ಕೊರೋನಾ (Corona) ಸಾಂಕ್ರಮಿಕದ ಅಲೆ ಯಾರನ್ನೂ ಬಿಟ್ಟಿಲ್ಲ ಎಂಬುವುದು ನಮ್ಮ ಕಣ್ಣ ಮುಂದಿನ ವಾಸ್ತವ. ಸಾಮಾಜಿಕ ಮಾಧ್ಯಮಗಳಲ್ಲಿ ಆ ಸೆಲೆಬ್ರಿಟಿ(Celebrity)ಗೆ ಕೊರೋನಾ ಪಾಸಿಟಿವ್ (Positive), ಈ ಸೆಲೆಬ್ರಿಟಿಗೆ ಕೊರೋನಾ ಪಾಸಿಟಿವ್ ಎಂಬ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಖುದ್ದು ಸೆಲೆಬ್ರಿಟಿಗಳೇ ತಮಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಟ್ವಿಟ್ಟರ್(Twitter)ನಲ್ಲೋ, ಇನ್ಸ್ಟಾಗ್ರಾಂನ(Instagram)ಲ್ಲೋ ಪೋಸ್ಟ್ ಹಾಕುವುದು ಕೂಡ ಈ ದಿನಗಳಲ್ಲಿ ಸಾಮಾನ್ಯ ಸಂಗತಿ. ಕೊರೋನಾ ಆಗಿ ಆಸ್ಪತ್ರೆ (Hospital) ಸೇರುವುದಂತೂ ನಿಜಕ್ಕೂ ಬೇಸರದ ಸಂಗತಿ. ಕೆಲವರು, ಅಂತಹ ಸ್ಥಿತಿಯಲ್ಲಿರುವ ತಮ್ಮ ಆತ್ಮೀಯರ ಮನಸ್ಸಿಗೆ ಮುದ ನೀಡಲು ಏನಾದರೂ ಮಾಡುತ್ತಾರೆ. ಇತ್ತೀಚೆಗೆ ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯಾ ರಜನಿಕಾಂತ್ (Aishwarya Rajinikanth) ಅವರಿಗೂ ತಮ್ಮ ಸ್ನೇಹಿತರಿಂದ ಅಂತದ್ದೇ ಒಂದು ಸರ್ಪ್ರೈಸ್ (Surprise) ಸಿಕ್ಕಿದೆ.
ರಜನಿಕಾಂತ್ ಮಗಳು ಐಶ್ವರ್ಯಾಗೆ ಕೋವಿಡ್ ಪಾಸಿಟಿವ್!
ಕೆಲವೇ ದಿನಗಳ ಹಿಂದೆ ಪತಿ, ನಟ ಧನುಷ್ (Dhanush) ಜೊತೆಗಿನ ವಿಚ್ಚೇದನದ ಕಾರಣ ಸುದ್ದಿಯಲ್ಲಿದ್ದ ಐಶ್ವರ್ಯಾ ರಜನಿಕಾಂತ್ ಅವರಿಗೆ ಇತ್ತೀಚೆಗೆ ಕೋವಿಡ್ ಪಾಸಿಟಿವ್ ಆಗಿತ್ತು. ಆಸ್ಪತ್ರೆ ಸೇರಿದ್ದ ಐಶ್ವರ್ಯಾ, “ಎಲ್ಲಾ ಮುಂಜಾಗರೂಕತೆಗಳನ್ನು ತೆಗೆದುಕೊಂಡರೂ ಕೊರೋನಾ ಪಾಸಿಟಿವ್ ಆಗಿದೆ. ಆಸ್ಪತ್ರೆ ಸೇರಿದ್ದೇನೆ. ಮಾಸ್ಕ್ ಧರಿಸಿ ಮತ್ತು ಲಸಿಕೆ ಪಡೆದು ಸುರಕ್ಷಿತರಾಗಿರಿ“ ಎಂದು ಬರೆದು, ಬೇಸರದ ಮೊಗದ ತನ್ನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಬಹಳ ಬೇಗ ಗುಣವಾಗುವಂತೆ ಅಭಿಮಾನಿಗಳು ಐಶ್ವರ್ಯಾಗೆ ಹಾರೈಸಿದ್ದರು.
ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ ಸ್ನೇಹಿತರು
ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿಸುವಾಗ ಸ್ನೇಹಿತರು ಸುಮ್ಮನಿರುತ್ತಾರೆಯೇ..? ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವ ಅವರಿಗೆ ಸ್ನೇಹಿತರು ಚಿಕ್ಕ ಸರ್ಪ್ರೈಸ್ ಒಂದನ್ನು ಕೊಟ್ಟಿದ್ದಾರೆ. ಸ್ನೇಹಿತರೆಲ್ಲಾ ಸೇರಿ, ಆಕೆಯಲ್ಲಿ ಉಲ್ಲಾಸ ಮೂಡಿಸಲು ಒಂದು ವಿಡಿಯೋ ಕರೆಯ ವ್ಯವಸ್ಥೆ ಮಾಡಿದ್ದರು. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ಐಶ್ವರ್ಯಾ, “ಎಂದಿಗೂ ಕರೆ ಮಾಡದ ಸ್ನೇಹಿತರು ಯಾವಾಗ ಕರೆ ಮಾಡುತ್ತಾರೆ.. ! ನಿಮಗೆ ಕೋವಿಡ್ ಆದಾಗ” ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಈ ಬಾರಿ ಗೋಲ್ಡನ್ ಗ್ಯಾಂಗ್ನಲ್ಲಿ `ಹರಟೆ’ ಸಂಭ್ರಮ.. ಮಸ್ತ್ ಮಜಾ ಮಾಡ್ತೀವಿ ಎಂದ ವೀಕ್ಷಕರು!
18 ವರ್ಷದ ದಾಂಪತ್ಯಗೆ ಗುಡ್ ಬೈ ಹೇಳಿದ್ದ ಐಶ್ವರ್ಯಾ!
ಜನವರಿಯಲ್ಲಿ ಐಶ್ವರ್ಯಾ ರಜನಿಕಾಂತ್ ಮತ್ತು ನಟ ಧನುಷ್ ಆರ್, 18 ವರ್ಷದ ತಮ್ಮ ದಾಂಪತ್ಯದಿಂದ ವಿಚ್ಚೇದನ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದರು. “ಹದಿನೆಂಟು ವರ್ಷಗಳ ಕಾಲ, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರು ಮತ್ತು ಪರಸ್ಪರ ಹಿತೈಷಿಗಳಾಗಿ ಒಟ್ಟಿಗೆ ಇದ್ದರು. ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ದಾರಿಗಳು ಪ್ರತ್ಯೇಕ ಆಗುವ ಸ್ಥಳದಲ್ಲಿ ಬಂದು ನಿಂತಿದ್ದೇವೆ. (ನಾವು) ದಂಪತಿಯಾಗಿದ್ದವರು ಬೇರೆಯಾಗಲು ನಿರ್ಧರಿಸಿದ್ದೇವೆ ಮತ್ತು ನಮ್ಮ ಒಳ್ಳೆಯದಕ್ಕಾಗಿ, ನಾವು ನಮ್ಮನ್ನು ಪ್ರತ್ಯೇಕ ವ್ಯಕ್ತಿಗಳನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ” ಎಂದು ಅವರಿಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಜಂಟಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ : KGF 2 ಸಿನಿಮಾದಲ್ಲಿ `ಕರ್ಪೂರದ ಗೊಂಬೆ’-`ಮನ ಮೆಚ್ಚಿದ ಹುಡುಗಿ’, ಅರೇ.. ಶಾಕ್ ಆಯ್ತಾ? ಆಗಲೇಬೇಕು!
ದೂರಾಗಿದ್ದರೂ ಹೆಸ್ರು ಬದಲಾಯಿಸದ ಐಶ್ವರ್ಯಾ!
ಅವರಿಬ್ಬರು ಪ್ರತ್ಯೇಕವಾದ ಬಳಿಕ, ಧನುಷ್ ಮೊದಲ ಬಾರಿಗೆ ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಮಗ ಯಾತ್ರಾ ಜೊತೆಗಿನ ಫೋಟೋ ಅದು. ಆದರೆ, ಐಶ್ವರ್ಯಾ ರಜನಿಕಾಂತ್ ಪತಿ ಧನುಷ್ ಅವರಿಂದ ದೂರವಾಗಿದ್ದರೂ ಕೂಡ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೆಸರನ್ನು ಬದಲಾಯಿಸಿಕೊಡಿಲ್ಲ. ಕೆಲವು ದಿನಗಳ ಹಿಂದೆ, ಐಶ್ವರ್ಯಾ ಅವರ ಮಾವ, ಅಂದರೆ ಧನುಷ್ ಅವರ ತಂದೆ ಕಸ್ತೂರಿ ರಾಜ, ಅವರಿಬ್ಬರ ವಿಚ್ಚೇದನದ ಸುದ್ದಿಯನ್ನು ತಳ್ಳಿ ಹಾಕಿದ್ದರು. ಪತಿ ಪತ್ನಿಯ ನಡುವೆ ಇಂತಹ ಜಗಳಗಳು ಸಾಮಾನ್ಯ, ಇದು ವಿಚ್ಚೇದನ ಅಲ್ಲ ಎಂದು ಅವರು ಹೇಳಿಕೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ