Dhanush ನಿಂದ ಬೇರೆಯಾಗಿದ್ದು ಮುಗೀತು, ಇನ್ನು ಕೆಲ್ಸ ಮಾಡೋಣ ನಡೀರಿ: Aishwarya Rajinikanth ಆಫೀಸಿಗೆ ಹಾಜರ್!

ಚಲನಚಿತ್ರ ನಿರ್ಮಾಪಕರಾದ ಐಶ್ವರ್ಯಾ ಅವರು ತಮ್ಮ ಮುಂಬರುವ ಸಂಗೀತ ವಿಡಿಯೋದ ಪೂರ್ವ-ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದಾರೆ,

ಧನುಷ್-ಐಶ್ಚರ್ಯಾ

ಧನುಷ್-ಐಶ್ಚರ್ಯಾ

  • Share this:
ಈ ಚಿತ್ರೋದ್ಯಮಗಳಲ್ಲಿ ನಟ ನಟಿಯರು(Actress) ಯಾವಾಗ ಪ್ರೀತಿಯಲ್ಲಿ ಬೀಳುತ್ತಾರೋ, ಯಾವಾಗ ಮದುವೆ ಆಗಲು ತೀರ್ಮಾನಿಸುತ್ತಾರೋ ಮತ್ತು ಯಾವಾಗ ಪರಸ್ಪರರಿಂದ ಬೇರ್ಪಡಲು(Separate) ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಬಹುಶಃ ಯಾರೂ ಊಹಿಸುವುದಕ್ಕೂ ಸಾಧ್ಯವಿಲ್ಲ. ಕೆಲವು ನಟ ನಟಿಯರು ಮದುವೆಯಾದ ಮೇಲೆ ಬೇಗನೆ ವಿಚ್ಛೇದನೆ (Divorced) ಪಡೆಯುತ್ತಾರೆ ಮತ್ತು ಇನ್ನೂ ಕೆಲವರು ತುಂಬಾ ವರ್ಷಗಳವರೆಗೆ ಜೊತೆಯಲ್ಲಿ ಸಂಸಾರ ಮಾಡಿಕೊಂಡು ಮಕ್ಕಳಾದ ನಂತರ ವಿವಾಹ ವಿಚ್ಛೇದನೆ ಪಡೆಯುತ್ತಾರೆ. ಇದೆಲ್ಲಾ ಆದರೂ ಸಹ ಅವರು ತಮ್ಮ ವೈವಾಹಿಕ (Marital Life) ಜೀವನದ ಕಹಿ ಘಟನೆಯನ್ನು ಮರೆತು ಬೇಗನೆ ಅವರವರ ಕೆಲಸಕ್ಕೆ ಮರಳುವುದನ್ನು ನಾವು ಈಗಾಗಲೇ ಬಹಳಷ್ಟು ಸಂದರ್ಭಗಳಲ್ಲಿ ನೋಡಿದ್ದೇವೆ.

ಬೇ ಫಿಲ್ಮ್ಸ್ ಬಂಡವಾಳ
ಸ್ವಲ್ಪ ದಿನಗಳ ಹಿಂದೆಯೇ ತಮಿಳು ನಟ ಧನುಷ್ ಅವರೊಂದಿಗಿನ ವೈವಾಹಿಕ ಜೀವನದಿಂದ ಹೊರ ಬಂದಿರುವ ಐಶ್ವರ್ಯಾ ರಜನೀಕಾಂತ್ ಅವರು ತಡ ಮಾಡದೆಯೇ ಮತ್ತೆ ಅವರ ಕೆಲಸಗಳಿಗೆ ಮರಳಿದ್ದಾರೆ. ಚಲನಚಿತ್ರ ನಿರ್ಮಾಪಕರಾದ ಐಶ್ವರ್ಯಾ ಅವರು ತಮ್ಮ ಮುಂಬರುವ ಸಂಗೀತ ವಿಡಿಯೋದ ಪೂರ್ವ-ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದಾರೆ, ಇದಕ್ಕೆ ಬೇ ಫಿಲ್ಮ್ಸ್ ಬಂಡವಾಳ ಹೂಡಲಿದ್ದು, ಈ ವರ್ಷದ ಪ್ರೇಮಿಗಳ ದಿನದಂದು ಈ ಸಂಗೀತ ವಿಡಿಯೋ ಹೊರ ಬರಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ವಾರವಷ್ಟೆ ಧನುಷ್ ಮತ್ತು ಐಶ್ವರ್ಯಾ ರಜನೀಕಾಂತ್ ಅವರು ಪರಸ್ಪರ ಹೊಂದಾಣಿಕೆಯಾಗದೇ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮ 18 ವರ್ಷಗಳ ವೈವಾಹಿಕ ಜೀವನಕ್ಕೆ ಒಂದು ಪೂರ್ಣ ವಿರಾಮವನ್ನು ಇಟ್ಟು ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ ಅವರವರ ದಾರಿಯಲ್ಲಿ ಸಾಗಿದ್ದಾರೆ ಎಂದು ಹೇಳಬಹುದು.

ಇದನ್ನೂ ಓದಿ: Rajinikath: ಮಗಳಿಂದ ದೂರವಾದರೂ ಮಾವನಿಗೆ ಅಳಿಯನೆಂದರೆ ಪ್ರೀತಿ, ಧನುಷ್​ಗೆ ರಜನಿ ಕೊಟ್ಟಿದ್ದ ಗಿಫ್ಟ್ ನೋಡಿ!

ಕೆಲಸಕ್ಕೆ ಮರಳಿದ ಐಶ್ವರ್ಯಾ ರಜನೀಕಾಂತ್
ಜನವರಿ 17ರಂದು, ಧನುಷ್ ಮತ್ತು ಐಶ್ವರ್ಯಾ ರಜನೀಕಾಂತ್ ಇಬ್ಬರೂ ತಮ್ಮ 18 ವರ್ಷಗಳ ವೈವಾಹಿಕ ಜೀವನದಿಂದ ಹೊರ ಬಂದಿರುವ ಬಗ್ಗೆ ಬಹಿರಂಗವಾಗಿಯೇ ಘೋಷಿಸಿದರು. ಈ ಸುದ್ದಿ ಕೇಳಿದ ಚಿತ್ರೋದ್ಯಮದ ಎಲ್ಲರಿಗೂ ಮತ್ತು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿತು. ಈ ದಂಪತಿಗಳಿಗೆ ಯತ್ರಾ ಮತ್ತು ಲಿಂಗ ಎಂಬ ಇಬ್ಬರು ಪುತ್ರರಿದ್ದಾರೆ.

ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದ ಕೆಲವು ದಿನಗಳ ನಂತರವೇ, ಐಶ್ವರ್ಯಾ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ವ್ಯಾಲೆಂಟೈನ್ಸ್ ಡೇ ವಿಶೇಷ ಸಂಗೀತ ವಿಡಿಯೋವನ್ನು ನಿರ್ದೇಶಿಸಲು ಬೇ ಫಿಲ್ಮ್ಸ್ ಅವರೊಂದಿಗೆ ಸಹಿ ಹಾಕಿದ್ದಾರೆ. ಪ್ರೀ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದೆ ಮತ್ತು ಐಶ್ವರ್ಯ ಅದಕ್ಕಾಗಿ ಪಾತ್ರ ವರ್ಗ ಮತ್ತು ಸಿಬ್ಬಂದಿಯನ್ನು ಅಂತಿಮಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.


View this post on Instagram


A post shared by Bay Films (@bayfilms_llp)


ಪ್ರೇಮಿಗಳ ದಿನದಂದು ಬಿಡುಗಡೆ
ಬೇ ಫಿಲ್ಮ್ಸ್ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಐಶ್ವರ್ಯಾ ತನ್ನ ತಂಡದೊಂದಿಗೆ ಚರ್ಚಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. "ಐಶ್ವರ್ಯಾ ರಜನೀಕಾಂತ್ ತನ್ನ ಸಂಗೀತ ವಿಡಿಯೋಗಾಗಿ ಸಿದ್ಧತೆಯನ್ನು ಪ್ರಾರಂಭಿಸಿದ್ದಾರೆ. ಐಶ್ವರ್ಯಾ ನಿರ್ದೇಶಿಸಿದ ಮತ್ತು ಬೇ ಫಿಲ್ಮ್ಸ್ ನಿರ್ಮಿಸಿದ ಈ ವಿಡಿಯೋ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ" ಎಂದು ಆ ಫೋಟೋಗೆ ಶೀರ್ಷಿಕೆ ಬರೆದಿರುವುದನ್ನು ನಾವು ನೋಡಬಹುದಾಗಿದೆ.

ಈ ಹೊಸ ಸಂಗೀತ ವಿಡಿಯೋವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗುವುದು ಎಂದು ವರದಿಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಧನುಷ್ ಮತ್ತು ಐಶ್ವರ್ಯ ರಜನೀಕಾಂತ್ ಅವರು ಬೇರ್ಪಟ್ಟಿದ್ದು, ದಂಪತಿಗಳು ತಮ್ಮದೇ ಆದ ಹೇಳಿಕೆಯಲ್ಲಿ, ಗೌಪ್ಯತೆಯನ್ನು ಸಹ ಕೋರಿದ್ದರು.

ಇದನ್ನೂ ಓದಿ: Dhanush-Aishwarya Rajinikanth: ‘ನನ್ನ ಮಗ-ಸೊಸೆ ಬೇರೆಯಾಗಿಲ್ಲ‘ ಅಚ್ಚರಿ ಹೇಳಿಕೆ ಕೊಟ್ಟ ಧನುಷ್ ತಂದೆ

ಐಶ್ವರ್ಯಾ ತನ್ನ ಹೇಳಿಕೆಯನ್ನು ಶೀರ್ಷಿಕೆಯೊಂದಿಗೆ ಹಂಚಿ ಕೊಂಡಿದ್ದು ಅದರಲ್ಲಿ "ಯಾವುದೇ ಶೀರ್ಷಿಕೆ ಅಗತ್ಯವಿಲ್ಲ, ಇದನ್ನು ನೀವು ಅರ್ಥ ಮಾಡಿಕೊಂಡರೆ ಸಾಕು, ನಿಮ್ಮ ಪ್ರೀತಿ ಅಗತ್ಯವಿದೆ” ಎಂದು ಬರೆದುಕೊಂಡಿದ್ದರು. ನಟ ಧನುಷ್ ಅವರ ತಂದೆ ಕಸ್ತೂರಿ ರಾಜಾ ಅವರ ಪ್ರಕಾರ, ದಂಪತಿಗಳು ಇನ್ನೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲ. ಧನುಷ್ ಮತ್ತು ಐಶ್ವರ್ಯಾ ಪ್ರಸ್ತುತ ಹೈದರಾಬಾದ್‌ನಲ್ಲಿ ತಮ್ಮ ತಮ್ಮ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಬಹಿರಂಗಪಡಿಸಿದರು.
Published by:vanithasanjevani vanithasanjevani
First published: