ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ (Aishwarya Rai, Abhishek Bachchan) ಅವರ ಜೋಡಿ ಸಿನಿಮಾ ಪ್ರಿಯರ ಅತ್ಯಂತ ಅಚ್ಚುಮೆಚ್ಚಿನ ಬಾಲಿವುಡ್ ಜೋಡಿಗಳಲ್ಲಿ ಒಂದು. ಈ ದಂಪತಿ ಬಹಳ ಸಮಯದಿಂದ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲವಾದರೂ, ಆಗೊಮ್ಮೆ ಈಗೊಮ್ಮೆ ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಂಡು ಅಥವಾ ಸಾಮಾಜಿಕ ಮಾಧ್ಯಮದ ಪೋಸ್ಟ್ಗಳ ಮೂಲಕ ಅವರು ಅಭಿಮಾನಿಗಳ ಮನ ಗೆಲ್ಲುತ್ತಾರೆ. ಇದೀಗ ವೈರಲ್ ಪೋಟೋ ಒಂದರ ಕಾರಣದಿಂದ ಈಗ ಮತ್ತೊಮ್ಮೆ ಅಭಿ-ಐಶ್ ಸುದ್ದಿಯಲ್ಲಿದ್ದಾರೆ. ಆ ಪೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅವರ ಫ್ಯಾನ್ ಪೇಜ್ಗಳಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವರವಧುವಿನ ಉಡುಗೆಯಲ್ಲಿ ಕ್ಯಾಮರಾಗೆ ನಗು ಮುಖದ ಪೋಸ್ ಕೊಟ್ಟು ನಿಂತಿರುವುದನ್ನು ನೋಡಬಹುದು.
ವೈಲ್ ಆದ ಫೋಟೋ
ರುತ್ (RUTH) ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ಆ ಫೋಟೋವನ್ನು ಹಂಚಿಕೊಂಡಿದ್ದು, “ಅವಳ ನಗು ಎಲ್ಲವನ್ನು ಹೇಳುತ್ತಿದೆ #ಮೈ ಲವ್ಲೀಸ್ “ ಎಂಬ ಅಡಿಬರಹವನ್ನು ಕೂಡ ನೀಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಇಂತಹ ಪೋಟೋಗಳನ್ನು ಶೇರ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ, ಇದರಲ್ಲಿ ಸುದ್ದಿ ಆಗುವಂತದ್ದೇನಿದೆ ಅನ್ನುತ್ತೀರಾ? ಖಂಡಿತಾ ಇದೆ!
ಯಾಕೆಂದರೆ ಆ ಫೋಟೋ ಅಸಲಿಯಲ್ಲ, ನಕಲಿ. ಹಾಗಂತ ಖುದ್ದು ಜೂನಿಯರ್ ಬಚ್ಚನ್ ಅವರೇ ಸ್ಪಷ್ಟಪಡಿಸಿದ್ದಾರೆ.
Her laugh n his Smile say it all 😍❤️ #MyLovelies #AbhishekBachchan #AishwaryaRaiBachchan #TBThursday pic.twitter.com/HA4iGi0XhS
— Ruth (@Ruth4ashab) September 15, 2021
ಆಗಿದ್ದೇನೆಂದರೆ, ರುತ್ ಅವರು ಹಂಚಿದ ಆ ಫೋಟೋ ಅಭಿಷೇಕ್ ಅವರ ಗಮನಕ್ಕೆ ಬಂತು. ಕೂಡಲೇ ಅವರು ಇದು ನಕಲಿ ಫೋಟೋ, ತಮ್ಮದಲ್ಲ ಎಂದು ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ‘ಬಿಗ್ ಬುಲ್’ ನಟ ಈ ಫೋಟೋ ನಕಲಿ ಎಂಬುದನ್ನು ಸ್ಪಷ್ಟಪಡಿಸುತ್ತಾ, “ಇದು ಫೋಟೋಶಾಪ್ ಮಾಡಲಾದ ಚಿತ್ರ” ಎಂದು ಬರೆದುಕೊಂಡು, ಕೊನೆಯಲ್ಲಿ ಕೈಮುಗಿಯುವ ಇಮೋಜಿಯನ್ನು ಕೂಡ ಹಾಕಿದ್ದಾರೆ.
ಅಭಿ ಮತ್ತು ಐಶ್ ಉಮ್ರಾವೋ ಜಾನ್ ಎಂಬ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು, ಆ ಸಂದರ್ಭದಲ್ಲಿ ಇಬ್ಬರಲ್ಲೂ ಪ್ರೇಮಾಂಕುರವಾಯಿತು. 2007ರ ಏಪ್ರಿಲ್ 20 ರಂದು ಬಚ್ಚನ್ ಬಂಗಲೆ ಪ್ರತೀಕ್ಷಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಅವರಿಬ್ಬರ ವಿವಾಹ ನಡೆಯಿತು. 2011ರಲ್ಲಿ ಮಗಳು ಆರಾಧ್ಯ ಹುಟ್ಟಿದಳು.
ಮಗಳ ಆನ್ಲೈನ್ ಕ್ಲಾಸ್ನಲ್ಲಿ ಅಭಿ-ಐಶ್ ಬ್ಯುಸಿ
ಇತ್ತೀಚೆಗೆ, ಅಮಿತಾಭ್ ಬಚ್ಚನ್ ಅವರು ತಮ್ಮ ಶೋ, ಕೌನ್ ಬನೇಗಾ ಕರೋಡ್ಪತಿ 13 ರಲ್ಲಿ , ಅವರಿಬ್ಬರು ತಮ್ಮ ಮಗಳು ಆರಾಧ್ಯಳ ಆನ್ಲೈನ್ ತರಗತಿಯಲ್ಲಿ ವ್ಯಸ್ಥರಾಗಿದ್ದಾರೆ ಎಂದು ಹೇಳಿಕೊಂಡಿದ್ದರು. “ನಮ್ಮ ಮನೆಯಲ್ಲೂ ಆನ್ಲೈನ್ ಶಿಕ್ಷಣ ಪಡೆಯುತ್ತಿರುವ ಬಾಲಕಿ ಇದ್ದಾಳೆ. ಇಡೀ ದಿನ ಅದರಲ್ಲೇ ಇರುತ್ತಾಳೆ- ಮತ್ತು ತಂದೆತಾಯಿ ಇಬ್ಬರೂ ಅಲ್ಲೇ ಸಹಯೋಗಿಗಳಾಗಿ ಕೂತಿರುತ್ತಾರೆ, ಹೇಗೆ ಕಂಪ್ಯೂಟರ್ ಚಾಲನೆ ಮಾಡಬೇಕು , ಯಾವ ಪಿಪಿಟಿ ಮಾಡಬೇಕು, ಎಲ್ಲಾ ರೀತಿಯ ಸಂದೇಶ ನೀಡುತ್ತಿರುತ್ತಾರೆ” ಎಂದು ಬಚ್ಚನ್ ಆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಗೋಡಂಬಿ ಪ್ರಿಯರ ನೀವು?; ಹಾಗಾದ್ರೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ!
ಅಭಿಷೇಕ್ ಇತ್ತೀಚೆಗೆ ತಮ್ಮ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಏಟು ಮಾಡಿಕೊಂಡಿದ್ದರ ಕಾರಣಕ್ಕೆ ಸುದ್ದಿಯಲ್ಲಿದ್ದರು.
ಕೊನೆಯದಾಗಿ ಅವರು ಬಿಗ್ ಬುಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಐಶ್ವರ್ಯ ರೈ ಬಚ್ಚನ್ ಅವರು ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಮರಳುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಂ, ಕಾರ್ತಿ, ತ್ರಿಶಾ ಕೃಷ್ಣನ್, ಪ್ರಕಾಶ್ ರಾಜ್, ಜಯಮ್ ರವಿ ಮತ್ತು ಐಶ್ವರ್ಯ ಲಕ್ಷ್ಮಿ ಕೂಡ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ