Aishwarya Rai: ಐಶ್ವರ್ಯಾ ರೈ, ಆರಾಧ್ಯಾ, ಜಯಾ ಬಚ್ಚನ್​ಗಿಲ್ಲ ಕೊರೋನಾ ಕಂಟಕ!

ಬಚ್ಚನ್​ ಕುಟುಂಬಕ್ಕೆ ಕೊರೋನಾ ಕಂಟಕವಾಗಿರುವುದು ಅವರ ಅಭಿಮಾನಿ ಬಳಗಕ್ಕೆ ಆತಂಕ ತಂದೊಡ್ಡಿದೆ. ಕೊರೋನಾದಿಂದ ಬಚ್ಚನ್​ ಕುಟುಂಬ ಮುಕ್ತಿ ಪಡೆಯಲಿ ಎಂದು ಅನೇಕರು ಟ್ವೀಟ್​ ಮಾಡುತ್ತಿದ್ದಾರೆ.

news18-kannada
Updated:July 12, 2020, 8:38 AM IST
Aishwarya Rai: ಐಶ್ವರ್ಯಾ ರೈ, ಆರಾಧ್ಯಾ, ಜಯಾ ಬಚ್ಚನ್​ಗಿಲ್ಲ ಕೊರೋನಾ ಕಂಟಕ!
ಬಚ್ಚನ್ ಕುಟುಂಬ
  • Share this:
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಮಗ ಅಭಿಷೇಕ್​ ಬಚ್ಚನ್​ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ ಇಡೀ ಕುಟುಂಬಕ್ಕೆ ಕೊರೋನಾ ವೈರಸ್​ ಹರಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಕೊರೋನಾ ಪರೀಕ್ಷೆ ವೇಳೆ ಐಶ್ವರ್ಯಾ ರೈ ಬಚ್ಚನ್​, ಆರಾಧ್ಯಾ ಬಚ್ಚನ್​ ಹಾಗೂ ಜಯಾ ಬಚ್ಚನ್​ಗೆ ಕೊರೋನಾ ನೆಗೆಟಿವ್​ ಬಂದಿದೆ ಎಂದು ಆಸ್ಪತ್ರೆ ಮೂಲಗಳು ನ್ಯೂಸ್​18ಗೆ ತಿಳಿಸಿವೆ. 

"ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಸದಸ್ಯರು ಮತ್ತು ಸಿಬ್ಬಂದಿವರ್ಗದವರ ಪರೀಕ್ಷೆ ನಡೆಯುತ್ತಿದೆ. ಅದರ ಫಲಿತಾಂಶ ಬರಬೇಕಿದೆ. ಕಳೆದ 10 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ,” ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್​ ತಮಗೂ ಕೊರೋನಾ ವೈರಸ್​ ಇರುವ ವಿಚಾರವನ್ನು ಒಪ್ಪಿಕೊಂಡಿದ್ದರು.

ನನಗೆ ಮತ್ತು ನನ್ನ ತಂದೆಗೆ ಕೊರೋನಾ ಪಾಸಿಟಿವ್​ ಇರುವುದು ದೃಢವಾಗಿದೆ. ನಾವು ಚಿಕಿತ್ಸೆ ಪಡೆಯುತ್ತಿದ್ದೇವೆ. ಹೀಗಾಗಿ ನಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕೇಳಿದ್ದರು. ಈ ಬೆನ್ನಲ್ಲೇ ಐಶ್ವರ್ಯಾ, ಆರಾಧ್ಯಾ ಹಾಗೂ ಜಯಾ ಅವರಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು.

ಬಚ್ಚನ್​ ಕುಟುಂಬಕ್ಕೆ ಕೊರೋನಾ ಕಂಟಕವಾಗಿರುವುದು ಅವರ ಅಭಿಮಾನಿ ಬಳಗಕ್ಕೆ ಆತಂಕ ತಂದೊಡ್ಡಿದೆ. ಕೊರೋನಾದಿಂದ ಬಚ್ಚನ್​ ಕುಟುಂಬ ಮುಕ್ತಿ ಪಡೆಯಲಿ ಎಂದು ಅನೇಕರು ಟ್ವೀಟ್​ ಮಾಡುತ್ತಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ. ಶೂಜಿತ್ ಸಿರ್ಕಾರ್ ಅವರ ‘ಗುಲಾಬೊ ಸಿಬಾಬೊ’ ಹಾಸ್ಯ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಪ್ರೈಮ್​ನಲ್ಲಿ ರಿಲೀಸ್​ ಆಗಿದೆ. ‘ಚೆಹರೆ’, ‘ಬ್ರಹ್ಮಾಸ್ತ್ರ’, ‘ಝಂಡ್’ ಅವರ ಮುಂಬರುವ ಸಿನಿಮಾಗಳಾಗಿವೆ. ಇದರ ಜೊತೆಗೆ ಬಿಗ್ ಬಿ ಅವರು ಕೌನ್ ಬನೇಗ ಕರೋಡ್​ಪತಿ ರಿಯಾಲಿಟಿ ಶೋನ 12ನೇ ಸೀಸನ್​ನಲ್ಲೂ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್​ ಬಚ್ಚನ್​ ನಟೆನೆಯ ‘ಬ್ರೆತ್​: ಇನ್​ ಟು ದಿ ಶ್ಯಾಡೊ’ ವೆಬ್​ ಸಿರೀಸ್​​ ಜುಲೈ 10ರಂದು ಅಮೆಜಾನ್​ ಪ್ರೈಮ್​ ನಲ್ಲಿ ಬಿಡುಗಡೆಯಾಗಿದೆ.
Published by: Rajesh Duggumane
First published: July 12, 2020, 8:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading