ಮತ್ತೊಂದು ಇಂಟರ್​ನ್ಯಾಷನಲ್​ ಸಿನಿಮಾದಲ್ಲಿ ಐಶ್ವರ್ಯಾ ರೈ: 10 ವರ್ಷದ ಬಳಿಕ ಹಾಲಿವುಡ್​ಗೆ ರೀ ಎಂಟ್ರಿ!

2004ರಲ್ಲಿ ಮೊದಲ ಬಾರಿಗೆ ಐಶ್ವರ್ಯಾರೈ ಹಾಲಿವುಡ್(Hollywood)​ ಸಿನಿಮಾದಲ್ಲಿ ನಟಿಸಿದ್ದರು. ಬ್ರೈಡ್ ಅಂಡ್ ಪ್ರಿಜುಡೀಸ್(Bride and Prejudice) ಚಿತ್ರದ ಮೂಲಕ ಅಂತರಾಷ್ಟ್ರೀಯ ಚಿತ್ರರಂಗಕ್ಕೆ ಐಶ್ವರ್ಯಾ ಕಾಲಿಟ್ಟಿದ್ರು.

ಐಶ್ವರ್ಯಾ ರೈ ಬಚ್ಚನ್​

ಐಶ್ವರ್ಯಾ ರೈ ಬಚ್ಚನ್​

  • Share this:
1994ರಲ್ಲಿ ಐಶ್ವರ್ಯಾ ರೈ(Aishwarya Rai) ವಿಶ್ವ ಸುಂದರಿ(Miss World) ಪಟ್ಟ ಅಲಂಕರಿಸಿದ ಬಳಿಕ ಅವರು ಭಾರತದಲ್ಲಿ ತುಂಬಾ ಜನಪ್ರಿಯರಾದರು. 1997ರ ತಮಿಳು(Tamil) ಚಲನಚಿತ್ರ ‘ಇರುವನ್​ ಇನ್​ ಮನಿಲಾ’ದಲ್ಲಿ ಮೊದಲ ಬಾರಿಗೆ ಐಶ್ವರ್ಯಾ ರೈ ಬಣ್ಣ ಹಚ್ಚಿದ್ದರು. ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಐಶ್ವರ್ಯಾ ಕಾಲಿಟ್ಟಿದ್ದರು. ಅವರು ಮುಟ್ಟಿದ್ದೆಲ್ಲ ಚಿ(Gold)ನ್ನ ಎನ್ನುವಂತಾಗಿತ್ತು. ಅನೇಕ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಹಿಟ್(Hit) ಆಗಿದ್ದವು. ಎಲ್ಲ ಭಾಷೆಗಳಲ್ಲಿ ಐಶ್ವರ್ಯಾ ರೈ ಅವರ ಡಿಮ್ಯಾಂಡ್​ ಹೆಚ್ಚಾಗಿತ್ತು. 2004ರಲ್ಲಿ ಮೊದಲ ಬಾರಿಗೆ ಐಶ್ವರ್ಯಾರೈ ಹಾಲಿವುಡ್(Hollywood)​ ಸಿನಿಮಾದಲ್ಲಿ ನಟಿಸಿದ್ದರು. ಬ್ರೈಡ್ ಅಂಡ್ ಪ್ರಿಜುಡೀಸ್(Bride and Prejudice) ಚಿತ್ರದ ಮೂಲಕ ಅಂತರಾಷ್ಟ್ರೀಯ ಚಿತ್ರರಂಗಕ್ಕೆ ಐಶ್ವರ್ಯಾ ಕಾಲಿಟ್ಟಿದ್ರು. ಅಲ್ಲೂ ಅವರಿಗೆ ಯಶಸ್ಸು(Success) ಸಿಕ್ಕಿತ್ತು. ನೋಡ ನೋಡುತ್ತಲೇ ಐಶ್ವರ್ಯಾ ರೈ ಬಹುಬೇಡಿಕೆಯ ನಟಿ ಆದರು. ಬಾಲಿವುಡ್​, ಕಾಲಿವುಡ್​, ಹಾಲಿವುಡ್​ನಲ್ಲಿ ತಮ್ಮ ಬೇಡಿಕೆ ಹೆಚ್ಚಾಯ್ತು. ಹಲವಾರು ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದರು. ಇದೀಗ 10 ವರ್ಷದ ಬಳಿಕ ಹಾಲಿವುಡ್​ಗೆ ಐಶ್ವರ್ಯಾ ರೈ ರೀ ಎಂಟ್ರಿ ಕೊಡುತ್ತಿದ್ದಾರೆ. ಹೊಚ್ಚ ಹೊಸ ಇಂಟರ್​ನ್ಯಾಷನಲ್(International) ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸುತ್ತಿದ್ದಾರೆ.

‘ಥ್ರಿ  ವುಮೆನ್ಸ್​’ ಕಾದಾಂಬರಿ ಆಧಾರಿತ ಚಿತ್ರ​

ತಮ್ಮ ಮುಂದಿನ ಅಂತರಾಷ್ಟ್ರೀಯ ಸಿನಿಮಾಗೆ ಐಶ್ವರ್ಯಾ  ಸಹಿ ಹಾಕಿದ್ದಾರೆ.  ರವೀಂದ್ರನಾಥ್ ಟ್ಯಾಗೋರ್ ಅವರ ಕಾದಾಂಬರಿ  ‘ಥ್ರಿ ವುಮೆನ್ಸ್​" ಆಧಾರಿತ ಭಾರತೀಯ-ಅಮೇರಿಕನ್ ಸಿನಿಮಾದಲ್ಲಿ ಐಶ್ವರ್ಯಾ ರೈ ನಟಿಸಿಲಿದ್ದಾರೆ. ಈ ಸಿನಿಮಾವನ್ನುಫ್ಯೂಷನ್ ಗಾಯಕಿ, ರಂಗಭೂಮಿ ಬರಹಗಾರ್ತಿ ಮತ್ತು ನಿರ್ದೇಶಕಿ ಇಶಿತಾ ಗಂಗೂಲಿ ನಿರ್ದೇಶಿಸಲಿದ್ದಾರೆ.  ಈಸಿನಿಮಾದ ಮೂಲಕ ಇಶಿತಾ ಗಂಗೂಲಿ ನಿರ್ದೇಶನದ ಜವಾಬ್ದಾರಿಯನ್ನು ಹೊರಲಿದ್ದಾರೆ. ಮತ್ತೆ ಐಶ್ವರ್ಯಾ ರೈ ಹಾಲಿವುಡ್​ಗೆ ಹಾರಿರುವುದನ್ನು ಕಂಡು ಅವರ ಅಭಿಮಾನಿಗಳು ಖುಷ್​ ಆಗಿದ್ದಾರೆ. ಆದರೆ ಹಿಂದಿಯಲ್ಲೂ ಸಿನಿಮಾ ಮಾಡಿ ಅಂತಾ ಡಿಮ್ಯಾಂಡ್​ ಮಾಡಿದ್ದಾರೆ.

ಇದನ್ನು ಓದಿ : ಅಕ್ಷಯ್ ಕುಮಾರ್‌ಗೆ ‘ಖಿಲಾಡಿ’ ಹೆಸ್ರು ಬೇಡ ಅಂದಿದ್ರಂತೆ ಅವ್ರ ಮಾವ: ಯಾಕೆ ಅಂತ ಇಲ್ಲಿದೆ ನೋಡಿ..

‘ಥ್ರಿ ಲೆಟರ್​’ ಸಿನಿಮಾದಲ್ಲಿ ಐಶ್ವರ್ಯಾ ರೈ

ಈ ಬಗ್ಗೆ ಸ್ವತಃ ಈ ಸಿನಿಮಾದ ನಿರ್ದೇಶಕಿ ಇಶಿತಾ ಗಂಗೂಲಿ ನ್ಯೂಸ್​ 18 ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಐಶ್ವರ್ಯಾ ರೈಬಚನ್ ಚಲನಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ "ದಿ ಲೆಟರ್" ಎಂದು ಮರುನಾಮಕರಣ ಮಾಡಲಾಯಿತು ಏಕೆಂದರೆ ಇದು ಟ್ಯಾಗೋರ್ ಅವರ ಅತ್ತಿಗೆ ಕಡನ್ಬರಿ ದೇವಿಯವರ ಪತ್ರವನ್ನು ಆಧರಿಸಿದೆ. ಅದಕ್ಕೊಂದು ಶೀರ್ಷಿಕೆ ಕೊಟ್ಟಿದ್ದೆ. ಐಶ್ವರ್ಯಾ ಅವರು ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟಿದ್ದಾರೆ ಈ ಚಿತ್ರದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಎಂದು ನನಗೆ ನಿಜವಾಗಿಯೂ ಸಂತೋಷವಾಗಿದೆ.  ಎಂದು ಹೇಳಿದ್ದಾರೆ.

ಇದನ್ನು ಓದಿ : ಏನ್​​ ಗುರೂ.. ದಿನಕ್ಕೊಂದು ಲುಕ್​ನಲ್ಲಿ ಕೊಲ್ತಾಳೆ ಜಾನ್ವಿ ಕಪೂರ್​!

ಹಿಂದಿಯಲ್ಲಿ ಸಿನಿಮಾ ಮಾಡುವ ಆಸೆ ಹೊಂದಿದ್ದಇಶಿತಾ!

ಇಶಿತಾ ಹಿಂದಿಯಲ್ಲಿ ಸಿನಿಮಾ ಮಾಡಲು ಬಯಸಿದ್ದರು, ಆದರೆ  ಇಂಗ್ಲಿಷ್‌ನಲ್ಲೇ ಸಿನಿಮಾ ಮಾಡುವಂತೆ ನಟರೊಬ್ಬರು ಸೂಚಸಿದ್ದರಂತೆ. ಹೀಗಾಗಿ ಐಶ್ವರ್ಯಾ ಅವರೊಟ್ಟಿಗೆ ಹಾಲಿವುಡ್​ ಸಿನಿಮಾ ಮಾಡಲು ಸಜ್ಜಾಗಿದ್ದಾರೆ ಸ್ಕ್ರಿಪ್ಟ್ ಓದಿದಾಗ ಇಂಗ್ಲಿಷ್‌ನಲ್ಲಿಸಿನಿಮಾ ಮಾಡಿದರೆ ಕ್ಲಿಕ್​ ಆಗುತ್ತೆ ಎಂಬುದು ಅವರ ಅರಿವಿಗೆ ಬಂತಂತೆ. ಹೀಗಾಗಿ ಇಂಗ್ಲಿಷ್​ನಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್​ ಆರಂಭವಾಗಲಿದೆ. ನಟಿ ಐಶ್ವರ್ಯಾ ರೈ ಕೂಡ ಚಿತ್ರತಂಡವನ್ನು ಶೀಘ್ರದಲ್ಲೇ ಸೇರಿಕೊಳ್ಳಲಿದ್ದಾರೆ.
Published by:Vasudeva M
First published: