ಅಭಿಮಾನಿಗಳ ನಡುವೆ ಟ್ವಿಟರ್​ನಲ್ಲಿ ವಾರ್ ನಡೆದಿತ್ತು. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಬಗ್ಗೆ ಕೀಳಾಗಿ ಹೀಯಾಳಿಸಿ ಟ್ವೀಟ್​ ಮಾಡುತ್ತಾ ಟ್ವಿಟರ್​ನಲ್ಲಿ ಟ್ರೆಂಡ್​ ಮಾಡುತ್ತಿದ್ದರು. ಈ ಘಟನೆ ನಡೆದು ಕೆಲವೇ ದಿನಗಳಾಗಿವೆ. ಈಗ ಮತ್ತೆ ಅಜಿತ್ ಹಾಗೂ ವಿಜಯ್​ ಅಭಿಮಾನಿಗಳ ನಡುವೆ ಮತ್ತೆ ಟ್ವಿಟರ್​ನಲ್ಲಿ ವಾರ್​ ಆರಂಭವಾಗಿದೆ.


ಇಂದು ಕಾಲಿವುಡ್ ನಟ ಅಜಿತ್ ಹುಟ್ಟುಹಬ್ಬ. ಅವರ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಟ್ವಿಟರ್​ನಲ್ಲಿ #HBDAjith ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ. ಆದರೆ ವಿಜಯ್​ ಅಭಿಮಾನಿಗಳು ಸಹ ಈಗಲೇ ಟ್ವಿಟರ್​ನಲ್ಲಿ ಬೆಳಗಿನಿಂದ ವಿಜಯ್​ ಹೆಸರನ್ನು ಟ್ರೆಂಡ್​ ಮಾಡುತ್ತಿದ್ದಾರೆ. #VijayTheFaceOfKollywood ಎಂದು ಟ್ರೆಂಡ್​ ಮಾಡುತ್ತಿದ್ದಾರೆ.


They call me MASTER, maatrangal varum faster 😎 2M Tweets ! #Master#VijayTheFaceOfKollywood pic.twitter.com/a1cDa2C8hUಈಗಾಗಲೇ 20 ಲಕ್ಷಕ್ಕೂ ಅಧಿಕ ಟ್ವೀಟ್​ ಮಾಡಿರುವ ವಿಜಯ್​ ಅಭಿಮಾನಿಗಳು ಮಾಡಿರುವ #VijayTheFaceOfKollywood ಟ್ವಿಟರ್​ ಟ್ರೆಂಡಿಂಗ್​ನಲ್ಲಿ ಎರಡನೇ ಸ್ಥಾನದಲ್ಲಿದೆ.


ajith and vijays fans again starts the twitter war on thalas birthday
ಟ್ವಿಟರ್ ಟ್ರೆಂಡಿಂಗ್​


ಇನ್ನು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತಮಿಳುನಾಡಿನಲ್ಲಿ ರಜಿನಿಕಾಂತ್​ ಹಾಗೂ ವಿಜಯ್​ ಅಭಿಮಾನಿಗಳ ನಡುವಿನ ಜಗಳ ಸಾವಿನಲ್ಲಿ ಅಂತ್ಯ ಕಂಡಿತ್ತು. ನೆಚ್ಚಿನ ನಟನ ವಿಚಾರದಲ್ಲಿ ವಾಗ್ವಾದ ಆರಂಭವಾಗಿ ಮದ್ಯದ ಮತ್ತಿನಲ್ಲಿದ್ದ ಅಭಿಮಾನಿಗಳು ಕೈ ಕೈ ಮಿಲಾಯಿಸಿದ್ದಾರೆ. ಆಗ ವಿಜಯ್​ ಅಭಿಮಾನಿಯನ್ನು ರಜಿನಿ ಅಭಿಮಾನಿ ಕೆಳಗೆ ತಳ್ಳಿದ್ದಾನೆ. ಆತನ ತಲೆಗೆ ಪೆಟ್ಟಾಗಿ ಆತ ಸಾವನ್ನಪ್ಪಿದ್ದ. ಈ ಕಾರಣಕ್ಕೆ ರಜಿನಿ ಅಭಿಮಾನಿ ಈಗ ಜೈಲು ಪಾಲಾಗಿದ್ದಾನೆ.


HBD Anushka Sharma: ಅಮ್ಮ ವಿನ್ಯಾಸ ಮಾಡುತ್ತಿದ್ದ ಡ್ರೆಸ್​ಗಳಿಗೆ ಚಿಕ್ಕಂದಿನಂಲೇ ಮಾಡೆಲ್​ ಆಗಿದ್ದ ಅನುಷ್ಕಾ ಶರ್ಮಾ..!

Published by:Anitha E
First published: