• Home
  • »
  • News
  • »
  • entertainment
  • »
  • Puneetha Parva: ಅಜಯ್ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಾರ್ ಕೀ ಪಡೆದು ತಾವೇ ಓಡ್ಸಿದ್ರು ಅಪ್ಪು

Puneetha Parva: ಅಜಯ್ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಾರ್ ಕೀ ಪಡೆದು ತಾವೇ ಓಡ್ಸಿದ್ರು ಅಪ್ಪು

ಅಜಯ್ ರಾವ್ - ಪುನೀತ್ ರಾಜ್​ಕುಮಾರ್

ಅಜಯ್ ರಾವ್ - ಪುನೀತ್ ರಾಜ್​ಕುಮಾರ್

ಅಪ್ಪು ಅವರ ಇಷ್ಟದ ಆಹಾರವನ್ನು ನಟ ಅಜಯ್ ರಾವ್ ಕೂಡಾ ಸೇವಿಸಿ ಖುಷಿ ಪಟ್ಟಿದ್ದಾರೆ. ಫ್ಲೇವರ್ಸ್ ಆಫ್ ಗಂಧದ ಗುಡಿಯಲ್ಲಿ ಅಜಯ್ ರಾವ್ ಕೂಡಾ ಭಾಗಿಯಾಗಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಪುನೀತ ಪರ್ವ ಕ್ರೇಜ್ ಎಲ್ಲೆಡೆ ಹೆಚ್ಚಾಗಿದೆ. ಗಂಧದ ಗುಡಿ (Gandhada Gudi) ಪ್ರೀ ರಿಲೀಸ್ ಇವೆಂಟ್​​ಗೆ (Pre Release Event) ಮೊದಲೇ ಸಿದ್ಧತೆ ಶುರುವಾಗಿದ್ದು ಇಂದು ಅದ್ಧೂರಿಯಾಗಿ ಕಾರ್ಯಕ್ರಮ ನಡೆಯುತ್ತಿದೆ. ಸೌತ್ ಸೂಪರ್ ಸ್ಟಾರ್​​​ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅಭಿಮಾನಿಗಳೂ (Fans) ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಿಸಿ ಎಲ್ಲಾ ತಯಾರಿಗಳನ್ನು ಮಾಡಲಾಗಿದ್ದು ರಾಜ್ಯದೆಲ್ಲೆಡೆಯಿಂದ ಅಭಿಮಾನಿಗಳು (Fans) ರಾಜಧಾನಿಗೆ ಆಗಮಿಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಇನ್ನೊಂದು ಫ್ಲೇವರ್ಸ್ ಆಫ್ ಗಂಧದ ಗುಡಿ (Flavors Of Gandhada gudi) ಎನ್ನುವ ಅಭಿಯಾನ ಶುರು ಮಾಡಲಾಗಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ವೈರಲ್ (Viral) ಆಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರ ತನಕ ಎಲ್ಲರೂ ಇದರ ಭಾಗವಾಗುತ್ತಿದ್ದಾರೆ.


ಇದೀಗ ಸ್ಯಾಂಡಲ್​ವುಡ್ ನಟ ಅಜಯ್ ರಾವ್ ಅವರೂ ಈ ಅಭಿಯಾನದ ಭಾಗವಾಗಿದ್ದು ಈ ಸಂದರ್ಭ ತಮ್ಮ ಅನುಭವಗಳನ್ನು ಶೇರ್ ಮಾಡಿದ್ದಾರೆ. ಪುನೀತ್ ಅವರಿಗೂ ಪ್ರಿಯವಾಗಿರುವ ಬೆಣ್ಣೆ ಮಸಾಲೆ ದೋಸೆ ಸವಿದ ಅಜಯ್ ರಾವ್ ಅವರು ಕೆಲವೊಂದು ಚಂದದ ಅನುಭವಗಳನ್ನು ಶೇರ್ ಮಾಡಿದ್ದಾರೆ.


ಫ್ಲೇವರ್ಸ್ ಆಫ್ ಗಂಧದ ಗುಡಿ


ಪುನೀತ್ ರಾಜ್ ಕುಮಾರ್ ಅವರು ಭೋಜನ ಪ್ರಿಯರು. ಅಣ್ಣಾವ್ರ ಮನೆಯವರು ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ. ಈಗ ಅಕ್ಟೋಬರ್ ತಿಂಗಳನ್ನು ಫ್ಲೇವರ್ಸ್ ಆಫ್ ಗಂಧದ ಗುಡಿ ಎನ್ನುವ ಕಾರ್ಯಕ್ರಮದ ಮೂಲಕ ಆಚರಿಸಲಾಗುತ್ತಿದ್ದು ಅಪ್ಪು ಅವರ ಫೇವರೇಟ್ ಆಹಾರಗಳನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ. ನಟ ಅಜಯ್ ರಾವ್ ಅವರು ಕೂಡಾ ಈ ಕಾರ್ಯಕ್ರಮದ ಭಾಗವಾಗಿದ್ದಾರೆ. ಅಪ್ಪು ಅವರ ಫೇವರೇಟ್ ಸಿಟಿಆರ್ ಬೆಣ್ಣೆ ಮಸಾಲೆ ದೋಸೆಯನ್ನು ಅಜಯ್ ಅವರು ಕೂಡಾ ಸವಿದು ಎಂಜಾಯ್ ಮಾಡಿದ್ದಾರೆ.


ಲೆಕ್ಕ ಇಲ್ಲದಷ್ಟು ಪಾರ್ಸೆಲ್ ನಮ್ಮನೆಗೆ ಬರುತ್ತೆ


ನಟ ಅಜಯ್ ಅವರು ತಮ್ಮ ನೆಚ್ಚಿನ ಬೆಣ್ಣೆ ಮಸಾಲೆ ದೋಸೆ ಸವಿದಿದ್ದಾರೆ. ನನಗೂ ಇದೇ ಮಸಾಲೆ ದೋಸೆ, ಕೇಸರಿ ಬಾತ್ ತುಂಬಾ ಇಷ್ಟ. ಈ ಪರ್ವದಲ್ಲಿ ನಾನು ಭಾಗಿಯಾಗಿರುವುದು ತುಂಬಾ ಖುಷಿಯಾಗಿದೆ ಎಂದಿದ್ದಾರೆ ನಟ.


ಇದನ್ನೂ ಓದಿ: Bengaluru Traffic: ಪುನೀತ ಪರ್ವ ಕಾರ್ಯಕ್ರಮಕ್ಕೆ ಹೋಗ್ತಿದ್ದೀರಾ? ಈ ಮಾರ್ಗದಲ್ಲಿ ಬಂದ್ರೆ ಬೇಗ ತಲುಪುತ್ತೀರಿ


ಕಂಪ್ಲೀಟ್ ಆಗಿ ಆಸ್ವಾದಿಸಿ ಆಹಾರ ತಿನ್ನುತ್ತಾರೆ ಅಪ್ಪು


ಒಂದೆರಡು ಸಲ ಸಿನಿಮಾ ರಿಲೇಟೆಡ್ ಫಂಕ್ಷನ್​​ಗಳಲ್ಲಿ ನಾವು ಒಟ್ಟಿಗೆ ಊಟ ಮಾಡಿದ್ದೆವು. ಅವರು ತಿನ್ನುವ ಸ್ಟೈಲ್ ಇದೆಯಲ್ಲಾ, ಅವರು ಸಂಪೂರ್ಣವಾಗಿ ಆಸ್ವಾದಿಸಿ ಆಹಾರ ತಿನ್ನುತ್ತಾರೆ. ನಾವು ಯಾವುದೋ ಗಮನದಲ್ಲಿದ್ದು ತಿನ್ನುತ್ತೇವೆ, ಯಾವುದೋ ಲೋಕದಲ್ಲಿ ಇದ್ದು ಹೊಟ್ಟೆ ತುಂಬೋಕೆ ತಿನ್ನುವಂತೆ ತಿನ್ನುತ್ತೇವೆ. ಅವರು ಕಂಪ್ಲೀಟ್ ಆಸ್ವಾದಿಸಿ ತಿನ್ನುತ್ತಾರೆ. ನಾವು ದುಡಿಯುವುದೇ ಹೊಟ್ಟೆಗಾಗಿ. ಆ ಅನ್ನವನ್ನು ಗೌರವಿಸಿ, ಆ ರುಚಿಯನ್ನು ಗೌರವಿಸಬೇಕು ಎಂದು ಪ್ರೀತಿಯಲ್ಲಿ ತಿನ್ನುವುದು ನೋಡುವುದೇ ಖುಷಿ ಎಂದಿದ್ದಾರೆ.
ಇದನ್ನೂ ಓದಿ: Puneeth Rajkumar: ದೊಡ್ಮನೆ ದೊರೆಯೇ ಮಿಸ್​ ಯೂ! ಅಪ್ಪು ನೆನೆದು ವೇದಿಕೆ ಮೇಲೆ ಭಾವುಕರಾದ ನಟ ನಾಗಾರ್ಜುನ


ಒಂದು ವಾಟ್ಸಾಪ್ ಸ್ಟೇಟಸ್ ನೋಡಿ ಕಾಲ್ ಮಾಡ್ತಿದ್ರು


ಒಂದು ಸ್ಟೇಟಸ್ ಹಾಕಿದ್ದರೂ ರಿಪ್ಲೈ ಮಾಡ್ತಿದ್ರು. ನನ್ನ ಮಗಳ ಫೋಟೋ ಶೇರ್ ಹಾಕಿದರೂ ತಕ್ಷಣ ಕಾಲ್ ಮಾಡಿ ಮಾತನಾಡುತ್ತಿದ್ದರು. ಅಪ್ಪು ಅವರ ಸ್ಟಾರ್​ಡಂನಲ್ಲಿ ನಾವು ಕೂದಲ ಸಮ. ಅಪ್ಪು ಅವರ ಕಾಲ್ ಬರೋದೇ ರೋಮಾಂಚನ. ಅವರ ಹಲೋ ಎನ್ನುವುದನ್ನು ಕೇಳುವುದೇ ಖುಷಿ. ಅವರು ಸಿಕ್ಕಾಗ ಹ್ಯಾಂಡ್ ಶೇಕ್ ಮಾಡಿ ಅಪ್ಪುಗೆ ಕೊಡ್ತಾರಲ್ಲ ಅದನ್ನು ಖಂಡಿತವಾಗಿಯೂ ಮಿಸ್ ಮಾಡುತ್ತೇನೆ ಎಂದಿದ್ದಾರೆ ನಟ ಅಜಯ್.


ಅಪ್ಪು ಹೋಗೋ 1 ವಾರ ಮುನ್ನ ಕಾಲ್ ಮಾಡಿದ್ರು


ಸೆಕೆಂಡ್ ಹ್ಯಾಂಡ್ ಕಾರು ತೆಗೆದುಕೊಂಡಿದ್ದೆ. ಆ ಸಂದರ್ಭ ಅಪ್ಪು ಅವರೇ ಕೀ ತೆಗೆದುಕೊಂಡು ನಾನು ಕಾರು ಓಡಿಸ್ತೀನಿ ಎಂದು ಕಾರು ಓಡಿಸಿದ್ದರು. ಅವರು ಹೋಗುವ ಮುನ್ನ 1 ವಾರ ನನಗೆ ಕಾಲ್ ಮಾಡಿದ್ದರು. ನನ್ನ ಸಿನಿಮಾದಲ್ಲಿ ಒಂದು ಘಟನೆ ನಡೆದಿತ್ತು. ಆ ಬಗ್ಗೆ ಅಪ್ಪು ಕಾಲ್ ಮಾಡಿ ಮಾತನಾಡಿದ್ದರು. ಇಡೀ ಇಂಸ್ಟ್ರಿಯಲ್ಲಿ ಯಾರೂ ಕೂಡಾ ಕಾಲ್ ಮಾಡಿರಲಿಲ್ಲ. ಅಪ್ಪು ಕಾಲ್ ಮಾಡಿದ್ದರು ಎಂದಿದ್ದಾರೆ.

Published by:Divya D
First published: