Ajay Devgan: ಸಿನಿಮಾ ಆಗಲಿದೆ ಗಾಲ್ವಾನ್ ಸಿಂಹಗಳ ಕಥೆ! ಚೀನಾ ಹುಟ್ಟಡಗಿಸಿದ ಭಾರತೀಯ ಸೈನಿಕರ ವೀರಗಾಥೆ!

Ajay Devgan: ತಮ್ಮ ಮೂರು ದಶಕಗಳ ಸಿನಿಜರ್ನಿಯಲ್ಲಿ ಅಜಯ್ ದೇವಗನ್ 110ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಅವುಗಳಲ್ಲಿ 2002ರಲ್ಲಿ ತೆರೆಗೆ ಬಂದಿದ್ದ ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಈಗಲೂ ಭಾರತೀಯರ ಅಚ್ಚುಮೆಚ್ಚಿನ ಸಿನಿಮಾ. ನಂತರ 2010ರಲ್ಲಿ ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಚಿತ್ರದಲ್ಲಿ ಅಂಡರ್ವರ್ಲ್ಡ್​  ಕಥೆ ಹೇಳಿದ್ದರು ಆಕ್ಷನ್ ಕಿಂಗ್.

news18-kannada
Updated:July 5, 2020, 2:52 PM IST
Ajay Devgan: ಸಿನಿಮಾ ಆಗಲಿದೆ ಗಾಲ್ವಾನ್ ಸಿಂಹಗಳ ಕಥೆ! ಚೀನಾ ಹುಟ್ಟಡಗಿಸಿದ ಭಾರತೀಯ ಸೈನಿಕರ ವೀರಗಾಥೆ!
ಅಜಯ್ ದೇವಗನ್
  • Share this:
ಇದೇ ಜೂನ್ 15ರಂದು ಭಾರತ ಹಾಗೂ ಚೀನಾ ಗಡಿಯಲ್ಲಿ ನಡೆದ ಘಟನೆ ಎಲ್ಲರಿಗೂ ನೆನಪಿದೆ. ಕರ್ನಲ್ ಸಂತೋಷ್ ಬಾಬು ಅವರೂ ಸೇರಿದಂತೆ 20 ಮಂದಿ ಭಾರತೀಯ ಸೈನಿಕರು, ಭಾರತದ ಗಡಿಯೊಳಗೆ ಅತಿಕ್ರಮಿಸಿದ್ದ ಚೀನಿಯರನ್ನು ಜಾಗ ಖಾಲಿ ಮಾಡಿಸಲು ಗಾಲ್ವಾನ್ ವ್ಯಾಲಿಗೆ ತೆರಳಿದ್ದರು. ಆಗ ಚೀನಿ ಸೈನಿಕರು ಮೋಸದ ಮಾಡಿದ ಕಾರಣ 20 ಮಂದಿ ಭಾರತೀಯ ಸೈನಿಕರು ವೀರಮರಣವನ್ನಪ್ಪಿದ್ದರು. ಆ ಬಳಿಕ ಭಾರತೀಯ ಸೈನಿಕರು 43 ಮಂದಿ ಚೀನಿ ಸೈನಿಕರನ್ನು ಹೊಡೆದುರುಳಿಸಿ, ಇಡೀ ವಿಶ್ವಕ್ಕೆ ತಮ್ಮ ತಾಕತ್ತು ತೋರಿಸಿದ್ದು ಈಗ ಇತಿಹಾಸ.

ಗಾಲ್ವಾನ್ ವ್ಯಾಲಿಯ ಈ ಘಟನೆ ಈಗ ಬಾಲಿವುಡ್​​ನಲ್ಲಿ ಸಿನಿಮಾ ರೂಪ ಪಡೆಯಲಿದೆ. ಬಿಟೌನ್ ಆಕ್ಷನ್ ಕಿಂಗ್ ಅಜಯ್ ದೇವಗನ್ ಈ ಕುರಿತ ನೈಜ ಘಟನೆ ಆಧಾರಿತ ಸಿನಿಮಾ ಅನೌನ್ಸ್ ಮಾಡಿದ್ದಾರೆ. 20 ಮಂದಿ ಭಾರತದ ವೀರ ಯೋಧರ ಕಥೆಯನ್ನು ಹೇಳಲು ಹೊರಟಿರುವ ಅಜಯ್ ದೇವಗನ್​​ ಈ ಚಿತ್ರದಲ್ಲಿ ನಟಿಸುತ್ತಿರೋದಲ್ಲದೇ, ನಿರ್ಮಾಣ ಕೂಡ ಮಾಡಲಿದ್ದಾರೆ.

ತಮ್ಮ ಮೂರು ದಶಕಗಳ ಸಿನಿಜರ್ನಿಯಲ್ಲಿ ಅಜಯ್ ದೇವಗನ್ 110ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಅವುಗಳಲ್ಲಿ 2002ರಲ್ಲಿ ತೆರೆಗೆ ಬಂದಿದ್ದ ‘ದಿ ಲೆಜೆಂಡ್ ಆಫ್ ಭಗತ್ ಸಿಂಗ್’ ಈಗಲೂ ಭಾರತೀಯರ ಅಚ್ಚುಮೆಚ್ಚಿನ ಸಿನಿಮಾ. ನಂತರ 2010ರಲ್ಲಿ ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಚಿತ್ರದಲ್ಲಿ ಅಂಡರ್ವರ್ಲ್ಡ್​ ಕಥೆ ಹೇಳಿದ್ದರು ಆಕ್ಷನ್ ಕಿಂಗ್.

ಆ ಬಳಿಕ ಅಜಯ್ ದೇವಗನ್ ಮತ್ತೆ ಬಯೋಪಿಕ್​ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ‘ರೇಡ್’ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದರೂ ಅವು, ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಸಿನಿಮಾಗಳಾಗಿದ್ದವು. ಇನ್ನು ಕಳೆದ ವರ್ಷ ಅವರು ನಟಿಸಿದ್ದ ‘ತಾನಾಜಿ’ ಸಿನಿಮಾ ಬಾಕ್ಸಾಫೀಸ್ ಲೂಟಿ ಮಾಡಿತ್ತು. ಅಲ್ಲಿಂದ ಅಜಯ್ ಹೆಚ್ಚೆಚ್ಚು ಬಯೋಪಿಕ್​ಗಳಲ್ಲಿ ನಟಿಸುತ್ತಿದ್ದಾರೆ.

ಹೌದು, ಗುಜರಾತ್ ಭೂಕಂಪದ ಸುತ್ತ ಸುತ್ತುವ ಕಥೆ ‘ಭುಜ್ ದಿ ಪ್ರೈಡ್ ಆಫ್ ಇಂಡಿಯಾ’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಡಿಜಿಟಲ್ ಫ್ಲಾಟ್​​​ಫಾರ್ಮ್​ನಲ್ಲೇ ನೇರವಾಗಿ ರಿಲೀಸ್ ಆಗುತ್ತಿದೆ. ಹಾಗೆಯೇ ಶೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ  ಹಗರಣ ಮಾಡಿದ ಹರ್ಷದ್ ಮೆಹ್ತಾ ಕುರಿತ ‘ದಿ ಬಿಗ್ ಬುಲ್’ ಸಿನಿಮಾ ನಿರ್ಮಿಸುತ್ತಿದ್ದಾರೆ ಆಕ್ಷನ್ ಕಿಂಗ್.  1950ರ ದಶಕದಲ್ಲಿ ಭಾರತದ ಫುಟ್​ಬಾಲ್ ಕೋಚ್ ಆಗಿದ್ದ ಸೈಯದ್ ಅಬ್ದುಲ್ ರಹೀಮ್ ಅವರ ಜೀವನಾಧಾರಿತ ಚಿತ್ರ ‘ಮೈದಾನ್​​‘ನಲ್ಲೂ ಮಿಂಚಲಿದ್ದಾರೆ.

ಭುಜ್ ದಿ ಪ್ರೈಡ್ ಆಫ್ ಇಂಡಿಯಾ - ಭಗತ್​ ಸಿಂಗ್​​


ಮಾತ್ರವಲ್ಲ ರಾಜಮೌಳಿ ನಿರ್ದೇಶಿಸುತ್ತಿರುವ ‘ರೌದ್ರಂ ರಣಂ ರುದ್ರಂ’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಅಜಯ್ ದೇವಗನ್. ಈಗಾಗಲೇ ಟೈಟಲ್, ಫಸ್ಟ್ ಲುಕ್ ಹಾಗೂ ಟೀಸರ್​ಗಳ ಮೂಲಕವೇ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸಿರುವ ಸಿನಿಮಾ ಇದು. ಬ್ರಿಟಿಷರು ಹಾಗೂ ಹೈದರಾಬಾದ್ ನಿಜಾಮನ ವಿರುದ್ಧ ಹೋರಾಡಿದ ‘ಕೊಮರಂ ಭೀಮ್’ ಪಾತ್ರದಲ್ಲಿ ಜೂನಿಯರ್ ಎನ್​ಟಿಆರ್ ಹಾಗೂ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಮೆಗಾಪವರ್​​​ಸ್ಟಾರ್ ರಾಮ್​​ಚರಣ್ ತೇಜಾ ನಟಿಸುತ್ತಿದ್ದಾರೆ. 

ಮೈದಾನ್​


ಹೀಗೆ ಸಾಲು ಸಾಲು ನೈಜ ಘಟನೆ ಆಧಾರಿತ ಸಿನಿಮಾಗಳಲ್ಲಿ ನಟಿಸುತ್ತಿರುವ ಬಾಲಿವುಡ್ ಆಕ್ಷನ್ ಕಿಂಗ್ ಅಜಯ್ ದೇವಗನ್ ಈಗ ಗಾಲ್ವಾನ್ ವ್ಯಾಲಿಯ ಬಿಹಾರ್ ರೆಜಿಮೆಂಟ್ ಹಾಗೂ ಘಾತಕ್ ಪಡೆಯ ವೀರಗಾಥೆಯನ್ನು ಹೇಳಲು ಹೊರಟಿದ್ದು, ಈಗಲೇ ಸಿನಿಮಾ ಬಗ್ಗೆ ಎಲ್ಲಿಲ್ಲದ ಎಕ್ಸ್​​ಸ್ಪೆಕ್ಟೇಷನ್ಸ್ ಮೂಡಿಸಿದೆ.

ವಯಸ್ಸು ನಲವತ್ತಾದರೂ ಮಾದಕ ಲುಕ್​ನಿಂದ ಪಡ್ಡೆಗಳ ನಿದ್ದೆ ಕೆಡಿಸುತ್ತಿದ್ದಾರೆ ಈ ನಟಿ!

Aatmanirbhar Bharat: ದೇಶಿಯ ಆ್ಯಪ್ ಅಭಿವೃದ್ದಿ ಪಡಿಸಲು ಮೋದಿ ಕರೆ; ಯಶಸ್ವಿ ಆದರೆ 20 ಲಕ್ಷ ಬಹುಮಾನ!
Published by: Harshith AS
First published: July 5, 2020, 2:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading