Love You Rachchu Review: ಕೊಲೆ ಸುತ್ತ ಸುತ್ತುವ `ರಚ್ಚು’ ಜರ್ನಿ: ಹೊಸ ವರ್ಷಕ್ಕೆ ಸಿನಿರಸಿಕರಿಗೆ ಪರ್ಫೆಕ್ಟ್​ ಟ್ರೀಟ್​!

ಶೀರ್ಷಿಕೆ 'ಲವ್ ಯೂ ರಚ್ಚು' ಅಂತ ಇರುವುದನ್ನು ಕಂಡು ನೀವು ಇದೊಂದು ರೊಮ್ಯಾಂಟಿಕ್​ ಸಿನಿಮಾ ಅಂದುಕೊಂಡಿರುತ್ತೀರಾ. ಆದರೆ, ಇದು  ಪ್ರೇಮ ಕಥೆಯಲ್ಲ. ಬದಲಾಗಿ ಕ್ರೈಂ ಸ್ಟೋರಿ. ಕೊಲೆಯೊಂದರ ಸುತ್ತ  ಸುತ್ತುವ ಕಥೆ.

ಲವ್​ ಯೂ ರಚ್ಚು ಸಿನಿಮಾ ತಂಡ

ಲವ್​ ಯೂ ರಚ್ಚು ಸಿನಿಮಾ ತಂಡ

  • Share this:
ದಾಂಪತ್ಯದಲ್ಲಿ ಮತ್ತೊಬ್ಬನ ಎಂಟ್ರಿಯಾಗಿ ಅರಿವಿಲ್ಲದೇ ಆತನ ಕೊಲೆಯಾಗಿ, ಅದನ್ನು ಮುಚ್ಚಿಹಾಕಿ. ಕೊನೆಯಲ್ಲಿ ಈ ವಿಷಯ ಹೊರಗೆ ಬರುತ್ತಾ? ಇಲ್ವಾ? ಅನ್ನುವುದೆ ಲವ್​ ಯೂ ರಚ್ಚು (Love You Rachchu) ಸಿನಿಮಾದ ಕಥೆ. ಹೌದು, ಅಜಯ್​ರಾವ್ (Ajay Rao)​, ಹಾಗೂ ರಚಿತಾ ರಾಮ್ ​(Rachita Ram) ನಟನೆಯ ಲವ್​ ಯೂ ರಚ್ಚು ನಿನ್ನೆ ಡಿಸೆಂಬರ್​ 31ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಸಿನಿ ರಸಿಕರು ಬಹುಪಾರಾಕ್​ ಹೇಳಿದ್ದಾರೆ. ಸಿನಿಮಾದಲ್ಲಿ ಇರುವ ಕ್ಯೂರಿಯಾಸಿಟಿಗೆ ಫುಲ್​ ಫಿದಾ ಆಗಿದ್ದಾರೆ.  'ಲವ್ ಯೂ ರಚ್ಚು' ಸಿನಿಮಾ ತೆರೆಕಾಣುವ ಮುನ್ನವೇ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಶೂಟಿಂಗ್ ಸಮಯದಲ್ಲಿ ನಡೆದ ದುರಂತಗಳು, ಬಿಡುಗಡೆಗೂ ಮುನ್ನ ನಿರ್ಮಾಪಕ (Producer) ಮತ್ತು ಹೀರೋ (Hero) ನಡುವಿನ ಜಗಳ (Fight). ಹೀಗೆ ಅನೇಕ ವಿಚಾರಗಳಿಗೆ ಸುದ್ದಿಯಾದ ಈ ಸಿನಿಮಾ ಈಗ ತೆರೆಗೆ ಬಂದಿದೆ. ಹಾಗಾದರೆ, ಸಿನಿಮಾ ಹೇಗಿದೆ?  ರಚಿತಾ ರಾಮ್​, ಅಜಯ್​ ರಾವ್​ ಕಾಂಬೋ ವರ್ಕೌಟ್​ ಆಗಿದೆಯಾ? ಸಿನಿಮಾದಲ್ಲಿ ಇಷ್ಟವಾಗುವ ಅಂಶಗಳು ಯಾವುವು? ಹೀರೋ, ನಿರ್ಮಾಪಕರ ನಡುವೆ ಕಿರಿಕ್​ ಸಿನಿಮಾದ ಮೇಲೆ ಪ್ರಭಾವ ಬೀರಿದೆಯಾ? ಇದಕ್ಕೆಲ್ಲ ಉತ್ತರ ಇಲ್ಲಿದೆ..

ಕೊಲೆ ಸುತ್ತ ಸುತ್ತುವ ‘ರಚ್ಚು’ ಜರ್ನಿ!

ಶೀರ್ಷಿಕೆ 'ಲವ್ ಯೂ ರಚ್ಚು' ಅಂತ ಇರುವುದನ್ನು ಕಂಡು ನೀವು ಇದೊಂದು ರೊಮ್ಯಾಂಟಿಕ್​ ಸಿನಿಮಾ ಅಂದುಕೊಂಡಿರುತ್ತೀರಾ. ಆದರೆ, ಇದು  ಪ್ರೇಮ ಕಥೆಯಲ್ಲ. ಬದಲಾಗಿ ಕ್ರೈಂ ಸ್ಟೋರಿ. ಕೊಲೆಯೊಂದರ ಸುತ್ತ  ಸುತ್ತುವ ಕಥೆ.  ಪತಿ ರಚನಾ (ರಚಿತಾ ರಾಮ್‌) ಮಾಡಿರುವ ಕೊಲೆಯೊಂದನ್ನು ಮುಚ್ಚಿಹಾಕುವುದಕ್ಕಾಗಿ ಪತಿ ಅಜಯ್ (ಅಜಯ್ ರಾವ್) ಕಟ್ಟುವ ರೋಚಕ ದೃಶ್ಯಗಳನ್ನು ಒಂದಕ್ಕೊಂದು ಪೋಣಿಸುತ್ತ ಸಾಗುವುದೇ ಈ ಸಿನಿಮಾದ ಕಥೆ. ಎರಡು ದಿನಗಳಲ್ಲಿ ನಡೆಯವ ಈ ಕಥೆಯಲ್ಲಿ ಹೀರೋ-ಹೀರೋಯಿನ್​ ಕೊಲೆ ಮುಚ್ಚಿಹಾಕುವಲ್ಲಿ ಯಶಸ್ವಿಯಾಗುತ್ತಾರಾ? ಅಥವಾ ಪೊಲೀಸರ ಕೈಯಲ್ಲಿ ಸಿಕ್ಕಿಬೀಳುತ್ತಾರಅ ಎಂಬುಂದೆ ಚಿತ್ರದ ಕಥೆ.

ಇದನ್ನು ಓದಿ : ಮಾಸ್​ ಡೈಲಾಗು.. ಭರ್ಜರಿ ಫೈಟಿಂಗ್​: ಅರ್ಜುನ್​ ಗೌಡ ಓನ್ಲಿ ಫಾರ್​ ಮಾಸ್​ ಆಡಿಯನ್ಸ್​!

ಹೆಚ್ಚು ಟ್ವಿಸ್ಟ್​ ಇದೆ.. ಆದ್ರೆ ಕಿಕ್​ ಇಲ್ಲ!

ಕೊಲೆಯೊಂದನ್ನು ಮುಚ್ಚಿಹಾಕುವುದಕ್ಕೆ ಹೊರಡವ ದಂಪತಿಗೆ ಅಡಿಗಡಿಗೂ ಟ್ವಿಸ್ಟ್‌ಗಳು ಎದುರಾಗುತ್ತಲೇ ಇರುತ್ತವೆ. ಏನೋ ಮಾಡಲು ಹೋಗಿ, ಇನ್ನೇನೋ ಆಗುವಂತಹ ಸ್ಥಿತಿಗೆ ನಾಯಕ-ನಾಯಕಿ ಸಿಲುಕುತ್ತಾರೆ. ಆದರೆ, ಈ ಟ್ವಿಸ್ಟ್​ಗಳನ್ನು ಪ್ರೇಕ್ಷಕರು ಮೊದಲೆ ಗೆಸ್​​ ಮಾಡಿ ಬಿಡುತ್ತಾರೆ. ಟ್ವಿಸ್ಟ್​ಗಳಿಂದಲೇ ಚಿತ್ರ ತುಂಬಿ ಹೋಗಿದೆ. ಆದರೆ, ಟ್ವಿಸ್ಟ್​ಗಳಲ್ಲಿ ಕಿಕ್​ ಇಲ್ಲದೇ ಇರುವುದು ಪ್ರೇಕ್ಷಕರಿಗೆ ಮಜಾ ನೀಡುವುದಿಲ್ಲ. ಮೇಕಿಂಗ್ ಚೆನ್ನಾಗಿದೆ. ಮಣಿಕಾಂತ್ ಸಂಗೀತ ಸಂಯೋಜನೆಯಲ್ಲಿ 'ಮುದ್ದು ನೀನು..' ಹಾಡು ಮುದ್ದಾಗಿದೆ. ಹಿನ್ನೆಲೆ ಸಂಗೀತವು ಚೆನ್ನಾಗಿದೆ. ಶ್ರೀಕ್ರೇಜಿಮೈಂಡ್ಸ್‌ ಛಾಯಾಗ್ರಹಣ ಸೊಗಸಾಗಿದೆ.

ಇದನ್ನು ಓದಿ :  ರಾಕಿ ಭಾಯ್​ ಎದುರು ತೊಡೆ ತಟ್ಟಿದ ಮತ್ತೊಬ್ಬ ಸ್ಟಾರ್​ ನಟ: ಪ್ಲೀಸ್..​ ತಪ್ಪು ಮಾಡ್ಬೇಡಿ ಅಂದಿದ್ಯಾಕೆ ಫ್ಯಾನ್ಸ್​?

ನಟನೆ ಮೂಲಕ ಗಮನ ಸೆಳೆಯುವ ರಚ್ಚು, ಅಜಯ್​!

'ಲವ್ ಯೂ ರಚ್ಚು' ಸಿನಿಮಾದಲ್ಲಿ ಜಾಸ್ತಿ ಪಾತ್ರಧಾರಿಗಳಿಲ್ಲ. ಅಜಯ್ ರಾವ್ ಮತ್ತು ರಚಿತಾ ರಾಮ್ ಸುತ್ತವೇ ಹೆಚ್ಚು ಸಾಗುತ್ತದೆ. ಪತ್ನಿಯನ್ನು ಅಪಾರವಾಗಿ ಪ್ರೀತಿಸುವ ಪತಿಯಾಗಿ ಅಜಯ್ ರಾವ್ ಇಷ್ಟವಾಗುತ್ತಾರೆ. ಆಕ್ಷನ್‌ ಸೀನ್‌ಗಳಲ್ಲಿಯೂ ಖಡಕ್ ಆಗಿ ನಟಿಸಿದ್ದಾರೆ. ಇನ್ನೂ ರಚಿತಾ ರಾಮ್​ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನಗೆ ತಿಳಿಯದೇ ಕೊಲೆ ಮಾಡಿ ನಂತರ ಆ ಕೊಲೆಯನ್ನು ಮುಚ್ಚಿಹಾಕುವ ಪಾತ್ರದಲ್ಲಿ ರಚಿತಾ ರಾಮ್​ ಗಮನ ಸೆಳೆದಿದ್ದಾರೆ. ಒಟ್ಟಿನಲ್ಲ ಹೊಸ ವರ್ಷಕ್ಕೆ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಒಳ್ಳೆ ಕಥೆ ಕಟ್ಟಿಕೊಡುವಲ್ಲಿ ಗುರು ದೇಶಪಾಂಡೆ ಕೊಂಚ ಎಡವಿದ್ದಾರೆ. ಆದರೆ, ಮನರಂಜನೆ ದೃಷ್ಟಿಯಲ್ಲಿ ನೋಡುವುದಾದರೆ ಕೊಟ್ಟ ಕಾಸಿಗೆ ಲವ್​ ಯೂ ರಚ್ಚು ಸಿನಿಮಾ ಮೋಸ ಮಾಡುವುದಿಲ್ಲ.
Published by:Vasudeva M
First published: