Kiccha Sudeep: ಕಿಚ್ಚನಿಗಾಗಿ ಹಿಂದೆ ಸರಿದ ಬಾಲಿವುಡ್ ಸಿಂಗಂ - ಜುಲೈ 28ಕ್ಕಿಲ್ಲ ಅಜಯ್ ದೇವಗನ್ ಸಿನಿಮಾ ರಿಲೀಸ್​

Sandalwood Film: ಹೌದು, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಅಧಿಕೃತ ಘೋಷಣೆ ಕೂಡ ಆಗಿದ್ದು, ಲಿರಿಕಲ್ ಹಾಡಿನ ಮೂಲಕ ಚಿತ್ರ ಬಹಳ ಸದ್ದು ಮಾಡುತ್ತಿದೆ.

ಕಿಚ್ಚ ಸುದೀಪ್​, ಅಜಯ್​ ದೇವಗನ್​

ಕಿಚ್ಚ ಸುದೀಪ್​, ಅಜಯ್​ ದೇವಗನ್​

  • Share this:
ಕಳೆದ ಒಂದು ತಿಂಗಳ ಹಿಂದೆ ದೇಶದಾದ್ಯಂತ ಅದರಲ್ಲೂ ಚಿತ್ರರಂಗದಲ್ಲಿ (Film Industry) ಹೆಚ್ಚು ಸುದ್ದಿ ಮಾಡಿದ್ದು ರಾಷ್ಟ್ರ ಭಾಷೆ ಹಿಂದಿಯ (Hindi) ಬಗ್ಗೆ. ಅದರಲ್ಲೂ ಸ್ಯಾಂಡಲ್​ ವುಡ್​ (Sandalwood) ಬಾದ್ ಷಾ ಕಿಚ್ಚ ಸುದೀಪ್ (Kiccha Sudeep) ಹಾಗೂ ಬಾಲಿವುಡ್​ ನಟ ಅಜಯ್​ ದೇವಗನ್​ (Ajay Devgan) ನಡುವಿನ ಟ್ವೀಟ್ ಸಮರ ಇದಕ್ಕೆ ಬುನಾದಿಯಾಗಿತ್ತು ಎಂದರೆ ತಪ್ಪಲ್ಲ. ಈ ಇಬ್ಬರು ನಟರ ನಡುವೆ ಹಾಗೂ ಅಭಿಮಾನಿಗಳ ನಡುವೆ ಸಹ ವಾದ ವಿವಾದಗಳು ನಡೆದಿದ್ದವು. ಈ ಮಧ್ಯೆ ಇಬ್ಬರು ನಾಯಕರ ಚಿತ್ರ ಸಹ ಒಂದೇ ದಿನ ಬಿಡುಗಡೆಯಾಗಬೇಕಿತ್ತು. ಆದರೆ ಅಜಯ್ ದೇವಗನ್​ ಹಿಂದೆ ಸರಿದಿದ್ದಾರೆ.  

ಹೌದು, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಅಧಿಕೃತ ಘೋಷಣೆ ಕೂಡ ಆಗಿದ್ದು, ಲಿರಿಕಲ್ ಹಾಡಿನ ಮೂಲಕ ಚಿತ್ರ ಬಹಳ ಸದ್ದು ಮಾಡುತ್ತಿದೆ. ಅದೇ ಸಮಯದಲ್ಲಿ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರ ಕೂಡ ರಿಲೀಸ್ ಆಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಇದು ಅಜಯ್ ಮತ್ತು ಕಿಚ್ಚ ಚಿತ್ರದ ಮೂಲಕ ಪೈಪೋಟಿ ಮಾಡುತ್ತಿದ್ದಾರೆ ಎಂಬ ಸುದ್ದಿಗಳಿಗೆ ಕಾರಣವಾಗಿತ್ತು. ಆದರೆ ಇದೀಗ ಅಜಯ್ ದೇವಗನ್ ಹಿಂದೆ ಸರಿದಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಚಿತ್ರಗಳ ನಡುವೆ ಜಿದ್ದಾ ಜಿದ್ದಿ ಬೇಡ ಎಂದು ಥ್ಯಾಂಕ್ ಗಾಡ್ ಚಿತ್ರತಂಡ ನಿರ್ಧರಿಸಿದ್ದು, ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದೆ. ಸದ್ಯ ಚಿತ್ರ ಬಿಡುಗಡೆಯ ಯಾವುದೇ ಅಧಿಕೃತ ದಿನಾಂಕವನ್ನು ನಿಗಧಿಮಾಡಲಾಗಿಲ್ಲ.

ಹಿಂದಿ ರಾಷ್ಟ್ರಭಾಷೆಯಲ್ಲ ಎಂದಿದ್ದ ಕಿಚ್ಚ

ಕಳೆದ ತಿಂಗಳು ಕಿಚ್ಚ ಸುದೀಪ್ ಕನ್ನಡ ಸಿನಿಮಾ ಹಾಗೂ ಸೌತ್ ಇಂಡಿಯಾ ಸಿನಿಮಾಗಳು ಪ್ಯಾನ್ ಇಂಡಿಯಾ ಹಿಟ್ ಆಗುತ್ತಿದೆ. ಆದರೆ ಹಿಂದಿ ಸಿನಿಮಾಗಳು ಸೌತ್‌ನಲ್ಲಿ ಯಶಸ್ಸು ಪಡೆಯಲು ಹೆಣಗಾಡುತ್ತಿವೆ. ಸೌತ್‌ ಇಂಡಿಯಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿವೆ, ಆದರೆ ಹಿಂದಿ ಸಿನಿಮಾಗಳು ತಮಿಳು, ತೆಲುಗಿನಲ್ಲಿ ಡಬ್‌ ಆಗುತ್ತಿದೆ. ಹೀಗಾಗಿ ಹಿಂದಿ ಇನ್ನು ಮುಂದೆ ರಾಷ್ಟ್ರಭಾಷೆಯಲ್ಲ ಎಂದಿದ್ದರು.

ಇದನ್ನೂ ಓದಿ: ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲಿ ರಶ್ಮಿಕಾ, ಏನ್ ಸಖತ್ತಾಗಿ ರೆಡಿ ಆಗಿದಾರೆ ನೋಡಿ

ಸುದೀಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಟ ಅಜಯ್ ದೇವಗನ್, “ಸಹೋದರ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವೇ? ಅಲ್ಲ ಎಂದಾದರೆ ನೀವು ನಿಮ್ಮ ಮಾತೃಭಾಷೆಯ ಚಲನಚಿತ್ರಗಳನ್ನು ಹಿಂದಿಯಲ್ಲಿ ಏಕೆ ಡಬ್ ಮಾಡಿ, ಬಿಡುಗಡೆ ಮಾಡುತ್ತೀರಿ? ಅಂತ ಪ್ರಶ್ನಿಸಿದ್ದರು. ಅಲ್ಲದೇ, “ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರೀಯ ಭಾಷೆಯಾಗಿತ್ತು, ಮತ್ತು ಯಾವಾಗಲೂ ಅದು ರಾಷ್ಟ್ರ ಭಾಷೆಯಾಗಿಯೇ ಇರುತ್ತದೆ ಎಂದು ಹೇಳಿದ್ದರು. ಇಲ್ಲಿಂದ ವಿವಾದದ ಕಿಡಿ ಹೊತ್ತಿಕೊಂಡು ರಾಷ್ಟ್ರದಾದ್ಯಂತ ಭಾರೀ ಚರ್ಚಗೆ ಗ್ರಾಸವಾಗಿತ್ತು.

ನಂತರ ಅಜಯ್ ದೇವಗನ್​ ನೀವು ನನ್ನ ಸ್ನೇಹಿತ, ಈ ವಿಚಾರವನ್ನು ಇಲ್ಲಿಗೆ ಬಿಟ್ಟಿದ್ದಕ್ಕೆ ಧನ್ಯವಾದಗಳು. ತಪ್ಪು ತಿಳುವಳಿಕೆಯಿಂದ ಹೀಗಾಯ್ತು. ಚಿತ್ರರಂಗ ಒಂದಾಗಬೇಕು, ನಾವು ಎಲ್ಲರನ್ನೂ ಗೌರವಿಸುತ್ತೇವೆ” ಅಂತ ವಿವಾದಕ್ಕೆ ಇತಿಶ್ರೀ ಹಾಡಿದ್ರು.

3ಡಿಯಲ್ಲಿ ವಿಕ್ರಾಂತ್ ರೋಣ

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ.

ಇದನ್ನೂ ಓದಿ: ತೆಲುಗಿನಲ್ಲಿ ಯಶ್​ ಅಭಿನಯದ ಲಕ್ಕಿ ಚಿತ್ರ - ಬರೋಬ್ಬರಿ 10 ವರ್ಷದ ನಂತರ ಡಬ್​ ಆಯ್ತು ಸಿನಿಮಾ

ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.
Published by:Sandhya M
First published: