ಬೆಂಗಳೂರಿನ (Bengaluru) ಕಾಮಿಡಿಯನ್ ‘ಅಯ್ಯೋ’ ಶ್ರದ್ಧಾ (Aiyyo Shraddha) ಎಂದರೆ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ? ಏಕೆಂದರೆ ಈ ಇನ್‌ಸ್ಟಾಗ್ರಾಮ್ ಇನ್‌ಫ್ಲ್ಯೂನ್ಸರ್ ಶ್ರದ್ಧಾ ಜೈನ್ ಈ ಐಟಿ ಕಂಪನಿಗಳು ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ಕೆಲಸದಿಂದ ವಜಾ ಗೊಳಿಸಿದ್ದರ ಬಗ್ಗೆ ಮಾಡಿದ ಒಂದು ಕಾಮಿಡಿ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಬೆಂಗಳೂರಿನಲ್ಲಿ ನೆಲೆಸಿರುವ ಶ್ರದ್ಧಾ ಜೈನ್ ಸೋಷಿಯಲ್ ಮೀಡಿಯಾದಲ್ಲಿ 'ಅಯ್ಯೋ ಶ್ರದ್ಧಾ' ಎಂದು ತುಂಬಾನೇ ಪ್ರಸಿದ್ಧರಾಗಿದ್ದಾರೆ. ಅಯ್ಯೋ ಶ್ರದ್ಧಾ ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವರು ಲಿಂಕ್ಡ್ಇನ್ ನಲ್ಲಿ 83,000 ಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿದ್ದಾರೆ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಅವರು 6.88 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ.
ಅಯ್ಯೋ ಶ್ರದ್ಧಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋಗಳನ್ನು ಸದಾ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ರು ಶ್ರದ್ದಾ
ಶ್ರದ್ಧಾ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈಗ ಈಕೆ ಮತ್ತೊಬ್ಬ ರಾಜಕಾರಿಣಿ ಜೊತೆ ಕೂತು ಟಿಫಿನ್ ಮಾಡಿದ್ದಾರೆ ನೋಡಿ.
ಬೆಂಗಳೂರಿನಲ್ಲಿ ನಡೆದ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಸ್ (ಎಫ್ಎಂಸಿಬಿಜಿ) ಸಭೆಯಲ್ಲಿ ಭಾಗವಹಿಸಲು ಯುಕೆಯ ಖಜಾನೆಯ ಚಾನ್ಸಲರ್ ಜೆರೆಮಿ ಹಂಟ್ ಈ ವಾರದ ಆರಂಭದಲ್ಲಿ ಭಾರತಕ್ಕೆ ಆಗಮಿಸಿದ್ದರು. ಫೆಬ್ರವರಿ 24 ಮತ್ತು 25 ರಂದು ನಡೆಯಲಿರುವ ಜಿ20 ಎಫ್ಎಂಸಿಬಿಜಿ ಸಭೆಗೆ ಮುಂಚಿತವಾಗಿ, ಹಂಟ್ ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ತಮ್ಮ ಭಾರತೀಯ ಸಹವರ್ತಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದರು.
ಬೆಂಗಳೂರಿನ ವಿಪ್ರೋ ಕ್ಯಾಂಪಸ್ ಗೆ ಭೇಟಿ ನೀಡಿದ್ರಂತೆ ಬ್ರಿಟಿಷ್ ಹಣಕಾಸು ಸಚಿವ
ಬ್ರಿಟಿಷ್ ಹಣಕಾಸು ಸಚಿವರು ವಿಪ್ರೋ ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್ ಜಿ ಅವರೊಂದಿಗೆ ವಿಪ್ರೋದ ಬೆಂಗಳೂರು ಕ್ಯಾಂಪಸ್ ಗೆ ಭೇಟಿ ನೀಡಿದರು. ನಂತರ ಅವರು ಭಾರತ-ಯುಕೆ ಸಹಭಾಗಿತ್ವದ ಬಗ್ಗೆ ಚಾಟ್ ಮಾಡಲು ಜನಪ್ರಿಯ ಇನ್‌ಸ್ಟಾಗ್ರಾಮ್ ಕಾಮಿಡಿಯನ್ ಶ್ರದ್ಧಾ ಜೈನ್ ಅವರನ್ನು ಭೇಟಿಯಾದರು.
ಹಂಟ್ ಅವರು ವಿಪ್ರೋ ಕ್ಯಾಂಪಸ್ ಗೆ ಭೇಟಿ ನೀಡಿದ ಫೋಟೋಗಳನ್ನು ಯುಕೆ ಹಣಕಾಸು ಸಚಿವಾಲಯ ಹಂಚಿಕೊಂಡಿದೆ. ಅಲ್ಲಿ ಅವರನ್ನು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜಿ ಸ್ವಾಗತಿಸಿದರು. ಟೆಕ್ ಪವರ್ ಹೌಸ್ ಆಗಿ ಯುಕೆಯ ಸ್ಥಾನದ ಬಗ್ಗೆ ಚರ್ಚಿಸಲು ಹಂಟ್ ಉದ್ಯೋಗಿಗಳು ಮತ್ತು ಹಿರಿಯ ನಾಯಕರನ್ನು ಭೇಟಿಯಾದರು.
ಬ್ರಿಟಿಷ್ ಹಣಕಾಸು ಸಚಿವರು ಶ್ರದ್ಧಾ ಜೊತೆ ಟಿಫಿನ್ ಮಾಡಿದ್ರು
ಕಾಮಿಡಿಯನ್ ಶ್ರದ್ಧಾ ಜೈನ್ ಅವರೊಂದಿಗೂ ಬ್ರಿಟಿಷ್ ಹಣಕಾಸು ಸಚಿವರು ಮಾತನಾಡಿ ಅವರ ಜೊತೆ ಒಂದು ಪ್ಲೇಟ್ ಮಸಾಲಾ ದೋಸೆ ಮತ್ತು ವಡಾ ಸೇವಿಸಿದರು. ಈ ತಿಂಗಳಲ್ಲಿ ಶ್ರದ್ಧಾ ಜೈನ್ ಅವರು ಉನ್ನತ ನಾಯಕರೊಂದಿಗೆ ನಡೆಸುತ್ತಿರುವ ಎರಡನೇ ಸಭೆ ಇದಾಗಿದೆ. ಫೆಬ್ರವರಿ 13 ರಂದು ಅವರು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.
ಇದನ್ನೂ ಒದಿ: Shraddha: ಸ್ಟ್ಯಾಂಡಪ್ ಕಾಮಿಡಿಯನ್ ನೋಡಿ 'ಅಯ್ಯೋ' ಎಂದು ಕರೆದ ಪ್ರಧಾನಿ ಮೋದಿ, ಖುಷಿಯಲ್ಲಿ 'ಅಯ್ಯಯೋ' ಎಂದ ಶ್ರದ್ಧಾ!
ಜಿ 20 ಭಾರತೀಯ ಆರ್ಥಿಕತೆಯ ಚೈತನ್ಯದಿಂದ ಸ್ಫೂರ್ತಿ ಪಡೆಯುತ್ತದೆ ಮತ್ತು ಜಾಗತಿಕ ಭೂದೃಶ್ಯದಲ್ಲಿ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಮರಳಿ ತರಲು ಕೆಲಸ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭರವಸೆ ವ್ಯಕ್ತಪಡಿಸಿದರು.
ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಗಳ ಜಿ 20 ಸಭೆಗೆ ನೀಡಿದ ವೀಡಿಯೋ ಸಂದೇಶದಲ್ಲಿ, ಹವಾಮಾನ ಬದಲಾವಣೆ ಮತ್ತು ಹೆಚ್ಚಿನ ಸಾಲದ ಮಟ್ಟಗಳಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು ಬಲಪಡಿಸುವ ಅಗತ್ಯವನ್ನು ಪ್ರಧಾನಿ ಅವರು ಒತ್ತಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ