Ajay Devgn: 18 ವರ್ಷದ ಬಳಿಕ ಅಜಯ್​ ದೇವಗನ್​ ಸಿನಿಮಾ ರಿಲೀಸ್​, ಇಷ್ಟು ಹಳೆ ಮೂವಿ ಯಾರ್​ ನೋಡ್ತಾರೆ ಗುರೂ!

ಇಲ್ಲಿ ಒಂದು ಚಿತ್ರ ಐದಲ್ಲ, ಹತ್ತಲ್ಲ, ಹದಿನೈದಲ್ಲ ಬರೋಬ್ಬರಿ 18 ವರ್ಷಗಳೇ ತೆಗೆದುಕೊಂಡಿದೆಯಂತೆ ಬಿಡುಗಡೆಯಾಗಲು ಎಂದು ಹೇಳಿದರೆ ನಿಮಗೆ ತುಂಬಾನೇ ಆಶ್ಚರ್ಯವಾಗಬಹುದು

ನಾಮ್​ ಚಿತ್ರದ ಪೋಸ್ಟರ್​

ನಾಮ್​ ಚಿತ್ರದ ಪೋಸ್ಟರ್​

  • Share this:
ಕೆಲವೊಮ್ಮೆ ಕೆಲವು ಚಿತ್ರತಂಡಗಳು ಚಲನಚಿತ್ರ(Movies) ಗಳ ಚಿತ್ರೀಕರಣ (Shooting) ವನ್ನು ಭರದಿಂದ ಶುರು ಮಾಡಿ, ಯಾವುದೋ ಒಂದು ಕಾರಣಕ್ಕೆ ಅದನ್ನು ಅರ್ಧಕ್ಕೆ ನಿಲ್ಲಿಸಿರುವುದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಆದರೆ ಎಷ್ಟೇ ತಡವಾದರೂ ಒಂದು ಚಲನಚಿತ್ರ ಚಿತ್ರೀಕರಣ ಮುಗಿಸಿಕೊಂಡು ತೆರೆಗೆ ಬರಲು ಅಬ್ಬಬ್ಬಾ ಎಂದರೆ ಎರಡರಿಂದ ಮೂರು ವರ್ಷಗಳವರೆಗೆ ಸಮಯ ತೆಗೆದುಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ ಒಂದು ಚಿತ್ರ ಐದಲ್ಲ, ಹತ್ತಲ್ಲ, ಹದಿನೈದಲ್ಲ ಬರೋಬ್ಬರಿ 18 ವರ್ಷಗಳೇ ತೆಗೆದುಕೊಂಡಿದೆಯಂತೆ ಬಿಡುಗಡೆಯಾಗಲು ಎಂದು ಹೇಳಿದರೆ ನಿಮಗೆ ತುಂಬಾನೇ ಆಶ್ಚರ್ಯವಾಗಬಹುದು.

18 ವರ್ಷಗಳ ಬಳಿಕ ಅಜಯ್​ ದೇವಗನ್​ ಸಿನಿಮಾ ರಿಲೀಸ್​!

ಆ ಚಿತ್ರ ಬೇರೆ ಯಾರದ್ದೂ ಅಲ್ಲ, ಬಾಲಿವುಡ್‌ (Bollywood) ನ ಜನಪ್ರಿಯ ನಟ ಅಜಯ್ ದೇವಗನ್ (Ajay Devgn) ಅಭಿನಯದ ಚಿತ್ರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನೀಸ್ ಬಾಜ್ಮಿ ನಿರ್ದೇಶನದ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ‘ನಾಮ್’ ಚಲನಚಿತ್ರವನ್ನು 2004 ರಲ್ಲಿಯೇ ಚಿತ್ರೀಕರಿಸಲಾಗಿತ್ತಂತೆ. ಆದರೆ ಈವರೆಗೂ ಇದನ್ನು ಬಿಡುಗಡೆ ಮಾಡಿರಲಿಲ್ಲ. ಈ ಚಿತ್ರವನ್ನು ಸ್ವಿಟ್ಜರ್‌ಲ್ಯಾಂಡ್ ಮತ್ತು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದರಲ್ಲಿ ಬಾಲಿವುಡ್ ನಟಿಯರಾದ ಸಮೀರಾ ರೆಡ್ಡಿ ಮತ್ತು ಭೂಮಿಕಾ ಚಾವ್ಲಾ ಕೂಡ ನಟಿಸಿದ್ದಾರೆ. ಅನೀಸ್ ಬಾಜ್ಮಿ ಅವರ ಮುಂಬರುವ ಸೈಕಲಾಜಿಕಲ್ ಮತ್ತು ಆ್ಯಕ್ಷನ್ ಥ್ರಿಲ್ಲರ್ ಅಜಯ್ ದೇವಗನ್ ಅಭಿನಯದ 'ನಾಮ್' ಈ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ನಾಮ್ ಹೆಸರಿನ ಸಿನಿಮಾ ರಿಲೀಸ್​!

ಚಿತ್ರದ ಬಿಡುಗಡೆಗಾಗಿ ತಯಾರಕರು ಮೇ ಮತ್ತು ಜುಲೈ ತಿಂಗಳುಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದು ಥಿಯೇಟರ್ ಅಥವಾ ಒಟಿಟಿ ಬಿಡುಗಡೆಗಾಗಿ ಮಾತುಕತೆ ನಡೆಸುತ್ತಿದೆ. 'ನಾಮ್' ಒಂದು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ಮರಣೆಯನ್ನು ಕಳೆದುಕೊಳ್ಳುತ್ತಾನೆ ಮತ್ತು ತನ್ನ ಗುರುತನ್ನು ಕಂಡುಕೊಳ್ಳಲು ತನ್ನ ಜೀವನದ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಈ ಚಿತ್ರವು 'ಹಲ್ಚಲ್', 'ಪ್ಯಾರ್ ತೋ ಹೋನಾ ಹಿ ಥಾ' ಮತ್ತು 'ದೀವಾನ್ಗಿ' ನಂತರ ಅಜಯ್ ಅವರೊಂದಿಗೆ ಬಾಜ್ಮಿ ಅವರ ನಾಲ್ಕನೇ ಸಹಯೋಗದಲ್ಲಿ ಮೂಡಿ ಬರುತ್ತಿರುವ ಚಿತ್ರ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bollywood ಗೆ ಬೆವರಿಳಿಸೋದ್ರಲ್ಲಿ ಸೌತ್ ಸ್ಟಾರ್​​ಗಳು ಮುಂದು! ಯಶ್​, ಚಿರಂಜೀವಿ ಹಿಂದಿ ಚಿತ್ರರಂಗದ ಬಗ್ಗೆ ಹೀಗಂದಿದ್ರು

ಇದಕ್ಕೂ ಮುನ್ನ ಅನೀಸ್ ಬಾಜ್ಮಿ ಅವರು ಅಜಯ್ ದೇವಗನ್ ಅವರ ಒಂದು ಹಳೆಯ ಫೋಟೋವನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುತ್ತಿದ್ದ ‘ನಾಮ್’ ಚಿತ್ರದ ಸೆಟ್‌ನಿಂದ ಹಂಚಿಕೊಂಡಿದ್ದರು. ಇದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ನಿಮಗೆ ತುಂಬಾನೇ ಇಷ್ಟವಾಗುತ್ತದೆ ಎಂದು ನಾನು ಅಂದುಕೊಂಡಿದ್ದೇನೆ. ಈ ಚಲನಚಿತ್ರ ಒಂದು ದಿನ ಬಿಡುಗಡೆಯಾಗುತ್ತದೆ ಎಂಬ ನಂಬಿಕೆ ಇದೆ, ನೀವೆಲ್ಲರೂ ಚಿತ್ರ ಮಂದಿರಕ್ಕೆ ಹೋಗಿ ಈ ಸಿನಿಮಾ ನೋಡಿ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: Kiccha Sudeep​ ಮಾತಿಗೆ ದನಿಗೂಡಿಸಿದ ಸ್ಯಾಂಡಲ್​ವುಡ್​, ಕಣ ಕಣದಲ್ಲೂ 'ಉರಿ'ತ್ತಿದ್ಯಾ ಎಂದ ಕನ್ನಡಿಗರು!

ನಟ ಅಜಯ್ ದೇವಗನ್ ಪ್ರಸ್ತುತ 'ರನ್‌ವೇ 34' ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅನೀಸ್ ಬಾಜ್ಮಿ ಪ್ರಸ್ತುತ ತಮ್ಮ ಮುಂಬರುವ ಚಿತ್ರ ‘ಭೂಲ್ ಭುಲೈಯಾ 2’ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದರಲ್ಲಿ ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಜಯ್ ದೇವಗನ್ ‘ರನ್‌ವೇ 34’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದು ಏಪ್ರಿಲ್ 29 ರಂದು ತೆರೆಗೆ ಬರಲು ಸಜ್ಜಾಗಿದೆ.
Published by:Vasudeva M
First published: