Ponniyin Selvan: ಮತ್ತೆ ಒಂದಾದ ಐಶ್ವರ್ಯ-ಬಚ್ಚನ್: 20 ವರ್ಷಗಳ ಬಳಿಕ ಮೋಡಿ ಮಾಡಲಿದ್ದಾರೆ ವಿಶ್ವಸುಂದರಿ

Ponniyin Selvan: ಎಸ್. ಶಂಕರ್ ನಿರ್ದೇಶನದ ತಮಿಳು ಸಿನಿಮಾ ಜೀನ್ಸ್ನಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಐಶ್ವರ್ಯ ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ತಮಿಳಿನಲ್ಲಿಯೇ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಸಿನಿಮಾದಲ್ಲಿ ಐಶ್ವರ್ಯ ಜೊತೆಗೆ ಮಾವ ಅಮಿತಾಭ್​ ಬಚ್ಚನ್ ಕೂಡ ತೆರೆ ಹಂಚಿಕೊಳ್ಳುತ್ತಿರುವುದು ಇನ್ನೊಂದು ವಿಶೇಷ.

Sushma Chakre | news18-kannada
Updated:September 25, 2019, 3:31 PM IST
Ponniyin Selvan: ಮತ್ತೆ ಒಂದಾದ ಐಶ್ವರ್ಯ-ಬಚ್ಚನ್: 20 ವರ್ಷಗಳ ಬಳಿಕ ಮೋಡಿ ಮಾಡಲಿದ್ದಾರೆ ವಿಶ್ವಸುಂದರಿ
ಐಶ್ವರ್ಯ ರೈ- ಅಮಿತಾಭ್​ ಬಚ್ಚನ್
  • Share this:
ವಿಶ್ವಸುಂದರಿ ಐಶ್ವರ್ಯ ರೈ ಚಿತ್ರರಂಗಕ್ಕೆ ಬಂದು 22 ವರ್ಷಗಳು ಕಳೆದಿದ್ದರೂ ಆಕೆಯ ಸೌಂದರ್ಯವಿನ್ನೂ ಮಾಸಿಲ್ಲ. ಇಂದಿಗೂ ಹೊಸ ತಲೆಮಾರಿನ ನಟಿಯರ ಸಮನಾಗಿ ನಿಲ್ಲುವಂತಹ ಮೈಮಾಟವನ್ನು ಹೊಂದಿರುವ ಐಶ್ವರ್ಯ ರೈಗೆ ಬಾಲಿವುಡ್​ನಲ್ಲಿ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ.

ಬಾಲಿವುಡ್​ನಲ್ಲಿ ಹಲವು ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸಿರುವ ಐಶ್ವರ್ಯಾ ರೈ ಕಾಲಿವುಡ್​ನಲ್ಲೂ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಎಸ್. ಶಂಕರ್ ನಿರ್ದೇಶನದ ತಮಿಳು ಸಿನಿಮಾ 'ಜೀನ್ಸ್'ನಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಐಶ್ವರ್ಯ ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ತಮಿಳಿನಲ್ಲಿಯೇ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕಾಲಿವುಡ್ ನಟ ಪ್ರಶಾಂತ್ ಜೊತೆಗೆ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಡಬಲ್ ರೋಲ್​ನಲ್ಲಿ ನಟಿಸಿದ್ದ ಐಶ್ವರ್ಯ 2010ರಲ್ಲಿ ತೆರೆಕಂಡಿದ್ದ ತಮಿಳಿನ 'ಎಂದಿರನ್' ಸಿನಿಮಾದಲ್ಲಿ ರಜನಿಕಾಂತ್​ ಜೊತೆ ನಟಿಸಿದ್ದೇ ಕೊನೆ. ಅದಾಗಿ 9 ವರ್ಷಗಳ ಬಳಿಕ ಮತ್ತೆ ಕಾಲಿವುಡ್​ ಕಡೆಗೆ ಪ್ರಯಾಣ ಬೆಳೆಸಿರುವ ಐಶ್ವರ್ಯಾ ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Radhika Kumaraswamy: ನೀವು ಟಿಕ್​ಟಾಕ್ ಮಾಡ್ತೀರಾ? ಹಾಗಿದ್ರೆ ರಾಧಿಕಾ ಕುಮಾರಸ್ವಾಮಿ ಆಫರ್​ ಮಿಸ್​ ಮಾಡ್ಕೋಬೇಡಿ!

ಒಂದೇ ಸಿನಿಮಾದಲ್ಲಿ ಮಾವ-ಸೊಸೆ:

ಸದಭಿರುಚಿಯ ಸಿನಿಮಾಗಳನ್ನು ಮಾಡುವುದರಲ್ಲಿ ಮಣಿರತ್ನಂ ಅವರದ್ದು ಎತ್ತಿದ ಕೈ. ಈ ಹಿಂದೆ ಐಶ್ವರ್ಯ ರೈ ಜೊತೆಗೆ ತಮಿಳು ಮತ್ತು ಹಿಂದಿಯಲ್ಲಿ 'ರಾವಣ್' ಸಿನಿಮಾ ಮಾಡಿದ್ದ ಮಣಿರತ್ನಂ ರಾಮಾಯಣ ಕತೆಗೆ ಆಧುನಿಕ ಸ್ಪರ್ಶ ನೀಡಿ ವಿಭಿನ್ನವಾದ ಪ್ರಯತ್ನ ಮಾಡಿದ್ದರು. ಇದೀಗ ತಮಿಳಿನ ಖ್ಯಾತ ಸಾಹಿತಿ ಕಲ್ಕಿ ಕೃಷ್ಣಮೂರ್ತಿ ಅವರ ಐತಿಹಾಸಿಕ ಕಾದಂಬರಿ ಆಧಾರಿತ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ಈ ಸಿನಿಮಾಗೆ ಐಶ್ವರ್ಯ ರೈ ನಾಯಕಿಯಾಗಿ ಆಯ್ಕೆಯಾಗಿದ್ದು, ಅವರು ದ್ವಿಪಾತ್ರದಲ್ಲಿ ನಟಿಸಲಿದ್ದಾರೆ.

ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಿಗೆ ವಿಕ್ರಂ, ಜಯಂ ರವಿ, ಕೀರ್ತಿ ಸುರೇಶ್ ಮುಂತಾದವರನ್ನು ಸಂಪರ್ಕಿಸಲಾಗಿದೆ. ಇನ್ನೂ ವಿಶೇಷವೆಂದರೆ ಈ ಸಿನಿಮಾದಲ್ಲಿ ನಟಿಸಲು ಐಶ್ವರ್ಯ ಅವರ ಮಾವ ಅರ್ಥಾತ್​ ಬಾಲಿವುಡ್​ ಬಿಗ್​ಬಿ ಅಮಿತಾಭ್​ ಬಚ್ಚನ್​ಗೂ ಆಹ್ವಾನ ನೀಡಲಾಗಿದೆಯಂತೆ. ಈ ಮೊದಲು ರಾವಣ್​ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ಒಟ್ಟಿಗೆ ತೆರೆ ಹಂಚಿಕೊಳ್ಳುವಂತೆ ಮಾಡಿದ್ದ ಮಣಿರತ್ನಂ ಈ ಸಿನಿಮಾದಲ್ಲಿ ಮಾವ-ಸೊಸೆಯನ್ನು ಒಂದುಮಾಡುತ್ತಿದ್ದಾರೆ.


 
View this post on Instagram
 

❤️


A post shared by AishwaryaRaiBachchan (@aishwaryaraibachchan_arb) on


ಐಶ್​ ಜೊತೆ ಮಹೇಶ್​ ಬಾಬು!:

ಈ ಸಿನಿಮಾದಲ್ಲಿ ನಾಯಕಿ ಮತ್ತು ನಾಯಕಿಯ ತಾಯಿ ಎರಡೂ ಪಾತ್ರಗಳಲ್ಲಿ ಐಶ್ವರ್ಯಾ ರೈ ಅವರೇ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಈ ಮೂಲಕ 20 ವರ್ಷಗಳ ಬಳಿಕ ಐಶ್ವರ್ಯಾ ಅವರನ್ನು ದ್ವಿಪಾತ್ರದಲ್ಲಿ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಚಿತ್ರೀಕರಣ ನವೆಂಬರ್​ನಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಇದರಲ್ಲಿ ಐಶ್ವರ್ಯ ರೈಗೆ ಜೋಡಿಯಾಗಿ ಟಾಲಿವುಡ್ ನಟ ಮಹೇಶ್ ಬಾಬು ನಟಿಸಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಒಟ್ಟಾರೆ ಮಣಿರತ್ನಂ ಅವರ ಬಹುನಿರೀಕ್ಷಿತ ಸಿನಿಮಾದಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್​ ಸ್ಟಾರ್​ಗಳು ಒಟ್ಟಾಗುವ ಲಕ್ಷಣಗಳು ಕಾಣುತ್ತಿವೆ.

ದುರಂತ ಪ್ರೇಮಕತೆ; ಪ್ರೇಯಸಿಗೆ ವಿಭಿನ್ನವಾಗಿ ಪ್ರಪೋಸ್​ ಮಾಡಲು ಹೋದವ ವಾಪಾಸ್​ ಬರಲೇ ಇಲ್ಲ!

1997ರಲ್ಲಿ ಮಣಿರತ್ನ ನಿರ್ದೇಶನದ 'ಇರುವರ್' ಸಿನಿಮಾ ಮೂಲಕ ನಟನಾರಂಗಕ್ಕೆ ಕಾಲಿಟ್ಟ ಐಶ್ವರ್ಯ ಮೊದಲ ಸಿನಿಮಾದಲ್ಲೇ ಸಿನಿರಸಿಕರ ಮನ ಗೆದ್ದಿದ್ದರು. ಈ ಸಿನಿಮಾ ತೆಲುಗು ಭಾಷೆಗೂ ಡಬ್ ಆಗಿ ಯಶಸ್ಸು ಕಂಡಿತ್ತು. ನಂತರ ಮಂಗಳೂರಿನ ಚೆಲುವೆ ಐಶ್ವರ್ಯಾಗೆ ಬಾಲಿವುಡ್​ನಿಂದ ಆಫರ್​ಗಳು ಬರಲಾರಂಭಿಸಿದವು. ದೇಶದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಮಣಿರತ್ನಂ ನಿರ್ದೇಶನದಲ್ಲಿ ತಮಿಳಿನ 'ಇರುವರ್', 'ಗುರು', 'ರಾವಣ್' ಸಿನಿಮಾದಲ್ಲಿ ನಟಿಸಿರುವ ಐಶ್ವರ್ಯಾ ರೈ ಇದೀಗ ಅವರ ನಿರ್ದೇಶನದಲ್ಲಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

First published:September 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading