Into The Wild With Bear Grylls ಎಪಿಸೋಡ್‍ನಲ್ಲಿ ಅಜಯ್ ದೇವಗನ್: ಮಾಲ್ಡೀವ್ಸ್​ನಲ್ಲಿ ನಡೆಯಲಿದೆ ಶೂಟಿಂಗ್​..!

ಡಿಸ್ಕವರಿಯ ಟಿವಿ ಶೋ “ಇನ್ ಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್” ಗೆ ಭಾರತದಲ್ಲೂ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಶೋನ ನಿರೂಪಕ, ನಿಜ ಜೀವನದಲ್ಲೂ ಸದಾ ವಿಭಿನ್ನ ಸಾಹಸಗಳನ್ನು ಮಾಡಿ ಹೆಸರುವಾಸಿ ಆಗಿರುವ ಬೇರ್ ಗ್ರಿಲ್ಸ್ ಅವರಿಗೂ ನಮ್ಮಲ್ಲಿ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಿಲ್ಲ. ಇದೀಗ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಈ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವುದು “ಇನ್ ಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್”ನ ಭಾರತೀಯ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವುದು ಖಂಡಿತ.

ನಟ ಅಜಯ್ ದೇವಗನ್

ನಟ ಅಜಯ್ ದೇವಗನ್

  • Share this:
ಬಾಲಿವುಡ್ ನಟ ಅಜಯ್ ದೇವಗನ್ (Ajay Devgn), ಡಿಸ್ಕವರಿ ಚಾನಲ್‍ನ ಸಾಹಸಮಯ ಶೋ “ಇನ್ ಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್” ನ  (Discovery’s adventure show Into The Wild With Bear Grylls) ಎಪಿಸೋಡ್ ಒಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಷಯವನ್ನು ಕಾರ್ಯಕ್ರಮದ ನಿರ್ಮಾಪಕರು ಭಾನುವಾರ ಘೋಷಿಸಿದ್ದಾರೆ. 52 ವರ್ಷದ ಅಜಯ್ ದೇವಗನ್, ಶೀಘ್ರದಲ್ಲಿಯೇ “ಇನ್ ಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್” ನ ನಿರೂಪಕ ಹಾಗೂ ಅಪ್ರತಿಮ ಸಾಹಸಿ ಬೇರ್ ಗ್ರಿಲ್ಸ್ (Bear Grylls) ಜೊತೆ, ಮಾಲ್ಡೀವ್ಸ್‌ನಲ್ಲಿ ಆ ಎಪಿಸೋಡ್‍ನ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ತಮ್ಮ ಸಿನಿಮಾಗಳಲ್ಲಿನ ಸ್ಟಂಟ್ ದೃಶ್ಯಗಳಿಂದಾಗಿ ಪ್ರಖ್ಯಾತರಾದವರು. ಸಿನಿಮಾ ಜೀವನದ ಆರಂಭದಿಂದಲೂ ತಮ್ಮ ಸಿನಿಮಾಗಳಲ್ಲಿ ವಿಭಿನ್ನ ಸ್ಟಂಟ್ ದೃಶ್ಯಗಳಲ್ಲಿ ಅಭಿನಯಿಸುತ್ತಾ ಬಂದಿರುವ ಅಜಯ್ ದೇವಗನ್, ವೃತ್ತಿ ಜೀವನದಲ್ಲಿ ಸಾಹಸ ಪ್ರಧಾನ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸಿದ್ದಾರೆ. ‘ಫೂಲ್ ಔರ್ ಕಾಂಟೆ’ ಚಿತ್ರದಲ್ಲಿ ಎರಡು ಬೈಕ್‍ಗಳ ಮೇಲೆ ಕಾಲಿಟ್ಟು ಮಾಡಿರುವ ಸ್ಟಂಟನ್ನು ಈಗಲೂ ಸಿನಿಮಾ ಪ್ರಿಯರು ನೆನಪಿಸಿಕೊಳ್ಳುತ್ತಾರೆ.

ಡಿಸ್ಕವರಿಯ ಟಿವಿ ಶೋ “ಇನ್ ಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್” ಗೆ ಭಾರತದಲ್ಲೂ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಶೋನ ನಿರೂಪಕ, ನಿಜ ಜೀವನದಲ್ಲೂ ಸದಾ ವಿಭಿನ್ನ ಸಾಹಸಗಳನ್ನು ಮಾಡಿ ಹೆಸರುವಾಸಿ ಆಗಿರುವ ಬೇರ್ ಗ್ರಿಲ್ಸ್ ಅವರಿಗೂ ನಮ್ಮಲ್ಲಿ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಿಲ್ಲ. ಇದೀಗ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಈ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವುದು “ಇನ್ ಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್”ನ ಭಾರತೀಯ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವುದು ಖಂಡಿತ.


ಹಾಗಂತ, ಬೇರ್ ಗ್ರಿಲ್ಸ್ ಜೊತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವವರಲ್ಲಿ ಅಜಯ್ ದೇವಗನ್ ಮೊದಲಿಗರೇನಲ್ಲ. ಈ ಮೊದಲು, 2019ರಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಬೇರ್ ಗ್ರಿಲ್ಸ್ ಜೊತೆ “ಮ್ಯಾನ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಆ್ಯಂಡ್ ಪಿಎಂ ಮೋದಿ” ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆ ಕಾರ್ಯಕ್ರಮ ವೀಕ್ಷಕರಿಗೆ ಬಹಳ ಮೆಚ್ಚುಗೆಯಾಗಿತ್ತು.

ಇದನ್ನೂ ಓದಿ: ಕೋವಿಡ್​ನಿಂದ ಚೇತರಿಸಿಕೊಂಡ ನಂತರ ಜಿಮ್​ ಮೆಟ್ಟಿಲೇರಿದ Kichcha Sudeep

“ ಮ್ಯಾನ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಆ್ಯಂಡ್ ಪಿಎಂ ಮೋದಿ” ಯ ವಿಡಿಯೋ ಮತ್ತು ಪೋಟೋಗಳು ತುಂಬಾ ವೈರಲ್ ಆಗಿದ್ದವು. ಸೂಪರ್ ಸ್ಟಾರ್‌ಗಳಾದ ಅಕ್ಷಯ್ ಕುಮಾರ್ ಮತ್ತು ರಜನಿಕಾಂತ್ ಕೂಡ ಬೇರ್ ಗ್ರಿಲ್ಸ್ ಜೊತೆ ಸಾಹಸಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಂಚಿಕೆಗಳು ಸಹ ಪ್ರಸಾರವಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದವು.

ಇದನ್ನೂ ಓದಿ: ಟ್ವಿಟರ್​ನಲ್ಲಿ ಸಕ್ರಿಯವಾಗಿದ್ದಾಗ Kangana Ranaut ವಿರುದ್ಧ ದಿನಕ್ಕೆ 200 ಎಫ್​ಐಆರ್​​ ದಾಖಲಾಗುತ್ತಿದ್ದವಂತೆ..!

ಈ ಕಾರ್ಯಕ್ರಮ ಮೊದಲು ಡಿಸ್ಕವರಿ ಪ್ಲಸ್ ಆ್ಯಪ್‍ನಲ್ಲಿ ಪ್ರದರ್ಶನಗೊಳ್ಳಲಿದೆ. ಅಜಯ್ ದೇವಗನ್ ಈಗಲೂ ವೃತ್ತಿಜೀವನದಲ್ಲಿ ವ್ಯಸ್ಥರಾಗಿದ್ದು, ಇತ್ತೀಚೆಗೆ “ಭುಜ್: ದ ಪ್ರೈಡ್ ಆಫ್ ಇಂಡಿಯಾ”ದಲ್ಲಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರ ಕೈಯಲ್ಲಿ “ಗಂಗೂಬಾಯಿ ಕಾತ್ಯವಾಡಿ”, ಎಸ್ ಎಸ್ ರಾಜಮೌಳಿ ಅವರ “ಆರ್‌ಆರ್‌ಆರ್‌”, ಕ್ರೀಡೆಗೆ ಸಂಬಂಧಿಸಿದ “ಮೈದಾನ್” ಮತ್ತು ಅವರದೇ ನಿರ್ದೇಶನದ “ಮೇಡೇ” ಸಿನಿಮಾಗಳಿವೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನ “ರುದ್ರಾ: ದ ಎಡ್ಜ್ ಆಫ್ ಡಾರ್ಕ್‍ನೆಸ್” ಕ್ರೈಂ ಥ್ರಿಲ್ಲರ್ ಸರಣಿಯ ಮೂಲಕ ಡಿಜಿಟಲ್ ಮಾಧ್ಯಮಕ್ಕೂ ಕಾಲಿಡುವ ಸಿದ್ಧತೆಯಲ್ಲಿದ್ದಾರೆ ಅಜಯ್ ದೇವಗನ್.
Published by:Anitha E
First published: