Kiccha Sudeep: ಮತ್ತೆ ಗುಟ್ಕಾ​ ಗಿರಾಕಿ ಕಿರಿಕ್! 'ವಿಕ್ರಾಂತ್​ ರೋಣ' ವಿರುದ್ಧ ತೊಡೆತಟ್ಟಿದ ಅಜಯ್​ ದೇವಗನ್​

10ಕ್ಕೂ ಹೆಚ್ಚು ಭಾಷೆಯಲ್ಲಿ ವಿಕ್ರಾಂತ್​ ರೋಣ ಸಿನಿಮಾ ರಿಲೀಸ್ ಆಗಲಿದೆ. ಈಗ ಅದೇ ತಿಂಗಳು, ಅದೇ ವಾರದಲ್ಲೇ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರವೂ ಕೂಡ ರಿಲೀಸ್ ಆಗುತ್ತಿದೆ. ಜುಲೈ 29 ರಂದು ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

ಕಿಚ್ಚ ಸುದೀಪ್​, ಅಜಯ್​ ದೇವಗನ್​

ಕಿಚ್ಚ ಸುದೀಪ್​, ಅಜಯ್​ ದೇವಗನ್​

  • Share this:
ಭಾರತದ ರಾಷ್ಟ್ರ ಭಾಷೆ (Indian National Language) ಯ ಬಗ್ಗೆ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kiccha Sudeep ) ಅವರ ಕಾಮೆಂಟ್‌ಗೆ ಅಜಯ್ ದೇವಗನ್ (Ajay Devgan) ಟ್ವಿಟರ್ (Twitter) ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ, ಹಾಗಾದರೆ ಹಿಂದಿ (Hindi) ಭಾಷೆಯಲ್ಲೇಕೆ ನಿಮ್ಮ ಚಿತ್ರಗಳನ್ನು ಡಬ್ (Dub) ಮಾಡುತ್ತೀರಿ ಎಂದು ಸಂಪೂರ್ಣ ಹಿಂದಿಯಲ್ಲಿಯೇ ಬರೆದ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಆದರೆ, ಅಜಯ್ ದೇವಗನ್ ಅವರ ಟ್ವೀಟ್ ಗೆ  (Tweet) ಸುದೀಪ್ ಕೂಡ ತಕ್ಕ ಉತ್ತರ ನೀಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಯಾಯ್ತು. ಕಿಚ್ಚ ಸುದೀಪ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದಾದ ನಂತರ ಈ ವಿಚಾರ ತಣ್ಣಗೆ ಆಗಿತ್ತು. ಇದೀಗ ಮತ್ತೆ ಕಾಲು ಕೆರೆದುಕೊಂಡು ಗುಟ್ಕಾ​ ಗಿರಾಕಿ ಕಿರಿಕ್​ ಮಾಡಿದ್ದಾರೆ.

ವಿಕ್ರಾಂತ್​ ರೋಣ ವಿರುದ್ಧ ತೊಡೆ ತಟ್ಟಿದ ಅಜಯ್​ ದೇವಗನ್​!

ಹಲವು ತಿಂಗಳ ಹಿಂದಿಯೇ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ರಿಲೀಸ್ ಡೇಟ್ ಬಹಿರಂಗವಾಗಿತ್ತು. ಜುಲೈ 28 ರಂದು ಈ ಸಿನಿಮಾವನ್ನು 3ಡಿಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಕಿಚ್ಚ ಸುದೀಪ್​ ಅವರ ವಿಕ್ರಾಂತ್​ ರೋಣ ಅವತಾರ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. 10ಕ್ಕೂ ಹೆಚ್ಚು ಭಾಷೆಯಲ್ಲಿ ವಿಕ್ರಾಂತ್​ ರೋಣ ಸಿನಿಮಾ ರಿಲೀಸ್ ಆಗಲಿದೆ. ಈಗ ಅದೇ ತಿಂಗಳು, ಅದೇ ವಾರದಲ್ಲೇ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರವೂ ಕೂಡ ರಿಲೀಸ್ ಆಗುತ್ತಿದೆ. ಜುಲೈ 29 ರಂದು ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.

ಜುಲೈ 28ಕ್ಕೆ ಅಜಯ್​ ದೇವಗನ್​ ಸಿನಿಮಾ ರಿಲೀಸ್!

ವಿಕ್ರಾಂತ್ ರೋಣ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ. 2 ಡಿ ಮತ್ತು 3 ಡಿಯಲ್ಲಿಯೂ ಸಿನಿಮಾ ಮೂಡಿ ಬಂದಿದೆ. ಹತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಅಜಯ್ ದೇವಗನ್ ಅವರ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದು ಸಖತ್ ಕುತೂಹಲವಂತೂ ಮೂಡಿಸಿದೆ. ಮತ್ತೆ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರಬೇಡಿ ಎಂದು ಕಿಚ್ಚನ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ವಾರ್ನಿಂಗ್​ ನೀಡುತ್ತಿದ್ದಾರೆ.

ಇದನ್ನೂ ಓದಿ: ಡಾಲಿ ಧನಂಜಯ್​ ಸಕ್ಸಸ್​ ಸಹಿಸಿಕೊಳ್ಳದವರಿಂದ ಕುತಂತ್ರ! ಕಾಣದ ಕೈಗಳಿಂದ ಕುಮ್ಮಕ್ಕು?

ಬೀಸ್ಟ್​ ಸಿನಿಮಾಗದ ಸ್ಥಿತಿ ಆಗುತ್ತೆ ಅಂತ ವಾರ್ನಿಂಗ್​!

ಸುದೀಪ್ ಅವರ ವಿಕ್ರಾಂತ್ ರೋಣ ಮತ್ತು ಅಜಯ್ ದೇವಗನ್ ಅವರ ಥ್ಯಾಂಕ್ ಗಾಡ್ ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಕಾಕತಾಳೀಯವಾದರೂ, ಅಭಿಮಾನಿಗಳು ಮಾತ್ರ ಅದನ್ನು ಬೇರೆ ರೀತಿಯಲ್ಲೇ ಅರ್ಥೈಸಿಕೊಂಡಿದ್ದಾರೆ. ಕೆಜಿಎಫ್​ 2 ಸಿನಿಮಾದ ಎದುರು ತೊಡೆ ತಟ್ಟಿದ್ದ ಬೀಸ್ಟ್​ , ಊಸ್ಟ್​ ಆಗಿತ್ತು. ಇದೀಗ ಕಿಚ್ಚನ ವಿಕ್ರಾಂತ್ ರೋಣನ ಎದುರು ಬೇಡ ಎಂದರು ಥ್ಯಾಂಕ್​ ಗಾಡ್​ ಸಿನಿಮಾ ರಿಲೀಸ್​ ಆಗುತ್ತಿದೆ. ನಿಮಗೂ ಅದೇ ರೀತಿ ಆಗುತ್ತೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: Kiccha Sudeep​ ಮಾತಿಗೆ ದನಿಗೂಡಿಸಿದ ಸ್ಯಾಂಡಲ್​ವುಡ್​, ಕಣ ಕಣದಲ್ಲೂ 'ಉರಿ'ತ್ತಿದ್ಯಾ ಎಂದ ಕನ್ನಡಿಗರು!

ಕಿಚ್ಚನಿಗೆ ಪರಭಾಷೆ ನಿರ್ದೇಶಕ ಆರ್​ಜಿವಿ ಸಾಥ್​!

ಸುದೀಪ್‌ಗೆ ಪ್ರತ್ಯೇಕ ಟ್ವೀಟ್‌ ಮಾಡಿರುವ ವರ್ಮಾ, ''ಸುದೀಪ್ ಅವರೆ, ಸತ್ಯವೆಂದರೆ ಬಾಲಿವುಡ್ ಸ್ಟಾರ್ ನಟರು ದಕ್ಷಿಣ ಭಾರತದ ಸಿನಿಮಾ ಸ್ಟಾರ್ ನಟರ ಬಗ್ಗೆ ಅಸೂಯೆ ಹೊಂದಿದ್ದಾರೆ. 'ಕೆಜಿಎಫ್ 2' ಸಿನಿಮಾ ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದ್ದಕ್ಕೆ ಅವರಿಗೆ ಉರಿ ಎದ್ದಿದೆ. ಹಿಂದಿ ಸಿನಿಮಾಗಳು ಇಂಥಹಾ ಓಪನಿಂಗ್ ಅನ್ನು ಪಡೆದುಕೊಳ್ಳಲಾರವು'' ಎಂದಿದ್ದಾರೆ.
Published by:Vasudeva M
First published: