ಒಂದೆಡೆ ಕೊರೋನಾ ಭೀತಿ.... ಮತ್ತೊಂದೆಡೆ ಹೋಳಿ ಹಬ್ಬದ ಸಂಭ್ರಮ... ಕೊರೋನಾ ವೈರಸ್ ಸೋಂಕು ಹರಡುವ ಭಯದಿಂದಾಗಿ ಹಲವೆಡೆ ಈ ಸಲ ಹೋಳಿ ಆಚರಣೆಗೆ ಬ್ರೇಕ್ ಬಿದ್ದಿದೆ. ಆದರೂ ಕೆಲವೊಂದು ಕಡೆ ಹೋಳಿಯನ್ನು ಚಿಕ್ಕದಾಗಿ ಮನೆಗಳಲ್ಲೇ ಆಚರಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ.
ಬಾಲಿವುಡ್ನ ಬಿಗ್-ಬಿ ಅಮಿತಾಭ್ ಬಚ್ಚನ್ ಮನೆಯಲ್ಲೂ ಸಂಭ್ರಮದಿಂದ ಹೋಳಿ ಆಚರಿಸಲಾಗಿದೆ. ನಿನ್ನೆ ರಾತ್ರಿ ಹೋಲಿಕಾ ದಹನ ಮಾಡುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಗಿದೆ.
ಮನೆಯಲ್ಲಿ ಹೋಳಿ ಆಚರಿಸಿದ ಫೋಟೋಗಳನ್ನು ನಟಿ ಐಶ್ವರ್ಯಾ ರೈ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಮಿತಾಭ್, ಜಯಾ ಬಚ್ಚನ್, ಐಶ್ವರ್ಯಾ ಹಾಗೂ ಮಗಳು ಆರಾಧ್ಯ ಸಹ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Deepika Padukone: ಕಡಲ ಕಿನಾರೆಯಲ್ಲಿ ದೀಪಿಕಾ ಮಾದಕ ಮೈಮಾಟ: ಮನಸೋತ ಅಭಿಮಾನಿಗಳು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ