Tanhaji Trailer: ಮಾರಾಠ ಯೋಧ ತಾನಾಜಿಯಾಗಿ ಟ್ರೈಲರ್​ನಲ್ಲಿ ಮಿಂಚಿದ ಅಜಯ್​ ದೇವಗನ್​..!

Tanhaji Trailer: ಕೇವಲ ಪೋಸ್ಟರ್​ಗಳಿಂದಲೇ ಕುತೂಹಲ ಹೆಚ್ಚಿಸಿದ್ದ ತಾನಾಜಿ ಸಿನಿಮಾದ ಟ್ರೈಲರ್ ಈಗ ಬಿಡುಗಡೆಯಾಗಿದೆ. ತಾನಾಜಿ ಪಾತ್ರದಲ್ಲಿಅಜಯ್​ ದೇವಗನ್​ ಎಂಟ್ರಿ ಸಖತ್​ ಕಿಕ್​ ಕೊಡುತ್ತಿದೆ. 

Anitha E | news18-kannada
Updated:November 19, 2019, 6:12 PM IST
Tanhaji Trailer: ಮಾರಾಠ ಯೋಧ ತಾನಾಜಿಯಾಗಿ ಟ್ರೈಲರ್​ನಲ್ಲಿ ಮಿಂಚಿದ ಅಜಯ್​ ದೇವಗನ್​..!
ತಾನಾಜಿ ಸಿನಿಮಾದ ಪೋಸ್ಟರ್​
  • Share this:
'ತಾನಾಜಿ' ಅಜಯ್​ ದೇವಗನ್​ ಅಭಿನಯದ ಬಹು ನಿರೀಕ್ಷಿತ ಐತಿಹಾಸಿಕ ಸಿನಿಮಾ. ಇದೇ ಮೊದಲ ಬಾರಿಗೆ ಅಜಯ್​ ದೇವಗನ್​ಐತಿಹಾಸಿಕ ಪಾತ್ರದಲ್ಲಿ ಅಭಿಯಿಸುತ್ತಿದ್ದು, ಕಾಜೋಲ್​ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೇವಲ ಪೋಸ್ಟರ್​ಗಳಿಂದಲೇ ಕುತೂಹಲ ಹೆಚ್ಚಿಸಿದ್ದ 'ತಾನಾಜಿ' ಸಿನಿಮಾದ ಟ್ರೈಲರ್ ಈಗ ಬಿಡುಗಡೆಯಾಗಿದೆ. 'ತಾನಾಜಿ' ಪಾತ್ರದಲ್ಲಿಅಜಯ್​ ದೇವಗನ್​ ಎಂಟ್ರಿ ಸಖತ್​ ಕಿಕ್​ ಕೊಡುತ್ತಿದೆ.ಮೂರು ನಿಮಿಷ 21 ಸೆಕೆಂಡ್​ ಇರುವ ಟ್ರೈಲರ್​ನಲ್ಲಿ ಅಜಯ್​ ಹಾಗೂ ಕಾಜೋಲ್​ ಎಂದಿನಂತೆ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಉಳಿದಂತೆ ಸೈಫ್​ ಅಲಿಖಾನ್​ ಅವರು ಕಾಣಿಸಿಕೊಳ್ಳುವುದು ಕೇವಲ ಕೆಲವೇ ಸೆಕೆಂಡ್​ ಆದರೂ ನಟನೆ ವಿಷಯದಲ್ಲಿ ಕೊಂಚ ನಿರಾಸೆ ಮೂಡಿಸುತ್ತದೆ. ನಾಲ್ಕು ಗಂಟೆಗಳ ಹಿಂದೆ ಬಿಡುಗಡೆಯಾಗಿರುವ ಈ ಟ್ರೈಲರ್​ಗೆ 56 ಲಕ್ಷ 99 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಜತೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: Sai Pallavi: ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಜಾಹೀರಾತನ್ನು ತಿರಸ್ಕರಿಸಿದ ಸಾಯಿ ಪಲ್ಲವಿ..!

12 ವರ್ಷಗಳ ನಂತರ ಕಾಜೋಲ್​ ಹಾಗೂ ಅಜಯ್​ ದೇವಗನ್​ ಜೊತೆಯಾಗಿ ಅಭಿನಯಿಸುತ್ತಿರುವ ಈ ಸಿನಿಮಾವನ್ನು ಓಂ ರಾವತ್​ ನಿರ್ದೇಶಿಸಿದ್ದಾರೆ. ಅಜಯ್​ ದೇವಗನ್​ ನಿರ್ಮಾಣದ ಈ ಚಿತ್ರವನ್ನು 3ಡಿಯಲ್ಲೂ ನೋಡುವ ಅವಕಾಶ ನಿಮ್ಮದಾಗಲಿದೆ. ‘

Deepika Padukone: ಇನ್​ಸ್ಟಾಗ್ರಾಂನಲ್ಲಿ ಸತ್ಯ ಬಯಲು ಮಾಡಿದ ಕನ್ನಡತಿ: ದೀಪಿಕಾ ಪಡುಕೋಣೆಗೆ ಈ ಡ್ರಗ್​ ಸಿಕ್ಕಾಪಟ್ಟೆ ಮತ್ತೇರಿಸುತ್ತದೆಯಂತೆ..!

 
First published: November 19, 2019, 6:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading