• Home
  • »
  • News
  • »
  • entertainment
  • »
  • ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋ ಪೋಸ್ಟ್ ಮಾಡಿ ಕಮೆಂಟ್​ ಮಾಡದಂತೆ ಸೆಟ್ಟಿಂಗ್​ ಬದಲಾಯಿಸಿದ ಐಂದ್ರಿತಾ ರೇ..!

ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋ ಪೋಸ್ಟ್ ಮಾಡಿ ಕಮೆಂಟ್​ ಮಾಡದಂತೆ ಸೆಟ್ಟಿಂಗ್​ ಬದಲಾಯಿಸಿದ ಐಂದ್ರಿತಾ ರೇ..!

ಐಂದ್ರಿತಾ ರೇ

ಐಂದ್ರಿತಾ ರೇ

Aindrita Ray: ಐಂದ್ರಿತಾ ರೇ ಇತ್ತೀಚೆಗಷ್ಟೆ ತಾವು ನಟಿಸುತ್ತಿರುವ ವೆಬ್​ ಸಿರೀಸ್​ 'ದ ಕಸಿನೋ'ದ ಸಹ ನಟ ಕರಣ್​ವೀರ್​ ಜೊತೆ ಕನ್ನಡ ಹಾಡಿಗೆ ಟಿಕ್​ಟಾಕ್​ ವಿಡಿಯೋ ಮಾಡಿದ್ದರು. ಈ ವಿಡಿಯೋದಲ್ಲಿ ಐಂದ್ರಿತಾ ಕೊಂಚ ಹಾಟಾಗಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಅದಕ್ಕೆ ಖಾರವಾಗಿ ಕಮೆಂಟ್​ ಮಾಡಿದ್ದರು. ಸಾಲದಕ್ಕೆ ದಿಗಂತ್​ ಎಲ್ಲಿದ್ದೀಯಪ್ಪಾ ಅಂತೆಲ್ಲ ಕೇಳಿದ್ದರು.

ಮುಂದೆ ಓದಿ ...
  • Share this:

ದೂಧ್​ ಪೇಡಾ ದಿಗಂತ್​ರ ಮನ ಮೆಚ್ಚಿದ ಮಡದಿ ಐಂದ್ರಿತಾ ಇತ್ತೀಚೆಗೆ ತಮ್ಮ ವಿಡಿಯೋ ಹಾಗೂ ಫೋಟೋಶೂಟ್​ಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೆ ಐಂದ್ರಿತಾ ಟಿಕ್​ಟಾಕ್​ಗೆ ಎಂಟ್ರಿ ಕೊಟ್ಟಿದ್ದು, ಒಂದರ ಹಿಂದೆ ಒಂದರಂತೆ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. 


ಐಂದ್ರಿತಾ ರೇ ಇತ್ತೀಚೆಗಷ್ಟೆ ತಾವು ನಟಿಸುತ್ತಿರುವ ವೆಬ್​ ಸಿರೀಸ್​ 'ದ ಕಸಿನೋ'ದ ಸಹ ನಟ ಕರಣ್​ವೀರ್​ ಜೊತೆ ಕನ್ನಡ ಹಾಡಿಗೆ ಟಿಕ್​ಟಾಕ್​ ವಿಡಿಯೋ ಮಾಡಿದ್ದರು. ಈ ವಿಡಿಯೋದಲ್ಲಿ ಐಂದ್ರಿತಾ ಕೊಂಚ ಹಾಟಾಗಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಅದಕ್ಕೆ ಖಾರವಾಗಿ ಕಮೆಂಟ್​ ಮಾಡಿದ್ದರು. ಸಾಲದಕ್ಕೆ ದಿಗಂತ್​ ಎಲ್ಲಿದ್ದೀಯಪ್ಪಾ ಅಂತೆಲ್ಲ ಕೇಳಿದ್ದರು.View this post on Instagram

3am pack ups got me😴 #emojichallenge #tiktok


A post shared by Aindrita Ray (@aindrita_ray) on

ಈಗ ಮತ್ತೆ ಐಂದ್ರಿತಾ ತಮ್ಮ ಬೋಲ್ಡ್​ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಕಮೆಂಟ್​ ಮಾಡುವ ಆಯ್ಕೆಯನ್ನೇ ನಿರ್ಬಂಧಿಸಿದ್ದಾರೆ. ಈ ಫೋಟೋವನ್ನು 17 ಗಂಟೆಗಳ ಹಿಂದೆ ಪೋಸ್ಟ್​ ಮಾಡಲಾಗಿದ್ದು, ಅದಕ್ಕೆ 54 ಸಾವಿರಕ್ಕೂ ಹೆಚ್ಚು ಲೈಕ್ಸ್​ ಸಿಕ್ಕಿವೆ. ಆದರೆ ಒಂದೇ ಒಂದು ಕಮೆಂಟ್​ ಇಲ್ಲ.


ಐಂದ್ರಿತಾ ರೇ


ಹೌದು, ಐಂದ್ರಿತಾ ಕಪ್ಪು ಬಣ್ಣದ ಡ್ರೆಸ್​ನಲ್ಲಿ ತೆಗೆಸಿಕೊಂಡಿರುವ ಈ ಫೋಟೋಗೆ ಕಮೆಂಟ್​ ಮಾಡಲು ಅವಕಾಶವೇ ಇಲ್ಲ. ಇದಕ್ಕೆ ಕಾರಣ ಈ ಹಿಂದೆ ಅವರ ಟಿಕ್​ಟಾಕ್​ ವಿಡಿಯೋಗೆ ನೆಟ್ಟಿಗರು ಕಮೆಂಟ್​ ಮಾಡಿದ ರೀತಿ ಎನ್ನಲಾಗುತ್ತಿದೆ.


ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗಾಗಿ ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ ಅಭಿಮಾನಿಗಳು..!


ಸದ್ಯ ಝೀ5ನಲ್ಲಿ ಪ್ರಸಾರಗೊಳ್ಳಲು ಸಿದ್ಧವಾಗುತ್ತಿರುವ ವೆಬ್​ ಸರಣಿ 'ದ ಕಸಿನೋ' ಚಿತ್ರದ ಚಿತ್ರೀಕರಣ ಸೇರಿದಂತೆ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ ಐಂದ್ರಿತಾ.


Sara Ali Khan: ಅಪ್ಪ-ಅಮ್ಮನ ಗುಟ್ಟನ್ನು ರಟ್ಟು ಮಾಡಿದ ಸಾರಾ ಅಲಿ ಖಾನ್​..!


Published by:Anitha E
First published: