Video: ಅರ್ಧ ರಾತ್ರಿ ಕೊರೆವ ನೀರಿನ ಕೊಳಕ್ಕೆ ಜಿಗಿದ ಅಜಯ್​ ದೇವಗನ್​!

news18
Updated:July 24, 2018, 2:47 PM IST
Video: ಅರ್ಧ ರಾತ್ರಿ ಕೊರೆವ ನೀರಿನ ಕೊಳಕ್ಕೆ ಜಿಗಿದ ಅಜಯ್​ ದೇವಗನ್​!
news18
Updated: July 24, 2018, 2:47 PM IST
ನ್ಯೂಸ್​ 18 ಕನ್ನಡ 

ಬಿ-ಟೌನ್​ನ ಸಿಂಗಂ ಎಂದೇ ಖ್ಯಾತಿ ಪಡೆದಿರುವ ನಟ ಅಜಯ್​ ದೇವಗನ್​ ಅರ್ಧ ರಾತ್ರಿ ಕೊರೆವ ಚಳಿಯಲ್ಲಿ ಉಸಿರುಗಟ್ಟಿಸುವಷ್ಟು ತಣ್ಣಗಿದ್ದ ನೀರಿನ ಕೊಳದಲ್ಲಿ ಜಿಗಿದಿದ್ದಾರೆ. ಅವರು ಹೀಗೆ ಮಾಡಲು ಒಂದು ಕಾರಣವಿದೆ. ಅವರ ಆಪ್ತರೊಬ್ಬರು ಹೇಳಿದರೆಂದು ಅವರು ಹೀಗೆ ಮಾಡಿದ್ದಾರಂತೆ. ಇದಾದ ನಂತರ ಏನಾಗಿತ್ತು ಗೊತ್ತಾ? ಆಸಕ್ತಿಕರ ಮಾಹಿತಿಗಾಗಿ ಈ ವರಿದಿ ಓದಿ.

ಅಜಯ್​ ಹೀಗೆ ಅರ್ಧರಾತ್ರಿ ಕೊರೆಯ ನೀರಿನ ಕೊಳಕ್ಕೆ ಜಿಗಿದು ಬರೋಬ್ಬರಿ 7 ವರ್ಷಗಳೇ ಕಳೆದಿವೆ. 7 ವರ್ಷಗಳ ಹಿಂದೆ ಅಂತಹದ್ದೇನಾಗಿತ್ತು ಅಜಯ್​ ಈ ರೀತಿ ಮಾಡಲು? ಅವರಿಗೆ ಹೀಗೆ ಮಾಡಲು ಹೇಳಿದ್ದವರಾದರೂ ಯಾರು? ಅದಕ್ಕೆಲ್ಲ ಇಲ್ಲಿದೆ ಉತ್ತರ.

ಅಜಯ್​ 'ಸಿಂಗಂ' ಸಿನಿಮಾದಲ್ಲಿ ಅಭಿನಯಿಸಿ 7 ವರ್ಷಗಳು ಕಳೆದಿದೆ. ಸಿನಿಮಾ 7 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇತ್ತೀಚೆಗೆ ನಿರ್ದೇಶಕ ರೋಹಿತ್​ ಶೆಟ್ಟಿ ತಮ್ಮ ಟ್ವಿಟರ್​ನಲ್ಲಿ ಈ ಕುರಿತು ಪೋಸ್ಟ್​ ಮಾಡಿದ್ದರು.

 ಅಜಯ್​ ಹಾಗೂ ರೋಹಿತ್​ 'ಗೋಲ್​ಮಾಲ್​', 'ಗೋಲ್​ಮಾಲ್​ ರಿಟರ್ನ್ಸ್​', 'ಆಲ್​ ದ ಬೆಸ್ಟ್​' ,'ಗೋಲ್​ಮಾಲ್​ ಅಗೈನ್​' ಸೇರಿದಂತೆ ಹಲವಾರು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಈ ಜೋಡಿಯ 'ಸಿಂಗಂ' ಸಿನಿಮಾ ಸಹ ಬಾಕ್ಸಾಫಿಸ್​ನಲ್ಲಿ ಭಾರೀ ಸದ್ದು ಮಾಡಿತ್ತು.

ಈ ಸಿನಿಮಾದಲ್ಲಿ ಅಜಯ್​ ದೇವಗನ್​ ಎಂಟ್ರಿ ದೃಶ್ಯಕ್ಕಾಗಿ ಒಂದು ವಿಶೇಷ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು. ಅದು ಸಿನಿಮಾದಲ್ಲಿ ಹಿಟ್​ ಆಗಿತ್ತಾದರೂ, ಅದರ ಹಿಂದಿನ ಕೆಲವೊಂದು ಸ್ವಾರಸ್ಯಕರ ಸುದ್ದಿಯನ್ನು ನಿಮಗೆ ತಿಳಿಸುತ್ತೇವೆ.

ಈ ಸಿನಿಮಾದ ಎಂಟ್ರಿ ದೃಶ್ಯವನ್ನು ಮುಂಬೈನ ಪಂಚಗನಿ ಗಿರಿಧಾಮದ ಕೊಳದಲ್ಲಿ ಚಿತ್ರೀಕರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅದೂ ಸಹ ರಾತ್ರಿವೇಳೆ. ಕೊರೆವ ಚಳಿಯಲ್ಲಿ ಅಜಯ್​ ಕೇವಲ ಕಚ್ಚೆ ಧರಿಸಿ, ಉಸಿರುಗಟ್ಟಿಸುವಷ್ಟು ತಣ್ಣಗಿನ ಕೊಳದ ನೀರಿಗೆ ಇಳಿಯಬೇಕಿತ್ತು. ರೋಹಿತ್​ ಹೇಳಿದ ಒಂದೇ ಒಂದು ಮಾತಿಗೆ ಅಜಯ್​ ಅದೆಷ್ಟು ಟೇಕ್​ಗಳನ್ನು ತೆಗೆದುಕೊಂಡಿದ್ದರೋ ಗೊತ್ತಿಲ್ಲ. ಆದರೆ ಅಂದು ಅವರು ಮಾಡಿದ ಕೆಲಸ ಮಾಡಲು ನಿಜವಾಗಿಯೂ ಧಮ್​ ಇರಬೇಕಷ್ಟೆ.

 

 
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626