Instagramನಲ್ಲಿ ‘ಧನುಷ್‘ ಹೆಸರನ್ನು ತೆಗೆದು ಹಾಕಿದ ಐಶ್ವರ್ಯಾ! ಹೀಗ್ಯಾಕೆ ಮಾಡಿದರು ಗೊತ್ತಾ ರಜಿನಿ ಪುತ್ರಿ?

ಈ ಮೊದಲು 'ಐಶ್ವರ್ಯ ಆರ್ ಧನುಷ್' ಎಂಬ ಹೆಸರನ್ನು ಬಳಸಿದ್ದರೆ, ಈಗ ನೀವು ಅವರ ಪ್ರೊಫೈಲ್‌ಗಳಲ್ಲಿ 'ಐಶ್ವರ್ಯಾ ರಜನಿಕಾಂತ್' ಎಂಬ ಹೆಸರನ್ನು ನೋಡಬಹುದಾಗಿದೆ.

ಐಶ್ವರ್ಯಾ ರಜಿನಿಕಾಂತ್

ಐಶ್ವರ್ಯಾ ರಜಿನಿಕಾಂತ್

 • Share this:
  ಮೊನ್ನೆ ತಾನೇ ಬಂದ ಒಂದು ಸುದ್ದಿಯಲ್ಲಿ ನಟ ಧನುಷ್ (Actor Dhanush) ಅವರು ಐಶ್ವರ್ಯಾ (Aishwaryaa)  ಅವರಿಗೆ ಅವರ ಹೊಸ ಮ್ಯೂಸಿಕ್ ವಿಡಿಯೋ (New Music Video) ಬಿಡುಗಡೆಗೆ ಟ್ವಿಟ್ಟರ್‌ನಲ್ಲಿ (Twitter) ಅವರಿಗೆ ಶುಭ ಹಾರೈಸಿದ್ದರು. ಅದಕ್ಕೆ ಐಶ್ವರ್ಯಾ ಸಹ ಧನುಷ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಇದನ್ನು ನೋಡಿದ ಅಭಿಮಾನಿಗಳು (Fans) ಇಬ್ಬರಿಗೂ ಮರಳಿ ಮನಸ್ಸಾಗಿದೆ ಅಂತ ತಿಳಿದುಕೊಂಡಿದ್ದರು. ಇದೀಗ ಮಾಜಿ ದಂಪತಿಗಳು ಮತ್ತೆ ಹೊಸ ವಿಷಯವೊಂದಕ್ಕೆ ಮತ್ತೆ ಸುದ್ದಿಯಾಗಿದ್ದಾರೆ ನೋಡಿ. ಈಗ ಸುದ್ದಿಯಾಗಿರುವುದು ಇವರ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟಿದೆ ಎಂದು ಹೇಳಬಹುದು. ತಮ್ಮ ಪತಿ ಧನುಷ್ ಅವರಿಂದ ಬೇರ್ಪಟ್ಟ ಸುಮಾರು ಎರಡು ತಿಂಗಳ ನಂತರ ಚಲನಚಿತ್ರ ನಿರ್ಮಾಪಕಿ ಐಶ್ವರ್ಯಾ ರಜನಿಕಾಂತ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ (Social Media) ತಮ್ಮ ಹೆಸರನ್ನು (Name) ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಬಹುದು.

  ಐಶ್ವರ್ಯಾ ಧನುಷ್ ಅಲ್ಲ, ಐಶ್ವರ್ಯಾ ರಜಿನಿಕಾಂತ್!

  ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಮೊದಲು 'ಐಶ್ವರ್ಯ ಆರ್ ಧನುಷ್' ಎಂಬ ಹೆಸರನ್ನು ಬಳಸಿದ್ದರೆ, ಈಗ ನೀವು ಅವರ ಪ್ರೊಫೈಲ್‌ಗಳಲ್ಲಿ 'ಐಶ್ವರ್ಯಾ ರಜನಿಕಾಂತ್' ಎಂಬ ಹೆಸರನ್ನು ನೋಡಬಹುದಾಗಿದೆ. ಐಶ್ವರ್ಯಾ ಅವರು ಹಿರಿಯ ನಟ ರಜನಿಕಾಂತ್ ಅವರ ಮಗಳು ಎಂಬುದಂತೂ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದ್ದು, ಆಕೆ ತನ್ನ ತಂದೆಯ ಹೆಸರನ್ನು ತನ್ನ ಹೆಸರಿನೊಂದಿಗೆ ಮತ್ತೊಮ್ಮೆ ಜೋಡಿಸಿಕೊಂಡಿದ್ದಾಳೆ ಎಂದು ಹೇಳಬಹುದು.

  ಅಭಿಮಾನಿಗಳಿಂದ ವಿವಿಧ ರೀತಿಯ ಪ್ರತಿಕ್ರಿಯೆ

  ಐಶ್ವರ್ಯಾ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದನ್ನು ನೋಡಿದ ಇವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಹೇಗೆಲ್ಲಾ ಪ್ರತಿಕ್ರಿಯಿಸಿದ್ದಾರೆ ನೋಡಿ. "ಮೇಡಂ ನಿಮ್ಮ ಹೆಸರನ್ನು ಏಕೆ ಬದಲಾಯಿಸಿಕೊಂಡಿದ್ದೀರಾ.. ಇದನ್ನು ನೋಡುವುದು ತುಂಬಾನೇ ನೋವಿನ ಸಂಗತಿ. ನಿಮಗೆ ನಿಮ್ಮದೇ ಆದ ಅನೇಕ ಕಾರಣಗಳು ಇರುತ್ತವೆ ಎಂದು ನಮಗೆ ಅರ್ಥವಾಗುತ್ತದೆ ಮತ್ತು ಈ ಸಂಬಂಧದಲ್ಲಿ ನೀವು ನೋವನ್ನು ಅನುಭವಿಸಿರಬಹುದು" ಎಂದು ಒಬ್ಬರು ಬರೆದಿದ್ದಾರೆ.

  ಇದನ್ನೂ ಓದಿ: Kacha Badam ಅಲ್ಲ, ಈಗ 'Rock' ಬಾದಾಮ್! 'ರಾಕ್‌ಸ್ಟಾರ್' ಲುಕ್‌ನಲ್ಲಿ ಮಿಂಚಿದ ಗಾಯಕ ಭುವನ್ ಬಡ್ಯಾಕರ್

  ಧನುಷ್ ಅವರ ಶ್ರೀಮತಿಯಲ್ಲ!

  ಇನ್ನೊಬ್ಬ ಅಭಿಮಾನಿ ಅವರನ್ನು ಐಶ್ವರ್ಯಾ ಆರ್ ಧನುಷ್ ಎಂದು ಸಂಬೋಧಿಸಿದಾಗ, ಇನ್ನೊಬ್ಬರು ಅವರನ್ನು ಸರಿಪಡಿಸಿದರು. "ಇಲ್ಲ, ಅವರು ಇನ್ನು ಮುಂದೆ ಧನುಷ್ ಅವರ ಶ್ರೀಮತಿ ಅಲ್ಲ, ಏಕೆಂದರೆ ಅವರು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಈ ವಿಚ್ಛೇದನವು ಇನ್ನೂ ಮುಂದುವರಿಯುತ್ತಿದೆ ಎಂದು ತಿಳಿದುಕೊಳ್ಳುವುದು ತುಂಬಾ ದುಃಖದ ಸಂಗತಿಯಾಗಿದೆ" ಎಂದು ಬರೆದಿದ್ದಾರೆ.

  2004ರಲ್ಲಿ ವಿವಾಹವಾಗಿದ್ದ ಐಶ್ವರ್ಯಾ-ಧನುಷ್

  ಐಶ್ವರ್ಯಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಹೆಸರನ್ನು ಹೊಂದಿದ್ದಾರೆ. ಧನುಷ್ ಮತ್ತು ಐಶ್ವರ್ಯಾ 2004 ರಲ್ಲಿ ವಿವಾಹವಾದರು. ಅವರು 2006 ಮತ್ತು 2010 ರಲ್ಲಿ ಜನಿಸಿದ ಯಾತ್ರಾ ಮತ್ತು ಲಿಂಗಾ ಎಂಬ ಇಬ್ಬರು ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ.

  2022ರ ಜನವರಿಯಲ್ಲಿ ಬೇರೆ ಬೇರೆ

  ಜನವರಿ 2022 ರಲ್ಲಿ, ಮಾಜಿ ದಂಪತಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಾವಿಬ್ಬರೂ ಈ ವೈವಾಹಿಕ ಜೀವನದಿಂದ ಬೇರ್ಪಡಲು ನಿರ್ಧರಿಸಿರುವುದಾಗಿ ಘೋಷಿಸುವ ಟಿಪ್ಪಣಿಗಳನ್ನು ಹಂಚಿಕೊಂಡರು.

  "18 ವರ್ಷಗಳ ಕಾಲ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ನಾವು ಒಟ್ಟಾಗಿ ಇದ್ದೆವು. ಈ ವೈವಾಹಿಕ ಜೀವನದ ಪ್ರಯಾಣವು ಪರಸ್ಪರರ ಏಳಿಗೆ, ತಿಳುವಳಿಕೆ, ಹೊಂದಾಣಿಕೆಯದ್ದಾಗಿದೆ. ಇಂದು ನಮ್ಮಿಬ್ಬರ ದಾರಿಗಳು ಬೇರೆಯಾಗಿವೆ. ಐಶ್ವರ್ಯಾ ಮತ್ತು ನಾನು ದಂಪತಿಗಳಾಗಿ ಬೇರ್ಪಡಲು ನಿರ್ಧರಿಸಿದ್ದೇವೆ ಮತ್ತು ಉತ್ತಮವಾಗಿ ವ್ಯಕ್ತಿಗಳಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಅದಕ್ಕೆ ಅಗತ್ಯವಾದ ಗೌಪ್ಯತೆಯನ್ನು ನಮಗೆ ನೀಡಿ" ಎಂದು ಧನುಷ್ ಟ್ವಿಟ್ಟರ್‌ನಲ್ಲಿ ಒಂದು ಟಿಪ್ಪಣಿಯನ್ನು ಹಂಚಿಕೊಂಡಿದ್ದರು.

  ಇದನ್ನೂ ಓದಿ: 'ಅವನ' ಜೊತೆ ಕ್ಲೋಸ್ ಆಗ್ತಿದ್ದಾರಾ Samantha? "ಸುಮ್ನೆ ಸುಮ್ನೆ ಇದ್ರು ನನ್ನ ಹಿಂದೆ ಹಿಂದೆ ಬೀಳ್ತೀರ" ಎಂದ ನಟಿ!

  ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಐಶ್ವರ್ಯಾ ಇತ್ತೀಚೆಗೆ ಆಸ್ಪತ್ರೆಯಲ್ಲಿ ಕೆಲವು ದಿನಗಳನ್ನು ಕಳೆದರು. ಧನುಷ್ ಕೊನೆಯ ಬಾರಿಗೆ ‘ಮಾರನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಯೋಜನೆಗಳಲ್ಲಿ ರುಸ್ಸೋ ಬ್ರದರ್ಸ್ ಮತ್ತು ಹಾಲಿವುಡ್ ಚಿತ್ರ ‘ದಿ ಗ್ರೇ ಮ್ಯಾನ್’ ಸೇರಿವೆ ಎಂದು ಹೇಳಲಾಗುತ್ತಿದೆ.
  Published by:Annappa Achari
  First published: