Aishwarya Rai Ponniyin Selvan: ಪೊನ್ನಿಯಿನ್ ಸೆಲ್ವನ್ ಇವೆಂಟ್​ನಲ್ಲಿ ನಿರjdi ರಳವಾಗಿ ತಮಿಳು ಮಾತನಾಡಿದ ಐಶ್!

Aishwarya Rai Bachchan in Ponniyin Selvan: ಸೌತ್ ಇಂಡಸ್ಟ್ರಿಯಿಂದಲೇ ಸಿನಿಮಾ ಲೋಕಕ್ಕೆ ಕಾಲಿಟ್ಟ ಐಶ್ವರ್ಯಾ ರೈ ಈಗ ಮತ್ತೆ ಪೊನ್ನಿಯಿನ್​ ಸೆಲ್ವನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಬ್ಯೂಟಿ ನಿರರ್ಗಳವಾಗಿ ತಮಿಳು ಮಾಡತಾಡಬಲ್ಲರು ಎನ್ನುವುದು ನಿಮಗೆ ಗೊತ್ತೇ?

ಪನ್ನಿಯಿನ್ ಸೆಲ್ವನ್​ನಲ್ಲಿ ಐಶ್ವರ್ಯಾ ರೈ

ಪನ್ನಿಯಿನ್ ಸೆಲ್ವನ್​ನಲ್ಲಿ ಐಶ್ವರ್ಯಾ ರೈ

  • Share this:
ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಬಹು ನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್ (Ponniyin Selvan) 1' ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಸಿನಿಮಾದ ಇವೆಂಟ್ ನಡೆದಿದ್ದು ಅದ್ಧೂರಿ ಇವೆಂಟ್​​ನಲ್ಲಿ (Ponniyin Selvan event) ಸ್ಟಾರ್ ನಟ, ನಟಿಯರು ಭಾಗವಹಿಸಿದ್ದಾರೆ. ಸಿನಿಮಾದ ಟೀಸರ್ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಲಿರುವ ಚಿತ್ರ ಬರಲಿದೆ ಎಂಬುದನ್ನು ಸಾಬೀತು ಮಾಡಿದ್ದು ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ಬಹುದಿನಗಳ ನಂತರ ಬಾಲಿವುಡ್‌ನ (Bollywood) ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಐಶ್ವರ್ಯ ರೈ (Aishwarya Rai Bachchan), ಸೌತ್ ಸೂಪರ್ ಸ್ಟಾರ್ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಟೀಸರ್ (Teaser)​ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಪೊನ್ನಿಯಿನ್ ಸೆಲ್ವನ್ ಅವರ ಟ್ರೇಲರ್ ಮತ್ತು ಆಡಿಯೊವನ್ನು ಸೆಪ್ಟೆಂಬರ್ 6 ರಂದು ಚೆನ್ನೈನಲ್ಲಿ ಚಿತ್ರದ ನಿರ್ಮಾಪಕರು ಆಯೋಜಿಸುವ ಭವ್ಯ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಚಿತ್ರದ ಕಲಾವಿದರು ಮತ್ತು ದಕ್ಷಿಣ ಚಿತ್ರರಂಗದ ಕಲಾವಿದರು ಭಾಗವಹಿಸಿದ್ದಾರೆ. ಕಾರ್ಯಕ್ರಮಕ್ಕೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಮುಖ್ಯ ಅತಿಥಿಗಳಾಗಿದ್ದರು.

Ponniyin Selvan song Ponni Nadhi released now trending in social media
ಹಾಡು ರಿಲೀಸ್​


ಐಶ್ವರ್ಯಾ ರೈ ಬಚ್ಚನ್, ನಾಸೀರ್, ಮಣಿರತ್ನಂ, ತ್ರಿಶಾ ಮತ್ತು ಚಿತ್ರಕ್ಕೆ ಸಂಬಂಧಿಸಿದ ಇತರರು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಪ್ಪು ಬಣ್ಣದಲ್ಲಿ ಉಡುಗೆಯಲ್ಲಿ ಸುಂದರವಾಗಿ ಕಾಣುವ ಐಶ್ವರ್ಯಾ ಅವರು ನಿರರ್ಗಳವಾಗಿ ತಮಿಳಿನಲ್ಲಿ ಮಾತನಾಡಿದ್ದಾರೆ. ದಕ್ಷಿಣದ ದಂತಕಥೆಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದರು.

ನಿರರ್ಗಳ ತಮಿಳು ಮಾತನಾಡಿದ ಐಶ್

ಪೊನ್ನಿಯಿನ್ ಸೆಲ್ವನ್ ಕಾರ್ಯಕ್ರಮದಲ್ಲಿ ಐಶ್ವರ್ಯ ಅವರು ನಿರರ್ಗಳವಾಗಿ ತಮಿಳಿನಲ್ಲಿ ಮಾತನಾಡಿದ್ದಾರೆ. ನಟಿ 'ವನಕ್ಕಂ' ಎಂದು ಹೇಳುವ ಮೂಲಕ ತನ್ನ ಭಾಷಣ ಪ್ರಾರಂಭಿಸಿದರು. ತಮಿಳು ಇಂಡಸ್ಟ್ರಿಯಲ್ಲಿ ಇರುವುದಕ್ಕೆ ಸಂತೋಷವಾಗಿದೆ. ಮಣಿ ನನ್ನ ಗುರು. ಯಾವಾಗಲೂ ಅವರು ನನ್ನ ಗುರುಗಳು. ಮತ್ತೊಮ್ಮೆ ಈ ಅವಕಾಶಕ್ಕಾಗಿ ತುಂಬಾ ಧನ್ಯವಾದಗಳು, ನಿಮ್ಮ ಪ್ರಾಜೆಕ್ಟ್​ನಲ್ಲಿ ನನ್ನನ್ನು ನಿಮ್ಮ ವಿದ್ಯಾರ್ಥಿಯಾಗಿ ಸ್ವೀಕರಿಸಿದ ಗೌರವಕ್ಕಾಗಿ ಧನ್ಯವಾದಗಳು ಮಣಿ ಸರ್ ಎಂದಿದ್ದಾರೆ.ಮಣಿ ರತ್ನಂಗೆ ಥ್ಯಾಂಕ್ಸ್ ಎಂದ ನಟಿ

ನಾನು ಇರುವರ್‌ನೊಂದಿಗೆ ಸಿನಿಮಾದಲ್ಲಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ನನ್ನನ್ನು ನಿಮ್ಮ ವಿದ್ಯಾರ್ಥಿಯಾಗಿ ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು. ಈ ಪ್ರಯಾಣ ನಂಬಲಾಗದಂತಿದೆ. ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ಸವಾಲಿನ ಕೆಲಸ. ಇದು ಎಂದೆಂದಿಗೂ ಸ್ಮರಣೀಯವಾಗಿರುತ್ತದೆ. ರಜನಿಕಾಂತ್ ಮತ್ತು ಕಮಲ್ ಸರ್, ನಿಮ್ಮಿಬ್ಬರೂ ಇಲ್ಲಿರುವುದು ಕನಸಿನ ಕ್ಷಣ. ನಾವು ವಿದ್ಯಾರ್ಥಿಗಳು, ಅಭಿಮಾನಿಗಳು ಎಂದಿದ್ದಾರೆ.

ಇದನ್ನೂ ಓದಿ: Ponniyin Selvan 1: ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್​ ಬಿಡುಗಡೆ, ಮತ್ತೊಂದು ಅದ್ಧುತ ದೃಶ್ಯಕಾವ್ಯಕ್ಕೆ ಸಾಕ್ಷಿಯಾಗಲಿದೆ ಭಾರತೀಯ ಚಿತ್ರರಂಗ

ಪೊನ್ನಿಯಿನ್ ಸೆಲ್ವನ್‌ ಐಶ್ ಲುಕ್

ಜುಲೈ 6 ರಂದು, ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರು ನಂದಿನಿಯಾಗಿ ಐಶ್ವರ್ಯಾ ರೈ ಬಚ್ಚನ್ ಅವರ ಬಹುನಿರೀಕ್ಷಿತ ಫಸ್ಟ್-ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ಪೋಸ್ಟರ್ ಅನ್ನು ಹಂಚಿಕೊಂಡ ಲೈಕಾ ಪ್ರೊಡಕ್ಷನ್ಸ್,  ಸೇಡಿಗೆ ಸುಂದರವಾದ ಮುಖವಿದೆ! ಪಜುವೂರಿನ ರಾಣಿ ನಂದಿನಿಯನ್ನು ಭೇಟಿ ಮಾಡಿ! #PS1 ಸೆಪ್ಟೆಂಬರ್ 30 ರಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ (sic) ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: Ponniyin Selvan Song: ಕಾವೇರಿಯ ಇತಿಹಾಸ ಸಾರುವ ಪೊನ್ನಿ ನದಿ ಗೀತೆ, ಪೊನ್ನಿಯಿನ್ ಸೆಲ್ವನ್ ಮೊದಲ ಹಾಡು ರಿಲೀಸ್​

ಚಿತ್ರದ ಕಥೆ 10ನೇ ಶತಮಾನದ ಆಸುಪಾಸಿನಲ್ಲಿದೆ. ಈ ಚಿತ್ರವು ಚೋಳ ಸಾಮ್ರಾಜ್ಯದ ಅಧಿಕಾರದ ಹೋರಾಟವನ್ನು ಆಧರಿಸಿದೆ. ಇದು ಕಾವೇರಿ ನದಿಯ ಮಗ ಪೊನ್ನಿಯಿನ್ ಸೆಲ್ವನ್ ಅವರ ತಿಹಾಸವಾಗಿದೆ. ಭಾರತೀಯ ಇತಿಹಾಸದ ಶ್ರೇಷ್ಠ ಆಡಳಿತಗಾರ ರಾಜರಾಜ ಚೋಳನ ಕಥೆಯನ್ನು ನಿರ್ದೇಶಕ ಮಣಿರತ್ನಂ ತೆರೆಯ ಮೇಳೆ ಅದ್ಧೂರಿಯಾಗಿ ತಂದಿದ್ದಾರೆ. 500 ಕೋಟಿ ಬಜೆಟ್​ ನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು, ಚಿತ್ರವು 2 ಭಾಗಗಳಲ್ಲಿ ತೆರೆಕಾಣಲಿದೆ. ಸಪ್ಟೆಂಬರ್​ ನಲ್ಲಿ ಮೊದಲ ಭಾಗ ಬಿಡುಗಡೆ ಆಗಲಿದೆ. ಅನೇಕ ವರ್ಷಗಳ ನಂತರ ಮಣಿರತ್ಂ ಅವರು ಬಾಲಿವುಡ್​ನ ಕ್ವೀನ್​ ಐಶ್ವರ್ಯಾ ರೈ ಬಚ್ಚನ್ ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತಂದಿದ್ದಾರೆ.
Published by:Divya D
First published: