• Home
  • »
  • News
  • »
  • entertainment
  • »
  • Aishwarya Rai: 30 ವರ್ಷಗಳ ಹಿಂದೆ ಐಶ್ವರ್ಯ ರೈ ಹೇಗಿದ್ರು ಗೊತ್ತಾ? ಅವರು ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗ್ತಿರಾ!

Aishwarya Rai: 30 ವರ್ಷಗಳ ಹಿಂದೆ ಐಶ್ವರ್ಯ ರೈ ಹೇಗಿದ್ರು ಗೊತ್ತಾ? ಅವರು ಮೊದಲ ಸಂಭಾವನೆ ಕೇಳಿದ್ರೆ ಶಾಕ್ ಆಗ್ತಿರಾ!

ಐಶ್ವರ್ಯ ರೈ

ಐಶ್ವರ್ಯ ರೈ

ಅಭಿಮಾನಿಗಳ ಪಾಲಿಗೆ ಈಗಲೂ ಐಶ್ ಬೇಬಿ ಆಗಿರುವ ಇವರು ಭಾರತದ ವಿಭಿನ್ನ ಭಾಷೆಯ ಸಿನಿಮಾಗಳಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಸಿನಿಮಾ ಮತ್ತು ಮಾಡೆಲಿಂಗ್ ಮೂಲಕ ಕೋಟಿ ಕೋಟಿ ದುಡಿಯುವ ಐಶ್ವರ್ಯ ಅವರ ವೃತ್ತಿ ಜೀವನದ ಆರಂಭದ ದಿನಗಳ ದುಡಿಮೆ ಹೇಗಿತ್ತು ಗೊತ್ತೆ?

ಮುಂದೆ ಓದಿ ...
  • Share this:

ಬಾಲಿವುಡ್ ನಟಿ (Bollywood Actress) ಐಶ್ವರ್ಯ ರೈ (Aishwarya Rai) ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ಆದರೆ ಇಂದಿಗೂ ಅವರ ಜನಪ್ರಿಯತೆ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಬಚ್ಚನ್ (Bacchan) ಪರಿವಾರದ ಸೊಸೆ ಎಂಬ ಪಟ್ಟವಿದ್ದರೂ, ಅದು ಸಿಗುವ ಮೊದಲೇ, ಭಾರತೀಯ ಸಿನಿಮಾ ರಂಗದಲ್ಲಿ ಸ್ವಂತ ಪರಿಶ್ರಮದ ಮೂಲಕ ತನ್ನ ಸ್ಥಾನ ಗಳಿಸಿಕೊಂಡವರು ಈ ಮಾಜಿ ವಿಶ್ವ ಸುಂದರಿ. ಅಭಿಮಾನಿಗಳ (Fans) ಪಾಲಿಗೆ ಈಗಲೂ ಐಶ್ ಬೇಬಿ ಆಗಿರುವ ಇವರು ಭಾರತದ ವಿಭಿನ್ನ ಭಾಷೆಯ ಸಿನಿಮಾಗಳಲ್ಲಿ (Cinema) ಮಾತ್ರವಲ್ಲ, ಅಂತಾರಾಷ್ಟ್ರೀಯ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಸಿನಿಮಾ ಮತ್ತು ಮಾಡೆಲಿಂಗ್ ಮೂಲಕ ಕೋಟಿ ಕೋಟಿ ದುಡಿಯುವ ಐಶ್ವರ್ಯ ಅವರ ವೃತ್ತಿ ಜೀವನದ ಆರಂಭದ ದಿನಗಳ ದುಡಿಮೆ ಹೇಗಿತ್ತು ಗೊತ್ತೆ?


ಫ್ಯಾಷನ್ ಕ್ಯಾಟಲಾಗ್ ಒಂದರ ಫೋಟೋ ಶೂಟ್‍
ಐಶ್ವರ್ಯ ಗಾಡ್‍ಫಾದರ್‍ಗಳ ಗರಡಿಯಿಂದ ಬಂದವರಲ್ಲ, ಅನೇಕರಂತೆ, ತನ್ನ ಪ್ರತಿಭೆಯಿಂದಲೇ ಹಂತ ಹಂತವಾಗಿ ಸಾವಿರದಿಂದ ಕೋಟಿಗಳ ಮೆಟ್ಟಿಲು ಹತ್ತಿದವರು. ಈ ಮಾತು ನಿಜವೇ? ಎಂದು ಅಚ್ಚರಿಯಿಂದ ಕೇಳುವವರು ನೀವಾದರೆ, ಒಮ್ಮೆ ಈ ಪೋಸ್ಟ್ ಅನ್ನು ನೋಡಿ. ಸುಮಾರು 30 ವರ್ಷಗಳ ಹಿಂದೆ ಐಶ್ವರ್ಯ ರೈ ಅವರು ಫ್ಯಾಷನ್ ಕ್ಯಾಟಲಾಗ್ ಒಂದರ ಫೋಟೋ ಶೂಟ್‍ನಲ್ಲಿ ಭಾಗವಹಿಸಿದ್ದರ ಚಿತ್ರಗಳಿವು. ಈ ಚಿತ್ರಗಳಲ್ಲಿ, ಐಶ್ ಜೊತೆಗೆ ನಟಿಯರಾದ ಸೊನಾಲಿ ಬೇಂದ್ರೆ, ತೇಜಸ್ವಿನಿ ಕೋಲ್ಹಾಪುರೆ ಮತ್ತು ಇತರರನ್ನು ಕಾಣಬಹುದು.
ಯುವತಿ ಐಶ್ ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಕಣ್ಣರಳಿಸಿ ನೋಡುತ್ತಿದೀರಾ? ಹಾಗಾದರೆ, ಈ ಪೋಟೋ ಶೂಟ್‍ಗೆ ಐಶ್ ಪಡೆದ ಸಂಭಾವನೆ ಎಷ್ಟೆಂದು ತಿಳಿದರೆ ನೀವು ಅಚ್ಚರಿ ಪಡುವುದು ಖಂಡಿತಾ. ಅವರಿಗೆ ಇದಕ್ಕಾಗಿ ಸಿಕ್ಕ ಸಂಭಾವನೆ 1500 ರೂ. !


30 ವರ್ಷ ಹಿಂದಿನ ಫೋಟೋ ಶೂಟ್‍ನ ಸಂಭಾವನೆಯ ಬಿಲ್ ಹಂಚಿಕೊಂಡ ಐಶ್ವರ್ಯ
ರೆಡಿಟ್‍ನ ಬಾಲಿವುಡ್ ಖಾತೆಯೊಂದರಲ್ಲಿ, ಐಶ್ವರ್ಯ ರೈ ಅವರ 30 ವರ್ಷಗಳ ಹಿಂದಿನ ಫೋಟೋ ಶೂಟ್‍ನ ಸಂಭಾವನೆಯ ಬಿಲ್ ಅನ್ನು ಹಂಚಿಕೊಳ್ಳಲಾಗಿದೆ. ಮೇ 23, 1992 ರಂದು ‘ಸುಮಾರು 18 ವರ್ಷ ವಯಸ್ಸಿನ’ ಐಶ್ವರ್ಯ ಕೃಪಾ ಕ್ರೀಯೆಶನ್ಸ್ ಎಂಬ ಸಂಸ್ಥೆಗೆ ‘ರೂಪದರ್ಶಿಯಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ’ ಎಂದು ಈ ಬಿಲ್‍ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:   Rakhi Sawanth: ಮತ್ತೆ ಪ್ರೀತಿಯಲ್ಲಿ ಮೋಸ ಹೋದ್ರಾ ರಾಖಿ ಸಾವಂತ್? ಆದಿಲ್ ಕೇವಲ ನನ್ನವನು ಎಂದಿದ್ದು ಯಾರಿಗೆ?


ಮುಂಬೈನಲ್ಲಿ ಈ ಡೀಲ್ ನಡೆದಿದೆ ಎಂಬುದನ್ನು ಕೂಡ ನಿರ್ದಿಷ್ಟಪಡಿಸುವ ಆ ಬಿಲ್‍ನ ಕೆಳಗೆ ಐಶ್ವರ್ಯ ರೈ ಅವರ ಸಹಿ ಮತ್ತು ವಿಳಾಸವಿದೆ. ಖಾರ್‍ನ ಲಕ್ಷ್ಮಿ ನಿವಾಸ್ ಎಂಬ ಕಟ್ಟಡದ ವಿಳಾಸವದು.


ಫ್ಯಾಶನ್ ಕ್ಯಾಟಲಾಗ್‍ನ 30 ನೇ ವಾರ್ಷಿಕೋತ್ಸವ
ಸಂಪೂರ್ಣ ಕ್ಯಾಟಲಾಗ್ ಫೋಟೋಗಳನ್ನು ಮತ್ತು ಮ್ಯಾಗಜೀನ್ ಕವರ್ ಅನ್ನು ಹೊಂದಿರುವ ಆ ಮ್ಯಾಗಜೀನ್ ಫೋಟೋ ಶೂಟ್‍ನ ಚಿತ್ರಗಳನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಳ್ಳಲಾಗಿದೆ. “ಹಲೋ, ಇಂದು ನಾನು ಪ್ರಕಟಿಸಿದ ಫ್ಯಾಶನ್ ಕ್ಯಾಟಲಾಗ್‍ನ 30 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇನೆ. ಐಶ್ವರ್ಯ ರೈ, ಸೊನಾಲಿ ಬೇಂದ್ರೆ, ನಿಖಿ ಅನೇಜಾ, ತೇಜಸ್ವಿನಿ ಕೋಲ್ಹಾಪುರೆ ಈ ಕ್ಯಾಟಲಾಗ್‍ಗೆ ಪೋಸ್ ನೀಡಿದ ಕೆಲವು ರೂಪದರ್ಶಿಗಳು” ಎಂದು ಆ ಟ್ವೀಟ್‍ನಲ್ಲಿ ಬರೆಯಲಾಗಿದೆ.


ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿ ಕೊಂಡ ಐಶ್ವರ್ಯ ರೈ
ಈ ಪೋಸ್ಟಿಗೆ ಸಾಕಷ್ಟು ಲೈಕ್‍ಗಳು ಸಿಕ್ಕಿದ್ದು, ಅನೇಕರು ಪ್ರಶಂಸೆಯ ಪ್ರತಿಕ್ರಿಯೆಗಳನ್ನ ನೀಡಿದ್ದಾರೆ. ಈ ಪೋಟೋ ಶೂಟ್ ನಡೆದ ಎರಡು ವರ್ಷಗಳ ನಂತರ, ಅಂದರೆ 1994 ರಲ್ಲಿ ಐಶ್ವರ್ಯ ರೈ ಅವರು ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ಈ ಗೆಲುವು ಅವರಿಗೆ ಬಾಲಿವುಡ್‍ನಲ್ಲಿ ಯಶಸ್ವಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಟ್ಟಿತು.


ಇದನ್ನೂ ಓದಿ:    Ibbani: 'ನನ್ನಮ್ಮ ಸೂಪರ್‌ ಸ್ಟಾರ್' ಖ್ಯಾತಿಯ ಇಬ್ಬನಿಯಿಂದ ಕೂದಲು ದಾನ! ವಯಸ್ಸು ಚಿಕ್ಕದಾದರೂ ಮನಸ್ಸು ದೊಡ್ಡದು


ಈ ಬಾರಿ ಅವರು ಕಾನ್ಸ್ ಚಲನಚಿತ್ರೋತ್ಸವದಲ್ಲಿ 21ನೇ ಬಾರಿಗೆ ಕಾಣಿಸಿಕೊಂಡಿದ್ದಾರೆ. ಕಳೆದೊಂದು ದಶಕದಿಂದ ಐಶ್ ಸಿನಿಮಾಗಳಲ್ಲಿ ಅಷ್ಟೊಂದು ಕಾಣಿಸಿಕೊಳ್ಳುತ್ತಿಲ್ಲವಾದರೂ, ಜಾಹಿರಾತುಗಳಲ್ಲಿ ಮಾತ್ರ ಮಿಂಚುತ್ತಲೇ ಇದ್ದಾರೆ. ಈ ವರ್ಷ ಅವರು ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವಂ ಎಂಬ ಐತಿಹಾಸಿಕ ಕಥೆ ಆಧಾರಿಸಿದ ಸಿನಿಮಾದ ಮೂಲಕ ಮತ್ತೆ ಬಿಗ್ ಸ್ಕ್ರೀನ್‍ಗೆ ಎಂಟ್ರಿ ಕೊಡುತ್ತಿದ್ದಾರೆ.

Published by:Ashwini Prabhu
First published: