• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rajinikanth: ಇದ್ದಕ್ಕಿದ್ದಂತೆ ಐಶ್ವರ್ಯಾ ಮತ್ತು ರಜನಿಕಾಂತ್ ಶ್ರೀದೇವಿಯನ್ನು ಯಾಕೆ ನೆನಪಿಸಿಕೊಂಡ್ರು?

Rajinikanth: ಇದ್ದಕ್ಕಿದ್ದಂತೆ ಐಶ್ವರ್ಯಾ ಮತ್ತು ರಜನಿಕಾಂತ್ ಶ್ರೀದೇವಿಯನ್ನು ಯಾಕೆ ನೆನಪಿಸಿಕೊಂಡ್ರು?

 ಐಶ್ವರ್ಯಾ ರಜನಿಕಾಂತ್ ಮತ್ತು ಬೋನಿ ಕಪೂರ್

ಐಶ್ವರ್ಯಾ ರಜನಿಕಾಂತ್ ಮತ್ತು ಬೋನಿ ಕಪೂರ್

ಜಾಹ್ನವಿ ಕಪೂರ್ ಅವರು ತಮ್ಮ ತಾಯಿ ಶ್ರೀದೇವಿ ಅವರ ಹುಟ್ಟುಹಬ್ಬದ ದಿನದಂದು ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದರು ಅಂತ ಹೇಳಿಕೊಂಡಿದ್ದರು. ಈಗ ಅವರು ತಮ್ಮ ಪ್ರತಿ ಚಿತ್ರದ ಸ್ಕ್ರಿಪ್ಟ್ ಅನ್ನು ತೆಗೆದುಕೊಂಡು ಮೊದಲಿಗೆ ಹೋಗುವುದೇ ತಿರುಪತಿ ದೇವಸ್ಥಾನಕ್ಕೆ ಅಂತ ಹೇಳಿಕೊಂಡಿದ್ದು ಇನ್ನೂ ನಮ್ಮ ನೆನಪಿನಲ್ಲಿ ಇರುವಾಗಲೇ ಈಗ ಮತ್ತೊಬ್ಬರು ದಿವಂಗತ ನಟಿಯನ್ನು ನೆನಪಿಸಿಕೊಂಡಿದ್ದಾರೆ ನೋಡಿ.

ಮುಂದೆ ಓದಿ ...
  • Share this:

ದಿವಂಗತ ನಟಿ ಶ್ರೀದೇವಿ (Sridevi) ಅವರ ಬಗ್ಗೆ ಇತ್ತೀಚೆಗಷ್ಟೆ ಅವರ ಮಗಳು ಮತ್ತು ನಟಿಯಾದ ಜಾಹ್ನವಿ ಕಪೂರ್ (Janhvi Kapoor) ಅವರು ತಮ್ಮ ತಾಯಿ ಅವರ ಹುಟ್ಟುಹಬ್ಬದ ದಿನದಂದು ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದರು ಅಂತ ಹೇಳಿಕೊಂಡಿದ್ದರು. ಈಗ ಅವರು ತಮ್ಮ ಪ್ರತಿ ಚಿತ್ರದ ಸ್ಕ್ರಿಪ್ಟ್ ಅನ್ನು ತೆಗೆದುಕೊಂಡು ಮೊದಲಿಗೆ ಹೋಗುವುದೇ ತಿರುಪತಿ ದೇವಸ್ಥಾನಕ್ಕೆ (Tirupati Temple) ಅಂತ ಹೇಳಿಕೊಂಡಿದ್ದು ಇನ್ನೂ ನಮ್ಮ ನೆನಪಿನಲ್ಲಿ ಇರುವಾಗಲೇ ಈಗ ಮತ್ತೊಬ್ಬರು ದಿವಂಗತ ನಟಿಯನ್ನು ನೆನಪಿಸಿಕೊಂಡಿದ್ದಾರೆ ನೋಡಿ. ನಟಿ ಶ್ರೀದೇವಿಯನ್ನು ನೆನಪಿಸಿಕೊಂಡವರು ಮತ್ತ್ಯಾರೂ ಅಲ್ಲ, ಅವರ ಪತಿ ಮತ್ತು ಬಾಲಿವುಡ್ ನಿರ್ಮಾಪಕರಾದ ಬೋನಿ ಕಪೂರ್ (Boney Kapoor) ಮತ್ತು ತಮಿಳು ಚಿತ್ರರಂಗದ ನಿರ್ಮಾಪಕಿಯಾದ ಐಶ್ವರ್ಯಾ ರಜನಿಕಾಂತ್ (Aishwarya Rajinikanth) ಅವರು ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಬೋನಿ ಕಪೂರ್ ಅವರೊಂದಿಗೆ ಕಾಲ ಕಳೆದ ಐಶ್ವರ್ಯಾ ರಜನಿಕಾಂತ್
ಹೌದು.. ಇತ್ತೀಚೆಗೆ ಬೋನಿ ಕಪೂರ್ ಅವರೊಂದಿಗೆ ವಾರಾಂತ್ಯದಲ್ಲಿ ಸಮಯ ಕಳೆದ ಐಶ್ವರ್ಯಾ ರಜನಿಕಾಂತ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಆ ಸಂಜೆ ಕಾಫಿ ಕುಡಿಯುವ ಸಮಯದಲ್ಲಿ ಆದ ಭೇಟಿಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಬೋನಿ ಅವರ ಪತ್ನಿ, ದಿವಂಗತ ನಟಿ ಶ್ರೀದೇವಿ ಅವರನ್ನು ನೆನಪಿಸಿಕೊಂಡರು ಎಂದು ಐಶ್ವರ್ಯಾ ಅವರು ಆ ಟ್ವೀಟ್ ನಲ್ಲಿ ತಿಳಿಸಿದ್ದಾರೆ.


ಮೊದಲ ಫೋಟೋದಲ್ಲಿ, ಬೋನಿ ಮತ್ತು ಐಶ್ವರ್ಯಾ ಅವರಿಬ್ಬರು ಕೈಯನ್ನು ಹಿಡಿದುಕೊಂಡು ಮುಗುಳ್ನಗುವುದನ್ನು ನಾವು ನೋಡಬಹುದು. ಅವರು ಮನೆಯ ಹೊರಗೆ ಹಸಿರು ತುಂಬಿದ ದ್ವಾರದ ಬಳಿ ನಿಂತಿದ್ದರು. ಐಶ್ವರ್ಯಾ ಅವರು ಎರಡನೇ ಫೋಟೋದಲ್ಲಿ ಬೋನಿಯನ್ನು ನೋಡಿ ಕ್ಯಾಮೆರಾವನ್ನು ನೋಡಿ ಮುಗುಳ್ನಗುವುದನ್ನು ನಾವು ನೋಡಬಹುದು.


ಶ್ರೀದೇವಿಯವರನ್ನು ನೆನಪಿಸಿಕೊಂಡ ಐಶ್ವರ್ಯಾ ರಜನಿಕಾಂತ್ ಮತ್ತು ಬೋನಿ ಕಪೂರ್
ಐಶ್ವರ್ಯಾ ಅವರು ಗುಲಾಬಿ ಹೂವಿನ ಸೀರೆಯನ್ನು ಧರಿಸಿದ್ದರು ಮತ್ತು ಹಸಿರು ರವಿಕೆಯನ್ನು ತೊಟ್ಟಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಬೋನಿ ಅವರು ನೀಲಿ ಬಣ್ಣದ ಉಡುಪನ್ನು ಧರಿಸಿದ್ದರು. ಈ ಫೋಟೋವನ್ನು ಹಂಚಿಕೊಂಡಿರುವ ಐಶ್ವರ್ಯಾ ಅವರು "ಈ ಸಂಜೆ ನಮ್ಮ ಪ್ರೀತಿಯ ಬೋನಿ ಕಪೂರ್ ಅಂಕಲ್ ಅವರೊಂದಿಗೆ ಕಾಫಿ ಕುಡಿದು ಆನಂದಿಸುತ್ತಿದ್ದೆ. ಹಳೆಯ ದಿನಗಳನ್ನು ನೆನಪಿಸಿಕೊಳ್ಳುವುದು, ಪಪ್ಪಿ ಅಕ್ಕ ಮತ್ತು ಆಸಕ್ತಿದಾಯಕ ಕೆಲಸದ ಬಗ್ಗೆ ಚರ್ಚಿಸುವುದನ್ನು ನೆನಪಿಸಿಕೊಳ್ಳುವುದು" ಶ್ರೀದೇವಿ ತನ್ನ ಆಪ್ತ ಸ್ನೇಹಿತರಿಗೆ ಪಪ್ಪಿ ಎಂದು ಪರಿಚಿತರಾಗಿದ್ದರು ಎಂದು ಹೇಳಿದರು.


ಇದನ್ನೂ ಓದಿ: Tollywood Strike: ಸಲಾರ್ ಸಿನಿಮಾ ಶೂಟಿಂಗ್ ನಿಲ್ಲುತ್ತಾ? ಏನಿದು ಟಾಲಿವುಡ್​ನ ಬ್ರೇಕಿಂಗ್ ನ್ಯೂಸ್?


ಈ ಫೋಟೋಗಳನ್ನು ನೋಡಿದ ನಂತರ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು ಬೋನಿ ಕಪೂರ್ ಅವರ ನಿರ್ಮಾಣದಲ್ಲಿ ಅವರ ತಂದೆ ರಜನಿಕಾಂತ್ ಅವರೊಂದಿಗೆ ಯಾವುದಾದರೂ ಚಿತ್ರ ಮಾಡುತ್ತಿದ್ದಾರೆಯೇ ಅಂತ ತಿಳಿದುಕೊಳ್ಳಲು ಕಾಮೆಂಟ್ ವಿಭಾಗದಲ್ಲಿ ಅನೇಕ ರೀತಿಯ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದರು. "ಮುಂದಿನ ರಜಿನಿ ಚಿತ್ರ" ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. "ಮುಂಬರುವ ಪ್ರಾಜೆಕ್ಟ್ ಗಾಗಿ ಯಾವುದೇ ಅಪ್ಡೇಟ್" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. "ದಯವಿಟ್ಟು ಅಪ್ಡೇಟ್ ನೀಡಿ ಅಂತ ಐಶ್ವರ್ಯಾ ಮತ್ತು ಬೋನಿ ಅವರಿಗೆ ಕೇಳಿದ್ದಾರೆ.


ಐಶ್ವರ್ಯಾ ರಾಘವ ಲಾರೆನ್ಸ್ ಅವರನ್ನು ಭೇಟಿಯಾಗಿದ್ಯಾಕೆ?
ಐಶ್ವರ್ಯಾ ಇತ್ತೀಚೆಗೆ ತಮಿಳು ನಟ ಮತ್ತು ಚಲನಚಿತ್ರ ನಿರ್ಮಾಪಕ ರಾಘವ ಲಾರೆನ್ಸ್ ಅವರನ್ನು ಭೇಟಿಯಾದರು. ಅವರ ಭೇಟಿಯ ಹಿಂದಿನ ಕಾರಣ ಇನ್ನೂ ರಹಸ್ಯವಾಗಿಯೇ ಉಳಿದಿದೆಯಾದರೂ, ಕೆಲವರು ಸಂಭಾವ್ಯ ಪ್ರಾಜೆಕ್ಟ್ ಗಾಗಿ ಅವರು ಭೇಟಿಯಾದರು ಎಂದು ಊಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ಮ್ಯೂಸಿಕ್ ವಿಡಿಯೋವನ್ನು ಸಹ ನಿರ್ದೇಶಿಸಿದ್ದಾರೆ.


ಇದನ್ನೂ ಓದಿ:  Allu Arjun: ಅಲ್ಲು ಅರ್ಜುನ್​​ಗೆ ಆ್ಯಕ್ಷನ್ ಕಟ್​ ಹೇಳಿದ ತ್ರಿವಿಕ್ರಮ್, ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ


ಧನುಷ್ ಮತ್ತು ಶ್ರುತಿ ಹಾಸನ್ ನಟಿಸಿದ ತಮಿಳು ಚಿತ್ರ 3 ರ ಮೂಲಕ ಐಶ್ವರ್ಯಾ ಅವರು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಅವರ ಎರಡನೇ ಚಿತ್ರ ತಮಿಳಿನ ಹಾಸ್ಯ ಚಿತ್ರ ‘ವೈ ರಾಜಾ ವೈ’ ಆಗಿದೆ. ಐಶ್ವರ್ಯಾ ಅವರು 2017 ರಲ್ಲಿ ತಮಿಳು ಚಲನ ಚಿತ್ರೋದ್ಯಮದಲ್ಲಿ ಸ್ಟಂಟ್ ಮ್ಯಾನ್ ಗಳ ಜೀವನದ ಬಗ್ಗೆ ‘ಸಿನೆಮಾ ವೀರನ್’ ಎಂಬ ಸಾಕ್ಷ್ಯಚಿತ್ರವನ್ನು ಸಹ ನಿರ್ದೇಶಿಸಿದ್ದರು.

Published by:Ashwini Prabhu
First published: