• Home
  • »
  • News
  • »
  • entertainment
  • »
  • Kantara: ಟ್ಯೂನ್ ಕದ್ದಿದ್ದಲ್ಲ! ಕಾಂತಾರ ಸಾಂಗ್ ಕಾಪಿ ಬಗ್ಗೆ ಅಜನೀಶ್ ಹೇಳಿದ್ದಿಷ್ಟು

Kantara: ಟ್ಯೂನ್ ಕದ್ದಿದ್ದಲ್ಲ! ಕಾಂತಾರ ಸಾಂಗ್ ಕಾಪಿ ಬಗ್ಗೆ ಅಜನೀಶ್ ಹೇಳಿದ್ದಿಷ್ಟು

ಕಾಂತಾರ ಸಿನಿಮಾ

ಕಾಂತಾರ ಸಿನಿಮಾ

ಕಾಂತಾರ ಸಿನಿಮಾದ ಹಾಡುಗಳ ಟ್ಯೂನ್ ಕಾಪಿ ಮಾಡಿದ ಆರೋಪ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಕೊನೆಗೂ ಅಜನೀಶ್ ಲೋಕನಾಥ್ ತಮ್ಮ ವಿರುದ್ಧ ಬಂದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರ (Kantara) ಸಿನಿಮಾ (Cinema) ಸೂಪರ್ ಹಿಟ್ ಆಗಿದೆ. ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಗಳಿಸುತ್ತಿರುವುದರ ಜೊತೆಗೆ ಸಿನಿಮಾ ಬಾಕ್ಸ್ ಆಫೀಸ್ ಹಿಟ್ (Box Office Hit) ಕೂಡಾ ಹೌದು. 11 ದಿನಗಳಲ್ಲಿ ಸಿನಿಮಾ ಈಗಾಗಲೇ 50 ಕೋಟಿ ಕ್ಲಬ್ ಸೇರಿದೆ. ಶೀಘ್ರದಲ್ಲಿಯೇ ಸಿನಿಮಾ 100 ಕೋಟಿ ಕ್ಲಬ್ ಸೇರುವ ಎಲ್ಲ ಸಾಧ್ಯತೆಗಳಿವೆ. ಸಿನಿಮಾ ಸಕ್ಸಸ್ ಮಧ್ಯೆ ಸುದ್ದಿಯಾಗಿರುವುದು ಅದರ ಹಾಡುಗಳು. ಸಿನಿಮಾದಲ್ಲಿ ಹೆಚ್ಚು ಹಾಡುಗಳನ್ನು ಬಳಸಿಲ್ಲ. ಬಳಸಿದ್ದು 2 ಸಾಂಗ್ ಮಾತ್ರ ಆಗಿದ್ದರೂ ಈ ಸಾಂಗ್ ಕೂಡಾ ಟ್ಯೂನ್​ ಕಾಪಿ (Tune Copied) ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೌದು ಕಳೆದ ಕೆಲವು ದಿನಗಳಿಂದ ಕಾಂತಾರ ಸಿನಿಮಾ ಹಾಡುಗಳ  (Cinema Song) ಟ್ಯೂನ್ ಕಾಪಿ ಎನ್ನುವುದೇ ಸುದ್ದಿ. ಬಹಳಷ್ಟು ಜನರು ಈ ಹಾಡಿನ ಟ್ಯೂನ್ ಹೋಲುವ ಮಲಯಾಳಂ (Malayalam) ಹಾಗೂ ಮರಾಠಿ ಹಾಡುಗಳ ಒರಿಜಿನಲ್ ಕ್ಲಿಪ್​ಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಈಗ ಸಿನಿಮಾದ ಸಾಂಗ್ ಕಾಪಿ ಗದ್ದಲ ಶುರುವಾಗಿದೆ. ಈ ಬಗ್ಗೆ ಸಂಗೀತ ಸಂಯೋಜಿಸಿದ ಅಜನೀಶ್ ಲೋಕನಾಥ್ (Ajaneesh Loknath) ಅವರು ಈಗ ಪ್ರತಿಕ್ರಿಯಿಸಿದ್ದಾರೆ.


ಏನು ಆರೋಪ?


ಅಜನೀಶ್ ಅವರು ಕಾಂತಾರದಲ್ಲಿ ಬಳಸಿದ ಹಾಡಿಗೆ ಟ್ಯೂನ್ ಕಂಪೋಸ್ ಮಾಡುವಾಗ ಮಲಯಾಳಂ ಹಾಗೂ ಮರಾಠಿ ಹಾಡುಗಳ ಟ್ಯೂನ್ ಕದ್ದಿದ್ದಾರೆ ಎನ್ನುವುದು ಪ್ರೇಕ್ಷಕರ ಆರೋಪ. ಎರಡೂ ಸಾಂಗ್ ಟ್ಯೂನ್ ಕೂಡಾ ಅವುಗಳ ಮೂಲಭಾಷೆಯಲ್ಲಿ ಸೇಮ್ ಟ್ಯೂನ್ ಹೊಂದಿದೆ ಎಂದು ಹೇಳಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಪುರಾವೆಗಳು ಕೂಡಾ ವೈರಲ್ ಆಗಿವೆ.




ಆಲ್ಬಂ ಮಾಡಿದವರೇ ಸುಮ್ಮನಿದ್ದಾರೆ!


ತಮ್ಮ ವಿರುದ್ಧ ಬಂದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅಜನೀಶ್ ಅವರು ಆಲ್ಬಂ ಸಾಂಗ್ ಮಾಡಿದರು ಈ ಬಗ್ಗೆ ಏನೂ ಹೇಳಿಲ್ಲ. ಯಾಕೆಂದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಯಾವುದು ಕಾಪಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಲ್ಲ ಸಾಮರ್ಥ್ಯವಿದೆ. ನವರಸಂ ಹಾಗೂ ಕಾಂತಾರದ ಹಾಡಿಗೆ ಸಾಮ್ಯತೆ ಇರಬಹುದು. ಹಾಗಾಗಿ ಇದು ಕಾಪಿ ಎನಿಸಬಹುದು ಎಂದಿದ್ದಾರೆ.




ಇದನ್ನೂ ಓದಿ: Kantara: 'ಸಿಂಗಾರ ಸಿರಿಯೇ'ನೂ ಕದ್ದ ಟ್ಯೂನಾ? ವಿಡಿಯೋ ನೋಡಿ ನೀವೇ ಡಿಸೈಡ್​ ಮಾಡಿ ಅಂತಿದ್ದಾರೆ ನೆಟ್ಟಿಗರು!


ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ಇನ್‌ಸ್ಪೈರ್


ವರಹ ರೂಪಂ ಮತ್ತು ನವರಸಂ ಹಾಡುಗಳ ಸಂಯೋಜನೆ ಎರಡೂ ಕೂಡಾ ವಿಭಿನ್ನ. ಆ ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ಇನ್‌ಸ್ಪೈರ್ ಆಗಿದ್ದೇವೆ. ಆದರೆ ಆದರೆ ನಮ್ಮ ಹಾಡಿನ ಸಂಯೋಜನೆ ಅದರಂತೆ ಇಲ್ಲ. ಭಿನ್ನವಾಗಿದೆ. ಸ್ಟೈಲ್ ವಿಚಾರದಲ್ಲಿ 'ವರಹ ರೂಪಂ' ಸಾಂಗ್‌ ಕೇಳಿ ಇನ್‌ಸ್ಪೈರ್ ಆಗಿರೋದು ನಿಜ. ಅದು ಯಾವ ರೀತಿ ಅಂದರೆ ಬರೀ ಸ್ಟೈಲ್‌. ಅದು ಬಿಟ್ಟು ಅದಕ್ಕು ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ ಅಜನೀಶ್.




ಇದನ್ನೂ ಓದಿ: Kantara: ಕಾಂತಾರ ಸಿನಿಮಾದ ವರಾಹ ರೂಪಂ ಟ್ಯೂನ್ ಕಾಪಿ ಮಾಡಿದ್ದಾ? ಮಲಯಾಳಂನ ಹಳೆ ಆಡಿಯೋ ಈಗ ವೈರಲ್


ಕೆಲವೊಮ್ಮೆ ಇಂಗ್ಲಿಷ್ ಸಾಂಗ್ ಕೇಳಿ ನಾವು ಈ ಥರಾ ಒಂದು ಸಾಂಗ್ ಮಾಡಬೇಕು ಎಂದುಕೊಳ್ಳುತ್ತೀವಿ ಅಲ್ವಾ? ಅದೇ ರೀತಿ ಇದನ್ನು ಕೇಳಿ ಈ ಸ್ಟೈಲ್​ನಲ್ಲಿ ಸಾಂಗ್ ಮಾಡಬೇಕು ಎಂದುಕೊಂಡೆವು. ಇದು ಕಾಪಿಯಲ್ಲ. ಇವೆರಡರಲ್ಲಿ ಬಳಸಿದ ರಾಗ ಒಂದೇ ಆದ ಕಾರಣ ಕೇಳುಗರಿಗೆ ಹಾಗೆ ಅನಿಸಬಹುದು ಎಂದಿದ್ದಾರೆ.




ಕಾಪಿ ಅಂತ ಅನಿಸೋದ್ಯಾಕೆ?


ಹಾಡಿನ ರಾಗ ಹಾಗೂ ವೇಗ ಒಂದೇ ರೀತಿ ಆದ ಕಾರಣ ಅದು ಕಾಪಿ ಎಂದು ಅನಿಸುತ್ತದೆ. ನವರಸಂ ಕೇಳಿದಾಗ ಅದ್ಭುತವಾಗಿದೆ ಎಂದು ಅನಿಸಿತ್ತು. ಆಗಲೇ ಆ ಸ್ಟೈಲ್​ನಲ್ಲಿ ಹಾಡು ಮಾಡಬೇಕೆನಿಸತ್ತು ಎಂದಿದ್ದಾರೆ.




ಹೊಂಬಾಳೆ ಪ್ರೊಡಕ್ಷನ್ ನಿರ್ಮಿಸಿದ​ ಕಾಂತಾರ ಸಿನಿಮಾ ದೇಶ-ವಿದೇಶಗಳಲ್ಲಿ ಸುದ್ದಿಯಾಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಈ ಮ್ಯೂಸಿಕ್​ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

Published by:Divya D
First published: