Ponniyin Selvan: ರಜನಿಕಾಂತ್ ಕಾಲುಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ!

Ponniyin Selvan: ಐಶ್ವರ್ಯಾ ರೈ ನಟ ರಜನೀಕಾಂತ್ ಅವರ ಕಾಲುಮುಟ್ಟಿ ಆಶೀರ್ವಾದ ಪಡೆದಿದ್ದು ಹಿರಿಯ ನಟರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಪೊನ್ನಿಯನ್ ಸೆಲ್ವನ್ ಇವೆಂಟ್ ಅದ್ದೂರಿಯಾಗಿ ನಡೆದಿದೆ.

ಪೊನ್ನಿಯಿನ್ ಸೆಲ್ವನ್

ಪೊನ್ನಿಯಿನ್ ಸೆಲ್ವನ್

  • Share this:
ಸೌತ್​​ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆಯಲಿರುವ ಸಿನಿಮಾ ಪೊನ್ನಿಯಿನ್ ಸೆಲ್ವನ್ (Ponniyin Selvan) ಬಿಡುಗಡೆಗೆ ಇನ್ನೂ ಒಂದು ತಿಂಗಳು ಕೂಡಾ ಬಾಕಿ ಉಳಿದಿಲ್ಲ. ಚಿತ್ರದ ಟ್ರೇಲರ್‌ಗಾಗಿ (Trailer) ಅಭಿಮಾನಿಗಳ ಕಾಯುವಿಕೆ ಕೊನೆಯಾಗಿದೆ. ಸೆಪ್ಟೆಂಬರ್ 6 ರಂದು ಚೆನ್ನೈನಲ್ಲಿ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ದಕ್ಷಿಣ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಸಮಾರಂಭದಲ್ಲಿ ರಜನಿಕಾಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರೆ, ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan), ನಾಸೀರ್, ಮಣಿರತ್ನಂ ಮತ್ತು ಚಿತ್ರದ ಇತರ ಕಲಾವಿದರು ಮತ್ತು ಸಿಬ್ಬಂದಿ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗೌರವದ ಸಂಕೇತವಾಗಿ, ಐಶ್ವರ್ಯಾ ಸಮಾರಂಭದಲ್ಲಿ ರಜನಿಕಾಂತ್ ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ.

ಪೊನ್ನಿಯಿನ್ ಸೆಲ್ವನ್ ಟ್ರೈಲರ್-ಆಡಿಯೋ ಲಾಂಚ್ ನಲ್ಲಿ ರಜಿನಿಕಾಂತ್, ಕಮಲ್ ಹಾಸನ್

ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸೆಪ್ಟೆಂಬರ್ 30 ರಂದು ಬಹು ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಎರಡನೇ ಭಾಗವು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪೊನ್ನಿಯಿನ್ ಸೆಲ್ವನ್ ಅವರ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸೆಪ್ಟೆಂಬರ್ 6 ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ರಜನಿಕಾಂತ್ ಮತ್ತು ಕಮಲ್ ಹಾಸನ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಎಆರ್ ರೆಹಮಾನ್ ತಮ್ಮ ಆರ್ಕೆಸ್ಟ್ರಾದೊಂದಿಗೆ ಹಾಡುಗಳನ್ನು ಲೈವ್ ಆಗಿ ಪ್ರದರ್ಶಿಸಿದರು. ಇದರ ನಂತರ ಸೆಲೆಬ್ರಿಟಿಗಳು, ಪಾತ್ರವರ್ಗ ಮತ್ತು ತಂಡದವರು ಮಾತನಾಡಿದ್ದರು.

ಇದನ್ನೂ ಓದಿ: Ponniyin Selvan Song: ಕಾವೇರಿಯ ಇತಿಹಾಸ ಸಾರುವ ಪೊನ್ನಿ ನದಿ ಗೀತೆ, ಪೊನ್ನಿಯಿನ್ ಸೆಲ್ವನ್ ಮೊದಲ ಹಾಡು ರಿಲೀಸ್​

ಮಣಿ ರತ್ನಂಗೆ ಥ್ಯಾಂಕ್ಸ್ ಎಂದ ಐಶ್

ನಾನು ಇರುವರ್‌ನೊಂದಿಗೆ ಸಿನಿಮಾದಲ್ಲಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ನನ್ನನ್ನು ನಿಮ್ಮ ವಿದ್ಯಾರ್ಥಿಯಾಗಿ ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು. ಈ ಪ್ರಯಾಣ ನಂಬಲಾಗದಂತಿದೆ. ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ಸವಾಲಿನ ಕೆಲಸ. ಇದು ಎಂದೆಂದಿಗೂ ಸ್ಮರಣೀಯವಾಗಿರುತ್ತದೆ. ರಜನಿಕಾಂತ್ ಮತ್ತು ಕಮಲ್ ಸರ್, ನಿಮ್ಮಿಬ್ಬರೂ ಇಲ್ಲಿರುವುದು ಕನಸಿನ ಕ್ಷಣ. ನಾವು ವಿದ್ಯಾರ್ಥಿಗಳು, ಅಭಿಮಾನಿಗಳು ಎಂದಿದ್ದಾರೆ.

ಸಿನಿಮಾದ ಸ್ಟೋರಿ ಏನು?

ಚಿತ್ರದ ಕಥೆ 10ನೇ ಶತಮಾನದ ಆಸುಪಾಸಿನಲ್ಲಿದೆ. ಈ ಚಿತ್ರವು ಚೋಳ ಸಾಮ್ರಾಜ್ಯದ ಅಧಿಕಾರದ ಹೋರಾಟವನ್ನು ಆಧರಿಸಿದೆ. ಇದು ಕಾವೇರಿ ನದಿಯ ಮಗ ಪೊನ್ನಿಯಿನ್ ಸೆಲ್ವನ್ ಅವರ ಇತಿಹಾಸವಾಗಿದೆ. ಭಾರತೀಯ ಇತಿಹಾಸದ ಶ್ರೇಷ್ಠ ಆಡಳಿತಗಾರ ರಾಜರಾಜ ಚೋಳನ ಕಥೆಯನ್ನು ನಿರ್ದೇಶಕ ಮಣಿರತ್ನಂ ತೆರೆಯ ಮೇಳೆ ಅದ್ಧೂರಿಯಾಗಿ ತಂದಿದ್ದಾರೆ.

ಇದನ್ನೂ ಓದಿ: Ponniyin Selvan 1: ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್​ ಬಿಡುಗಡೆ, ಮತ್ತೊಂದು ಅದ್ಧುತ ದೃಶ್ಯಕಾವ್ಯಕ್ಕೆ ಸಾಕ್ಷಿಯಾಗಲಿದೆ ಭಾರತೀಯ ಚಿತ್ರರಂಗ

500 ಕೋಟಿ ಬಜೆಟ್​ ನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು, ಚಿತ್ರವು 2 ಭಾಗಗಳಲ್ಲಿ ತೆರೆಕಾಣಲಿದೆ. ಸಪ್ಟೆಂಬರ್​ ನಲ್ಲಿ ಮೊದಲ ಭಾಗ ಬಿಡುಗಡೆ ಆಗಲಿದೆ. ಅನೇಕ ವರ್ಷಗಳ ನಂತರ ಮಣಿರತ್ಂ ಅವರು ಬಾಲಿವುಡ್​ನ ಕ್ವೀನ್​ ಐಶ್ವರ್ಯಾ ರೈ ಬಚ್ಚನ್ ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತಂದಿದ್ದಾರೆ.

ಪೊನ್ನಿಯಿನ್ ಸೆಲ್ವನ್ ಟ್ರೈಲರ್ ಮತ್ತು ಆಡಿಯೋ ಬಿಡುಗಡೆಗೆ ಆಗಮಿಸಿದ ಐಶ್ವರ್ಯಾ ರೈ ಬಚ್ಚನ್ ಕಪ್ಪು  ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಮುಖ್ಯ ಅತಿಥಿಯಾಗಿ ರಜನಿಕಾಂತ್ ಅವರು ಚೆನ್ನೈನ ಸ್ಥಳಕ್ಕೆ ಆಗಮಿಸಿದರು. ಐಶ್ವರ್ಯ ಮತ್ತು ರಜನಿಕಾಂತ್ ಈ ಹಿಂದೆ ರೋಬೋಟ್ ಚಿತ್ರದಲ್ಲಿ ನಟಿಸಿದ್ದರು. ಸೌತ್ ಮೆಗಾಸ್ಟಾರ್ ಅವರನ್ನು ಭೇಟಿಯಾದ ನಂತರ, ಐಶ್ವರ್ಯಾ ರಜನಿಕಾಂತ್ ಅವರ ಪಾದಗಳನ್ನು ಮುಟ್ಟಿದರು, ಅವರ ಆಶೀರ್ವಾದವನ್ನು ಪಡೆದರು ಮತ್ತು ಅವರನ್ನು ಅಪ್ಪಿಕೊಂಡರು.
Published by:Divya D
First published: