• Home
  • »
  • News
  • »
  • entertainment
  • »
  • Aishwarya Rai Bachchan: ಸಿ ಸೆಕ್ಷನ್ ಬೇಡ ಎಂದು ನಾರ್ಮಲ್ ಡೆಲಿವರಿ ಆಯ್ಕೆ ಮಾಡಿದ್ದ ಐಶ್, ನನ್ ಸೊಸೆ ಗಟ್ಟಿಗಿತ್ತಿ ಎಂದ ಬಿಗ್ ಬಿ

Aishwarya Rai Bachchan: ಸಿ ಸೆಕ್ಷನ್ ಬೇಡ ಎಂದು ನಾರ್ಮಲ್ ಡೆಲಿವರಿ ಆಯ್ಕೆ ಮಾಡಿದ್ದ ಐಶ್, ನನ್ ಸೊಸೆ ಗಟ್ಟಿಗಿತ್ತಿ ಎಂದ ಬಿಗ್ ಬಿ

ಐಶ್ವರ್ಯಾ ರೈ

ಐಶ್ವರ್ಯಾ ರೈ

ಐಶ್ ಸಾಮಾನ್ಯ ಹೆರಿಗೆಯನ್ನೇ ಬಯಸಿದ್ದರು. 2-3 ಗಂಟೆಗಳ ಕಾಲ ತೀವ್ರ ಹೆರಿಗೆ ನೋವಿನಲ್ಲಿದ್ದರು. ಆದರೆ ನಮ್ಮ ಯಾರ ಮಾತನ್ನೂ ಆಕೆ ಕೇಳುತ್ತಿರಲಿಲ್ಲ. ಸಾಮಾನ್ಯ ಹೆರಿಗೆ ಬೇಕೆಂದೇ ಐಶ್ ಹಠ ಹಿಡಿದಿದ್ದರು ಎಂದು ಅಮಿತಾಭ್ ಹೇಳಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಐಶ್ವರ್ಯಾ ರೈ (Aishwarya Rai) ಅತ್ಯುತ್ತಮ ನಟಿ, ಜನಪ್ರಿಯ ಜಾಗತಿಕ ಹೆಸರುವಾಸಿ ವ್ಯಕ್ತಿಯಾಗಿ ಅಂತೆಯೇ ತನ್ನ ಪ್ರೀತಿಯ ಮಗಳು ಆರಾಧ್ಯಾಳ ಪ್ರೀತಿಯ ಅಮ್ಮನಾಗಿ ಬಚ್ಚನ್ ಕುಟುಂಬದ ಸೊಸೆಯಾಗಿ (Daughter in Law) ಹಾಗೂ ಅನುರೂಪ ಪತ್ನಿಯಾಗಿ ಸಮಾಜದಲ್ಲಿ ತನ್ನ ಸ್ಥಾನಮಾನವನ್ನು ಉಳಿಸಿಕೊಂಡಿದ್ದಾರೆ. ಐಶ್ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಕೆಲವೊಂದು ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ. ಆ ಸಿದ್ಧಾಂತಕ್ಕೆ ತಕ್ಕ ಹಾಗೆಯೇ ತಮ್ಮ ನಿರ್ಧಾರಗಳನ್ನು ಐಶ್ ಮಾಡುತ್ತಾರೆ. ಕೆಲವೊಂದು ನಿಯಮಾವಳಿಗಳನ್ನು ಐಶ್ ಸರಿಯಾದ ನಿರ್ಧಾರ ಹಾಗೂ ತಮ್ಮ ಅಭಿಪ್ರಾಯಗಳಿಗೆ ನಿಖರವಾಗಿಲ್ಲದಿದ್ದರೆ ಒಪ್ಪಿಕೊಳ್ಳುವುದಿಲ್ಲ ಎಂಬ ಮಾತೂ ಇದೆ.


1994 ರಲ್ಲಿ ವಿಶ್ವ ಸುಂದರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಟಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಪುತ್ರ ಅಭಿಷೇಕ್‌ನನ್ನು ವಿವಾಹವಾಗುವ ಮೂಲಕ ಬಾಲಿವುಡ್‌ನಲ್ಲಿ ಹೆಸರಾಂತ ವ್ಯಕ್ತಿಯಾಗಿ ಮಾರ್ಪಟ್ಟರು. ಆರಾಧ್ಯ ಎಂಬ ಮುದ್ದಿನ ಮಗಳು ಇವರಿಗಿದ್ದಾಳೆ. ನವೆಂಬರ್ 16, 2011 ರಂದು ಐಶ್ ತಮ್ಮ ಪುತ್ರಿಗೆ ಜನ್ಮ ನೀಡಿದರು.


ಸಾಮಾನ್ಯ ಹೆರಿಗೆಯನ್ನೇ ಆರಿಸಿಕೊಂಡ ಗಟ್ಟಿಗಿತ್ತಿ


ತಮ್ಮ ಹುಟ್ಟುಹಬ್ಬವಾದ ನವೆಂಬರ್ 1 ರಂದು ಆಚರಣೆಯ ಸಂಭ್ರಮದ ಸಮಯದಲ್ಲಿಯೇ ಐಶ್ ಗರ್ಭವತಿ ಕೂಡ ಆಗಿದ್ದರು. ಆರಾಧ್ಯ ಐಶ್ ಗರ್ಭದಲ್ಲಿದ್ದಾಗ ಆಕೆಗೆ 38 ವರ್ಷ ವಯಸ್ಸಾಗಿತ್ತು. ತುಂಬಾ ತಡವಾದ ಗರ್ಭಧಾರಣೆಯನ್ನು ಐಶ್ ಹೊಂದಿದ್ದರು. ಸಾಮಾನ್ಯ ಹೆರಿಗೆ ಈ ವಯಸ್ಸಿನಲ್ಲಿ ಕಷ್ಟ ಎಂದೇ ಪರಿಗಣಿತವಾಗಿರುತ್ತದೆ.


ಅದರೂ ಐಶ್ ಸಿ ಸೆಕ್ಶನ್‌ಗೆ ಒಳಗಾಗಲು ಬಯಸದೆ ಸಾಮಾನ್ಯ ಹೆರಿಗೆಯನ್ನೇ ಆರಿಸಿಕೊಂಡ ಗಟ್ಟಿಗಿತ್ತಿಯಾಗಿದ್ದರು. ಹರೆಯದಲ್ಲಿ ಪ್ರತಿಯೊಬ್ಬ ಮಹಿಳೆಯರೂ ಹೆಚ್ಚು ನೋವಿಲ್ಲದ ಸಿ-ಸೆಕ್ಶನ್ ಹೆರಿಗೆಯನ್ನೇ ಆರಿಸಿಕೊಳ್ಳುತ್ತಾರೆ. ಆದರೆ ಐಶ್ ಸಾಮಾನ್ಯ ಹೆರಿಗೆಯನ್ನು ಆರಿಸಿಕೊಂಡಿದ್ದಲ್ಲದೆ ನೋವು ನಿವಾರಕಗಳನ್ನು ಬೇಡ ಎಂದು ನಿರಾಕರಿಸಿದ್ದರು.


ಐಶ್ ಕುರಿತು ಮಾವ ಅಮಿತಾಭ್ ಮಾತುಗಳೇನು?


2011ರಲ್ಲಿ ಆರಾಧ್ಯ ಜನಿಸಿದ ನಂತರ, ಆರಾಧ್ಯಾಳ ಅಜ್ಜ ಅಮಿತಾಭ್ ತಮ್ಮ ಸೊಸೆ ಐಶ್ ಗರ್ಭಧಾರಣೆಯ ಸಮಯದಲ್ಲಿ ನಡೆಸಿದ ಹೋರಾಟದ ಕುರಿತು ದೀರ್ಘವಾದ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಹೆರಿಗೆಯ ನೋವಿನ ಸಮಯದಲ್ಲೂ ಐಶ್ ದೃಢವಾಗಿದ್ದರು ಹಾಗೂ ಸಾಕಷ್ಟು ನೋವಿದ್ದರೂ ಐಶ್ ಕಂಗೆಟ್ಟಿರಲಿಲ್ಲ ಎಂಬುದನ್ನು ಅಮಿತಾಭ್ ತಿಳಿಸಿದ್ದಾರೆ.


14 ರ ರಾತ್ರಿ ನಾವು ಆಸ್ಪತ್ರೆಗೆ ಐಶ್ವರ್ಯಾರನ್ನು ಕರೆದುಕೊಂಡು ಹೋಗಿದ್ದಾಗ ವೈದ್ಯರು ಮಗು ಯಾವಾಗ ಬೇಕಾದರೂ ತಾಯಿಯ ಗರ್ಭದಿಂದ ಹೊರಗೆ ಬರಬಹುದು ಎಂದು ಹೇಳಿದ್ದರು. 16 ರ ಬೆಳಗ್ಗೆ ಮಗುವಿನ ಹೆರಿಗೆ ಆಯಿತು. ಈ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಹೆರಿಗೆಯ ಸಮಯದಲ್ಲಿ ಆಗುವ ನೋವು ಹಾಗೂ ಭಯದಿಂದ ಹೆಚ್ಚಾಗಿ ಸಿ-ಸೆಕ್ಶನ್ ಅನ್ನೇ ಆರಿಸಿಕೊಳ್ಳುತ್ತಾರೆ.


ಇದನ್ನೂ ಓದಿ: Jahvi Kapoor: ಜೂನಿಯರ್ NTR ಜೊತೆ ಜಾನ್ವಿ! ಸೌತ್​ ಇಂಡಸ್ಟ್ರಿಗೆ ಶ್ರೀದೇವಿ ಮಗಳ ಎಂಟ್ರಿ


ಆದರೆ ಐಶ್ ಸಾಮಾನ್ಯ ಹೆರಿಗೆಯನ್ನೇ ಬಯಸಿದ್ದರು. 2-3 ಗಂಟೆಗಳ ಕಾಲ ತೀವ್ರ ಹೆರಿಗೆ ನೋವಿನಲ್ಲಿದ್ದರು. ಆದರೆ ನಮ್ಮ ಯಾರ ಮಾತನ್ನೂ ಆಕೆ ಕೇಳುತ್ತಿರಲಿಲ್ಲ. ಸಾಮಾನ್ಯ ಹೆರಿಗೆ ಬೇಕೆಂದೇ ಐಶ್ ಹಠ ಹಿಡಿದಿದ್ದರು ಎಂದು ಅಮಿತಾಭ್ ಹೇಳಿದ್ದಾರೆ. ಯಾವುದೇ ನೋವು ನಿವಾರಕವನ್ನು ಬಳಸದೆಯೇ ಐಶ್ ಸಾಮಾನ್ಯ ಹೆರಿಗೆಗೆ ತಯಾರಾಗಿದ್ದಳು ಎಂಬುದನ್ನು ಅಮಿತಾಭ್ ಇಲ್ಲಿ ಸ್ಮರಿಸಿಕೊಂಡಿದ್ದಾರೆ.


ಐಶ್ ಪೊನ್ನಿಯಿನ್ ಸೆಲ್ವನ್ ಪಯಣ


ತಮ್ಮ ವೃತ್ತಿ ಜೀವನದಲ್ಲಿ ಕೂಡ ಐಶ್ ತಮ್ಮ ವ್ಯಕ್ತಿತ್ವಕ್ಕೆ ಸೂಕ್ತವಾದ ಪಾತ್ರವನ್ನೇ ಆರಿಸಿಕೊಳ್ಳುತ್ತಿದ್ದು ಇತ್ತೀಚೆಗೆ ಮಣಿರತ್ನಂ ಅವರ ಡ್ರೀಮ್ ಪ್ರಾಜೆಕ್ಟ್ ಪೊನ್ನಿಯಿನ್ ಸೆಲ್ವನ್ I ರಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ ಪಳುವೂರ್ ರಾಣಿ ನಂದಿನಿಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.


ತಮ್ಮ ಪಾತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನು ಹೇಳಿರುವ ನಟಿ ಕಥಾಪಾತ್ರವು ಮಹಿಳೆಯರನ್ನು ಪೂರ್ಣ ಶಕ್ತಿ ರೂಪದಲ್ಲಿ ಬಿಂಬಿಸಿದೆ ಎಂದು ತಿಳಿಸಿದ್ದಾರೆ. ಮಹಿಳೆಯರು ಯಾವಾಗಲೂ ಗಟ್ಟಿಮನಸ್ಸಿನವರು ಹಾಗೂ ಅವರ ದೃಢತೆ ಸಾಮರ್ಥ್ಯ ಹೊರಬರಲು ಅವರ ವಯಸ್ಸಿಗೆ ಸೂಕ್ತವಾದ ರೀತಿಯಲ್ಲಿ ಅವಕಾಶಗಳನ್ನು ನೀಡಬೇಕು ಎಂದು ಹೇಳಿದ್ದಾರೆ.


ಇದನ್ನೂ ಓದಿ: ‘ಮಿಲಿ’ ಶೂಟಿಂಗ್​​ನಲ್ಲಿ ವಿಪರೀತ ನೋವು! ವೇದನೆ ತಾಳದೆ ಪೇನ್ ಕಿಲ್ಲರ್ ತಗೊಳ್ತಿದ್ರಂತೆ ಜಾನ್ವಿ


ತನ್ನ ಸಾಮರ್ಥ್ಯ ಹಾಗೂ ದೃಢತೆಯನ್ನು ಪಾತ್ರದ ರೂಪದಲ್ಲಿ ಪ್ರದರ್ಶಿಸಲು ಅವಕಾಶ ನೀಡಿದ ಮಣಿರತ್ನಂ ಅವರಿಗೆ ತಾನು ಕೃತಜ್ಞಳು ಎಂದು ನಟಿ ಹೇಳಿದ್ದಾರೆ. ತಮ್ಮ ಶಕ್ತಿಯನ್ನು ವ್ಯಕ್ತಪಡಿಸಲು ಹಾಗೂ ಅದನ್ನು ಸಾಕಾರಗೊಳಿಸಲು ಮಹಿಳೆಗೆ ಸೂಕ್ತ ವೇದಿಕೆ ಬೇಕು ಎಂದು ಹೇಳಿರುವ ಐಶ್, ತಮ್ಮ ಕಥಾಪಾತ್ರದಲ್ಲಿ ಅಂದಿನ ನಾರಿಮಣಿಯರನ್ನು ಇಂದಿನ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಣಿರತ್ನಂ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.


ಮಣಿರತ್ನಂ ಅವರ ವಿಶೇಷತೆ ಎಂದರೆ ಸಂಭಾಷಣೆ ಹಾಗೂ ಚಿತ್ರಕಥೆಯನ್ನು ಮೀರಿ ಪಾತ್ರದಲ್ಲಿ ನಮ್ಮ ಅಭಿನಯವನ್ನು ಮನೋಜ್ಞವಾಗಿ ಪ್ರದರ್ಶಿಸುವುದಾಗಿದೆ. ತಮ್ಮ ಚಿತ್ರಗಳಲ್ಲಿ ಮಹಿಳಾ ಪ್ರಧಾನ ಪಾತ್ರವನ್ನೇ ನೀಡುವ ಮಣಿರತ್ನಂ ಆಕೆಯನ್ನು ನಾಯಕಿಯಾಗಿ ಬಿಂಬಿಸುವಲ್ಲಿ ಸಿದ್ಧಹಸ್ತರು. ಹಲವಾರು ಚಿತ್ರಗಳಲ್ಲಿ ನಾನು ಅವರೊಂದಿಗೆ ಕೆಲಸ ಮಾಡಿರುವುದರಿಂದ ಈ ಮಾತು ನಿಜ ಎಂದು ಐಶ್ ಎಂದು ತಿಳಿಸಿದ್ದಾರೆ.

Published by:Divya D
First published: