Aindrita Ray: ಕನ್ನಡ ಹಾಡಿಗೆ ಹಿಂದಿ ನಟನೊಂದಿಗೆ ಟಿಕ್​ಟಾಕ್​ ಮಾಡಿದ ಐಂದ್ರಿತಾ ರೇ: ದಿಗಂತ್​ ಎಲ್ಲಿದ್ದೀಯಪ್ಪಾ ಎಂದ ನೆಟ್ಟಿಗರು..!

Aindrita Ray Kannada Song Tiktok Video: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಐಂದ್ರಿತಾ ಇತ್ತೀಚೆಗಷ್ಟೆ ಟಿಕ್​ಟಾಕ್​ಗೆ ಎಂಟ್ರಿ ಕೊಟ್ಟಿದ್ದರು. ಅದೂ ಸಹ ಇಂಗ್ಲಿಷ್​ ಹಾಡೊಂದಕ್ಕೆ ಐಂದ್ರಿತಾ ಸೊಂಟ ಬಳುಕಿಸಿದ್ದು, ಆ ವಿಡಿಯೋ ವೈರಲ್​ ಆಗಿತ್ತು.

ಟಿಕ್​ಟಾಕ್ ವಿಡಿಯೋದಲ್ಲಿ ಐಂದ್ರಿತಾ ಹಾಗೂ ಕರಣ್​ ವೀರ್​ ಬೋರಾ

ಟಿಕ್​ಟಾಕ್ ವಿಡಿಯೋದಲ್ಲಿ ಐಂದ್ರಿತಾ ಹಾಗೂ ಕರಣ್​ ವೀರ್​ ಬೋರಾ

  • Share this:
ನಟಿ ಐಂದ್ರಿತಾ ರೇ ಸದ್ಯ ತಮ್ಮ ವೆಬ್​ ಸರಣಿ 'ದ ಕಸಿನೋ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದೂ ಕೂಡ ದೂರದ ನೇಪಾಳದಲ್ಲಿ ಇದರ ಚಿತ್ರೀಕರಣ ನಡೆಯುತ್ತಿದ್ದು, ಈ ಸಲ ಅವರು ಹೋಳಿ ಹಬ್ಬಕ್ಕೂ ಬೆಂಗಳೂರಿಗೆ ಬರಲಾಗದಷ್ಟು ಬ್ಯುಸಿಯಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಐಂದ್ರಿತಾ ಇತ್ತೀಚೆಗಷ್ಟೆ ಟಿಕ್​ಟಾಕ್​ಗೆ ಎಂಟ್ರಿ ಕೊಟ್ಟಿದ್ದರು. ಅದೂ ಸಹ ಇಂಗ್ಲಿಷ್​ ಹಾಡೊಂದಕ್ಕೆ ಐಂದ್ರಿತಾ ಸೊಂಟ ಬಳುಕಿಸಿದ್ದು, ಆ ವಿಡಿಯೋ ವೈರಲ್​ ಆಗಿತ್ತು.

 



 




View this post on Instagram




 

Finally on TikTok come groove with me on #tiktok n let’s get silly together 🤪 #followmeontiktok


A post shared by Aindrita Ray (@aindrita_ray) on






ಐಂದ್ರಿತಾರ ಮೊದಲ ಟಿಕ್​ಟಾಕ್​ ವಿಡಿಯೋ ನೋಡಿದ ಅಭಿಮಾನಿಗಳು ಕನ್ನಡ ಹಾಡಿಗೆ ಟಿಕ್​ಟಾಕ್​ ವಿಡಿಯೋ ಮಾಡುವಂತೆ ಮನವಿ ಮಾಡಿದ್ದರು. ಅಭಿಮಾನಿಗಳ ಕೋರಿಕೆ ಮೇಲೆ ಐಂದ್ರಿತಾ ಹಿಂದಿ ನಟನೊಂದಿಗೆ ಕನ್ನಡ ಹಾಡಿಗೆ ಟಿಕ್​ಟಾಕ್​ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.




ನಟ ಕರಣ್​ವೀರ್​ ಬೋರಾ ಜೊತೆ ಐಂದ್ರಿತಾ 'ನನ್ನ ಮನದ ಹಾಡನ್ನು ಮೊದಲು ಕೇಳು' ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಈ ವಿಡಿಯೋ ನೋಡಿದ ನಟ್ಟಿಗರು ದಿಗಂತ್​ ಎಲ್ಲಿದ್ದೀಯಪ್ಪಾ ಅಂತಿದ್ದಾರೆ.

 




ಐಂದ್ರಿತಾರ ವಿಡಿಯೋ ನೋಡಿದ ನೆಟ್ಟಿಗರು ದಿಗಂತ್​ ಎಲ್ಲಿದ್ದೀಯಪ್ಪಾ ಅಂತ ಕೇಳೋದ್ರ ಜೊತೆಗೆ ಐಂದ್ರಿತಾರನ್ನೂ ಟೀಕಿಸುತ್ತಿದ್ದಾರೆ. ಕನ್ನಡದಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ಈ ರೀತಿಯ ಬಿ ಗ್ರೇಡ್​ ವಿಡಿಯೋಗಳಲ್ಲಿ ನಟಿಸುವುದು ಎಷ್ಟು ಸರಿ ಎನ್ನುತ್ತಿದ್ದಾರೆ.

 Rashmika Mandanna: ಸೀರೆಯುಟ್ಟು ನಾಚಿ ನೀರಾದ ರಶ್ಮಿಕಾ ಮಂದಣ್ಣ..!
First published: