Ponniyin Selvan: ಮಣಿರತ್ನಂ ಸಿನಿಮಾದಲ್ಲಿನ ಐಶ್ವರ್ಯಾ ರೈ ಪಾತ್ರ ಲೀಕ್​

ನಂದಿನಿ ಮತ್ತು ಮಂದಾಕಿನಿ ದೇವಿಯಾಗಿ ನಟಿಸುತ್ತಿರುವ ಐಶ್ವರ್ಯಾ ರೈ ಅವರ ನಂದಿನಿ ಪಾತ್ರದ ಲುಕ್​ ಆನ್​ಲೈನ್​​​ನಲ್ಲಿ ಲೀಕ್​ ಆಗಿದೆ

ಮಣಿರತ್ನಂ ಅವರ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಐಶ್ವರ್ಯಾ ರೈ

ಮಣಿರತ್ನಂ ಅವರ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಐಶ್ವರ್ಯಾ ರೈ

 • Share this:
  ಮಣಿರತ್ನಂ(Mani Ratnam) ನಿರ್ದೇಶನದಲ್ಲಿ ಪೊನ್ನಿಯಿನ್​ ಸೆಲ್ವನ್ (Ponniyin Selvan)​ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ( Aishwarya Rai Bachchan) ನಟಿಸುತ್ತಿರುವ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಈಗಾಗಲೇ ಸಾಕಷ್ಟು ಕುತೂಹಲವಿದೆ. ಅದರಲ್ಲೂ ಡಬಲ್ ರೋಲ್​ನಲ್ಲಿ ನಟಿಸುತ್ತಿರುವ ಐಶ್ವರ್ಯಾ ಪಾತ್ರ ಹೇಗೆ ಮೂಡಿಬರಲಿದೆ ಎಂಬ ಕಾತುರ ಕೂಡ ಹೆಚ್ಚಾಗಿದೆ. ಈ ನಡುವೆಯೇ ನಟಿ ಐಶ್ವರ್ಯಾ ರೈ ಬಚ್ಚನ್​​ ಅವರ ಲುಕ್​ ಚಿತ್ರದ ಸೆಟ್​ನಿಂದ ಲೀಕ್​ ಆಗಿದೆ. ನಂದಿನಿ ಮತ್ತು ಮಂದಾಕಿನಿ ದೇವಿಯಾಗಿ ನಟಿಸುತ್ತಿರುವ ಐಶ್ವರ್ಯಾ ರೈ ಅವರ ನಂದಿನಿ ಪಾತ್ರದ ಲುಕ್​ ಆನ್​ಲೈನ್​​​ನಲ್ಲಿ ಲೀಕ್​ ಆಗಿದೆ. ರಾಣಿಯಂತೆ ಅಲಂಕೃತರಾದ ನಟಿ ಐಶ್ವರ್ಯ ಎಲ್ಲರ ಗಮನ ಸೆಳೆದಿದ್ದಾರೆ.

  ಕಳೆದ ಕೆಲವು ವಾರಗಳಿಂದ ಪೊನ್ನಿಯಿನ್​ ಸೆಲ್ವನ್​ ಶೂಟಿಂಗ್​ ನಡೆಯುತ್ತಿದ್ದು, ಮಧ್ಯಪ್ರದೇಶದ ಓರ್ಕಾದಲ್ಲಿ ಅದ್ದೂರಿ ಸೆಟ್​ಗಳ ಮೂಲಕ ಚಿತ್ರೀಕರಣ ನಡೆಸಲಾಗಿದೆ. ಈ ವೇಳೆ ನಟಿ ಐಶ್ವರ್ಯಾ ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಆಭರಣದಿಂದ ಅಲಂಕೃತವಾಗಿ ಕಂಗೊಳಿಸುತ್ತಿದ್ದಾರೆ.  ಇನ್ನು ಈ ಚಿತ್ರದಲ್ಲಿ ನಟಿ ವರಲಕ್ಷ್ಮಿ ಐಶ್ವರ್ಯಾ ರೈ ಬಚ್ಚನ್​ ತಂಗಿ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಇವರಿಬ್ಬರ ನಡುವಿನ ಅನೇಕ ದೃಶ್ಯಗಳು ಚಿತ್ರದಲ್ಲಿದೆ. ಇತ್ತೀಚೆಗೆ ವರಲಕ್ಷ್ಮಿ ಐಶ್ವರ್ಯಾ ರೈ ಬಚ್ಚನ್​ ಕುಟುಂಬವನ್ನು ಭೇಟಿಯಾಗಿದ್ದರು.
  ನಟಿ ವಿಕ್ರಂ ಕೂಡ ಇತ್ತೀಚೆಗೆ ಚಿತ್ರೀಕರಣದ ತಂಡವನ್ನು ಸೇರಿದ್ದಾರೆ. ಇದರ ಜೊತೆಗೆ ಚಿತ್ರದಲ್ಲಿ ನಟ ಜಯಂ ರವಿ, ಕಾರ್ತಿ, ತ್ರಿಶಾ ಮತ್ತು ಪ್ರಕಾಶ್​​ ರಾಜ್​ ಕೂಡ ಇದ್ದಾರೆ.

  ಈ ಹಿಂದೆ ಐಶ್ವರ್ಯ ರೈ ಜೊತೆಗೆ ತಮಿಳು ಮತ್ತು ಹಿಂದಿಯಲ್ಲಿ 'ರಾವಣ್' ಸಿನಿಮಾ ಮಾಡಿದ್ದ ಮಣಿರತ್ನಂ ರಾಮಾಯಣ ಕತೆಗೆ ಆಧುನಿಕ ಸ್ಪರ್ಶ ನೀಡಿ ವಿಭಿನ್ನವಾದ ಪ್ರಯತ್ನ ಮಾಡಿದ್ದರು. ಇದೀಗ ತಮಿಳಿನ ಖ್ಯಾತ ಸಾಹಿತಿ ಕಲ್ಕಿ ಕೃಷ್ಣಮೂರ್ತಿ ಅವರ ಐತಿಹಾಸಿಕ ಕಾದಂಬರಿ ಆಧಾರಿತ 'ಪೊನ್ನಿಯಿನ್ ಸೆಲ್ವನ್' ಸಿನಿಮಾವನ್ನು ಈ ಜೋಡಿ ಮಾಡುತ್ತಿದ್ದಾರೆ.
  ಕಾದಂಬರಿ ಆಧಾರಿದ ಈ ಚಿತ್ರವು ಚೋಳ ರಾಜವಂಶದ ಕಥೆ ಹೊಂದಿದ್ದು ನಟಿ ಐಶ್ವರ್ಯ ನಂದಿನಿ ಪಾತ್ರದಲ್ಲಿ ಪೆರಿಯ ಪಜುವೆಟ್ಟರಾಯರ ಹೆಂಡತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಟ ಶರತ್​ ಕುಮಾರ್​ ಪೆರಿಯ ಪಜುವೆಟ್ಟರಾಯ ಪಾತ್ರ ನಿರ್ವಹಿಸಲಿದ್ದಾರೆ. ಇನ್ನು ಈ ಚಿತ್ರಕ್ಕೆ ಎಆರ್​ ರೆಹಮಾನ್​ ಸಂಗೀತ ಸಂಯೋಜನೆ ಮಾಡಿದ್ದಾರೆ
  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: