Discovery-Into The Wild: ಬೇರ್ ಗ್ರಿಲ್ಸ್ ಜೊತೆ ನಿರ್ಜನ ದ್ವೀಪದಲ್ಲಿ ಅಜಯ್ ದೇವಗನ್ ಸಾಹಸ

ಅಜಯ್ ದೇವಗನ್ ಭಾಗವಹಿಸಿರುವ ಇನ್​ ಟು ದ ವೈಲ್ಡ್ ಎಪಿಸೋಡ್, ಅಕ್ಟೋಬರ್ 22ರಂದು ಮುಂಜಾನೆ 6 ಗಂಟೆಗೆ ಡಿಸ್ಕವರಿ ಪ್ಲಸ್‍ನ ವಿಶೇಷವಾಗಿ ಪ್ರಸಾರವಾಗಲಿದೆ. ಡಿಸ್ಕವರಿ ಮತ್ತು ಅದರ ಲೀನಿಯರ್ ಚಾನೆಲ್‍ಗಳಲ್ಲಿ ಅದು ಅಕ್ಟೋಬರ್ 26ಕ್ಕೆ ಪ್ರಸಾರ ಆಗಲಿದೆ. ಇನ್​ ಟು ದ ವೈಲ್ಡ್ ಸರಣಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಾಂಗ್ಲಾ, ಮಲೆಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯ ಇದೆ.

ಇನ್​ ಟು ದ ವೈಲ್ಡ್- ಬೇರ್ ಗ್ರಿಲ್ಸ್ ಜೊತೆ ಅಜಯ್ ದೇವಗನ್

ಇನ್​ ಟು ದ ವೈಲ್ಡ್- ಬೇರ್ ಗ್ರಿಲ್ಸ್ ಜೊತೆ ಅಜಯ್ ದೇವಗನ್

  • Share this:
“ ಇಟ್ಸ್ ಎ ಸ್ಟೇಜ್ ಫಾರ್ ದ ಬ್ರೇವ್ ಹಾರ್ಟ್ಸ್ ( ಧೈರ್ಯಶಾಲಿ ಹೃದಯಗಳಿಗೆ ಇದೊಂದು ವೇದಿಕೆ)” ಬೇರ್ ಗ್ರಿಲ್ಸ್ ಅವರ ಇನ್​ ಟು ದ ವೈಲ್ಡ್​ ಸರಣಿಯ (Into The Wild) ಟ್ರೇಲರ್‌ನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಹೇಳುವ ಮಾತಿದು. ಡಿಸ್ಕವರಿ ಚಾನೆಲ್‍ನ ಇನ್​ ಟು ದ ವೈಲ್ಡ್ ಸರಣಿಯಲ್ಲಿ ಅಜಯ್ ದೇವಗನ್ ನಟಿಸುತ್ತಿರುವುದು ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.ಇದೀಗ ಅದರ ಟ್ರೇಲರ್ ಕೂಡ ಗಮನ ಸೆಳೆಯುತ್ತಿದೆ. ಇಂಟು ದ ವೈಲ್ಡ್‌ನ ಮುಂದಿನ ಸಂಚಿಕೆಯಲ್ಲಿ, ಹಿಂದೂ ಮಹಾ ಸಾಗರದ ನಿರ್ಜನ ದ್ವೀಪದಲ್ಲಿ ಅಜಯ್ ದೇವಗನ್ ಮತ್ತು ಬೇರ್ ಗ್ರಿಲ್ಸ್ ಅವರ ಬದುಕುಳಿಯುವ ಪ್ರವೃತ್ತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತೋರಿಸಲಾಗಿದೆ.

ಟ್ರೇಲರ್‌ನಲ್ಲಿ , ನಿರ್ಜನ ದ್ವೀಪದಲ್ಲಿ ಮತ್ತು ಶಾರ್ಕ್‍ಗಳನ್ನು ಹೊಂದಿರುವ ಜಲ ಪ್ರದೇಶದಲ್ಲಿ ಈ ಜೋಡಿಯು ಸಾಹಸಗಳನ್ನು ಮಾಡುವುದನ್ನು ನೋಡಬಹುದು. ಟ್ರೇಲರ್‌ನಲ್ಲಿ “ನಮಗೆ ಶಾರ್ಕ್ ಕಂಡರೆ ಶಾಂತವಾಗಿರಿ” ಎಂದು ಟ್ರೇಲರ್‌ನಲ್ಲಿ ಸಿಂಗಂ ನಟನಿಗೆ ಬೇರ್ ಗ್ರಿಲ್ಸ್ ಹೇಳುತ್ತಾರೆ. ಆ ಟ್ರೇಲರ್‌ನಲ್ಲಿ ಸಹಾಯಕ್ಕಾಗಿ ಎಸ್‍ಓಎಸ್ ಸಿಗ್ನಲ್​ ಅನ್ನು ಸ್ಥಾಪಿಸುವ ಮೊದಲು, ಮೇಕ್ ಶಿಫ್ಟ್ ಬೋಟನ್ನು ನೀರಿಗೆ ಎಳೆಯುತ್ತಿರುವ ದೃಶ್ಯಗಳಿವೆ. “ಇದು ಮಜವಾಗಿರಲಿದೆ” ಎಂದು ಅದರಲ್ಲಿ ಅಜಯ್ ದೇವಗನ್ ಹೇಳಿದರೆ. ಬೇರ್ ಗ್ರಿಲ್ಸ್ ಕೂಡ ಹಿಂದಿ ಪದ ಒಂದನ್ನು ಎತ್ತಿಕೊಂಡು “ ಮೈ ಸ್ಟೇಜ್ , ಮೈ ಎಲಕಾ” ಎಂದು ಹೇಳುತ್ತಾರೆ.


ಇನ್​ ಟು ದ ವೈಲ್ಡ್​ ಸರಣಿಯ ಚಿತ್ರೀಕರಣದ ಅನುಭವದ ಬಗ್ಗೆ ಅಜಯ್ ದೇವನ್ ಮಾತನಾಡಿದ್ದು, ತನ್ನನ್ನು “ಸುರಕ್ಷಿತ”ವಾಗಿ ಇಟ್ಟಿರುವುದಕ್ಕೆ ಬೇರ್ ಗ್ರಿಲ್ಸ್‌ಗೆ ಧನ್ಯವಾದ ಹೇಳಿದ್ದಾರೆ.

ಹೇಳಿಕೆಯೊಂದರಲ್ಲಿ ಅಜಯ್ ದೇವಗನ್ “ಕಾಡಿನಲ್ಲಿ ಇದು ನನ್ನ ಮೊದಲ ಸಾಹಸ ಯಾತ್ರೆ ಮತ್ತು ಇದು ಮಕ್ಕಳಾಟವಲ್ಲ ಎಂದು ನಾನು ಹೇಳಬಲ್ಲೆ. ನನ್ನ ಸಾಹಸ ನಿರ್ದೇಶಕರಾಗಿದ್ದರು ಮತ್ತು 30 ವರ್ಷಗಳ ಭಾರತೀಯ ಸಿನಿಮಾರಂಗದಲ್ಲಿನ ನನ್ನ ವೃತ್ತಿ ಜೀವನದಲ್ಲಿ , ಕೆಲವು ಅಪಾಯಕಾರಿ ಸಾಹಸಗಳು ಸೇರಿದಂತೆ ಹಲವಾರು ಪಾತ್ರಗಳನ್ನು ನಿರ್ವಹಿಸಿದ ಅದೃಷ್ಟ ನನ್ನದು. ನಾನು ಆ ಕಲಿಕೆಗಳನ್ನು ಮತ್ತೊಮ್ಮೆ , ಪರೀಕ್ಷೆಗೆ ಒಳಪಡಿಸಬೇಕಾದ ಸಮಯಗಳಲ್ಲಿ ಇದೂ ಕೂಡ ಒಂದಾಗಿದೆ. ಈ ಅವಕಾಶ ನನಗೆ ಒದಗಿ ಬಂದಿದ್ದಕ್ಕಾಗಿ ಸಂತೋಷವಾಗಿದೆ. ಇದು ನನಗೆ ಆನ್ವೇಷಿಸಲು ಮತ್ತು ನನ್ನ ಆರಾಮದ ವಲಯದಿಂದ ಹೊರಗೆ ಹೋಗಲು ಸಹಾಯ ಮಾಡಿದೆ. ನಿಸರ್ಗ ಅನ್ವೇಷಿಸಲು ಮತ್ತು ಅದರೊಂದಿಗೆ ಒಂದು ಅತ್ಯಂತ ಅಗತ್ಯವಾಗಿರುವ ಸಂಬಂಧ ಬೆಳೆಸಿಕೊಳ್ಳಲು ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡುತ್ತಿರುವ ಮತ್ತು ಕಾಡಿನಲ್ಲಿ ನನ್ನನ್ನು ಸುರಕ್ಷಿತವಾಗಿ ಇಟ್ಟ ಬೇರ್ ಗ್ರಿಲ್ಸ್‌ಗೆ ಒಂದು ವಿಶೇಷ ಸೆಲ್ಯೂಟ್. ಹಸಿದ ಕಾಡುಗಳಿಂದ ಹಿಡಿದು ಮಹಾ ಸಾಗರಗಳ ಆಳದವರೆಗೆ ಎಲ್ಲವೂ ಬೇರ್‌ಗೆ ಗೊತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ‘ಮ್ಯಾನ್​ ವರ್ಸಸ್ ವೈಲ್ಡ್‘ ಕಾರ್ಯಕ್ರಮವನ್ನು​​​ ಕನ್ನಡದಲ್ಲೂ ನೋಡುವ ಅವಕಾಶ!

ಇದೇ ಸಂದರ್ಭದಲ್ಲಿ, ಕಾಡಿನ ಸಾಹಸದಲ್ಲಿ ನಟ ಅಜಯ್ ದೇವಗನ್ ಜೊತೆ ಭಾಗವಹಿಸಿದ ಅನುಭದ ಬಗ್ಗೆ ಬೇರ್ ಗ್ರಿಲ್ಸ್ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಹೆಸರಾಂತ ನಟ ಅಜಯ್ ದೇವಗನ್ ಅವರನ್ನು ಕಾಡಿಗೆ ಕರೆದುಕೊಂಡು ಹೋಗಲು ಸಿಕ್ಕಿದ್ದು ನನ್ನ ಅದೃಷ್ಟ. ನಿರ್ಜನ ದ್ವೀಪಗಳಲ್ಲಿ ಬದುಕುಳಿಯುವುದು ಅತ್ಯಂತ ಕಠಿಣ ಮತ್ತು ಅಜಯ್ ನಾವು ಸುರಕ್ಷಿತವಾಗಿ ಹೊರ ಬರಲು ಅಗತ್ಯವಿದ್ದ ಸಂಪೂರ್ಣ ಬದ್ಧತೆ ತೋರಿಸಿದರು. ಅವರು ಬಹಳ ಪ್ರಾಮಾಣಿಕರಾಗಿದ್ದರು ಮತ್ತು ತಮ್ಮ ಜೀವನ ಹಾಗೂ ವೃತ್ತಿಜೀವನದ ಹಲವಾರು ಒಳನೋಟಗಳನ್ನು ಹಂಚಿಕೊಂಡರು ಮತ್ತು ನಾನು ಅದಕ್ಕೆ ಪ್ರಾಮಾಣಿಕವಾಗಿ ಅತ್ಯಂತ ಬೆಲೆ ನೀಡುತ್ತೇನೆ. ನಾನು ಅಜಯ್ ಬಗ್ಗೆ ಅರ್ಥ ಮಾಡಿಕೊಂಡ ಒಂದು ವಿಷಯ ಏನೆಂದರೆ, ಅವರು ಒಬ್ಬ ಬಹಳ ಕಡಿಮೆ ಮಾತಿನ ವ್ಯಕ್ತಿ. ಆದರೆ, ತನ್ನ ಹೃದಯದಲ್ಲಿ ಅಪಾರ ಪ್ರೀತಿ ಮತ್ತು ಸಾಮಥ್ರ್ಯ ಹೊಂದಿರುವ ವ್ಯಕ್ತಿ” ಎಂದು ಬೇರ್ ಗ್ರಿಲ್ಸ್ ಹೇಳಿದ್ದಾರೆ.

ಅಜಯ್ ದೇವಗನ್ ಅವರ ಇನ್​ ಟು ದ ವೈಲ್ಡ್‌ನ ಸಂಚಿಕೆಯ ಬಗ್ಗೆ ಮಾತನಾಡುತ್ತಾ, ಡಿಸ್ಕವರಿಯ ದಕ್ಷಿಣ ಏಷ್ಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮೇಘ ಟಾಟಾ , “ ಬೇರ್ ಗ್ರಿಲ್ಸ್ ಜೊತೆಗಿನ ಇನ್​ ಟು ದ ವೈಲ್ಡ್ ನಮಗೆ ಅತ್ಯಂತ ಮೆಚ್ಚುಗೆಯ ಹಾಗೂ ಪ್ರೀತಿ ಪಾತ್ರ ಸರಣಿ ಮತ್ತು ಹೊಸ ಎಪಿಸೋಡ್‍ಗಳಲ್ಲಿ ಥ್ರಿಲ್ , ಮನರಂಜನೆ ಮತ್ತು ಸಾಹಸ ಸಂಯೋಜನೆಯುಳ್ಳ ಇಬ್ಬರು ವಿಶೇಷ ಸಾಹಸಿಗರನ್ನು ಒಗ್ಗೂಡಿಸುವ ಮೂಲಕ, ಅದನ್ನು ಇನ್ನಷ್ಟು ದೊಡ್ಡದು, ಉತ್ತಮ, ಮತ್ತು ಪ್ರೇಕ್ಷಕರ ಸಂಖ್ಯೆಯನ್ನು ವಿಸ್ತರಿಸುವ ಮಾಡುವ ಗುರಿ ಸ್ಪಷ್ಟವಾಗಿತ್ತು. ಈ ಶೋ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಈ ವಿಶೇಷ ಸೀಸನ್ ಮೂಲಕ ಅದನ್ನು ಇನ್ನಷು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ನಮ್ಮದು” ಎಂದು ಹೇಳಿದರು.

ಇದನ್ನೂ ಓದಿ: Ajay Devgn: ಪೆಪ್ಪರ್​ ಆ್ಯಂಡ್ ಸಾಲ್ಟ್​ ಲುಕ್​ನಲ್ಲಿ ಅಜಯ್ ದೇವಗನ್​: ರಿವೀಲ್​ ಆಯ್ತು ಮೊದಲ ವೆಬ್ ಸರಣಿ ಲುಕ್​..!

ಅಜಯ್ ದೇವಗನ್ ಭಾಗವಹಿಸಿರುವ ಇನ್​ ಟು ದ ವೈಲ್ಡ್ ಎಪಿಸೋಡ್, ಅಕ್ಟೋಬರ್ 22ರಂದು ಮುಂಜಾನೆ 6 ಗಂಟೆಗೆ ಡಿಸ್ಕವರಿ ಪ್ಲಸ್‍ನ ವಿಶೇಷವಾಗಿ ಪ್ರಸಾರವಾಗಲಿದೆ. ಡಿಸ್ಕವರಿ ಮತ್ತು ಅದರ ಲೀನಿಯರ್ ಚಾನೆಲ್‍ಗಳಲ್ಲಿ ಅದು ಅಕ್ಟೋಬರ್ 26ಕ್ಕೆ ಪ್ರಸಾರ ಆಗಲಿದೆ. ಇನ್​ ಟು ದ ವೈಲ್ಡ್ ಸರಣಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಾಂಗ್ಲಾ, ಮಲೆಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯ ಇದೆ.
Published by:Anitha E
First published: